Red Hat Enterprise Linux 5.3

ಬಿಡುಗಡೆ ಟಿಪ್ಪಣಿಗಳು

ಎಲ್ಲಾ ಆರ್ಕಿಟೆಕ್ಚರುಗಳಿಗಾಗಿನ ಬಿಡುಗಡೆ ಟಿಪ್ಪಣಿಗಳು.

Ryan Lerch

Red Hat Engineering Content Services

Legal Notice

Copyright 2008 Red Hat, Inc.. This material may only be distributed subject to the terms and conditions set forth in the Open Publication License, V1.0 or later (the latest version of the OPL is presently available at http://www.opencontent.org/openpub/).

Red Hat and the Red Hat "Shadow Man" logo are registered trademarks of Red Hat, Inc. in the United States and other countries.

All other trademarks referenced herein are the property of their respective owners.

The GPG fingerprint of the security@redhat.com key is:

CA 20 86 86 2B D6 9D FC 65 F6 EC C4 21 91 80 CD DB 42 A6 0E



ಸಾರಾಂಶ

Red Hat Enterprise Linux 5.3 ರ ಬಿಡುಗಡೆ ಟಿಪ್ಪಣಿಗಳನ್ನು ವಿವರಿಸುತ್ತದೆ.


1. ಅನುಸ್ಥಾಪನೆಗೆ-ಸಂಬಂಧಿತ ಟಿಪ್ಪಣಿಗಳು
1.1. ಎಲ್ಲಾ ಆರ್ಕಿಟೆಕ್ಚರುಗಳು
1.2. PowerPC ಆರ್ಕಿಟೆಕ್ಚರುಗಳು
1.3. s390x ಆರ್ಕಿಟೆಕ್ಚರುಗಳು
1.4. ia64 ಆರ್ಕಿಟೆಕ್ಚರುಗಳು
2. ಸವಲತ್ತು ಅಪ್‍ಡೇಟ್‍ಗಳು
3. ಚಾಲಕ ಅಪ್‍ಡೇಟ್‍ಗಳು
3.1. ಎಲ್ಲಾ ಆರ್ಕಿಟೆಕ್ಚರುಗಳು
4. ಕರ್ನಲ್-ಸಂಬಂಧಿತ ಅಪ್‍ಡೇಟ್ಗಳು
4.1. ಎಲ್ಲಾ ಆರ್ಕಿಟೆಕ್ಚರುಗಳು
4.2. x86 ಆರ್ಕಿಟೆಕ್ಚರುಗಳು
4.3. PowerPC ಆರ್ಕಿಟೆಕ್ಚರುಗಳು
4.4. x86_64 ಆರ್ಕಿಟೆಕ್ಚರುಗಳು
4.5. s390x ಆರ್ಕಿಟೆಕ್ಚರುಗಳು
4.6. ia64 ಆರ್ಕಿಟೆಕ್ಚರುಗಳು
5. ವಾಸ್ತವೀಕರಣ (Virtualization)
5.1. ಸವಲತ್ತು ಅಪ್‍ಡೇಟ್‍ಗಳು
5.2. ಪರಿಹರಿಸಲಾದ ತೊಂದರೆಗಳು
5.3. ಗೊತ್ತಿರುವ ತೊಂದರೆಗಳು
6. ತಾಂತ್ರಿಕ ಮುನ್ನೋಟಗಳು
7. ಪರಿಹರಿಸಲಾದ ತೊಂದರೆಗಳು
7.1. ಎಲ್ಲಾ ಆರ್ಕಿಟೆಕ್ಚರುಗಳು
7.2. x86_64 ಆರ್ಕಿಟೆಕ್ಚರುಗಳು
7.3. s390x ಆರ್ಕಿಟೆಕ್ಚರುಗಳು
7.4. PowerPC ಆರ್ಕಿಟೆಕ್ಚರುಗಳು
8. ಗೊತ್ತಿರುವ ತೊಂದರೆಗಳು
8.1. ಎಲ್ಲಾ ಆರ್ಕಿಟೆಕ್ಚರುಗಳು
8.2. x86 ಆರ್ಕಿಟೆಕ್ಚರುಗಳು
8.3. x86_64 ಆರ್ಕಿಟೆಕ್ಚರುಗಳು
8.4. PowerPC ಆರ್ಕಿಟೆಕ್ಚರುಗಳು
8.5. s390x ಆರ್ಕಿಟೆಕ್ಚರುಗಳು
8.6. ia64 ಆರ್ಕಿಟೆಕ್ಚರುಗಳು
A. ಪುನರಾವರ್ತನೆಯ ಇತಿಹಾಸ

ಈ ವಿಭಾಗವು ಅನಕೊಂಡ ಅನುಸ್ಥಾಪನ ಪ್ರೊಗ್ರಾಂ ಬಗೆಗಿನ ಹಾಗು Red Hat Enterprise Linux 5.3 ಅನುಸ್ಥಾಪನೆಯ ನಿಶ್ಚಿತ ಮಾಹಿತಿಯನ್ನು ಒಳಗೊಂಡಿವೆ.

Red Hat Network ಹೊಸ ಹಾಗು ಬದಲಾದ ಪ್ಯಾಕೇಜ್‍ಗಳನ್ನು ಅನುಸ್ಥಾಪಿಸುವದರ ಜೊತೆಗೆ ಈಗಾಗಲೆ ಇರುವ Red Hat Enterprise Linux 5 ಗಣಕವನ್ನೂ ಸಹ ನವೀಕರಿಸುತ್ತದೆ. ಪರ್ಯಾಯವಾಗಿ, Anaconda ವು ಈಗಿರುವ ಒಂದು Red Hat Enterprise Linux 5 ಗಣಕವನ್ನು ನವೀಕರಿಸಬಲ್ಲದು ಅಥವ Red Hat Enterprise Linux 5.3 ರ ಒಂದು ಹೊಸ ಅನುಸ್ಥಾಪನೆಯನ್ನು ಮಾಡಬಲ್ಲದು.

ಸೂಚನೆ: Red Hat Enterprise Linux 5.3 ರ ಬೀಟಾ ಬಿಡುಗಡೆಯಿಂದ ಈ GA ಬಿಡುಗಡೆಗೆ ನವೀಕರಿಸುವುದು ಬೆಂಬಲಿತವಾಗಿಲ್ಲ.

ಇದಲ್ಲದೆ, ಅನಕೊಂಡವು ಈ ಮೊದಲಿನ Red Hat Enterprise Linux ನ ಪ್ರಮುಖ ಆವೃತ್ತಿಗಳಿಂದ Red Hat Enterprise Linux 5.3 ಕ್ಕೆ ನವೀಕರಿಸಲು ಆಯ್ಕೆಯನ್ನು ಒದಗಿಸಿದರೂ ಸಹ, Red Hat ಸದ್ಯಕ್ಕೆ ಇದನ್ನು ಬೆಂಬಲಿಸುವುದಿಲ್ಲ. ಇನ್ನು ಹೇಳಬೇಕೆಂದರೆ, ಸಾಮಾನ್ಯವಾಗಿ Red Hat ಯಾವುದೆ Red Hat Enterprise Linux ನ ಪ್ರಮುಖ ಆವೃತ್ತಿಗಳ ನಡುವೆ ನವೀಕರಿಸುವುದನ್ನು ಬೆಂಬಲಿಸುವುದಿಲ್ಲ. (ಒಂದು ಪ್ರಮುಖ ಆವೃತ್ತಿಯು ಒಂದು ಪೂರ್ಣಾಂಕವನ್ನು ಹೊಂದಿರುತ್ತದೆ. ಉದಾಹರಣೆಗೆ, Red Hat Enteprise Linux 4 ಹಾಗು Red Hat Enterprise Linux 5. ಇವೆರಡೂ Red Hat Enterprise Linux ನ ಒಂದು ಪ್ರಮುಖ ಆವೃತ್ತಿಗಳಾಗಿವೆ.)

ಪ್ರಮುಖ ಬಿಡುಗಡೆಗಳ ನಡುವೆ ನವೀಕರಿಸಿದಾಗ ಗಣಕದ ಎಲ್ಲಾ ಸಂಯೋಜನೆಗಳು, ಸೇವೆಗಳು ಅಥವ ಕಸ್ಟಮ್ ಸಂರಚನೆಗಳು ಉಳಿಯಲ್ಪಡುವುದಿಲ್ಲ. ಆದ್ದರಿಂದ, ಒಂದು ಪ್ರಮುಖ ಆವೃತ್ತಿಯಿಂದ ಇನ್ನೊಂದಕ್ಕೆ ಬದಲಾಯಿಸುವಾಗ ಹೊಸ ಅನುಸ್ಥಾಪನೆಯನ್ನು ಮಾಡುವಂತೆ Red Hat ಬಲವಾಗಿ ಸಲಹೆ ಮಾಡುತ್ತದೆ.

1.1. ಎಲ್ಲಾ ಆರ್ಕಿಟೆಕ್ಚರುಗಳು

  • ಅನಕೊಂಡಪಠ್ಯ ವಿಧಾನ ಅನುಸ್ಥಾಪನೆಯು ಈಗ ಅನುಸ್ಥಾಪನೆಯನ್ನು ಪೂರ್ಣಗೊಳಿಸುವ ಸಲುವಾಗಿ Virtual Network Computing (VNC) ಗೆ ಬದಲಾಯಿಸಲು ಆಯ್ಕೆಯನ್ನು ಒದಗಿಸುತ್ತದೆ.

  • ಗೂಢಲಿಪೀಕರಿಸಿದ ತಂತ್ರಾಂಶ RAID ಸದಸ್ಯ ಡಿಸ್ಕುಗಳನ್ನು (ಅಂದರೆ software RAID ವಿಭಾಗಗಳು) ರಚಿಸುವುದು ಅಥವ ಬಳಸುವುದು ಬೆಂಬಲಿತವಾಗಿಲ್ಲ. ಆದರೆ, ಗೂಢಲಿಪೀಕರಿಸಿದ ತಂತ್ರಾಂಶ RAID ಅರೆಗಳನ್ನು(arrays) (ಉದಾ. /dev/md0) ರಚಿಸುವುದು ಬೆಂಬಲಿತವಾಗಿದೆ.

  • RHEL5 ರ NFS ಡೀಫಾಲ್ಟ್‍ "locking" ಆಗಿರುತ್ತದೆ. ಆದ್ದರಿಂದ, ಅನಕೊಂಡಾದ %post ವಿಭಾಗದಿಂದ nfs ಹಂಚಿಕೆಗಳನ್ನು ಆರೋಹಿಸುವ ಸಲುವಾಗಿ, ಹಂಚಿಕೆಗಳನ್ನು nfs ಗೆ ಆರೋಹಿಸುವ ಮೊದಲು ಲಾಕಿಂಗ್ ಡೀಮನ್ ಅನ್ನು ಆರಂಭಿಸಲು mount -o nolock,udp ಆಜ್ಞೆಯನ್ನು ಬಳಸಿ.

  • ಒಂದು iBFT-ಸಂರಚಿತ ಜಾಲ ಸಾಧನವನ್ನು ಹೊಂದಿರುವ ಗಣಕದಲ್ಲಿ CD-ROM ಅಥವ DVD-ROM ನಿಂದ ಅನುಸ್ಥಾಪಿಸುವಾಗ, ಜಾಲಬಂಧವನ್ನು ಸಂರಚಿಸದೆ ಇದ್ದಲ್ಲಿ Anaconda ಯಾವುದೆ iBFT-ಸಂರಚಿತ ಶೇಖರಣಾ ಸಾಧನಗಳನ್ನು ಸೇರ್ಪಡಿಸುವುದಿಲ್ಲ. ಜಾಲಬಂಧವನ್ನು ಅನುಸ್ಥಾಪನೆಗಾಗಿ ಶಕ್ತಗೊಳಿಸಲು, ಅನುಸ್ಥಾಪನಾ ಬೂಟ್ ಪ್ರಾಂಪ್ಟ್‍ನಲ್ಲಿ linux updates=http://[any] ಆಜ್ಞೆಯನ್ನು ಬಳಸಿ. [any] ಅನ್ನು ಯಾವುದೆ URL ನಿಂದ ಬದಲಾಯಿಸಬಹುದು.

    ನಿಮ್ಮ ಗಣಕಕ್ಕೆ ಒಂದು ಸ್ಥಾಯಿ IP ಸಂರಚನೆಯ ಅಗತ್ಯವಿದ್ದಲ್ಲಿ, linux updates=http://[any] ip=[IP address] netmask=[netmask] dns=[dns] ಆಜ್ಞೆಯನ್ನು ಬಳಸಿ.

  • Red Hat Enterprise Linux 5.3 ಅನ್ನು ಒಂದು ಸಂಪೂರ್ಣ ವರ್ಚುವಲೈಸ್ ಆದಂತಹ ಅತಿಥಿಯಲ್ಲಿ ಅನುಸ್ಥಾಪಿಸುವಾಗ, kernel-xen ಕರ್ನಲನ್ನು ಬಳಸಬೇಡಿ. ಈ ಕರ್ನಲನ್ನು ಸಂಪೂರ್ಣ ವಾಸ್ತವಪ್ರಾಯವಾದ ಅತಿಥಿಗಳಲ್ಲಿ ಬಳಸುವುದರಿಂದ ಗಣಕವು ಸ್ಥಗಿತಗೊಳ್ಳಲು ಕಾರಣವಾಗಬಹುದು.

    Red Hat Enterprise Linux 5.3 ಅನ್ನು ಒಂದು ಸಂಪೂರ್ಣ ವರ್ಚುವಲೈಸ್ ಆದಂತಹ ಅತಿಥಿಯಲ್ಲಿ ಅನುಸ್ಥಾಪನ ಸಂಖ್ಯೆಯನ್ನು ನೀವು ಬಳಸುತ್ತಿದ್ದರೆ, ಅನುಸ್ಥಾಪನೆಯ ಸಮಯದಲ್ಲಿ Virtualization ಪ್ಯಾಕೇಜನ್ನು ಆರಿಸದೇ ಇರಲು ಮರೆಯದಿರಿ. Virtualization ಪ್ಯಾಕೇಜು ಸಮೂಹ ಆಯ್ಕೆಯು kernel-xen ಕರ್ನಲನ್ನು ಅನುಸ್ಥಾಪಿಸುತ್ತದೆ.

    ಪ್ಯಾರಾ-ವಾಸ್ತವಪ್ರಾಯವಾದ ಅತಿಥಿಗಳು ಈ ತೊಂದರೆಯಿಂದ ಮುಕ್ತವಾಗಿರುತ್ತವೆ ಎನ್ನುವುದನ್ನು ಗಮನಿಸಿ. ಪ್ಯಾರಾ-ವಾಸ್ತವಪ್ರಾಯವಾದ ಅತಿಥಿಗಳು ಯಾವಾಗಲೂ kernel-xen ಕರ್ನೆಲನ್ನೇ ಬಳಸುತ್ತವೆ.

  • ನೀವು Red Hat Enterprise Linux 5 ರಿಂದ 5.2 ಕ್ಕೆ ನವೀಕರಿಸುವಾಗ ವಾಸ್ತವಪ್ರಾಯವಾದ ಕರ್ನಲನ್ನು ಬಳಸುತ್ತಿದ್ದರೆ, ನವೀಕರಣವು ಮುಗಿದ ನಂತರ ಮರುಬೂಟ್ ಮಾಡುವುದು ಅಗತ್ಯವಾಗುತ್ತದೆ. ನಂತರ ನೀವು ವಾಸ್ತವೀಕರಣಗೊಂಡ ಕರ್ನಲ್‍ ಬಳಸಿಕೊಂಡು ಬೂಟ್ ಮಾಡಬೇಕಾಗುತ್ತದೆ.

    Red Hat Enterprise Linux 5 ಹಾಗು 5.2 ಹೈಪರ್ವೈಸರುಗಳು ABI-ನೊಂದಿಗೆ ಸಹವರ್ತನೀಯವಾಗಿಲ್ಲ. ಅಪ್ಡೇಟ್ ಆದಂತಹ ವಾಸ್ತವೀಕರಣಗೊಂಡ ಕರ್ನಲ್‍ ಅನ್ನು ನೀವು ನವೀಕರಿಸಿದ ನಂತರ ರೀಬೂಟ್ ಮಾಡದೇ ಇದ್ದಲ್ಲಿ, ನವೀಕರಣಗೊಂಡ ವಾಸ್ತವೀಕರಣ RPM ಗಳು ಚಲಾಯಿತವಾಗುತ್ತಿರುವ ಕರ್ನಲ್ಲುಗಳೊಂದಿಗೆ ತಾಳೆಯಾಗುವುದಿಲ್ಲ.

  • Red Hat Enterprise Linux 4.6 ನಿಂದ Red Hat Enterprise Linux 5.1 ಅಥವ ನಂತರದ್ದಕ್ಕೆ ನವೀಕರಿಸುವಾಗ, gcc4 ಯ ನವೀಕರಣವು ವಿಫಲ ಹೊಂದಲು ಕಾರಣವಾಗಬಹುದು. ಆದ್ದರಿಂದ, ನವೀಕರಿಸುವ ಮೊದಲು ನೀವು ಸ್ವತಃ gcc4 ಪ್ಯಾಕೇಜ್‍ ಅನ್ನು ತೆಗೆದು ಹಾಕಬೇಕಾಗುತ್ತದೆ.

  • firstboot ಭಾಷಾ ಪ್ಲಗ್ಇನ್ ಅನ್ನು ತೆಗೆದು ಹಾಕಲಾಗಿದೆ, ಏಕೆಂದರೆ, ಒಂದು ಹೊಸ ಭಾಷೆಯನ್ನು ಆಯ್ಕೆ ಮಾಡಿದಾಗ ಅದು ಸಮರ್ಪಕವಾಗಿ ಹಾಗೂ ಸಂಪೂರ್ಣವಾಗಿ ಗಣಕವನ್ನು ಮರುಸಂರಚಿಸುವುದಿಲ್ಲ.

  • ಅನುಸ್ಥಾಪನೆಯ ಸಮಯದಲ್ಲಿ Challenge Handshake Authentication Protocol (CHAP) ನ ಬಳಕೆಯು ಬೆಂಬಲಿತವಾಗಿಲ್ಲ. CHAP ಕೇವಲ ಅನುಸ್ಥಾಪನೆಯ ನಂತರ ಮಾತ್ರವೆ ಶಕ್ತಗೊಳಿಸಲ್ಪಡಬೇಕು.

    ನಿಮ್ಮ ಗಣಕವು ಒಂದು iFBT ಸಾಧನದ ಮೂಲಕ ಬೂಟ್ ಆಗುತ್ತಿದ್ದರೆ, CHAP ಅನ್ನು iFBT BIOS/ಫರ್ಮ್-ವೇರ್ ಸಿದ್ಧತಾ ತೆರೆಯಲ್ಲಿ ಸಂರಚಿಸಿ. ಆಗ ನಿಮ್ಮ CHAP ಸಂಯೋಜನೆಗಳು ಮುಂದಿನ ಬೂಟ್ ಸಮಯದಲ್ಲಿ ಬಳಸಲ್ಪಡುತ್ತದೆ.

    ನಿಮ್ಮ ಗಣಕವು PXE iSCSI ನ ಮೂಲಕ ಬೂಟ್ ಆಗುತ್ತಿದ್ದರೆ, CHAP ಅನ್ನು iscsiadm ನ ಮೂಲಕ ಸಂರಚಿಸಿ. ಸಂರಚಿಸಿದ ನಂತರ, ಮುಂದಿನ ಬೂಟ್‍ನಲ್ಲಿ ನಿಮ್ಮ CHAP ಸಂಯೋಜನೆಗಳು ಬಳಕೆಯಾಗುತ್ತವೆ ಎಂದು ಖಾತ್ರಿ ಪಡಿಸಿಕೊಳ್ಳಲು mkinitrd ಅನ್ನು ಬಳಸಿ.

  • ಅನುಸ್ಥಾಪನೆಯ ಸಮಯದಲ್ಲಿ ಅತಿಥಿಗಳನ್ನು ನಿಯೋಜಿಸುವಾಗ, ಅತಿಥಿಗಳಿಗಾಗಿನ RHN ಉಪಕರಣಗಳು ಆಯ್ಕೆಯು ಲಭ್ಯವಿರುವುದಿಲ್ಲ. ಇದು ಸಂಭವಿಸಿದಾಗ, dom0 ನಿಂದ ನೀಡಲಾದ ಶೀರ್ಷಿಕೆಯನ್ನು ಹೊರತುಪಡಿಸಿ ಗಣಕಕ್ಕೆ ಒಂದು ಹೆಚ್ಚುವರಿ ಶೀರ್ಷಿಕೆಯ ಅಗತ್ಯವಿರುತ್ತದೆ.

    ಅತಿಥಿಗಳಿಂದ ಹೆಚ್ಚಿನ ಶೀರ್ಷಿಕೆಗಳು ಬಳಸಲ್ಪಡುವುದನ್ನು ತಪ್ಪಿಸಲು, Red Hat Network ಗೆ ಗಣಕವನ್ನು ನೋಂದಾಯಿಸುವ ಮೊದಲುrhn-virtualization-common ಅನ್ನು ಅನುಸ್ಥಾಪಿಸಿ.

  • Red Hat Enterprise Linux 5.3 ಅನ್ನು ಅನೇಕ ಜಾಲಬಂಧ ಸಂಪರ್ಕಸಾಧನಗಳನ್ನು ಹೊಂದಿರುವ ಗಣಕದ ಮೇಲೆ ಅನುಸ್ಥಾಪಿಸುವುದು ಹಾಗು ಕೈಯಾರೆ IPv6 ವಿಳಾಸಗಳನ್ನು ಸೂಚಿಸುವುದು ಸರಿಯಲ್ಲದ ಜಾಲಬಂಧ ಸಿದ್ಧತೆಗೆ ಕಾರಣವಾಗುತ್ತದೆ. ಇದು ಸಂಭವಿಸಿದಾಗ, ನಿಮ್ಮ IPv6 ಸಂಯೋಜನೆಗಳು ನಿಮ್ಮ ಅನುಸ್ಥಾಪಿತ ಗಣಕದಲ್ಲಿ ಕಾಣಿಸಿಕೊಳ್ಳುವುದಿಲ್ಲ.

    ಇದಕ್ಕಿರುವ ಇನ್ನೊಂದು ಪರಿಹಾರವೆಂದರೆ, /etc/sysconfig/network ನಲ್ಲಿ NETWORKING_IPV6 ಅನ್ನು yes ಗೆ ಬದಲಾಯಿಸಿ. ನಂತರ, service network restart ಅನ್ನು ಬಳಸಿಕೊಂಡು ನಿಮ್ಮ ಜಾಲಬಂಧ ಸಂಪರ್ಕವನ್ನು ಮರಳಿ ಆರಂಭಿಸಿ.

  • ನಿಮ್ಮ ಗಣಕದಲ್ಲಿ yum-rhn-plugin-0.5.2-5.el5_1.2 (ಅಥವ ಅದಕ್ಕಿಂತ ಮುಂಚಿನ ಒಂದು ಆವೃತ್ತಿ) ಅನುಸ್ಥಾಪಿತಗೊಂಡಿದ್ದರೆ, ನೀವು yum update ಅನ್ನು ಬಳಸಿಕೊಂಡು Red Hat Enterprise Linux 5.3 ಗೆ ನವೀಕರಿಸಲು ಸಾಧ್ಯವಿಲ್ಲ. ಇದಕ್ಕಿರುವ ಪರಿಹಾರವೆಂದರೆ, yum updateಅನ್ನು ಚಲಾಯಿಸುವ ಮೊದಲು ನಿಮ್ಮ yum-rhn-plugin ಅನ್ನು ಇತ್ತೀಚಿನ ಒಂದು ಆವೃತ್ತಿಗೆ (yum update yum-rhn-plugin) ನವೀಕರಿಸಿ.

  • ಅನಕೊಂಡವು 8 ಕ್ಕಿಂತಲೂ ಹೆಚ್ಚಿನSmartArray ನಿಯಂತ್ರಕಗಳನ್ನು ನಿಲುಕಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಗಣಕವು 8 ಕ್ಕಿಂತ ಹೆಚ್ಚಿನ ಅಂತಹ ನಿಯಂತ್ರಕಗಳನ್ನು ಹೊಂದಿದ್ದಲ್ಲಿ, ನೀವು ಕೇವಲ ಮೊದಲ 8 ನಿಯಂತ್ರಕಗಳನ್ನು ಮಾತ್ರ ಶೇಖರಣೆಗೆ ಬಳಸಬಹುದಾಗಿದೆ. ನಂತರದ ಎಲ್ಲಾ ನಿಯಂತ್ರಕಗಳನ್ನು (ಅಂದರೆ 9ನೆಯ ನಿಯಂತ್ರಕ ಹಾಗು ನಂತರದ್ದು) ಪ್ರಯತ್ನಿಸಿದಲ್ಲಿ Anacondaವು ವಿಫಲಗೊಳ್ಳುತ್ತದೆ.

  • ಒಂದು OEM ನಿಂದ ಒದಗಿಸಲಾದಂತಹ ಚಾಲಕ ಡಿಸ್ಕ್‍ ಒಂದು ಸಾಧಾರಣ ಚಿತ್ರಿಕಾ ಕಡತವಾಗಿದ್ದು(*.img), ಸಮರ್ಥವಾದಂತಹ ಅನೇಕ ಚಾಲಕ RPM ಗಳನ್ನು ಹಾಗು ಕರ್ನಲ್ ಅಪ್‌ಡೇಟ್‌ಗಳನ್ನು ಹೊಂದಿದೆ. ಈ ಚಾಲಕಗಳನ್ನು Red Hat Enterprise Linux 5 ನಿಂದ ಗುರುತಿಸಲು ಅಸಾಧ್ಯವಾದಂತಹ ಯಂತ್ರಾಂಶದ ಬೆಂಬಲಕ್ಕಾಗಿ ಅನುಸ್ಥಾಪನಾ ಸಮಯದಲ್ಲಿ ಬಳಸಲಾಗುವುದು. ಡ್ರೈವರ್ ಪ್ಯಾಕೇಜುಗಳನ್ನು ಹಾಗು ಕರ್ನಲ್ ಘಟಕಗಳನ್ನು ಗಣಕದ ಮೇಲೆ ಅನುಸ್ಥಾಪಿಸಿದ ಮೇಲೆ ಅವುಗಳನ್ನು ಗಣಕವು ಬೂಟ್ ಆದಾಗ ಅವು ಲೋಡ್ ಆಗುವಂತೆ ಆರಂಭಿಕ RAM ಡಿಸ್ಕಿನಲ್ಲಿ (initrd) ಇರಿಸಲಾಗುವುದು.

    ಈ ಬಿಡುಗಡೆಯಲ್ಲಿ, ಅನುಸ್ಥಾಪನೆಯು ಸ್ವಯಂಚಾಲಿತವಾಗಿ ಚಾಲಕ ಡಿಸ್ಕ್‍ (ಚಾಲಕ ಡಿಸ್ಕಿನ ಕಡತ ವ್ಯವಸ್ಥೆಗೆ ಅನುಗುಣವಾಗಿ) ಗುರುತಿಸಲ್ಪಡುತ್ತದೆ, ಹಾಗು ಅನುಸ್ಥಾಪನೆಯ ಸಮಯದಲ್ಲಿ ಆ ಡಿಸ್ಕಿನಲ್ಲಿ ಇರುವುದನ್ನು ಬಳಸಲಾಗುವುದು. ಈ ವರ್ತನೆಯು ಸ್ವಯಂಚಾಲಿತ ಹುಡುಕನ್ನು ಶಕ್ತಗೊಳಿಸುವ ಆಜ್ಞಾ ಸಾಲಿನ ಆಯ್ಕೆಯಾದಂತಹ dlabel=on ಇಂದ ನಿಯಂತ್ರಿಸಲ್ಪಡುತ್ತದೆ. ಈ ಬಿಡುಗಡೆಯಲ್ಲಿ dlabel=on ವು ಡೀಫಾಲ್ಟ್‍ ಸಂಯೋಜನೆಯಾಗಿರುತ್ತದೆ.

    OEMDRV ಎಂಬ ಕಡತ ವ್ಯವಸ್ಥೆ ಲೇಬಲ್ ಅನ್ನು ಹೊಂದಿರುವ ಎಲ್ಲಾ ಖಂಡ ಸಾಧನಗಳನ್ನು ಪರಿಶೀಲಿಸಲಾಗುವುದು ಹಾಗು ಈ ಸಾಧನದಲ್ಲಿರುವ ಚಾಲಕಗಳನ್ನು ಅವು ಕಂಡು ಬಂದ ಕ್ರಮದಲ್ಲಿಯೆ ಲೋಡ್ ಮಾಡಲಾಗುವುದು.

  • vfat ಕಡತ ವ್ಯವಸ್ಥೆಯನ್ನು ಹೊಂದಿರುವ ಈಗಿರುವ ಗೂಢಲಿಪೀಕರಣಗೊಂಡಿರುವ ಖಂಡ ಸಾಧನಗಳು ವಿಭಜನಾ ಸಂಪರ್ಕಸಾಧನದಲ್ಲಿ foreign ಬಗೆಯದ್ದು ಎಂದು ಕಾಣಿಸಿಕೊಳ್ಳುತ್ತದೆ; ಅಲ್ಲದೆ, ಈ ಸಾಧನಗಳು ಬೂಟ್ ಸಮಯದಲ್ಲಿ ತಾವಾಗಿಯೆ ಆರೋಹಿತಗೊಳ್ಳುವುದಿಲ್ಲ. ಈ ಸಾಧನಗಳು ಸ್ವಯಂಚಾಲಿತವಾಗಿ ಆರೋಹಿತಗೊಳ್ಳುವುದ್ನು ಖಚಿತ ಪಡಿಸಿಕೊಳ್ಳಲು, ಅವುಗಳಿಗಾಗಿ ಸೂಕ್ತವಾದ ಒಂದು ನಮೂದನ್ನು /etc/fstabನಲ್ಲಿ ಸೇರಿಸಿ . ಅದನ್ನು ಹೇಗೆ ಮಾಡಬೇಕು ಎನ್ನುವುದರ ಬಗೆಗಿನ ವಿವರಗಳಿಗಾಗಿ man fstab ಅನ್ನು ನೋಡಿ.

1.2. PowerPC ಆರ್ಕಿಟೆಕ್ಚರುಗಳು

  • Red Hat Enterprise Linux 5.2 ರ ಅನುಸ್ಥಾಪನೆಗೆ ಈಗ ಕನಿಷ್ಟ 1 GB RAM ನ ಅಗತ್ಯವಿರುತ್ತದೆ; 2 GB RAM ಅನ್ನು ಹೊಂದಿರುವಂತೆ ಸಲಹೆ ಮಾಡಲಾಗುತ್ತದೆ. ಎಲ್ಲಿಯಾದರೂ ಗಣಕದಲ್ಲಿ 1 GB RAM ಗಿಂತ ಕಡಿಮೆ ಇದ್ದಲ್ಲಿ, ಅನುಸ್ಥಾಪನ ಪ್ರೋಗ್ರಾಂ ಸ್ಥಗಿತಗೊಳ್ಳಬಹುದು.

    ಇದಲ್ಲದೆ, 1 GB ಯಷ್ಟು RAMನ್ನು ಹೊಂದಿದ PowerPC-ಆಧರಿತವಾದ ಗಣಕಗಳಲ್ಲಿ ಕೆಲವೊಂದು ಕಠಿಣ ಕಾರ್ಯಹೊರೆಗಳ ಅಡಿಯಲ್ಲಿ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಮಹತ್ವದ ತೊಂದರೆಗಳು ಕಂಡು ಬರುತ್ತದೆ. ಒಂದು Red Hat Enterprise Linux 5.2 ಗಣಕದಲ್ಲಿ ಕಠಿಣ RAM ಪ್ರಕ್ರಿಯೆಗಳು ಸುಗಮವಾಗಿ ನಡೆಯಲು, ಗಣಕದೊಂದಿದೆ 4 GBಯಷ್ಟು RAM ಇರಬೇಕೆಂದು ಸೂಚಿಸುತ್ತೇವೆ. ಇದು Red Hat Enterprise Linux 4.5 ಅನ್ನು ಅಥವ ಅದಕ್ಕೂ ಮುಂಚಿನದನ್ನು ಬಳಸುವ 512 MB RAMನ್ನು ಹೊಂದಿರುವ PowerPC ಗಣಕಗಳು ಹೊಂದಿರುವಂತಹುದೆ ಭೌತಿಕ ಪುಟಗಳನ್ನು ಈ ಗಣಕಗಳು ಹೊಂದಿರುವುದನ್ನು ಖಾತರಿಪಡಿಸುತ್ತದೆ.

1.3. s390x ಆರ್ಕಿಟೆಕ್ಚರುಗಳು

  • ಅನಕೊಂಡಾವು ಈಗ OSA Express3 ಕಾರ್ಡುಗಳಿಗಾಗಿನ CHPID ಯಲ್ಲಿನ ಎರಡೂ ಸಂಪರ್ಕಸ್ಥಾನಗಳನ್ನು ಬೆಂಬಲಿಸುತ್ತದೆ. ಅನುಸ್ಥಾಪಕವು ಅನುಸ್ಥಾಪನೆಯ ಸಮಯದಲ್ಲಿ ಸಂಪರ್ಕಸ್ಥಾನದ ಸಂಖ್ಯೆಗಾಗಿ ಕೇಳುತ್ತದೆ. ಸಂಪರ್ಕಸ್ಥಾನಕ್ಕಾಗಿ ನೀಡಲಾದ ಮೌಲ್ಯವು ಅನುಸ್ಥಾಪಿತ ಜಾಲಬಂಧ ಸಂಪರ್ಕಸಾಧನ ಆರಂಭಗೊಳಿಕಾ ಸ್ಕ್ರಿಪ್ಟಿನ ಮೇಲೂ ಸಹ ಪರಿಣಾಮ ಬೀರುತ್ತದೆ. ಸಂಪರ್ಕಸ್ಥಾಮ ಸಂಖ್ಯೆ 1 ಅನ್ನು ಆಯ್ಕೆ ಮಾಡಿದಾಗ, ಮೌಲ್ಯ portno=1 ಅನ್ನು ifcfg-eth* ಕಡತದಲ್ಲಿನ OPTIONS ನಿಯತಾಂಕಕ್ಕೆ ಸೇರಿಸಲಾಗುವುದು.

    ಸೂಚನೆ

    z/VM ನ ಅಡಿಯಲ್ಲಿ ಅನುಸ್ಥಾಪಿಸುವಾಗ, ವಿಧಾನಕ್ಕಾಗಿ ಕೇಳುವುದನ್ನು ತಪ್ಪಿಸಲು CMS ಸಂರಚನಾ ಕಡತಕ್ಕೆ ನೀವು ಒಂದೋ PORTNO=0 ಅನ್ನು(ಸಂಪರ್ಕಸ್ಥಾನ 0 ಅನ್ನು ಬಳಸಲು) ಅಥವ PORTNO=1 ಅನ್ನು (ಸಂಪರ್ಕಸ್ಥಾನ 1 ಅನ್ನು ಬಳಸಲು) ಸೇರಿಸಬೇಕು.

  • DASD ಖಂಡ ಸಾಧನಗಳ ಮೇಲೆ ಈಗಿರುವ ಲಿನಕ್ಸ್‍ ಅಥವ ಲಿನಕ್ಸ್‍ ಅಲ್ಲದ ಕಡತವ್ಯವಸ್ಥೆಗಳನ್ನು ಹೊಂದಿರುವ ಗಣಕದಲ್ಲಿ ಅನುಸ್ಥಾಪಿಸಲು ಪ್ರಯತ್ನಿಸಿದಾಗ ಅನುಸ್ಥಾಪಕವು ನಿಂತು ಹೋಗಬಹುದು. ಹೀಗೆ ಆದಲ್ಲಿ, ನೀವು ಬಳಸಬೇಕಿರುವ DASD ಸಾಧನಗಳಲ್ಲಿರುವ ಎಲ್ಲಾ ವಿಭಾಗಗಳನ್ನು ಅಳಿಸಿ ಹಾಕಬೇಕು ಹಾಗು ಅನುಸ್ಥಾಪಕವನ್ನು ಮರಳಿ ಆರಂಭಿಸಬೇಕು.

1.4. ia64 ಆರ್ಕಿಟೆಕ್ಚರುಗಳು

  • ನಿಮ್ಮ ಗಣಕವು ಕೇವಲ 512MB ಯಷ್ಟು RAM ಅನ್ನು ಮಾತ್ರ ಹೊಂದಿದ್ದಲ್ಲಿ, Red Hat Enterprise Linux 5.3 ರ ಅನುಸ್ಥಾಪನಾ ಪ್ರಯತ್ನವು ವಿಫಲಗೊಳ್ಳಬಹುದು. ಇದನ್ನು ತಡೆಯಲು ಮೊದಲಿಗೆ ಕೇವಲ ಮೂಲ ಅನುಸ್ಥಾಪನೆಯನ್ನು ಮಾತ್ರ ಮಾಡಿ, ಅದು ಮುಗಿದ ನಂತರ ಇತರೆ ಎಲ್ಲಾ ಪ್ಯಾಕೇಜ್‍ಗಳನ್ನು ಅನುಸ್ಥಾಪಿಸಿ.

  • yum ಅನ್ನು ಬಳಸಿಕೊಂಡು 32-bit Compatibility Layer ಡಿಸ್ಕಿನಿಂದ ಪ್ಯಾಕೇಜುಗಳನ್ನು ಅನುಸ್ಥಾಪಿಸುವಾಗ ವಿಫಲತೆ ಎದುರಾಗಬಹುದು. ಹಾಗೆ ಆಗಲು, Red Hat ಪ್ಯಾಕೇಜ್ ಸೈನಿಂಗ್ ಕೀಲಿಯು RPM ದತ್ತಸಂಚಯಕ್ಕೆ ರವಾನಿತವಾಗಿರದೇ ಇರುವುದೆ ಕಾರಣವಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ನೀವು ಇನ್ನೂ Red Hat Network ಗೆ ಸಂಪರ್ಕ ಹೊಂದಿರದೇ ಇರುವುದು ಹಾಗೂ ಅಲ್ಲಿಂದ ಅಪ್‍ಡೇಟ್‍ಗಳನ್ನು ಪಡೆಯದೇ ಇರುವುದು. ಕೀಲಿಯನ್ನು ಕೈಯಾರೆ ಪಡೆದುಕೊಳ್ಳಲು, ಈ ಕೆಳಗಿನ ಆಜ್ಞೆಯನ್ನು ಮೂಲವಾಗಿ ಚಲಾಯಿಸಿ:

    rpm --import /etc/pki/rpm-gpg/RPM-GPG-KEY-redhat-release

    ಒಮ್ಮೆ Red Hat GPG ಕೀಲಿಯು ದೊರೆಯಿತೆಂದರೆ, ನೀವು ಈಗ 32-bit Compatibility Layer ಡಿಸ್ಕಿನಿಂದ ಪ್ಯಾಕೇಜುಗಳನ್ನು ಅನುಸ್ಥಾಪಿಸಲು yum ಅನ್ನು ಬಳಸಬಹುದು.

    ಅನುಸ್ಥಾಪನೆಯ ಸಮಯದಲ್ಲಿ ಮೂಲ OS ಅವಲಂಬಿಕೆಗಳು (dependencies) ಉಲ್ಲೇಖಿತಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು, ಈ ಡಿಸ್ಕಿನಿಂದ ಅನುಸ್ಥಾಪಿಸುವಾಗ, rpm ಅನ್ನು ಬಳಸದೇ yum ಅನ್ನು ಬಳಸಬೇಕೆಂದು ಸಲಹೆ ಮಾಡಲಾಗುತ್ತದೆ ಎಂಬುದನ್ನು ಗಮನಿಸಿ.

2. ಸವಲತ್ತು ಅಪ್‍ಡೇಟ್‍ಗಳು

ಖಂಡ ಸಾಧನ ಗೂಢಲಿಪೀಕರಣ

Red Hat Enterprise Linux 5.3 ರಲ್ಲಿ Linux Unified Key Setup (LUKS) ನಿಶ್ಚಿತವನ್ನು ಬಳಸಿಕೊಂಡು ಖಂಡ ಸಾಧನವನ್ನು ಗೂಢಲಿಪೀಕರಿಸುವುದನ್ನು ಬೆಂಬಲಿಸುತ್ತದೆ. ಒಂದು ಸಾಧನವನ್ನು ಗೂಢಲಿಪೀಕರಿಸುವುದರಿಂದ, ಖಂಡ ಸಾಧನದವನ್ನು ಭೌತಿಕವಾಗಿ ತೆಗೆದು ಹಾಕಿದರೂ ಸಹ ಅದರಲ್ಲಿರುವ ಎಲ್ಲಾ ದತ್ತಾಂಶವನ್ನು ಅನಧೀಕೃತವಾಗಿ ನಿಲುಕಿಸಿಕೊಳ್ಳದಂತೆ ರಕ್ಷಿಸುತ್ತದೆ. ಒಂದು ಗೂಢಲಿಪೀಕರಿಸಿದ ಸಾಧನದಲ್ಲಿನ ವಿಷಯವನ್ನು ನಿಲುಕಿಸಿಕೊಳ್ಳಲು, ದೃಢೀಕರಣದ ರೂಪದಲ್ಲಿ ಬಳಕೆದಾರರು ಒಂದು ಗುಪ್ತಪದ ಅಥವ ಕೀಲಿಯನ್ನು ಒದಗಿಸಬೇಕಾಗುತ್ತದೆ.

ಡಿಸ್ಕ್‍ ಗೂಢಲಿಪೀಕರಣವನ್ನು ಸಿದ್ಧಗೊಳಿಸುವ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, Red Hat Enterprise Linux ಅನುಸ್ಥಾಪನಾ ಮಾರ್ಗದರ್ಶಿಯಲ್ಲಿನ ಅಧ್ಯಾಯ 8 ರಲ್ಲಿ ನೋಡಿ http://redhat.com/docs/

mac80211 802.11a/b/g WiFi protocol stack (mac80211)

mac80211 ಸ್ಟ್ಯಾಕ್ (ಈ ಮೊದಲು devicescape/d80211 ಎಂದು ಕರೆಯಲ್ಪಡುತ್ತಿದ್ದಸ್ಟ್ಯಾಕ್) ಈಗ Red Hat Enterprise Linux 5.3 ರಲ್ಲಿ ಬೆಂಬಲಿತ ಸವಲತ್ತಾಗಿದೆ Intel® Wifi ಲಿಂಕ್ 4965 ಯಂತ್ರಾಂಶಕ್ಕಾಗಿ iwlwifi 4965 ವೈರ್ಲೆಸ್ ಚಾಲಕವನ್ನು ಶಕ್ತಗೊಳಿಸುತ್ತದೆ. ಇದು ನಿಗದಿತ ವೈರ್ಲೆಸ್ ಸಾಧನಗಳನ್ನು ಯಾವುದೆ Wi-Fi ಜಾಲಬಂಧಕ್ಕೆ ಸಂಪರ್ಕ ಕಲ್ಪಿಸಲು ಅನುವು ಮಾಡಿಕೊಳ್ಳುತ್ತದೆ.

mac80211 ಘಟಕಕ್ಕೆ Red Hat Enterprise Linux 5.3 ನಲ್ಲಿ ಬೆಂಬಲವಿದ್ದರೂ ಸಹ, ಸಂಜ್ಞೆಗಳನ್ನು ಕರ್ನಲ್‌ನ ಸಂಜ್ಞೆ ವೈಟ್‌ಲಿಸ್ಟಿನಲ್ಲಿ ಸೇರಿಸಲಾಗಿಲ್ಲ.

ಜಾಗತಿಕ ಕಡತ ವ್ಯವಸ್ಥೆ 2 (GFS2)

GFS2 ಯು ಒಂದು GFS ನ ಅಭಿವೃದ್ಧಿಯಲ್ಲಿ ಒಂದು ಏರಿಕೆ ಹಂತ. ಡಿಸ್ಕಿನಲ್ಲಿನ ಕಡತವ್ಯವಸ್ಥೆಗೆ ಒಂದು ಬದಲಾವಣೆಯನ್ನು ಒದಗಿಸುವಂತೆ ಹಲವಾರು ಗುರುತರ ಸುಧಾರಣೆಗಳನ್ನು ಈ ಅಪ್ಡೇಟ್ ಅನ್ವಯಿಸುತ್ತದೆ. GFS ಕಡತವ್ಯವಸ್ಥೆಯನ್ನು gfs2_convert ಅನ್ನು ಬಳಸಿಕೊಂಡು GFS2 ಗೆ ಮಾರ್ಪಡಿಸಬಹುದಾಗಿದ್ದು, ಇದು ಒಂದು GFS ಕಡತವ್ಯವಸ್ಥೆಯ ಮೆಟಾಡಾಟಾವನ್ನು ಸೂಕ್ತ ರೀತಿಯಲ್ಲಿ ಅಪ್ಡೇಟ್ ಮಾಡುತ್ತದೆ.

Red Hat Enterprise Linux 5.2 ರಲ್ಲಿ, ಪ್ರಾಯೋಗಿಕವಾಗಿ GFS2 ಅನ್ನು ಒಂದು ಕರ್ನಲ್ ಘಟಕವಾಗಿ ನೀಡಲಾಗಿತ್ತು. Red Hat Enterprise Linux 5.3 ರಲ್ಲಿ ಈಗ GFS2 ಯು ಕರ್ನಲ್ ಪ್ಯಾಕೇಜಿನ ಒಂದು ಭಾಗವಾಗಿದೆ. ಎಲ್ಲಿಯಾದರೂ Red Hat Enterprise Linux 5.2 GFS2 ಕರ್ನಲ್ ಘಟಕಗಳನ್ನು ಅನುಸ್ಥಾಪಿಸಲಾಗಿದ್ದಲ್ಲಿ Red Hat Enterprise Linux 5.3 ರಲ್ಲಿ GFS2 ಅನ್ನು ಬಳಸಲು ಅದನ್ನು ತೆಗೆದು ಹಾಕಬೇಕು.

ಚಾಲಕ ಡಿಸ್ಕ್‍ ಬೆಂಬಲದಲ್ಲಿನ ಸುಧಾರಣೆಗಳು

ಒಂದು OEM ನಿಂದ ಒದಗಿಸಲಾದಂತಹ ಚಾಲಕ ಡಿಸ್ಕ್‍ ಒಂದು ಸಾಧಾರಣ ಚಿತ್ರಿಕಾ ಕಡತವಾಗಿದ್ದು(*.img), ಸಮರ್ಥವಾದಂತಹ ಅನೇಕ ಚಾಲಕ RPM ಗಳನ್ನು ಹಾಗು ಕರ್ನಲ್ ಅಪ್‌ಡೇಟ್‌ಗಳನ್ನು ಹೊಂದಿದೆ. ಈ ಚಾಲಕಗಳನ್ನು ಅನುಸ್ಥಾಪನಾ ಸಮಯದಲ್ಲಿ ಗುರುತಿಸಲು ಅಸಾಧ್ಯವಾದಂತಹ ಯಂತ್ರಾಂಶದ ಬೆಂಬಲಕ್ಕಾಗಿ ಬಳಸಲಾಗುವುದು. ಗಣಕವು ಮರಳಿ ಬೂಟ್ ಆದ ನಂತರ RPMಗಳ ಬೆಂಬಲಿತವಾಗಿರುವಂತೆ ಅವನ್ನು ಗಣಕದಲ್ಲಿ ಅನುಸ್ಥಾಪಿಸಿ initrd ಯಲ್ಲಿ ಇರಿಸಲಾಗುವುದು.

Red Hat Enterprise Linux 5.3 ಯಲ್ಲಿ, ಚಾಲಕ ಡಿಸ್ಕಿನ ಕಡತ ವ್ಯವಸ್ಥೆಗೆ ಅನುಗುಣವಾಗಿ ಅನುಸ್ಥಾಪನೆಯು ಸ್ವಯಂಚಾಲಿತವಾಗಿ ಚಾಲಕ ಡಿಸ್ಕನ್ನು ಗುರುತಿಸುವುದು, ಹಾಗು ಅನುಸ್ಥಾಪನೆಯ ಸಮಯದಲ್ಲಿ ಅದರಲ್ಲಿ ಇರುವುದನ್ನು ಬಳಸುವುದು. ಈ ವರ್ತನೆಯು ಸ್ವಯಂಚಾಲಿತ ಹುಡುಕನ್ನು ಶಕ್ತಗೊಳಿಸುವ ಆಜ್ಞಾ ಸಾಲಿನ ಆಯ್ಕೆಯಾದಂತಹ dlabel=on ಇಂದ ನಿಯಂತ್ರಿಸಲ್ಪಡುತ್ತದೆ. OEMDRV ಎಂಬ ಕಡತ ವ್ಯವಸ್ಥೆ ಲೇಬಲ್ ಅನ್ನು ಹೊಂದಿರುವ ಎಲ್ಲಾ ಖಂಡ ಸಾಧನಗಳನ್ನು ಪರಿಶೀಲಿಸಲಾಗುವುದು ಹಾಗು ಈ ಸಾಧನದಲ್ಲಿರುವ ಚಾಲಕಗಳನ್ನು ಅವು ಕಂಡು ಬಂದ ಕ್ರಮದಲ್ಲಿಯೆ ಲೋಡ್ ಮಾಡಲಾಗುವುದು.

iSCSI ಬೂಟ್ ಫರ್ಮ್-ವೇರ್ ಕೋಷ್ಟಕ

Red Hat Enterprise Linux 5.3 ಈಗ iSCSI Boot Firmware Table (iBFT) ಅನ್ನು ಸಂಪೂರ್ಣವಾಗಿ ಬೆಂಬಲಿಸಲಿದ್ದು ಇದು iSCSI ಇಂದು ಬೂಟ್ ಮಾಡುವುದನ್ನು ಅನುಮತಿಸುತ್ತದೆ. ಈ ಬೆಂಬಲಕ್ಕಾಗಿ ಇನ್ನು ಮುಂದೆ iSCSI ಡಿಸ್ಕುಗಳನ್ನು (ನೋಡ್‌ಗಳು) ಸ್ವಯಂಚಾಲಿತವಾಗಿ ಆರಂಭಗೊಳ್ಳಬೇಕೆಂದು ಗುರುತು ಹಾಕುವ ಅಗತ್ಯವಿರುವುದಿಲ್ಲ; ಅನುಸ್ಥಾಪಿತ ಗಣಕವು ಇನ್ನು ಮುಂದೆ ಚಾಲನಾ ಮಟ್ಟ 3 ಅಥವ 5 ಕ್ಕೆ ದಾಖಲಾಗುವಾಗ ತಾವಾಗಿಯೆ iSCSI ಡಿಸ್ಕುಗಳಿಗೆ ಸಂಪರ್ಕ ಹೊಂದಿ ಪ್ರವೇಶಿಸುವುದಿಲ್ಲ.

iSCSI ಯನ್ನು ಸಾಮಾನ್ಯವಾಗಿ ನಿರ್ವಹಣಾ(ರೂಟ್) ಕಾರ್ಯವ್ಯವಸ್ಥೆಯಲ್ಲಿ ಬಳಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ಬದಲಾವಣೆಯು ಯಾವುದೆ ಪರಿಣಾಮವನ್ನು ಬೀರುವುದಿಲ್ಲ ಏಕೆಂದರೆ initrd ಯು ಅಗತ್ಯವಿರುವ ಚಾಲನಾಮಟ್ಟಕ್ಕೆ ದಾಖಲಾಗುವ ಮೊದಲೆ iSCSI ಡಿಸ್ಕುಗಳಿಗೆ ಪ್ರವೇಶಿಸುತ್ತದೆ.

ಆದರೆ iSCSI ಡಿಸ್ಕುಗಳನ್ನು ನಿರ್ವಹಣಾ(ರೂಟ್) ಕಡತಕೋಶದಲ್ಲಿ ಆರೋಹಿಸಬೇಕು, ಉದಾಹರಣೆಗೆ /home ಅಥವ /srv ಯಲ್ಲಿ, ಆಗ ಮಾತ್ರ ಈ ಬದಲಾವಣೆಗಳು ಪರಿಣಾಮ ಬೀರುತ್ತದೆ, ಏಕೆಂದರೆ ಅನುಸ್ಥಾಪಿತ ವ್ಯವಸ್ಥೆಯು ಇನ್ನು ಮುಂದೆ ನಿರ್ವಹಣಾ ಕಡತವ್ಯವಸ್ಥೆಯಿಂದ ಬಳಸದೆ ಇರುವ iSCSI ಡಿಸ್ಕುಗಳ ಮೇಲೆ ತಾನಾಗಿಯೆ ಸಂಪರ್ಕ ಹೊಂದುವುದಿಲ್ಲ.

ನಿರ್ವಾಹಕವಲ್ಲದ ಕೋಶಗಳಲ್ಲಿ ಆರೋಹಿತಗೊಂಡಿರುವ iSCSI ಡಿಸ್ಕುಗಳನ್ನು ಬಳಸುವುದು ಇನ್ನೂ ಸಹ ಸಾಧ್ಯವಿದೆ, ಆದರೆ ಅದಕ್ಕೆ ಈ ಕೆಳಗಿ ಸೂಚಿಸಲಾದವುಗಳಲ್ಲಿ ಒಂದು ಉಪಾಯವನ್ನು ಬಳಸಬೇಕಾಗುತ್ತದೆ:

  1. ನಿರ್ವಾಹಕವಲ್ಲದ ಕೋಶಗಳಲ್ಲಿ ಆರೋಹಿತಗೊಂಡಿರುವ iSCSI ಡಿಸ್ಕುಗಳನ್ನು ಬಳಸದೆ ಗಣಕವನ್ನು ಅನುಸ್ಥಾಪಿಸಿ ಅದಾದ ನಂತರ ಸೂಕ್ತ ಡಿಸ್ಕುಗಳನ್ನು ಮತ್ತು ಆರೋಹಣ ತಾಣಗಳನ್ನು ಸಂರಚಿಸಿ

  2. ಅನುಸ್ಥಾಪಿತ ಗಣಕಗಳನ್ನು ಚಾಲನಾಮಟ್ಟ 1 ರಲ್ಲಿ ಬೂಟ್ ಮಾಡಿ, ಹಾಗು ಈ ಕೆಳಗಿನ ಆಜ್ಞೆಯನ್ನು ಪ್ರತಿ ಡಿಸ್ಕಿಗೆ ಒಂದು ಬಾರಿಯಂತೆ ಬಳಸಿಕೊಂಡು ನಿರ್ವಾಹಕ ಕಡತವ್ಯವಸ್ಥೆಗೆ ಬಳಸದೆ ಇರುವ ಯಾವುದಾದರೂ iSCSI ಡಿಸ್ಕುಗಳನ್ನು ಗುರುತು ಹಾಕಿ:

    iscsiadm -m node -T target-name -p ip:port -o update -n node.startup -v automatic

rhythmbox

rhythmbox ಅನ್ನು ಆವೃತ್ತಿ 0.11.6 ಗೆ ಅಪ್‍ಡೆಟ್ ಮಾಡಲಾಗಿದೆ. ಈ ಅಪ್‍ಡೇಟ್ ಸ್ವಾಮ್ಯತ್ವನ್ನು ಹೊಂದಿದ GStreamer ಪ್ಲಗ್‌ಇನ್‌ಗಳನ್ನು ಬಳಸುವುದನ್ನು ಅನುಮತಿಸುತ್ತದೆ.

lftp ಮರು ಬೇಸ್ ಮಾಡುವಿಕೆ

lftp ಅನ್ನು ಆವೃತ್ತಿ 3.7.1 ಗೆ ಮರು ಬೇಸ್ ಮಾಡಲಾಗಿದೆ. ಈ ಅಪ್‍ಡೇಟ್ ಹಲವಾರು ಅಪ್‌ಸ್ಟ್ರೀಮ್ ಸವಲತ್ತುಗಳನ್ನು ಹಾಗು ದೋಷ ನಿವಾರಣೆಗಳನ್ನು ಒದಗಿಸುತ್ತದೆ, ಅವುಗಳೆಂದರೆ:

  • mirror --script ಇಂದ ಉತ್ಪಾದಿಸಲಾಗಿರುವ lftp ಇಂದ ಕೋಟ್ ಮಾಡಲಾದಂತಹ ಸ್ಕ್ರಿಪ್ಟುಗಳಲ್ಲಿ ಇದ್ದಂತಹ ಒಂದು ಸುರಕ್ಷತಾ ದೋಷವನ್ನು (ಇದು ಅನಧೀಕೃತವಾದಂತಹ ಸವಲತ್ತು ವರ್ಧನೆಗೆ ಕಾರಣವಾಗಬಹುದು) ಈಗ ಪರಿಹರಿಸಲಾಗಿದೆ.

  • -c ಆಯ್ಕೆಯೊಂದಿಗೆ lftp ಅನ್ನು ಬಳಸಿದಾಗ ಇನ್ನು ಮುಂದೆ lftp ಯು ಸ್ಥಗಿತಗೊಳ್ಳಲು ಕಾರಣವಾಗುವುದಿಲ್ಲ.

  • sftp ಅನ್ನು ಬಳಸಿಕೊಂಡು ಕಡತಗಳನ್ನು ವರ್ಗಾಯಿಸುವಾಗ ಇನ್ನು ಮುಂದೆ lftp ಅವನ್ನು ಭ್ರಷ್ಟಗೊಳಿಸುವುದಿಲ್ಲ.

ಈ ಬಿಡುಗಡೆಯಲ್ಲಿ ಅನ್ವಯಿಸಲಾದ lftp ಅಪ್‌ಡೇಟ್‌ಗಳ ಬಗೆಗಿನ ಹೆಚ್ಚಿನ ಮಾಹಿತಿಗಾಗಿ http://lftp.yar.ru/news.html ಅನ್ನು ನೋಡಿ.

TTY ಆದಾನ(ಇನ್‌ಪುಟ್) ಆಡಿಟಿಂಗ್

TTY ಆದಾನ(ಇನ್‌ಪುಟ್) ಆಡಿಟಿಂಗ್ ಈಗ ಬೆಂಬಲಿತವಾಗಿದೆ. ಒಂದು ಪ್ರಕ್ರಿಯೆಯನ್ನು TTY ಆದಾನ ಆಡಿಟಿಂಗ್‌ ಮಾಡಲೆಂದು ಗುರುತಿಸಿದ್ದಲ್ಲಿ, ಅದು TTY ಗಳಿಂದ ಓದಲ್ಪಡುವ ದತ್ತಾಂಶವನ್ನು ಆಡಿಟ್ ಮಾಡಲಾಗುತ್ತದೆ; ಇದನ್ನು ಆಡಿಟ್ ದಾಖಲೆಗಳಲ್ಲಿ TTY ಬಗೆಯಿಂದ ತೋರಿಸಲಾಗುತ್ತದೆ.

ಒಂದು ಪ್ರಕ್ರಿಯೆಯನ್ನು (ಹಾಗು ಅದರ ಉಪ ಪ್ರಕ್ರಿಯೆಗಳನ್ನು) TTY ಆದಾನ(ಇನ್‌ಪುಟ್) ಆಡಿಟಿಂಗ್‌ಗಾಗಿ ಗುರುತು ಹಾಕಲು ನೀವು pam_tty_audit ಘಟಕವನ್ನು ಬಳಸಬಹುದಾಗಿದೆ. ಇದನ್ನು ಹೇಗೆ ಮಾಡಬೇಕೆನ್ನುವುದರ ಬಗೆಗಿನ ಸೂಚನೆಗಳಿಗಾಗಿ, man pam_tty_audit(8) ಅನ್ನು ನೋಡಿ.

TTY ಆಡಿಟ್ ದಾಖಲೆಗಳು ಆಡಿಟ್ ಆದಂತಹ ಪ್ರಕ್ರಿಯೆಗಳು ಓದಬಹುದಾದಂತಹ ನಿಶ್ಚಿತ ಕೀಸ್ಟ್ರೋಕ್‌ಗಳನ್ನು ಹೊಂದಿರುತ್ತವೆ. ದತ್ತಾಂಶವನ್ನು ಸುಲಭವಾಗಿ ಡೀಕೋಡ್ ಆಗುವಂತೆ ಮಾಡಲು, USER_TTY ಬಗೆಯ ದಾಖಲೆಯನ್ನು ಬಳಸುವ ನಿಶ್ಚಿತ ಆಜ್ಞೆಯ ಬಗೆಯನ್ನು bash ಆಡಿಟ್ ಮಾಡುತ್ತದೆ.

"TTY" ಆಡಿಟ್ ದಾಖಲೆಗಳು TTY ನಿಂದ ಆಡಿಟ್ ಮಾಡಲಾದ ಎಲ್ಲಾ ಪ್ರಕ್ರಿಯೆಗಳು ಓದಲಾದಂತಹ ದತ್ತಾಂಶವನ್ನು ಹೊಂದಿರುತ್ತವೆ. ಇದರಲ್ಲಿ TIOCSTI ioctl ಗಣಕ ಕರೆಯಿಂದ ಆದಾನ (ಇನ್‌ಪುಟ್) ಸ್ಟ್ರೀಮ್‌ಗೆ ಸೇರಿಸಲಾದ ದತ್ತಾಂಶವು ಒಳಗೊಂಡಿರುತ್ತದೆ.

SystemTap ಮರು-ಬೇಸ್ ಮಾಡುವಿಕೆ

SystemTap ಅನ್ನು ಆವೃತ್ತಿ 0.7.2 ಗೆ ಮರು-ಬೇಸ್ ಮಾಡಲಾಗಿದೆ. SystemTap ನ ಈ ಅಪ್‌ಡೇಟ್ ಒಂದಿಷ್ಟು ಪ್ರಮುಖ ಸವಲತ್ತುಗಳ ಜೊತೆಗೆ, ಹಲವಾರು ಸಣ್ಣ ಪುಟ್ಟ ಸುಧಾರಣೆಗಳನ್ನು ಪರಿಚಯಿಸುತ್ತದೆ. ಈ ಹೊಸ ಸವಲತ್ತುಗಳೆಂದರೆ:

  • SystemTap ಈಗ x86, x86-64 ಹಾಗು PowerPC ಆರ್ಕಿಟೆಕ್ಚರುಗಳ ಮೇಲೆ ಸಾಂಕೇತಿಕ ಪ್ರೋಬ್ ಮಾಡುವಿಕೆಯನ್ನು ಬೆಂಬಲಿಸುತ್ತದೆ. ಇದು SystemTap ಸ್ಕ್ರಿಪ್ಟುಗಳು ಪ್ರೋಬ್‌ಗಳನ್ನು ಬಳಕೆದಾರ-ಸ್ಥಳದ ಅನ್ವಯಗಳ ಮೇಲೆ ಹಾಗು ಹಂಚಲಾದ ಲೈಬ್ರರಿಗಳ ಮೇಲೆ ಪ್ರೋಬ್‌ಗಳನ್ನು ಇರಿಸಲು ಕಾರಣವಾಗುತ್ತದೆ. ಇದರಿಂದಾಗಿ, SystemTap ಈಗ ಕರ್ನಲ್ ಪ್ರೋಬಿಂಗ್ ಬಗೆಯದೆ ಆದಂತಹ ಕೆಲವೊಂದು ಬಳಕೆದಾಳ-ಸ್ಥಳ ಅನ್ವಯಗಳ ಮೇಲೆ ದೋಷ ನಿವಾರಣೆಯ ಮಟ್ಟವನ್ನು ಒದಗಿಸಬಲ್ಲದು.

    ಉದಾಹರಣೆಗೆ, coreutils-debuginfo ಅನುಸ್ಥಾಪಿತಗೊಂಡಿದ್ದಲ್ಲಿ, ಈ ಕೆಳಗೆ ಸೂಚಿಸಲಾದ ಬಗೆಯಲ್ಲಿ ನೀವು /usr/share/doc/systemtap-version/examples/general/callgraph.stp ಅನ್ನು ಬಳಸಿಕೊಂಡು ls ಆಜ್ಞೆಯ ಕಾಲ್‌ಗ್ರಾಫ್ ಅನ್ನು ಮುದ್ರಿಸಬಹುದು:

    stap para-callgraph.stp 'process("ls").function("*")' -c 'ls -l'

    ಬೈನರಿಗಳು ಹಾಗು debuginfo RPM ಗಳ ನಡುವೆ ಪತ್ತೆ ಮಾಡಲಾಗಂತಹ ಆವೃತ್ತಿ ತಾಳೆಯಾಗದಿರುವಿಕೆಯ ಒಂದು ಸಾಧ್ಯತೆಯನ್ನು ತಪ್ಪಿಸುವ ಸಲುವಾಗಿ, +:.debug:/usr/lib/debug:build ಮೌಲ್ಯಕ್ಕೆ SYSTEMTAP_DEBUGINFO_PATH ಪರಿಸರ ವೇರಿಯೇಬಲ್ ಅನ್ನು ಬಳಸುವಂತೆ Red Hat ಸಲಹೆ ಮಾಡುತ್ತದೆ.

    ಈ ಬಿಡುಗಡೆಯ ಕರ್ನಲ್‌ನಲ್ಲಿ ಇರಿಸಲಾದ ಮಾರ್ಕರುಗಳಿಗೂ ಸಹ ಸಾಂಕೇತಿಕ ಪ್ರೋಬ್‌ಗಳನ್ನು ವಿಸ್ತರಿಸುವುದನ್ನು SystemTap ಬೆಂಬಲಿಸುತ್ತದೆ. ಈ ಮಾರ್ಕರುಗಳನ್ನು ಬಳಸಲು, /etc/rc.local ದಲ್ಲಿ kernel-trace ಕರ್ನಲ್ ಘಟಕವನ್ನು ಲೋಡ್ ಮಾಡಿ (modprobe kernel-trace ಬಳಸಿಕೊಂಡು).

  • SystemTap ದೂರಸ್ಥ ಸಂಕಲನ ಸೇವಗಳನ್ನೂ ಸಹ ಬೆಂಬಲಿಸುತ್ತದೆ. ಇದು SystemTap ಕ್ಲೈಂಟುಗಳಿಗೆ, ಒಂದು ಜಾಲಬಂಧದ ಮೇಲೆ ಕೇವಲ ಒಂದು ಗಣಕವನ್ನು ಮಾತ್ರ debuginfo/ಸಂಕಲನ ಪರಿಚಾರಕವಾಗಿ ವರ್ತಿಸಲು ಶಕ್ತಗೊಳಿಸುತ್ತದೆ. ಕ್ಲೈಂಟುಗಳು mDNS ಮೂಲಕ ಪರಿಚಾರಕವನ್ನು ಸ್ವಯಂ-ಪತ್ತೆ ಮಾಡುತ್ತದೆ (avahi), ಹಾಗು ಇದಕ್ಕಾಗಿ ಕೇವಲ systemtap-client ಮತ್ತು systemtap-runtime ಪ್ಯಾಕೇಜುಗಳು ಮಾತ್ರ ಅಗತ್ಯವಿರುತ್ತವೆ.

    ಪ್ರಸಕ್ತ, ಈ ಸವಲತ್ತು ಗೂಢಲಿಪೀಕರಣದಂತಹ ಯಾವುದೆ ಸುರಕ್ಷಿತಾ ರಚನೆಯನ್ನು ಬಳಸುವುದಿಲ್ಲ. ಆದ್ದರಿಂದ, ಕೇವಲ ನಂಬಿಕಸ್ತ ಜಾಲಬಂಧಗಳೊಂದಿಗೆ ಮಾತ್ರವೆ ದೂರಸ್ಥ ಸಂಕಲನವನ್ನು ಬಳಸಿ ಎಂದು ಸೂಚಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ, man stap-server ಅನ್ನು ನೋಡಿ.

  • ಈ ಬಿಡುಗಡೆಯ ಕರ್ನಲ್ ಅಪ್‌ಡೇಟ್ SystemTap ಸ್ಕ್ರಿಪ್ಟುಗಳ ಸ್ಥಗಿತಗೊಳಿಸುವಿಕೆಯಲ್ಲಿ ಗಮನಾರ್ಹವಾದ ಸುಧಾರಣೆಯನ್ನು ಒದಗಿಸುವ ಒಂದು ಕರ್ನಲ್ API ವಿಸ್ತರಣೆಯನ್ನು ಒಳಗೊಂಡಿದೆ. ಸೇರಿಸಲಾದ ಕರ್ನಲ್ API ವಿಸ್ತರಣೆಯು ಪ್ರತ್ಯೇಕ ಪ್ರೋಬ್ ತೆಗೆದು ಹಾಕು ಕಾರ್ಯಗಳ ನಡುವೆ ಜರುಗುವ ಅನಗತ್ಯ ಮೇಳೈಕೆಯನ್ನು ತಡೆಯುತ್ತದೆ. ಇದರ ಫಲವಾಗಿ, ನೂರಾರು ಕರ್ನಲ್ ಪ್ರೋಬ್‌ಗಳನ್ನು ಹೊಂದಿರುವ SystemTap ಸ್ಕ್ರಿಪ್ಟುಗಳು ಬಹಳ ವೇಗವಾಗಿ ಸಂಸ್ಕರಿಸಲ್ಪಡುತ್ತದೆ.

    probe syscall.* {} ನಂತಹ ಹಲವಾರು ಕರ್ನಲ್ ಘಟನೆಗಳನ್ನು ಹಿಡಿದಿಡುವಂತಹ ವೈಲ್ಡ್‍ಕಾರ್ಡುಗಳನ್ನು ಹೊಂದಿರುವ ಪ್ರೋಬ್‌ಗಳನ್ನು ಒಳಗೊಂಡಿರುವ ಸ್ಕ್ರಿಪ್ಟುಗಳಿರುವಂತಹ ವ್ಯವಸ್ಥಾಪಕದಲ್ಲಿ ಇದು ವಿಶೇಷವಾಗಿ ಉಪಯೋಗವಾಗುತ್ತದೆ.

ಈ ಬಿಡುಗಡೆಯಲ್ಲಿ ಸೇರ್ಪಡಿಸಲಾದ SystemTap ಅಪ್‌ಡೇಟ್‌ಗಳ ಒಂದು ಸಂಪೂರ್ಣ ಪಟ್ಟಿಗಾಗಿ ಈ ಕೆಳಗಿನ URL ಅನ್ನು ನೋಡಿ:

http://sources.redhat.com/git/gitweb.cgi?p=systemtap.git;a=blob_plain;f=NEWS;hb=rhel53

ಕ್ಲಸ್ಟರ್ ವ್ಯವಸ್ಥಾಪಕ ಅಪ್‌ಡೇಟ್

ಕ್ಲಸ್ಟರ್ ವ್ಯವಸ್ಥಾಪಕ ಸವಲತ್ತನ್ನು(cman) ಆವೃತ್ತಿ 2.0.97 ಗೆ ಅಪ್‌ಡೇಟ್ ಮಾಡಲಾಗಿದೆ. ಇದು ಹಲವಾರು ದೋಷ ಪರಿಹಾರಗಳನ್ನು ಹಾಗು ವರ್ಧನೆಗಳನ್ನು ಅನ್ವಯಿಸುತ್ತದೆ, ಅವುಗಳಲ್ಲಿ ಪ್ರಮುಖವೆಂದರೆ:

  • cman ಈ ಫರ್ಮ್-ವೇರ್ ಆವೃತ್ತಿಗಳನ್ನು ಬಳಸುತ್ತದೆ: APC AOS v3.5.7 ಹಾಗು APC rpdu v3.5.6. ಇದರಿಂದಾಗಿ APC 7901 ಅನ್ನು ಸರಳ ಜಾಲಬಂಧ ನಿರ್ವಹಣಾ ಪ್ರೋಟಾಕಾಲ್‌ ಅನ್ನು (SNMP) ಸರಿಯಾಗಿ ಬಳಸುವುದನ್ನು ತಡೆಯುತ್ತಿದ್ದಂತಹ ಒಂದು ದೋಷವು ನಿವಾರಣೆಗೊಂಡಿದೆ .

  • fence_drac, fence_ilo, fence_egenera, ಹಾಗು fence_bladecenter ಮಧ್ಯವರ್ತಿಗಳು ಈಗ ssh ಅನ್ನು ಬೆಂಬಲಿಸುತ್ತದೆ.

  • fence_xvmd ಕೀಲಿ ಕಡತಗಳನ್ನು ಈಗ ಮರಳಿ ಆರಂಭಿಸದೆ ಮರು ಲೋಡ್ ಮಾಡಬಹುದಾಗಿದೆ.

  • ಒಂದು ಫೆನ್ಸ್‍ ವಿಧಾನವು ಈಗ 8 ಫೆನ್ಸ್‍ ಸಾಧನಗಳನ್ನು ಬೆಂಬಲಿಸಬಲ್ಲದು.

sudo Re-base

sudo ಅನ್ನು ಅಪ್‌ಸ್ಟ್ರೀಮ್ ಆವೃತ್ತಿ 1.6.9 ಗೆ ಮರು-ಬೇಸ್ ಮಾಡಲಾಗಿದೆ. sudo ದ ಈ ಆವೃತ್ತಿಯು ಈಗ LDAP ಅನ್ನು ಬೆಂಬಲಿಸುತ್ತದೆ, ಹಾಗು sudo ಹಕ್ಕುಗಳಿಗಾಗಿ ಕೇವಲ ಮೂಲ ಹುಡುಕಾಟದ ಬದಲಿಗೆ (ಅಂದರೆ ಕೇವಲ ವೃಕ್ಷ ಮಟ್ಟದಲ್ಲಿ ಮಾತ್ರ) ಉಪ-ವೃಕ್ಷ ಹುಡುಕಾಟವನ್ನು ನಡೆಸುವುದನ್ನು ಬೆಂಬಲಿಸುತ್ತದೆ. ಇದು ವ್ಯವಸ್ಥಾಪಕರಿಗೆ ವೃಕ್ಷದಲ್ಲಿ sudo ಹಕ್ಕುಗಳನ್ನು ವರ್ಗೀಕರಿಸಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಬಳಕೆದಾರ ಸವಲತ್ತುಗಳನ್ನು ನಿರ್ವಹಿಸುವುದು ಸುಲಭವಾಗುತ್ತದೆ.

RPM ಮರು-ಬೇಸ್

RedHat Package Manager (RPM) ಅನ್ನು ಈಗ ಫೆಡೋರ 9 ಅಪ್‌ಸ್ಟ್ರೀಮ್ ಆವೃತ್ತಿಗೆ ಮರು ಬೇಸ್ ಮಾಡಲಾಗಿದೆ. rpm ಈಗ ಬಹು-ಆರ್ಕ್ ಗಣಕಗಳ ಮೇಲೆ ದ್ವಿತೀಯ ಆರ್ಕಿಟೆಕ್ಚರ್-ನಿಶ್ಚಿತ ಮ್ಯಾಕ್ರೋ ಕಡತಗಳನ್ನು ಒದಗಿಸುತ್ತದೆ. ಇದರ ಜೊತೆಯಲ್ಲಿಯೆ, rpm ಈಗ Red Hat Enterprise Linux 5 ನಲ್ಲಿ ಒಳಗೊಳ್ಳಿಸಲು ಎಲ್ಲಾ ಪ್ರಮಾಣಪತ್ರ ಅರ್ಹತೆಗಳನ್ನು ಹೊಂದಿದೆ.

ಈ ಅಪ್‌ಡೇಟ್ rpm ಗೆ ಹಲವಾರು ಅಪ್‌ಸ್ಟ್ರೀಮ್ ವರ್ಧನೆಗಳನ್ನು ಹಾಗು ದೋಷ ಪರಿಹಾರಗಳನ್ನೂ ಸಹ ಒದಗಿಸುತ್ತದೆ, ಅವುಗಳೆಂದರೆ:

  • rpm ಇನ್ನು ಮುಂದೆ ಬಹು-ಆರ್ಕ್ ಗಣಕಗಳಲ್ಲಿ ಅನಗತ್ಯವಾದ .rpmnew ಹಾಗು .rpmsave ಕಡತಗಳನ್ನು ಉತ್ಪಾದಿಸುವುದಿಲ್ಲ.

  • rpm ನಲ್ಲಿನ rpmgiNext() ಕ್ರಿಯೆಯಲ್ಲಿನ ಒಂದು ದೋಷವು ಸಮರ್ಪಕವಾಗಿ ತೊಂದರೆಯ ವರದಿಯನ್ನು ಮಾಡದಂತೆ ತಡೆಯುತ್ತಿತ್ತು. ಈ ಅಪ್‌ಡೇಟ್‌ ತೊಂದರೆ ವರದಿಗೆ ಸಮರ್ಪಕವಾದಂತಹ ಸಿಮೆಂಟಿಕ್‌ಗಳನ್ನು ಒದಗಿಸುತ್ತದೆ, ಆ ಮೂಲಕ rpm ಎಲ್ಲಾ ಸನ್ನಿವೇಶಗಳಲ್ಲಿಯೂ ಸರಿಯಾದ ಸಂಜ್ಞೆಯನ್ನು ಮರಳಿಸುವಂತೆ ಖಾತ್ರಿಪಡಿಸುತ್ತದೆ.

ಓಪನ್ ಫೈಬರ್ ಎಂಟರ್ಪ್ರೈಸ್ ಡಿಸ್ಟ್ರಿಬ್ಯೂಶನ್ (OFED) / opensm

opensm ಲೈಬ್ರರಿ API ಗೆ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ opensm ಅನ್ನು ಅಪ್‌ಸ್ಟ್ರೀಮ್ ಆವೃತ್ತಿ 3.2 ಗೆ ಅಪ್‌ಡೇಟ್ ಮಾಡಲಾಗಿದ್ದು.

  • opensm.conf ಕಡತದ ವಿನ್ಯಾಸವನ್ನು ಬದಲಾಯಿಸಲಾಗಿದೆ. ನೀವು ಈಗಿರುವ opensm.conf ಗೆ ನಿಮ್ಮ ಇಚ್ಚೆಯ ಬದಲಾವಣೆಗಳನ್ನು ಮಾಡಿದ್ದಲ್ಲಿ, rpm ತಾನಾಗಿಯೆ ಹೊಸ opensm.conf ಕಡತವನ್ನು /etc/ofed/opensm.conf.rpmnew ಗೆ ಅನುಸ್ಥಾಪಿಸುತ್ತದೆ. ನೀವು ಮಾಡಿದ ಬದಲಾವಣೆಗಳನ್ನು ಈ ಕಡತಕ್ಕೆ ವರ್ಗಾಯಿಸಿ ನಂತರ ಈಗಿರುವ opensm.conf ಕಡತವನ್ನು ಇದರಿಂದ ಬದಲಾಯಿಸಿಬೇಕು.

  • ಇನ್ನೂ ಸಹ ವಿಕಾಸದ ಆರಂಭದ ಹಂತದಲ್ಲಿರುವ ತಂತ್ರಜ್ಞಾನವಾದಂಹ Open Fabrics Enterprise Distribution (OFED) ಅನ್ನು ಶಕ್ತಗೊಳಿಸುವ ಸಲುವಾಗಿ ಅದರ ಕೋಡ್ ಬೇಸ್ ಅನ್ನು Red Hat ಬಹಳ ಹತ್ತಿರದಿಂದ ಗಮನಿಸುತ್ತಿರುತ್ತದೆ. ಇದರ ಪರಿಣಾಮವಾಗಿ, Red Hat ಕೇವಲ ಮೂಲ ಪರಿಯೋಜನೆಯು ಮಾಡುವಂತಹ API/ABI ಯೊಂದಿಗಿನ ಹೊಂದಾಣಿಕೆಯ ಪ್ರಮಾಳವನ್ನು ಮಾತ್ರ ಕಾಪಾಡಬಹುದಾಗಿದೆ. ಇದು Red Hat Enterprise Linux ನ ವಿಕಸನೆಯಲ್ಲಿ ಸಾಮಾನ್ಯವಾಗಿ ಪಾಲಿಸುವ ಒಂದು ವಿಧಾನಕ್ಕಿಂತ ವಿಭಿನ್ನವಾಗಿದ್ದಾಗಿದೆ.

    ಈ ಕಾರಣದಿಂದಾಗಿ, OFED ಸ್ಟಾಕ್‌ನ ಮೇಲೆ ನಿರ್ಮಿಸಲಾಗುವ ಅನ್ವಯಗಳನ್ನು (ಕೆಳಗೆ ಪಟ್ಟಿ ಮಾಡಲಾದ) Red Hat Enterprise Linux ಒಂದು ಚಿಕ್ಕ ಬಿಡುಗಡೆಯಿಂದ ಮುಂದಿನದಕ್ಕೆ ಬದಲಾಯಿಸುವಾಗ ಅವುಗಳ ಮರು-ಸಂಕಲನದ(ರೆಕಂಪೈಲೇಶನ್‌) ಅಥವ ಆಕರ-ಮಟ್ಟದಲ್ಲಿ(ಸೋರ್ಸ್-ಲೆವೆಲ್) ಕೋಡ್‌ ಬದಲಾವಣೆ ಮಾಡುವ ಅಗತ್ಯವಿರುತ್ತದೆ.

    ಸಾಮಾನ್ಯವಾಗಿ Red Hat Enterprise Linux ತಂತ್ರಾಂಶ ಸ್ಟಾಕ್‌ ಮೇಲೆ ನಿರ್ಮಿಸಲಾಗಿರುವ ಬೇರೆ ಅನ್ವಯಗಳಿಗೆ ಇದರ ಅಗತ್ಯವಿರುವುದಿಲ್ಲ. ಪರಿಣಾಮ ಬೀರುವ ಘಟಕಗಳೆಂದರೆ:

    • dapl

    • compat-dapl

    • ibsim

    • ibutils

    • infiniband-diags

    • libcxgb3

    • libehca

    • libibcm

    • libibcommon

    • libibmad

    • libibumad

    • libibverbs

    • libipathverbs

    • libmlx4

    • libmthca

    • libnes

    • librmdacm

    • libsdp

    • mpi-selector

    • mpitests

    • mstflint

    • mvapich

    • mvapich2

    • ofed-docs

    • openib

    • openib-mstflint

    • openib-perftest

    • openib-tvflash

    • openmpi

    • opensm

    • perftest

    • qlvnictools

    • qperf

    • rds-tools (ಭವಿಷ್ಯದ)

    • srptools

    • tvflash

Net-SNMP ಮರು-ಬೇಸ್

Net-SNMP ಅನ್ನು ಅಪ್‌ಸ್ಟ್ರೀಮ್ ಆವೃತ್ತಿ 5.3.2.2 ಗೆ ಮರು-ಬೇಸ್ ಮಾಡಲಾಗಿದೆ. ಈ ಆವೃತ್ತಿಯಲ್ಲಿ Stream Control Transmission Protocol (SCTP) ಬೆಂಬಲವನ್ನು ಸೇರಿಸಲಾಗಿದೆ(RFC 3873, http://www.ietf.org/rfc/rfc3873.txt ಯಲ್ಲಿ ಸೂಚಿಸಿರುವಂತೆ) ಹಾಗು ಎರಡು ಹೊಸ ಸಂರಚನಾ ಆಯ್ಕೆಗಳನ್ನು ಪರಿಚಯಿಸುತ್ತದೆ (/etc/snmpd.conf ನಲ್ಲಿ ಬಳಸಲು):

  • ಸಂಪರ್ಕಿಸಲು ಪ್ರಯತ್ನಿಸಿದಾಗ ಉಂಟಾಗುತ್ತಿದ್ದ ಲಾಗಿಂಗ್ ಆಫ್ ಅನ್ನು dontLogTCPWrappersConnects -- ತಡೆಯುತ್ತದೆ.

  • ಹೊರಹೋಗುವ SNMP ಟ್ರಾಪ್‌ಗಳ ಒಳಗೆ ಒಬ್ಬ ಮಧ್ಯವರ್ತಿಯ ಐಪಿ ವಿಳಾಸವನ್ನು ಇರಿಸುವುದನ್ನು v1trapaddress -- ಶಕ್ತಗೊಳಿಸುತ್ತದೆ.

ಅಪ್‍ಸ್ಟ್ರೀಮ್‍ನಿಂದ ಒದಗಿಸಲಾದ ಹಲವಾರು ದೋಷ ಪರಿಹಾರಗಳನ್ನೂ ಸಹ ಈ ಅಪ್‍ಡೆಟ್ ಅನ್ವಯಿಸುತ್ತದೆ, ಅವುಗಳಲ್ಲಿ:

  • snmpd ಡೀಮನ್ ಈಗ 255 ಕ್ಕೂ ಮೀರಿದ ಜಾಲಬಂಧ ಸಂಪರ್ಕಸಾಧನಗಳನ್ನು ಹೊಂದಿರುವ ಗಣಕಗಳಲ್ಲಿ ಸಮರ್ಪಕವಾಗಿ ಕೆಲಸ ಮಾಡುತ್ತದೆ. ಇದರ ಜೊತೆಯಲ್ಲಿ, snmpd ಅನ್ನು 65535 ಕ್ಕೂ ಮೀರಿದ ಸಂಪರ್ಕಸ್ಥಾನಗಳನ್ನು ಆಲಿಸುವಂತೆ ಸಂರಚಿಸಿದಾಗ ಒಂದು ದೋಷವನ್ನು ವರದಿ ಮಾಡುತ್ತದೆ.

  • ಒಂದು ರೇಸ್ ಕಂಡೀಶನ್‌ನಿಂದಾಗಿ, snmpd ಡೀಮನ್ /proc ಇಂದ ಓದುವಾಗ ಕಡತ ವಿವರಣೆಗಾರಗಳನ್ನು ಸೋರಿ ಹೋಗುವಂತೆ ಮಾಡುತ್ತಿದ್ದ ಒಂದು ದೋಷವನ್ನು ಈಗ ಪರಿಹರಿಸಲಾಗಿದೆ.

  • snmpd ಡೀಮನ್ ಈಗ hrProcessorLoad ಆಬ್ಜೆಕ್ಟ್‍ ID ಗಳನ್ನು (OID) ಬಹು-CPU ಯಂತ್ರಾಂಶವನ್ನೂ ಒಳಗೊಂಡು ಎಲ್ಲದರಲ್ಲೂ ಸರಿಯಾಗಿ ವರದಿ ಮಾಡುತ್ತದೆ. ಆದರೆ, ಇದು OID ಮೌಲ್ಯವನ್ನು ಲೆಕ್ಕ ಹಾಕಲು ಡೀಮನ್ ಆರಂಭಗೊಂಡಲ್ಲಿಂದ ಹಿಡಿದುು ಸುಮಾರುಒಂದು ನಿಮಿಷ ತೆಗೆದುಕೊಳ್ಳುತ್ತದೆ ಎನ್ನುವುದನ್ನು ನೆನಪಿಡಿು.

  • net-snmp-devel ಪ್ಯಾಕೇಜ್ ಈಗ lm_sensors-devel ಪ್ಯಾಕೇಜಿನ ಮೇಲೆ ಅವಲಂಬಿತವಾಗಿದೆ.

FIPS ಪ್ರಮಾಣಪತ್ರಕ್ಕಾಗಿ OpenSSL ಮರು-ಬೇಸ್

openssl ಪ್ಯಾಕೇಜುಗಳು OpenSSL ಲೈಬ್ರರಿಯನ್ನು ಒಂದು ಹೊಸ ಅಪ್‌ಸ್ಟ್ರೀಮ್ ಆವೃತ್ತಿಗೆ ನವೀಕರಿಸುತ್ತದೆ. ಇದಕ್ಕೆ ಪ್ರಸಕ್ತ Federal Information Processing Standards ಮಾನ್ಯಗೊಳಿಕಾ ಪ್ರಕ್ರಿಯೆಯು ನಡೆಯುತ್ತಿದೆ (FIPS-140-2). FIPS ಕ್ರಮವು, Red Hat Enterprise Linux 5 ರಲ್ಲಿನ ಈ ಹಿಂದಿನ ಬಿಡುಗಡೆಗಳಲ್ಲಿನ openssl ಪ್ಯಾಕೇಜುಗಳೊಂದಿಗೆ OpenSSL ಲೈಬ್ರರಿಯು ಸವಲತ್ತು ಅನುರೂಪತೆಯನ್ನು ಹಾಗು ABI ಸಹವರ್ತನೀಯತೆಯನ್ನು ಒದಗಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಡೀಫಾಲ್ಟ್‍ ಆಗಿ ಅಶಕ್ತಗೊಂಡಿರುತ್ತದೆ.

ಈ ಅಪ್‍ಡೇಟ್ ಈ ಕೆಳಗಿನ ಅಪ್‌ಸ್ಟ್ರೀಮ್ ಪರಿಹಾರಗಳನ್ನೂ ಸಹ ಒಳಗೊಂಡಿದೆ:

  • ಡೀಫಾಲ್ಟ್‍ ಆಗಿ, SSL ಹಾಗು TLS ಸಂಪರ್ಕಗಳಿಗೆ zlib ಸಂಕುಚನವನ್ನು(ಕಂಪ್ರೆಶನ್) ಬಳಸಲಾಗುತ್ತದೆ. Central Processor Assist for Cryptographic Function (CPACF) ಅನ್ನು ಹೊಂದಿದ IBM System z ಆರ್ಕಿಟೆಕ್ಚರುಗಳಲ್ಲಿ, ಸಂಕುಚನವು CPU ಲೋಡ್‌ನ ಒಂದು ಮುಖ್ಯ ಭಾಗವಾಗಿದೆ, ಹಾಗು ಸಂಕುಚನದ ವೇಗವು (ಗೂಢಲಿಪೀಕರಣದ ವೇಗವಲ್ಲ) ಒಟ್ಟು ಕಾರ್ಯಕ್ಷಮತೆಯನ್ನು ನಿರ್ಧರಿಸುತ್ತದೆ. ಸಂಕುಚನವನ್ನು ಅಶಕ್ತಗೊಳಿಸಿದಾಗ, ಒಟ್ಟು ಕಾರ್ಯಕ್ಷಮತೆಯು ಬಹಳಷ್ಷು ಸುಧಾರಿಸುತ್ತದೆ. ಈ ಅಪ್‌ಡೇಟ್‌ ಆದಂತಹ ಪ್ಯಾಕೇಜುಗಳಲ್ಲಿ, SSL ಹಾಗು TLS ಸಂಪರ್ಕಗಳು zlib ಸಂಕುಚನವನ್ನು OPENSSL_NO_DEFAULT_ZLIB ಪರಿಸರ ವೇರಿಯೇಬಲ್‌ನಿಂದ ಅಶಕ್ತಗೊಳಿಸಬಹುದು. ನಿಧಾನಗತಿಯ ಜಾಲಬಂಧದ ಮೂಲಕದ TLS ಸಂಪರ್ಕಗಳಿಗೆ, ಸಂಕುಚನವನ್ನು ಆನ್ ಇಡುವುದು ಉತ್ತಮ, ಆ ಮೂಲಕ ವರ್ಗಾಯಿಸುವ ದತ್ತಾಂಶದ ಮೊತ್ತವು ಕಡಿಮೆಗೊಳಿಸಬಹುದಾಗಿದೆ.

  • s_client ಹಾಗು s_server ಆಯ್ಕೆಗಳೊಂದಿಗೆ openssl ಆಜ್ಞೆಯನ್ನು ಬಳಸುವಾಗ ಡೀಫಾಲ್ಟ್‍ CA ಪ್ರಮಾಣಪತ್ರಗಳ ಕಡತವನ್ನು(/etc/pki/tls/certs/ca-bundle.crt), ಓದಲಾಗುತ್ತಿರಲಿಲ್ಲ. ಈ ಕಾರಣದಿಂದಾಗಿ ಪ್ರಮಾಣಪತ್ರಗಳನ್ನು ಪರಿಶೀಲಿಸುವಾಗ ವಿಫಲಗೊಳ್ಳುತ್ತಿದ್ದವು. ಪ್ರಮಾಣಪತ್ರಗಳು ಪರಿಶೀಲನೆಯಲ್ಲಿ ಉತ್ತೀರ್ಣ ಹೊಂದಲು, -CAfile /etc/pki/tls/certs/ca-bundle.crt ಆಯ್ಕೆಯನ್ನು ಬಳಸಬೇಕು. ಈ ಅಪ್‌ಡೇಟ್‌ಗಳಲ್ಲಿ, ಡೀಫಾಲ್ಟ್‍ CA ಪ್ರಮಾಣಪತ್ರಗಳು ಓದಲ್ಪಡುತ್ತವೆ, ಹಾಗು ಅದಕ್ಕಾಗಿ ಯಾವುದೆ -CAfile ಆಯ್ಕೆಯನ್ನು ಸೂಚಿಸುವ ಅಗತ್ಯವಿರುವುದಿಲ್ಲ.

yum ಮರು-ಬೇಸ್

yum ಅನ್ನು ಅಪ್‌ಸ್ಟ್ರೀಮ್ ಆವೃತ್ತಿ 3.2.18 ಮರು-ಬೇಸ್ ಮಾಡಲಾಗಿದೆ. ಈ ಅಪ್‌ಡೇಟ್‌ನಲ್ಲಿ yum ಕಾರ್ಯ ನಿರ್ವಹಿಸುವ ವೇಗವನ್ನು ಹೆಚ್ಚಿಸಲಾಗಿದ್ದು, ಆ ಮೂಲಕ ಪ್ರತಿಯೊಂದು ಕಿರು ಅಪ್‌ಡೇಟ್‌ನಲ್ಲೂ ಹೆಚ್ಚುತ್ತಿರುವ ಪ್ಯಾಕೇಜುಗಳ ಸಂಖ್ಯೆಯ ಕಾರಣದಿಂದಾಗಿ ಎದುರಾಗುತ್ತಿರುವ ತೊಂದರೆಯನ್ನು ಕಡಿಮೆ ಮಾಡಲಾಗಿದೆ. ಇದರ ಜೊತೆಗೆ, ಈ ಅಪ್‌ಡೇಟ್ ಮರು-ಅನುಸ್ಥಾಪನೆ ಆಜ್ಞೆಯನ್ನು ಪರಿಚಯಿಸಲಾಗುತ್ತಿದ್ದು, ಇದು ಹಲವಾರು ಆಜ್ಞೆಗಳ ಸಂಪರ್ಕಸಾಧನವನ್ನು ಸುಧಾರಿಸುತ್ತದೆ, ಹಾಗು ಹಲವಾರು ದೋಷ ಪರಿಹಾರಗಳನ್ನು ಒದಗಿಸುತ್ತದೆ, ಅವುಗಳೆಂದರೆ:

  • ಒಂದು ಜಾಲ ವಿಳಾಸದಲ್ಲಿನ (http) ಸಂರಚನಾ ಕಡತವನ್ನು ಸೂಚಿಸಲು -c ಆಯ್ಕೆಯನ್ನು ಬಳಸಿದಲ್ಲಿ ಯಾವುದೆ yum ಆಜ್ಞೆಗಳು ವಿಫಲಗೊಳ್ಳುತ್ತಿತ್ತು. ಈ ತೊಂದರೆಯನ್ನು ಈಗ ನಿವಾರಿಸಲಾಗಿದೆ.

  • yum ನಲ್ಲ checkSignal() ಕ್ರಿಯೆಯು ಒಂದು ಅಸಮರ್ಪಕವಾದ ನಿರ್ಗಮನಾ ಕ್ರಿಯೆಯನ್ನು ಕರೆಯುತ್ತಿತ್ತು; ಉದಾ, yum ನಿರ್ಗಮಿಸುವುದು ಒಂದು ಟ್ರೇಸ್‌ಬ್ಯಾಕ್‌ಗೆ ಕಾರಣವಾಗುತ್ತಿತ್ತು. ಈ ಬಿಡುಗಡೆಯಲ್ಲಿ, yum ಈಗ ಸಮರ್ಪಕವಾಗಿ ನಿರ್ಗಮಿಸುತ್ತದೆ.

ಫ್ಲಾಶ್-ಪ್ಲಗ್‌ಇನ್ ಮರು-ಬೇಸ್

flash-plugin ಪ್ಯಾಕೇಜನ್ನು ಆವೃತ್ತಿ 10.0.12.36 ಗೆ ಮರು-ಬೇಸ್ ಮಾಡಲಾಗಿದೆ. ಈ ಅಪ್‌ಡೇಟ್ ಈ ಮೊದಲು ಇದ್ದಂತಹ flash-plugin ASYNC ಅಪ್‌ಡೇಟ್‌ಗೆ ಹಲವಾರು ಸುರಕ್ಷತಾ ದೋಷ ಪರಿಹಾರಗಳನ್ನು ಒಳಗೊಳ್ಳಿಸಲಾಗಿದೆ. ಇದಲ್ಲದೆ, ಅಪ್‌ಡೇಟ್ ಮಾಡಲಾದ ಈ ಪ್ಲಗ್‌ಇನ್ Adobe Flash Player 10 ಅನ್ನೂ ಸಹ ಒಳಗೊಂಡಿದ್ದು, ಇದು ಈ ಕೆಳಗಿನ ದೋಷ ಪರಿಹಾರಗಳನ್ನು ಹಾಗು ಸವಲತ್ತು ಸುಧಾರಣೆಗಳನ್ನು ಒಳಗೊಂಡಿದೆ:

  • ಲಿನಕ್ಸಿನ ಮೇಲೆ ಬಳಸುವಾಗ ಧ್ವನಿಯ ಔಟ್‌ಪುಟ್‌ನಲ್ಲಿದ್ದಂತಹ ಒಂದು ರೇಸ್ ಕಂಡೀಶನ್ ಅನ್ನು ತೊಡೆದು ಹಾಕಲಾಗಿದೆ.

  • ನಿಮ್ಮ ಇಚ್ಛೆಯ ಫಿಲ್ಟರುಗಳನ್ನು ಮತ್ತು ಪರಿಣಾಮಗಳಿಗೆ, ಸ್ಥಳೀಯ 3D ರೂಪಾಂತರ ಹಾಗು ಆನಿಮೇಶನ್, ಸುಧಾರಿತ ಧ್ವನಿ ಸಂಸ್ಕರಣೆ, ಹೊಸತಾದ, ಅತ್ಯಂತ ಸುಲಭವಾಗಿ ಒಗ್ಗಿಸಬಹುದಾದ ಪಠ್ಯ ಎಂಜಿನ್, ಹಾಗು GPU ಯಂತ್ರಾಂಶ ವೇಗವರ್ಧಕಗಳಿಗೆ ಈಗ ಬೆಂಬಲವನ್ನು ಹೊಂದಿದೆ.

ಈ ಅಪ್‌ಡೇಟ್ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಕೊಂಡಿಯಲ್ಲಿರುವ Adobe Flash Player 10 ಬಿಡುಗಡೆ ಟಿಪ್ಪಣಿಗಳನ್ನು ನೋಡಿ:

http://www.adobe.com/support/documentation/en/flashplayer/10/Flash_Player_10_Release_Notes.pdf

gdb ಮರುಬೇಸ್

gdb ಯು ಈಗ ಆವೃತ್ತಿ 6.8 ಗೆ ಮರು ಬೇಸ್ ಮಾಡಲಾಗಿದೆ. ಇದು ಹಲವಾರು ಅಪ್‌ಸ್ಟ್ರೀಮ್‌ ಅಪ್‌ಡೇಟ್‌ಗಳನ್ನು ಹಾಗು ದೋಷ ನಿವಾರಣೆಗಳನ್ನು ಒದಗಿಸುತ್ತದೆ, ಅವುಗಳಲ್ಲಿ ಪ್ರಮುಖವಾದುದೆಂದರೆ: C++ ನಮೂನೆಗಳಲ್ಲಿ ತಡೆಬಿಂದುಗಳಿಗಾಗಿನ ಬೆಂಬಲ, ರಚನಾಕಾರಗಳು ಹಾಗು ಇನ್‌ಲೈನ್ ಕಾರ್ಯಗಳು.

ಈ ಬಿಡುಗಡೆಯಲ್ಲಿ ಅನ್ವಯಿಸಲಾದ gdb ಅಪ್‌ಡೇಟ್‌ಗಳಿಗಾಗಿ ಹೆಚ್ಚಿನ ಮಾಹಿತಿಗಾಗಿ http://sourceware.org/cgi-bin/cvsweb.cgi/src/gdb/NEWS?rev=1.259.2.1&cvsroot=src ಅನ್ನು ನೋಡಿ.

AMD Family10h ಸಂಸ್ಕಾರಕಗಳ ಮೇಲೆ Instruction Based Sampling

AMD Family10h ಸಂಸ್ಕಾರಕಗಳಿಗಾಗಿನ ಹೊಸ ಯಂತ್ರಾಂಶ ಪ್ರೋಫೈಲಿಂಗ್ ಬೆಂಬಲವನ್ನು Red Hat Enterprise Linux 5.3 ರಲ್ಲಿ ಸೇರಿಸಲಾಗಿದೆ. ಈ ಹೊಸ AMD CPU ಗಳು Instruction Based Sampling (IBS) ಅನ್ನು ಬೆಂಬಲಿಸುತ್ತದೆ. IBS ಬೆಂಬಲಕ್ಕಾಗಿ, ಮಾಹಿತಿಯನ್ನು ಪಡೆದುಕೊಳ್ಳಲು ಹಾಗು ಈ ಹೊಸ ಸವಲತ್ತುಗಳಿಗೆ ಸಂಬಂಧಿಸಿದ ಹೊಸ Specific Registers (MSRs) ಅನ್ನು ಆರಂಭಿಸಲುoProfile ಚಾಲಕದ ಅಗತ್ಯವಿರುತ್ತದೆ.

ಈ ಅಪ್‌ಡೇಟ್, ಪ್ರತಿ CPU ಬಫರುಗಳಿಗೆ ಹಾಗು ಸನ್ನಿವೇಶ ಬಫರುಗಳಿಗಾಗಿ oProfile ಚಾಲಕಕ್ಕಾಗಿ ಹೊಸತಾದ IBS_FETCH ಹಾಗು IBS_OP ಅನ್ನು ಹೊಂದಿದೆ. IBS ಸ್ಯಾಂಪ್ಲಿಂಗ್ ಅನ್ನು ನಿಯಂತ್ರಿಸುವ ಸಲುವಾಗಿ ಹೊಸ ನಿಯಂತ್ರಣ ನಮೂದುಗಳನ್ನೂ ಸಹ /dev/oprofile ಗೆ ಸೇರಿಸಲಾಗಿದೆ. ಈ ಬದಲಾವಣೆಗಳಿಂದಾಗಿ ಚಾಲಕದ ಈ ಮೊದಲಿನ PMC ಗೆ ಮಾತ್ರವಾದ ಆವೃತ್ತಿಗೆ ಮರಳಿ ಹೊಂದಿಕೆಯಾಗುವಂತೆ ಮಾಡುತ್ತವೆ, ಹಾಗು oProfile 0.9.3 ಗಾಗಿ ಈ ಹೊಸ ದತ್ತಾಂಶವನ್ನು ಬಳಸಲು ಒಂದು ಪ್ರತ್ಯೇಕವಾದ ತೇಪೆಯು ಲಭ್ಯವಿದೆ.

IBS ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ನೋಡಿ: Instruction-Based Sampling: A New Performance Analysis Technique for AMD Family 10h Processors, November 19, 2007

Squid ಮರು-ಬೇಸ್ ಮಾಡುವಿಕೆ

Squid ಅನ್ನು ಇತ್ತೀಚಿನ ಸ್ಥಿರ ಅಪ್‌ಸ್ಟ್ರೀಮ್ ಆವೃತ್ತಿಗೆ (STABLE21) ಮರು-ಬೇಸ್ ಮಾಡಲಾಗಿದೆ. ಈ ಅಪ್‌ಡೇಟ್ ಹಲವಾರು ದೋಷಗಳನ್ನು ಪರಿಹರಿಸುತ್ತದೆ, ಅವುಗಳೆಂದರೆ:

  • squid init ಸ್ಕ್ರಿಪ್ಟ್‍ ಯಾವಾಗಲೂ ಅಸಮರ್ಪಕವಾದ ನಿರ್ಗಮನ ಸಂಜ್ಞೆಯಾದಂತ 0 ಯನ್ನು ಮರಳಿಸುತ್ತಿತ್ತು. ಈ ದೋಷವನ್ನು ಈಗ ಪರಿಹರಿಸಲಾಗಿದ್ದು, ಇದರಿಂದ squid ಈಗ Linux Standard Base ನೊಂದಿಗೆ ಸರಿಯಾಗಿ ಕೆಲಸ ಮಾಡುತ್ತದೆ.

  • refresh_stale_hit ನಿರ್ದೇಶನವನ್ನು ಬಳಸುವುದರಿಂದ squid ದಾಖಲೆ ಕಡತದಲ್ಲಿ Clock going backwards ಎಂಬ ದೋಷ ಸಂದೇಶವು ಕಾಣಿಸಿಕೊಳ್ಳುತ್ತದೆ.

  • squid ಅನುಸ್ಥಾಪನಾ ಪ್ರಕ್ರಿಯೆಯು /usr/local/squid ಕೋಶದ ಸರಿಯಾದ ಮಾಲಿಕತ್ವವನ್ನು ಸಿದ್ಧಗೊಳಿಸುತ್ತಿರಲಿಲ್ಲ. ಈ ಬಿಡುಗಡೆಯಲ್ಲಿ, ಬಳಕೆದಾರ squid ಈಗ /usr/local/squid ನ ಡೀಫಾಲ್ಟ್‍ ಮಾಲಿಕರರಾಗಿರುತ್ತಾರೆ.

  • squid hash_lookup() ನಂತಹ ಕಾರ್ಯವನ್ನು ಬಳಸಲು ಪ್ರಯತ್ನಿಸಿದಾಗ, ಅದು signal 6 ನೊಂದಿಗೆ ಸ್ಥಗಿತಗೊಳ್ಳಬಹುದು.

  • squid_unix_group ಅನ್ನು ಬಳಸಿದಲ್ಲಿ squid ಕುಸಿತಕ್ಕೆ ಕಾರಣವಾಗಬಹುದು.

ಅಪಾಚೆಯ ಸನ್ನಿವೇಶ Multi-Processing Model ಮಾದರಿ

httpd, ಅಪಾಚೆ HTTP ಪರಿಚಾರಕ ಪ್ಯಾಕೇಜ್ ಆದಂತಹ ಇದು ಈಗ ಪ್ರಾಯೋಗಿಕ ಸನ್ನಿವೇಶ(ಇವೆಂಟ್) Multi-Processing Model (MPM)ಯನ್ನು ಹೊಂದಿರುತ್ತದೆ. ಈ MPM, ಕೀಪ್‌ಅಲೈವ್ ಸಂಪರ್ಕಗಳನ್ನು ನಿಭಾಯಿಸುವ ಸಲುವಾಗಿ ಮೀಸಲಾಗಿಟ್ಟ ಎಳೆಗಳನ್ನು (ತ್ರೆಡ್) ಬಳಸುವ ಮೂಲಕ ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುತ್ತದೆ.

ಆಡಿಟ್ ಅಪ್‌ಡೇಟ್

ಆಡಿಟ್ ಪ್ಯಾಕೇಜ್, ಕರ್ನಲ್‌ನಲ್ಲಿ ಆಡಿಟ್ ಉಪವ್ಯವಸ್ಥೆಯಿಂದ ಉತ್ಪಾದಿಸಲಾದ ಆಡಿಟ್ ದಾಖಲೆಗಳಲ್ಲಿ ಶೇಖರಿಸಿಡಲು ಹಾಗು ಹುಡುಕಲು ಸಹಕಾರಿಯಾಗುವಂತೆ ಬಳಕೆದಾರ-ಸ್ಥಳ ಸವಲತ್ತನ್ನು ಹೊಂದಿದೆ. ಆಡಿಟ್ ಪ್ಯಾಕೇಜುಗಳನ್ನು ಹೊಸತಾದ ಅಪ್‌ಸ್ಟ್ರೀಮ್ ಆವೃತ್ತಿ 1.7.7 ಗೆ ನವೀಕರಿಸಲಾಗಿದ್ದು, ಇದು ಈ ಹಿಂದಿನ ಆಡಿಟ್ ಪ್ಯಾಕೇಜುಗಳಿಗೆ ಹೋಲಿಸಿದಲ್ಲಿ, ಸುಧಾರಣೆಗಳನ್ನು ಹಾಗು ದೋಷ ಪರಿಹಾರಗಳನ್ನು ಒದಗಿಸುತ್ತದೆ.

ಅಪ್‌ಡೇಟ್ ಮಾಡಲಾದ ಆಡಿಟ್ ಪ್ಯಾಕೇಜುಗಳು ಈ ಕೆಳಗಿನ ಸುಧಾರಣೆಗಳನ್ನು ಒದಗಿಸುತ್ತದೆ:

  • ಆಡಿಟ್ ವ್ಯವಸ್ಥೆಯು ಈಗ ದೂರಸ್ಥ ಪ್ರವೇಶವನ್ನು ಅನುಮತಿಸುತ್ತವೆ.

  • auditctl ಸವಲತ್ತು ಈಗ ಆಡಿಟ್ ನಿಯಮಗಳಲ್ಲಿ ಅನೇಕ ಕೀಲಿಗಳನ್ನು ಬೆಂಬಲಿಸುತ್ತದೆ.

  • init ಸ್ಕ್ರಿಪ್ಟುಗಳಿಂದ ಆರಂಭಿಸಲಾದ ಆಡಿಟ್ ಡೀಮನ್ ಲೋಡ್ ಆದಾಗಲೆಲ್ಲಾ auditctl ನಿಯಮಗಳನ್ನು ಒಳಗೊಂಡಿರುವ ಒಂದು ಮಾದರಿ STIG ನಿಯಮಗಳ ಕಡತವನ್ನು (stig.rules) ಉದಾಹರಣೆಯಾಗಿ ನೀಡಲಾಗುತ್ತದೆ.

  • ausyscall ಎಂಬ ಒಂದು ಹೊಸ ಸವಲತ್ತನ್ನು, syscall ಹೆಸರು ಹಾಗು ಸಂಖ್ಯೆ ಮಾಹಿತಿಯನ್ನು ಪರಿಶೀಲಿಸುವ ಸಲುವಾಗಿ ನೀಡಲಾಗಿದೆ.

  • aureport ಈಗ ಆಡಿಟ್ ಸನ್ನಿವೇಶಗಳಲ್ಲಿ ಅದು ನೋಡುವ ಕೀಲಿಗಳ ಬಗೆಗೆ ವರದಿ ಮಾಡುತ್ತದೆ.

  • ausearch ಹಾಗು aureport ಪ್ರೊಗ್ರಾಂಗಳಿಗಾಗಿನ ಸನ್ನಿವೇಶ ದಾಖಲೆ ಪಾರ್ಸಿಂಗ್ ಅನ್ನು ಸುಧಾರಣೆ ಮಾಡಲಾಗಿದೆ.

libgomp ಮರು-ಬೇಸ್ ಮಾಡುವಿಕೆ

libgomp ಅನ್ನು ಆವೃತ್ತಿ 4.3.2-7.el5 ಗೆ ಮರು-ಬೇಸ್ ಮಾಡಲಾಗಿದೆ. ಮರು-ಬೇಸ್‌ ಮಾಡುವುದರಿಂದ re-base improves OpenMP ಯ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಹಾಗು ಇದನ್ನು gcc43 ಕಂಪೈಲರಿನೊಂದಿಗೆ ಬಳಸಿದಾಗ OpenMP ಆವೃತ್ತಿ 3.0 ಗೆ ಬೆಂಬಲವನ್ನು ನೀಡುತ್ತದೆ.

iSCSI ಗುರಿ ಸಾಮರ್ಥ್ಯ

iSCSI ಗುರಿ ಸಾಮರ್ಥ್ಯವನ್ನು, Linux Target (tgt) ಫ್ರೇಮ್‌ವರ್ಕಿನ ಒಂದು ಭಾಗವಾಗಿ ಒದಗಿಸಲಾಗಿದ್ದು, Red Hat Enterprise Linux 5.3 ರಲ್ಲಿ ತಂತ್ರಜ್ಞಾನ ಮುನ್ನೋಟದಿಂದ ಒಂದು ಸಂಪೂರ್ಣ ಬೆಂಬಲಿತವಾದುದಕ್ಕೆ ಬದಲಾಯಿಸಲ್ಪಟ್ಟಿದೆ. ಖಂಡ-ಮಟ್ಟದ SCSI ಶೇಖರಣೆಯು SCSI ಆರಂಭಕವನ್ನು ಹೊಂದಿರುವ ಇತರೆ ಗಣಕಗಳಿಗೆ ಸೇವೆ ಸಲ್ಲಿಸುವುದನ್ನು ಲಿನಕ್ಸ್‍ ಗುರಿ ಫ್ರೇಮ್‌ವರ್ಕ್ ಅನುಮತಿಸುತ್ತದೆ. ಈ ಸಾಮರ್ಥ್ಯವನ್ನು ಆರಂಭದಲ್ಲಿ ಒಂದು ಲಿನಕ್ಸ್‍ iSCSI ಗುರಿಯಾಗಿ ನಿಯೋಜಿಸಲಾಗಿದ್ದು, ಯಾವುದೆ iSCSI ಆರಂಭಕವನ್ನು ಜಾಲದ ಮೂಲಕ ಸೇವೆ ಸಲ್ಲಿಸುತ್ತಿತ್ತು.

iSCSI ಗುರಿಯನ್ನು ಸಜ್ಜುಗೊಳಿಸಲು, scsi-target-utils RPM ಅನ್ನು ಅನುಸ್ಥಾಪಿಸಿ ಹಾಗು ಈ ಕೆಳಗೆ ನೀಡಲಾದ ಸೂಚನೆಗಳನ್ನು ನೋಡಿ: /usr/share/doc/scsi-target-utils-[version]/README ಹಾಗು /usr/share/doc/scsi-target-utils-[version]/README.iscsi

3. ಚಾಲಕ ಅಪ್‍ಡೇಟ್‍ಗಳು

3.1. ಎಲ್ಲಾ ಆರ್ಕಿಟೆಕ್ಚರುಗಳು

ಸಾಮಾನ್ಯ ಚಾಲಕ/ಪ್ಲಾಟ್‍ಫಾರ್ಮ್ ಅಪ್‍ಡೇಟ್‍ಗಳು
  • ALSA ದಲ್ಲಿನ Intel High Definition Audio ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.

  • AMD ATI ಸಂಘಟಿತ ಚಿಪ್‍ಸೆಟ್‍ನಲ್ಲಿ High-Definition Multimedia Interface (HDMI) ಆಡಿಯೋ ಬೆಂಬಲವನ್ನು ಅಪ್‌ಡೇಟ್ ಮಾಡಲಾಗಿದೆ.

  • ಈ ಕೆಳಗಿನ Wacom ಗ್ರಾಫಿಕ್ಸ್‍ ಟ್ಯಾಬ್ಲೆಟ್‌ಗಳಿಗೆ ಈಗ linuxwacom ಚಾಲಕದ ಮೂಲಕ ಬೆಂಬಲ ನೀಡಲಾಗುತ್ತಿದೆ:

    • Cintiq 20WSX

    • Intuos3 4x6

  • lpfc ಚಾಲಕಕ್ಕಾಗಿನ Emulex Fibre Channel Host Bus ಅಡಾಪ್ಟರುಗಳನ್ನು ಆವೃತ್ತಿ 8.2.0.33.2p ಗೆ ಅಪ್‌ಡೇಟ್ ಮಾಡಲಾಗಿದೆ. ಇದು ಹಲವಾರು ಅಪ್‍ಸ್ಟ್ರೀಮ್ ಬದಲಾವಣೆಗಳನ್ನು ಅನ್ವಯಿಸುತ್ತದೆ, ಮುಖ್ಯವಾಗಿ:

    • NETLINK_SCSITRANSPORT ಸಾಕೆಟ್ ಅನ್ನು ಈಗ ಬಳಸಲಾಗುವುದು

    • ಆರಂಭಗೊಳ್ಳದೆ ಇದ್ದಂತಹ ನೋಡ್ ನಿಲುಕಣೆಯನ್ನು ಪರಿಹರಿಸಲಾಗಿದೆ.

    • NPIV ಅನ್ನು ಶಕ್ತಗೊಳಸಿದಾಗ echotest ವಿಫಲಗೊಳ್ಳುವಿಕೆಗೆ ಕಾರಣವಾಗುತ್ತಿದ್ದಂಹ ಒಂದು ದೋಷವನ್ನು ಪರಿಹರಿಸಲಾಗಿದೆ.

    • ಫೈಬರ್ ಚಾನಲ್ ದೃಢೀಕರಣಕ್ಕಾಗಿ ಈಗ fcauthd 1.19 ನ ಅಗತ್ಯವಿರುತ್ತದೆ.

  • dm-multipath ವು ಈಗ IBM DS4000 ಗಾಗಿ ಇನ್‌ಬಾಕ್ಸಿನ ಬೆಂಬಲವನ್ನು ಹೊಂದಿದೆ.

  • ixgbe ಚಾಲಕವು ಈಗ 82598AT ಡ್ಯುವಲ್-ಪೋರ್ಟ್ಅಡಾಪ್ಟರ್ ಹಾಗು 82598 CX4 ಅಡಾಪ್ಟರ್ ಅನ್ನು ಬೆಂಬಲಿಸುತ್ತದೆ.

  • Digi Neo PCI Express 4 HiProfile I/O ಅಡಾಪ್ಟರುಗಳಿಗೆ ಬೆಂಬಲವನ್ನು ನೀಡುವಂತೆ jsm ಚಾಲಕವನ್ನು ಬದಲಾವಣೆ ಮಾಡಲಾಗಿದೆ.

  • hp-ilo: ಚಾಲಕವನ್ನು ಸೇರಿಸಲಾಗಿದ್ದರಿಂದ, HP Integrated Lights Out (iLO) ತಂತ್ರಜ್ಞಾನಕ್ಕೆ ಬೆಂಬಲವನ್ನು ಒದಗಿಸಿದಂತಾಗುತ್ತದೆ.

  • radeon_tp ಚಾಲಕಕ್ಕೆ ಈ ಬಿಡುಗಡೆಯಲ್ಲಿ ಸಂಪೂರ್ಣ ಬೆಂಬಲ ನೀಡಲಾಗುತ್ತದೆ. ಈ ಚಾಲಕವು ATI R500/R600 ಚಿಪ್‍ಸೆಟ್ ಅನ್ನು ಬೆಂಬಲಿಸುತ್ತದೆ.

    ಈ ಚಾಲಕವು ಈ ಕೆಳಗಿನ ಸವಲತ್ತುಗಳನ್ನೂ ಸಹ ಹೊಂದಿದೆ:

    • R500/R600 ಚಿಪ್‍ಸೆಟ್‍ಗಳಲ್ಲಿನ ಮೋಡ್‍ಸೆಟ್ಟಿಂಗ್

    • R500 ಚಿಪ್‍ಸೆಟ್‍ಗಳಲ್ಲಿನ 2D ವೇಗವರ್ಧಕ

    • R600 ಚಿಪ್‍ಸೆಟ್‍ಗಳಲ್ಲಿನ ಛಾಯಾ ಫ್ರೇಮ್‍ಬಫರ್ ವೇಗವರ್ಧಕ

  • powernow-k8 ಚಾಲಕವನ್ನು ಈಗ ಲೋಡ್ ಮಾಡಬಹುದಾದಂತಹ ಒಂದು ಘಟಕವಾಗಿ ಈ ಬಿಡುಗಡೆಯಲ್ಲಿ ಒಳಗೊಳ್ಳಿಸಲಾಗಿದೆ. ಇದು ಈಗಿರುವ ಚಾಲಕ ಫ್ರೇಮ್‌ವರ್ಕುಗಳಾದಂತಹ (Red Hat Driver Update Model ಹಾಗು Dell DKMS ನಂತಹ) ಕರ್ನಲ್ ಅನ್ನು ನವೀಕರಿಸುವ ಅಗತ್ಯವಿರದೆ ನೇರವಾಗಿ powernow-k8 ಚಾಲಕ ಅಪ್‌ಡೇಟ್‌ಗಳನ್ನು RPM ಪ್ಯಾಕೇಜುಗಳಾಗಿ ಬಳಕೆದಾರರಿಗೆ ಒದಗಿಸುವುದನ್ನು ಖಚಿತಪಡಿಸುತ್ತದೆ.

  • ಈ ಬಿಡುಗಡೆಯೊಂದಿಗೆ, ಸಾಂಪ್ರದಾಯಿಕ ಮುದ್ರಕಗಳಿಗೆ ಬೆಂಬಲ ನೀಡುವ ಸಲುವಾಗಿ Red Hat pnm2ppa ಅನ್ನು ಮರಳಿ ಸೇರ್ಪಡಿಸುತ್ತಿದೆ. ಆದರೆ, ಈ ಬೆಂಬಲವನ್ನು ಮುಂದಿನ ಪ್ರಮುಖ ಬಿಡುಗಡೆಗಳಲ್ಲಿ ತೆಗೆದು ಹಾಕಲಾಗುವುದು ಎಂಬುದನ್ನು ನೆನಪಿಡಿ.

  • ccid ಚಾಲಕವನ್ನು USB Smartcard ಕೀಲಿಮಣೆಗಳಿಗೆ ಬೆಂಬಲ ನೀಡಲು ನೆರವಾಗುವಂತೆ ಮರಳಿ-ಇರಿಸಲಾಗಿದೆ.

  • USB ವೀಡಿಯೋ ಸಾಧನಗಳಿಗಾಗಿನ uvcvideo ಚಾಲಕಗಳನ್ನು Red Hat Enterprise Linux 5.3 ಗೆ ಸೇರ್ಪಡಿಸಲಾಗಿದೆ.

ಜಾಲಬಂಧ
  • Broadcom NetXtreme II ಜಾಲಬಂಧ ಕಾರ್ಡುಗಳಿಗಾಗಿನ bnx2 ಚಾಲಕವನ್ನು ಆವೃತ್ತಿ 1.7.9 ಗೆ ಅಪ್‌ಡೇಟ್ ಮಾಡಲಾಗಿದೆ. ಈ ಅಪ್‌ಡೇಟ್ ಬೂಟ್ ಸಮಯದಲ್ಲಿ ಗಣಕವನ್ನು ಕಂಗೆಡಿಸುವ(ಪ್ಯಾನಿಕ್) ಒಂದು ದೋಷವನ್ನು ನಿವಾರಿಸುವ ಸಲುವಾಗಿ bnx2 ಅನ್ನು ಬಳಸುವ ನಿಯಂತ್ರಕಗಳಲ್ಲಿನ ರಿಂಗ್ ಬಫರ್ ಆಯ್ಕೆಯನ್ನು ಸರಿಪಡಿಸುತ್ತದೆ.

  • Intel(R) PRO/1000 ಎತರ್ನೆಟ್ ಸಾಧನಗಳಿಗಾಗಿನ e1000e ಚಾಲಕವನ್ನು ಮೂಲ ಆವೃತ್ತಿ 0.3.3.3-k2 ಗೆ ಅಪ್‌ಡೇಟ್ ಮಾಡಲಾಗಿದೆ. ಈ ಅಪ್‌ಡೇಟ್‌ನಿಂದಾಗಿ, ಬೆಂಬಲಿತ ಸಾಧನಗಳ EEPROM ಹಾಗು NVM ಅನ್ನು ಯಾರೂ ಬದಲಾಯಿಸದಂತೆ ಸಂರಕ್ಷಿತಗೊಂಡಿರುತ್ತದೆ.

  • igb: Intel(R) Gigabit ಎತರ್ನೆಟ್ ಅಡಾಪ್ಟರುಗಳಿಗಾಗಿನ ಚಾಲಕವನ್ನು ಆವೃತ್ತಿ 1.2.45-k2 ಗೆ ನವೀಕರಿಸಲಾಗಿದ್ದು, ಇದು 82576 ಆಧರಿತವಾದ ಸಾಧನಗಳಿಗೆ ಬೆಂಬಲವನ್ನು ನೀಡುತ್ತದೆ.

  • Intel(R) 10 Gigabit PCI Express ಜಾಲಬಂಧ ಸಾಧನಗಳಿಗಾಗಿನ ixgbe ಚಾಲಕವನ್ನು ಆವೃತ್ತಿ 1.3.18-k4 ಗೆ ಅಪ್‌ಡೇಟ್ ಮಾಡಲಾಗಿದೆ.

  • niu ಚಾಲಕವನ್ನು Red Hat Enterprise Linux 5.3 ಗೆ ಸೇರಿಸಲಾಗಿದೆ, ಇದರಿಂದಾಗಿ 10Gbps ಎತರ್ನೆಟ್ ಸಾಧನಗಳಿಗೆ ಬೆಂಬಲವನ್ನು ನೀಡಿದಂತಾಗುತ್ತದೆ.

  • Intel(R) PRO ವೈರ್ಲೆಸ್ ಸಾಧನಗಳಿಗಾಗಿನ ipw2100 ಹಾಗು ipw2200 ಚಾಲಕಗಳನ್ನು ಲಿನಕ್ಸ್‍ ಕರ್ನಲ್ 2.6.25 ನಿಂದ Red Hat Enterprise Linux 5.3 ಗೆ ಹಿಮ್ಮರಳಿಸಲಾಗಿದೆ.

  • Broadcom ವೈರ್ಲೆಸ್ ಸಾಧನಗಳಿಗಾಗಿನ bcm43xx ಚಾಲಕವನ್ನು ಲಿನಕ್ಸ್‍ ಕರ್ನಲ್ 2.6.25 ನಿಂದ Red Hat Enterprise Linux 5.3 ಗೆ ಹಿಮ್ಮರಳಿಸಲಾಗಿದೆ.

  • ವೈರ್ಲೆಸ್ ಸಾಧನಗಳಿಗಾಗಿನ ieee80211 ಬೆಂಬಲಿತ ಘಟಕವನ್ನು ಲಿನಕ್ಸ್‍ ಕರ್ನಲ್ 2.6.25 ನಿಂದ Red Hat Enterprise Linux 5.3 ಗೆ ಹಿಮ್ಮರಳಿಸಲಾಗಿದೆ.

  • ZyDas ವೈರ್ಲೆಸ್ ಸಾಧನಗಳಿಗಾಗಿನ zd1211rw ಚಾಲಕವನ್ನು ಹಿಂದಿನ Linux 2.6.25 ಇಂದ ಕೊನೆಯ mac80211 ಆವೃತ್ತಿಯಲ್ಲದುದಕ್ಕೆ ಹೊಂದುವಂತೆ ಅಪ್‌ಡೇಟ್ ಮಾಡಲಾಗಿದೆ.

  • iwlwifi ಚಾಲಕಗಳನ್ನು ಆವೃತ್ತಿ 2.6.26 ಗೆ ಅಪ್‌ಡೇಟ್ ಮಾಡಲಾಗಿದ್ದು, ಇದರಿಂದಾಗಿ iwl4965 ವೈರ್ಲೆಸ್ ಸಾಧನಗಳಿಗೆ 802.11n ಬೆಂಬಲವು ನೀಡಿದಂತಾಗುತ್ತದೆ. 2.6.26 ಆವೃತ್ತಿಗೂ ಮೊದಲಿದ್ದ ಹಲವಾರು ದೋಷಗಳ ನಿವಾರಣೆಯನ್ನು ಬ್ಯಾಕ್‌ಪೋರ್ಟ್ ಮಾಡಲಾದ ಚಾಲಕಗಳಲ್ಲಿ ಒಳಗೊಳ್ಳಿಸಲಾಗಿದೆ.

  • Myricom Myri-10G ಎತರ್ನೆಟ್ ಸಾಧನಗಳಿಗಾಗಿನ myri10ge ಚಾಲಕವನ್ನು ಆವೃತ್ತಿ 1.3.2-1.269 ಗೆ ನವೀಕರಿಸಲಾಗಿದೆ.

  • NetXen ಜಾಲಬಂಧ ಕಾರ್ಡುಗಳಿಗಾಗಿನ netxen ಚಾಲಕವನ್ನು ಆವೃತ್ತಿ 3.4.18 ಗೆ ಅಪ್‌ಡೇಟ್ ಮಾಡಲಾಗಿದೆ.

  • Broadcom Everest ಜಾಲಬಂಧ ಸಾಧನಗಳಿಗಾಗಿನ bnx2 ಚಾಲಕವನ್ನು ಆವೃತ್ತಿ 1.5.11ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು 57711 ಯಂತ್ರಾಂಶವನ್ನು ಬೆಂಬಲಿಸುತ್ತದೆ.

  • ಸರಿಯಾಗಿ ಲಿಂಕ್-ಅಪ್ ಪತ್ತೆಮಾಡದಂತೆ ತಡೆಯುತ್ತಿದ್ದ ಒಂದು ದೋಷವನ್ನು ನಿವಾರಿಸಲು forcedeth-msi ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.

  • Atheros ವೈರ್ಲೆಸ್ ಸಾಧನಗಳಿಗಾಗಿನ ath5k ಚಾಲಕವನ್ನು ಲಿನಕ್ಸ್‍ ಕರ್ನಲ್ 2.6.26 ಯಿಂದ Red Hat Enterprise Linux 5.3 ಬ್ಯಾಕ್‌ಪೋರ್ಟ್ ಮಾಡಲಾಗಿದೆ.

  • Ralink ವೈರ್ಲೆಸ್ ಸಾಧನಗಳಿಗಾಗಿನ rt2x00 ಚಾಲಕಗಳನ್ನು ಲಿನಕ್ಸ್‍ ಕರ್ನಲ್ 2.6.26 ನಿಂದ Red Hat Enterprise Linux 5.3 ಗೆ ಹಿಮ್ಮರಳಿಸಲಾಗಿದೆ.

  • Realtek ವೈರ್ಲೆಸ್ ಸಾಧನಗಳಿಗಾಗಿ rtl8180 ಹಾಗು rtl8187 ಚಾಲಕಗಳನ್ನು ಲಿನಕ್ಸ್‍ ಕರ್ನಲ್ 2.6.26 ನಿಂದ Red Hat Enterprise Linux 5.3 ಗೆ ಹಿಮ್ಮರಳಿಸಲಾಗಿದೆ.

  • cxgb3: ಚಾಲಕವನ್ನು ಈ ಬಿಡುಗಡೆಯೊಂದಿಗೆ ಸೇರಿಸಲಾಗಿದೆ (ಸೂಕ್ತವಾದ ಫರ್ಮ್-ವೇರಿನೊಂದಿಗೆ). ಈ ಚಾಲಕವು Chelsio RDMA 10Gb PCI-E ಎತರ್ನೆಟ್ ಅಡಾಪ್ಟರ್ ಅನ್ನು ಬೆಂಬಲಿಸುತ್ತದೆ.

ಶೇಖರಣೆ
  • 3w-xxxx: 3ware SATA RAID ನಿಯಂತ್ರಕಗಳಿಗಾಗಿನ ಚಾಲಕವನ್ನು ಆವೃತ್ತಿ 1.26.03 ಗೆ ಅಪ್ಡೇಟ್ ಮಾಡಲಾಗಿದೆ. ಇದು ಹಲವಾರು ಅಪ್‍ಸ್ಟ್ರೀಮ್ ಬದಲಾವಣೆಗಳನ್ನು ಅನ್ವಯಿಸುತ್ತದೆ, ಮುಖ್ಯವಾಗಿ:

    • 2GB RAM ಗಿಂತ ಹೆಚ್ಚಿನದನ್ನು ಬಳಸುವಂತಹ ಗಣಕದಲ್ಲಿ 3ware 7000 ಅಥವ 8000 ಸರಣಿಯ ಕಾರ್ಡನ್ನು ಬಳಸಿದಾಗ ದತ್ತಾಂಶ ನಾಶಕ್ಕೆ ಕಾರಣವಾಗುತ್ತಿದ್ದಂತಹ ಒಂದು ದೋಷವನ್ನು ಪರಿಹರಿಸಲಾಗಿದೆ.

    • 4GB RAM ಗಿಂತ ಹೆಚ್ಚಿನದನ್ನು ಬಳಸುವಂತಹ ಗಣಕದಲ್ಲಿ 3ware 8006 ಸರಣಿಯ ಕಾರ್ಡನ್ನು ಬಳಸುವಾಗ ಅನಕೊಂಡ ಇನ್ನು ಮುಂದೆ 64-bit ಆರ್ಕಿಟೆಕ್ಚರುಗಳ ಮೇಲೆ ಸ್ಥಗಿತಗೊಳ್ಳುವುದಿಲ್ಲ.

    • __tw_shutdown() ಅನ್ನು ಆರಂಭಿಸಿದಾಗ ಈಗ irq ಹ್ಯಾಂಡ್ಲರ್ ಅನ್ನು ಮುಕ್ತಗೊಳಿಸಲಾಗುತ್ತದೆ. ಇದರಿಂದಾಗಿ ಗಣಕ ಸ್ಥಗಿತದ ಸಮಯದಲ್ಲಿ ಒಂದು ನಿರ್ಬಂಧವನ್ನು ಹಂಚಲಾಗಿದ್ದರೆ ಅದರಿಂದಾಗಿ ಉಂಟಾಗುವ ಒಂದು ಶೂನ್ಯ ಸೂಚಕ (ನಲ್ ಪಾಯಿಂಟರ್) ಡಿ-ರೆಫೆರೆನ್ಸ್‍ ತಡೆಯಲ್ಪಡುತ್ತದೆ.

    • ಮೋಡ್ ಪುಟಗಳನ್ನು ಹಿಡಿದಿಡಲು ಸಲುವಾಗಿ RCD ಬಿಟ್ ಅನ್ನು ಈಗ ಆನ್ ಇಡಲಾಗಿದೆ.

    • ioctl ಮರುಹೊಂದಿಕೆಗಳು ಹಾಗು scsi ಮರುಹೊಂದಿಕೆಗಳನ್ನು ಈಗ ಪರಸ್ಪರ ಘರ್ಷಣೆ ಉಂಟಾಗದೆ, ಒಂದರ ನಂತರ ಒಂದು ಬರುವಂತೆ ಇರಿಸಲಾಗಿದೆ.

  • 3w-9xxx: 3ware SATA RAID ನಿಯಂತ್ರಕಗಳಿಗಾಗಿನ ಚಾಲಕವನ್ನು ಆವೃತ್ತಿ 2.26.08 ಗೆ ಅಪ್ಡೇಟ್ ಮಾಡಲಾಗಿದೆ. ಇದು ಹಲವಾರು ಅಪ್‍ಸ್ಟ್ರೀಮ್ ಬದಲಾವಣೆಗಳನ್ನು ಅನ್ವಯಿಸುತ್ತದೆ, ಮುಖ್ಯವಾಗಿ:

    • pci_unmap_single() ಕರೆಯು ಈಗ 4GB RAM ಹೆಚ್ಚಿದನ್ನು ಬಳಸುವ ಗಣಕಗಳಲ್ಲಿ ಸರಿಯಾಗ ಕಾರ್ಯ ನಿರ್ವಹಿಸುತ್ತದೆ.

    • ನಿಧಾನ ಗತಿಯ ಬರೆಯುವಿಕೆಗೆ ಕಾರಣವಾಗುತ್ತಿದ್ದ ಒಂದು ದೋಷವನ್ನು ಪರಿಹರಿಸಲಾಗಿದೆ.

    • DMA ಮಾಸ್ಕ್‍ ಸಂಯೋಜನೆಯಲ್ಲಿ ಈಗ 64-ಬಿಟ್ ವಿಫಲಗೊಂಡಾಗ 32-bit ಗೆ ಮರಳುತ್ತದೆ.

    • 3ware 9690SA SAS ನಿಯಂತ್ರಕ ಸಾಧನಕ್ಕೆ ಬೆಂಬಲವನ್ನು ಸೇರಿಸಲಾಗಿದೆ.

  • megaraid_sas: ಚಾಲಕವನ್ನು ಆವೃತ್ತಿ 4.01-rh1 ಗೆ ಅಪ್‍ಡೇಟ್ ಮಾಡಲಾಗಿದೆ. ಇದು ಹಲವಾರು ದೋಷ ಪರಿಹಾರಗಳನ್ನು ಬದಲಾವಣೆಗಳನ್ನು ಅನ್ವಯಿಸುತ್ತದೆ, ಮುಖ್ಯವಾದವುಗಳೆಂದರೆ:

    • MFI_POLL_TIMEOUT_SECS ಇನ್ನು ಮುಂದೆ 60 ಸೆಕೆಂಡುಗಳಾಗಿರುತ್ತವೆ.

    • ಫ್ರೇಮ್ ಕೌಂಟ್ ಲೆಕ್ಕಾಚಾರದಿಂದಾಗಿ ಒಂದೇ ಸಮನೆ ಚಿಪ್ ಮರುಹೊಂದಿಸಲ್ಪಡುವುದು ಹಾಗು ಆಜ್ಞೆಯ ಟೈಮ್‌ಔಟ್‌ಗಳಾಗುವುದಕ್ಕೆ ಕಾರಣವಾಗುತ್ತಿದ್ದ ಒಂದು ದೋಷವನ್ನು ಪರಿಹರಿಸಲಾಗಿದೆ.

    • LSI Generation 2 Controllers ಗೆ ಬೆಂಬಲವನ್ನು ಒದಗಿಸಲಾಗಿದೆ (0078, 0079).

    • ಫರ್ಮ-ವೇರ್ ಸ್ಥಗಿತವನ್ನು ಸುಧಾರಿಸಲು ಸಲುವಾಗಿ ಪ್ರತಿ ಬಾರಿ ಸ್ಥಗಿತಗೊಳಿಸುವ DCMD ಸ್ಥಗಿತ ಆಜ್ಞೆಯನ್ನು ಸೇರಿಸಲಾಗಿದೆ.

    • ಯಂತ್ರಾಂಶ ಲಿನಕ್ಸ್‍ ಚಾಲಕದಲ್ಲಿ ಅನಿರೀಕ್ಷಿತ ತಡೆಗಳಿಗಳಿಗೆ ಕಾರಣವಾಗುತ್ತಿದ್ದ ಒಂದು ದೋಷವನ್ನು ಪರಿಹರಿಸಲಾಗಿದೆ.

  • SCSI ಸಾಧನ ಹ್ಯಾಂಡ್ಲರ್ ಸವಲತ್ತನ್ನು (scsi_dh) ಅಪ್‌ಡೇಟ್ ಮಾಡಲಾಗಿದ್ದು, ಅದು ಈ ಕೆಳಗಿನ ಸುಧಾರಣೆಗಳನ್ನು ಒದಗಿಸುತ್ತದೆ:

    • ಒಂದು ಸಾಮಾನ್ಯ ALUA (asymmetric logical unit access) ಹ್ಯಾಂಡ್ಲರ್ ಅನ್ನು ಅನ್ವಯಿಸಲಾಗಿದೆ.

    • LSI RDAC SCSI ಆಧರಿತವಾದ ಶೇಖರಣಾ ಸಾಧನಗಳಿಗೆ ಬೆಂಬಲವನ್ನು ಸೇರ್ಪಡಿಸಲಾಗಿದೆ.

  • QLogic Fibre Channel Host Bus ಅಡಾಪ್ಟರುಗಳಿಗಾಗಿನ qla2xxx ಚಾಲಕವನ್ನು ಅಪ್‌ಡೇಟ್ ಮಾಡಲಾಗಿದ್ದು, ಇದು ISP84XX ಬಗೆಯ ಕಾರ್ಡುಗಳಿಗೆ ಬೆಂಬಲವನ್ನು ನೀಡುತ್ತದೆ.

  • ವರ್ಚುವಲ್ SCSI (vSCSI) ಸಾಧನಗಳನ್ನು ಅನುಕರಿಸುವಂತೆ ibmvscsi ಚಾಲಕಗಳನ್ನು ಬದಲಾಯಿಸಲಾಗಿದೆ, ಇದು ವರ್ಚುವಲೈಸ್ ಮಾಡಲಾದ ಟೇಪ್ ಸಾಧನಗಳಿಗೆ ಬೆಂಬಲವನ್ನು ನೀಡುತ್ತದೆ.

  • lpfc: ಚಾಲಕವನ್ನು ಆವೃತ್ತಿ 8.2.0.30 ಗೆ ಅಪ್‍ಡೇಟ್ ಮಾಡಲಾಗಿದೆ. ಈ ಅಪ್‍ಡೇಟ್ ಹಲವಾರು ದೋಷ ನಿವಾರಣೆಗಳನ್ನು ಹಾಗು ವರ್ಧನೆಗಳನ್ನು ಒದಗಿಸುತ್ತದೆ, ಮುಖ್ಯವಾದವುಗಳೆಂದರೆ:

    • PowerPC ಆರ್ಕಿಟೆಕ್ಚರುಗಳಲ್ಲಿ PCI ಅಡಾಪ್ಟರುಗಳಿಗಾಗಿನ ಸುಧಾರಿತ Enhanced Error Handling (EEH).

    • ಬೆಂಬಲಿತ NPIV ವರ್ಚುವಲ್ ಪೋರ್ಟುಗಳನ್ನು ಸಂಖ್ಯೆಗಳನ್ನು ಹೆಚ್ಚಿಸಲಾಗಿದೆ

    • I/O ಕ್ಯೂ ಆಳವನ್ನು ನಿಯಂತ್ರಿಸಲು ಚಾಲಕ ಲಾಜಿಕ್ ಅನ್ನು ಸುಧಾರಿಸಲಾಗಿದೆ

    • Fibre Channel over Ethernet (FCoE) ಅಡಾಪ್ಟರುಗಳಿಗೆ ಬೆಂಬಲವನ್ನು ಸೇರ್ಪಡಿಸಲಾಗಿದೆ

    • ಹೊಸ ಯಂತ್ರಾಂಶಗಳಿಗೆ SAN ಇಂದ ಬೂಟ್ ಮಾಡುವುದು ಈಗ ಬೆಂಬಲಿತವಾಗಿದೆ

  • HP Smart Array ನಿಯಂತ್ರಕಗಳಿಗಾಗಿನ cciss ಚಾಲಕವನ್ನು ಆವೃತ್ತಿ 3.6.20-RH2 ಗೆ ಅಪ್‌ಡೇಟ್‌ ಮಾಡಾಗಿದೆ.

4.1. ಎಲ್ಲಾ ಆರ್ಕಿಟೆಕ್ಚರುಗಳು

  • ಈ ಮೊದಲು relayfs 64MB ಬಫರ್ ಗಾತ್ರದ ಮಿತಿಯನ್ನು ಹೊಂದಿತ್ತು. ಈ ಅಪ್‌ಡೇಟ್‌ನಲ್ಲಿ, ಮೆಮೊರಿ ಬಫರುಗಳಿಗಾಗಿ relayfs ಗೆ ನಿಯೋಜಿಸಲಾದ ಮೆಮೊರಿ ಮಿತಿಯನ್ನು 4095MB ಗೆ ಹೆಚ್ಚಿಸಲಾಗಿದೆ. ಇದರಿಂದಾಗಿ SystemTap ಹಾಗು relayfs ಅನ್ನು ಬಳಸುವ ಇನ್ನಿತರೆ ಜಾಡು ಉಪಕರಣಗಳು(ಟ್ರೇಸಿಂಗ್ ಟೂಲ್) ಹೆಚ್ಚಿನ ಸನ್ನಿವೇಶಗಳ ಜಾಡನ್ನು ಹಿಡಿಯಲು ಅನುಕೂಲವಾಗುತ್ತದೆ.

  • Dell Remote Access Controller 4 (DRAC4) ಗಾಗಿನ ಚಾಲಕವು ಇರಲಿಲ್ಲ. ಅದರಿಂದಾಗಿ, DRAC4 ಇಮದ ಒದಗಿಸಲಾದ ಯಾವುದೆ ವರ್ಚುವಲ್ ಸಾಧನಗಳು ಕರ್ನಲ್‌ನಿಂದ ಪತ್ತೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಅಪ್‌ಡೇಟಿನಲ್ಲಿ ಇದಕ್ಕೆ ಸೂಕ್ತವಾದಂತಹ ಚಾಲಕವಾದ pata_sil680 ಕರ್ನಲ್ ಘಟಕವನ್ನು ಸೇರಿಸಲಾಗಿದ್ದು, ಇದರಿಂದಾಗಿ ಈ ತೊಂದರೆಯು ಪರಿಹಾರಗೊಳ್ಳುತ್ತದೆ.

  • relay_open() ಅನ್ನು ಬಯಸಿದಾಗ ರಿಲೆ ಬಫರುಗಳು ಕೇವಲ ಆನ್‌ಲೈನ್ CPU ಗಳಿಗೆ ನಿಯೋಜಿಸಲಾಗುತ್ತದೆ. ಪರಿಣಾಮವಾಗಿ, relay_open() ಅನ್ನು ಬಯಸಿದ ನಂತರ ಒಂದು ಆಫ್‌-ಲೈನ್ CPU ಅನ್ನು ಆನ್ ಮಾಡಿದಾಗ, ಒಂದು ಕರ್ನಲ್ ಪ್ಯಾನಿಕ್ ಎದುರಾಗುತ್ತದೆ. ಈ ಅಪ್‌ಡೇಟ್‌ನಲ್ಲಿ, ಹೊಸ CPU ಗಳನ್ನು ಸೇರಿಸಿದಾಗ ಒಂದು ಹೊಸ ಸಂದೇಶವನ್ನು ಡೈನಮಿಕ್ ಆಗಿ ನಿಯೋಜಿಸಲಾಗುತ್ತದೆ.

  • DSR/DTR ಯಂತ್ರಾಂಶ ಹರಿವು ನಿಯಂತ್ರಣದ ಬೆಂಬಲಕ್ಕೆ ಅಗತ್ಯವಾದ ಅಪ್‌ಡೇಟ್ ಅನ್ನು 8250 ಆಧರಿತವಾದ ಸರಣಿ ಸಂಪರ್ಕಸ್ಥಾನಗಳಿಗೆ ಮಾಡಲಾಗಿದೆ.

  • Dell Wireless Wide Area Network (WWAN) ಕಾರ್ಡುಗಳಿಗಾಗಿನ ಬೆಂಬಲವನ್ನು ಕರ್ನಲ್‌ಗೆ ಸೇರಿಸಲಾಗಿದೆ. ಈಗ ಬೆಂಬಲಿತವಿರುವ ಸಾಧನಗಳೆಂದರೆ:

    • Dell Wireless 5700 Mobile Broadband CDMA/EVDO Mini-Card

    • Dell Wireless 5500 Mobile Broadband HSDPA Mini-Card

    • Dell Wireless 5505 Mobile Broadband HSDPA Mini-Card

    • Dell Wireless 5700 Mobile Broadband CDMA/EVDO ExpressCard

    • Dell Wireless 5510 Mobile Broadband HSDPA ExpressCard

    • Dell Wireless 5700 Mobile Broadband CDMA/EVDO Mini-Card

    • Dell Wireless 5700 Mobile Broadband CDMA/EVDO Mini-Card

    • Dell Wireless 5720

    • Dell Wireless HSDPA 5520

    • Dell Wireless HSDPA 5520

    • Dell Wireless 5520 Voda I Mobile Broadband (3G HSDPA) Mini-Card

  • ಹೊಸತಾದ Thinkpad ಮಾದರಿಗಳಿಗೆ ಹೆಚ್ಚಿನ ಬೆಂಬಲವನ್ನು ನೀಡುವ ಸಲುವಾಗಿ thinkpad_acpi ಕರ್ನಲ್ ಘಟಕವನ್ನು ಅಪ್‌ಡೇಟ್ ಮಾಡಲಾಗಿದೆ.

  • ಮೃದು ಲಾಕ್‌ಅಪ್ ಪತ್ತೆಗಾರವು ಈಗ ಎಚ್ಚರಿಕ ಸಂದೇಶಗಳನ್ನು ನೀಡುವ ಬದಲು ಕರ್ನಲ್ ಪ್ಯಾನಿಕ್ ಅನ್ನು ಟ್ರಿಗರ್ ಮಾಡುವಂತೆ ಸಂರಚಿಸಲಾಗಿದೆ. ಇದರಿಂದಾಗಿ ತೊಂದರೆ ಪತ್ತೆಮಾಡುವ ಸಲುವಾಗಿ ಮೃದು ಲಾಕ್ಅಪ್ ಸಮಯದಲ್ಲಿ ಕುಸಿತ ಬಿಸುಡನ್ನು ಬಳಕೆದಾರರು ವಿಶ್ಲೇಷಿಸಲು ಅನುವು ಮಾಡಿಕೊಡುತ್ತದೆ.

    ಒಂದು ಪ್ಯಾನಿಕ್ ಅನ್ನು ಕಾಣಿಸುವಂತೆ ಒಂದು ಮೃದು ಲಾಕ್‌ಅಪ್ ಪತ್ತೆಗಾರನನ್ನು ಸಂರಚಿಸಲು, ಕರ್ನಲ್ ನಿಯತಾಂಕ soft_lockup ಅನ್ನು 1 ಕ್ಕೆ ಹೊಂದಿಸಿ. ಪೂರ್ವನಿಯೋಜಿತವಾಗಿ ಇದು 0ಗೆ ಹೊಂದಿಸಲ್ಪಟ್ಟಿರುತ್ತದೆ.

  • Next-Generation Intel Microarchitecture (Nehalem) ಗೆ ಸಂಬಂಧಿಸಿದ ಸಂಸ್ಕಾರಕಗಳನ್ನು oprofile ಸರಿಯಾಗಿ ಪತ್ತೆ ಮಾಡುತ್ತಿರಲಿಲ್ಲ. ಪರಿಣಾಮವಾಗಿ, ಕಾರ್ಯಕ್ಷಮತೆಯ ಮೇಲ್ವಿಚಾರಕ ಘಟಕವನ್ನು ಬಳಸಲು ಸಾಧ್ಯವಿಲ್ಲ ಹಾಗು ಸಂಸ್ಕಾರಕವು ಟೈಮರ್ ತಡೆಗೆ ಹೋಗಿ ಬಿಡುತ್ತಿತ್ತು. ಈ ತೊಂದರೆಯನ್ನು ಪರಿಹರಿಸುವ ಸಲುವಾಗಿ ಕರ್ನಲ್ ಅನ್ನು ಅಪ್‌ಡೇಟ್ ಮಾಡಲಾಗಿದೆ.

  • CPU ವಿದ್ಯುಚ್ಛಕ್ತಿ ಸ್ಥಿತಿ, C3 ಅನ್ನು Next-Generation Intel Microarchitecture (Nehalem) ಕ್ಕೆ ಬೆಂಬಲವನ್ನು ಸೇರಿಸಲಾಗಿದೆ. CPU ಜಡ ಸ್ಥಿತಿಯಲ್ಲಿದ್ದಾಗ C3 ಗೆ (ಸುಪ್ತ ಸ್ಥಿತಿ ಎಂದೂ ಸಹ ಕರೆಯಲ್ಪಡಲಾಗುತ್ತದೆ) ಪ್ರವೇಶಿಸುವುದರಿಂದ ಅದರ ವಿದ್ಯುಚ್ಛಕ್ತಿ ಬಳಕೆಯನ್ನು ಸುಧಾರಿಸುತ್ತದೆ.

  • ಇದಕ್ಕೂ ಮೊದಲು, ಕರ್ನಲ್‌ನಲ್ಲಿ ಸಜ್ಜುಗೊಳಿಸಲಾದ MAX_ARG_PAGES ಮಿತಿಯು ಬಹಳ ಕಡಿಮೆಯದ್ದಾಗಿದೆ, ಹಾಗು ಈ ಕೆಳಗಿನ ದೋಷಕ್ಕೆ ಕಾರಣವಾಗುತ್ತಿತ್ತು:

    execve: Argument list too long
    ಈ ಅಪ್‌ಡೇಟಿನಲ್ಲಿ, ಈ ಮಿತಿಯನ್ನು ಸ್ಟಾಕ್‌ನ ಗಾತ್ರದ 25 ಪ್ರತಿಶತದಷ್ಟು ಹೆಚ್ಚಿಸಲಾಗಿದ್ದು, ಇದರಿಂದಾಗಿ ಈ ಸಮಸ್ಯೆಯನ್ನು ಪರಿಹರಿಸುತ್ತದೆ.

  • ಲಿನಕ್ಸಿನ ಕರ್ನಲ್ ಆವೃತ್ತಿ 2.6.27 ಇಂದ autofs4 ಅಪ್‌ಡೇಟ್‌ಗಳನ್ನು Red Hat Enterprise Linux 5.3 ಗೆ ಹಿಮ್ಮರಳಿಸಲಾಗಿದೆ.

  • Red Hat Enterprise Linux 5.3 ರಲ್ಲಿ ಈಗ ಕೋರ್ ಕಡತಗಳು ನೇರವಾಗಿ ಒಂದು ಕಡತಕ್ಕೆ ಪೈಪ್‌ ಮಾಡಲ್ಪಡದೆ, ಒಂದು ಬಳಕೆದಾರ ಅನ್ವಯದ ಒಂದು ಫೊರ್ಕ್ ಮಾಡಲಾದ ಪ್ರತಿಗೆ ಪೈಪ್ ಮಾಡಲ್ಪಡುವ ಸಾಮರ್ಥ್ಯವನ್ನು ಈಗ ಸೇರ್ಪಡಿಸಲಾಗಿದೆ. | path/to/applicationಅನ್ನು /proc/sys/kernel/core_pattern ನಲ್ಲಿ ಇರಿಸುವ ಮೂಲಕ ಇದನ್ನು ಶಕ್ತಗೊಳಿಸಬಹುದು. ಒಂದು ಕೋರ್ ಅನ್ನು ಬಿಸುಡಿದಾಗ(ಡಂಪ್), ಸೂಚಿಸಲಾದ ಒಂದು ಅನ್ವಯದ ಒಂದು ಪ್ರತಿಯನ್ನು ಕಾರ್ಯಗತಗೊಳಿಸಲಾಗುವುದು, ಹಾಗು ಕೋರ್ ಅನ್ನು stdin ಗೆ ಪೈಪ್ ಮಾಡಲಾಗುವುದು. ಇದರಿಂದಾಗಿ ಕೋರ್ ವರ್ಧಿಸಲ್ಪಡುತ್ತದೆ, ವಿಶ್ಲೇಷಿಸಲ್ಪಡುತ್ತದೆ ಹಾಗು ಕೋರ್ ಡಂಪ್ ಸಮಯದಲ್ಲಿ ಸಕ್ರಿಯವಾಗಿ ನಿಭಾಯಿಸಲ್ಪಡುತ್ತದೆ.

  • /proc/cpuinfo ಕಡತವು ಈಗ ಪ್ರತಿಯೊಂದು ಪ್ರತ್ಯೇಕ CPU ಇಂದ ಬಳಸಲಾದ Advanced Programmable Interrupt Controller (APIC) ಯ ID ಯನ್ನು ವರದಿ ಮಾಡುತ್ತದೆ.

  • Machine Check Exception (MCE) ಕರ್ನಲ್ ಉಪವ್ಯವಸ್ಥೆಯನ್ನು ಹೊಸ ಗಣಕಗಳ ಅಗತ್ಯವನ್ನು ಪೂರೈಸುವ ಸಲುವಾಗಿ ಹೆಚ್ಚಿನ ಮೆಮೊರಿ ಸಂರಚನೆಯನ್ನು ಬೆಂಬಲಿಸುವಂತೆ ಉತ್ತಮಗೊಳಿಸಲಾಗಿದೆ.

  • ಸಾಂಬಾದ ಮೂಲಕ ಕಡತವ್ಯವಸ್ಥೆಗಳನ್ನು ಆರೋಹಿಸುವಾಗ ಆರೋಹಣಾ ಆಜ್ಞೆಯು ಈಗ ಕರ್ಬರೋಸ್ ದೃಢೀಕರಣವನ್ನು ಬೆಂಬಲಿಸುತ್ತದೆ. sec=krb5 ಅಥವ sec=krb5i ಸ್ವಿಚ್ ಈಗ ಕರ್ನಲ್ ಒಂದು ಬಳಕೆದಾರ ಸ್ಥಳ ಅನ್ವಯಕ್ಕಾಗಿ ಬಯಸುವುದನ್ನು (cifs.upcall) ಅನುಮತಿಸಲಿದ್ದು, ಇದು ಒಂದು SPNEGO (Simple and Protected GSSAPI Negotiation Mechanism) ಸುರಕ್ಷತಾ blob (Binary Large OBject) ಅನ್ನು ಮರಳಿಸುತ್ತದೆ. ನಂತರ ಕರ್ನಲ್ ಪರಿಚಾರಕದೊಂದಿಗೆ ದೃಢೀಕರಿಸಲು ಹಾಗ ಬಯಸಲಾದ ಕಡತವ್ಯವಸ್ಥೆಯನ್ನು ಆರೋಹಿಸಲು ಈ blob ಅನ್ನು ಬಳಸಬಹುದು.

  • IOAPIC NMI ವಾಚ್‌ಡಾಗ್ ಕ್ರಮವನ್ನು ಬಳಸಿದ ಒಂದು ಗಣಕದಲ್ಲಿ ನೀವು ಕರ್ನಲ್ ನಿಯತಾಂಕ kernel.unknown_nmi_panic ಅನ್ನು ಸಂರಚಿಸಿದ್ದಲ್ಲಿ,ಒಂದು ಕರ್ನಲ್ ಪ್ಯಾನಿಕ್ ಸಂಭವಿಸಬಹುದು. ಇದಕ್ಕೆ ಕಾರಣ NMI ವಾಚ್‌ಡಾಗ್ NMI ಗಳ ಸುರಕ್ಷತೆಯ ಮೂಲವನ್ನು ಅಶಕ್ತಗೊಳಿಸುವುದಿಲ್ಲ.

    ಈ ಬಿಡುಗಡೆಯೊಂದಿಗೆ, ಬಳಕೆದಾರರು NMI ಮೂಲವನ್ನು ಸುರಕ್ಷಿತವಾಗಿ ಅಶಕ್ತಗೊಳಿಸುವುದು ಸುಲಭವಾಗುವಂತೆ NMI ವಾಚ್‌ಡಾಗ್ ಸಂಜ್ಞೆಯನ್ನು ಪರಿಷ್ಕರಿಸಲಾಗಿದೆ. ಅಷ್ಟೆ ಅಲ್ಲದೆ IOAPIC NMI ವಾಚ್‌ಡಾಗ್ ಕ್ರಮವನ್ನು ಬಳಸುವ ಗಣಕಗಳಲ್ಲಿ ಈಗ ನೀವು ಕರ್ನಲ್ ನಿಯತಾಂಕ kernel.unknown_nmi_panic ಅನ್ನು ಸುರಕ್ಷಿತವಾಗಿ ಸಂರಚಿಸಬಹುದಾಗಿದೆ.

4.2. x86 ಆರ್ಕಿಟೆಕ್ಚರುಗಳು

  • powernowk8 ಚಾಲಕವು ಚಾಲನೆಯಲ್ಲಿರುವ CPUಗಳ ಮೇಲೆ ಅಗತ್ಯವಿರುವ ಸಾಕಷ್ಟು ಪರಿಶೀಲನೆಯನ್ನು ನಡೆಸುತ್ತಿರಲಿಲ್ಲ. ಅದರ ಪರಿಣಾಮದಿಂದಾಗಿ, ಚಾಲಕವನ್ನು ಆರಂಭಿಸಿದಾಗ, ಒಂದು ಕರ್ನಲ್ oops ದೋಷ ಸಂದೇಶವು ಕಾಣಿಸಿಕೊಳ್ಳಬಹುದು. ಈ ಅಪ್‌ಡೇಟಿನಲ್ಲಿ powernowk8 ಚಾಲಕವು ಬೆಂಬಲ ಇರುವ CPU ಗಳ ಸಂಖ್ಯೆಯು (supported_cpus) ಆನ್‌ಲೈನ್‌ CPU ಗಳ ಸಂಖ್ಯೆಗೆ (num_online_cpus) ಸಮನಾಗಿದೆಯೆ ಎಂದು ಪರಿಶೀಲಿಸಲಿದ್ದು, ಇದರಿಂದಾಗಿ ಈ ಸಮಸ್ಯೆಯು ಪರಿಹರಿಸಲ್ಪಡುತ್ತದೆ.

4.3. PowerPC ಆರ್ಕಿಟೆಕ್ಚರುಗಳು

  • CPUFreq, ಕರ್ನಲ್ ಉಪವ್ಯವಸ್ಥೆಯಾದಂತಹ ಇದು CPU ಫ್ರೀಕ್ವೆನ್ಸಿ ಹಾಗು ವೋಲ್ಟೇಜ್ ಅನ್ನು ಅಳತೆ ಮಾಡುವ ಇದನ್ನು Cell ಸಂಸ್ಕಾರಕಗಳಿಗೆ ಸುಧಾರಿತ ಬೆಂಬಲ ನೀಡುವಂತೆ ಅಪ್‌ಡೇಟ್ ಮಾಡಲಾಗಿದೆ. ಈ ಅಪ್‌ಡೇಟ್ ಒಂದು Synergistic Processing Unit (SPU) ಎಚ್ಚರಿಸುವ CPUFreq ಮೇಲ್ವಿಚಾರಕವನ್ನು ಅನ್ವಯಿಸುವ ಇದು Cell ಸಂಸ್ಕಾರಕಗಳ ವಿದ್ಯುಚ್ಛಕ್ತಿ ನಿರ್ವಹಣೆಯನ್ನು ಹೆಚ್ಚಿಸುತ್ತದೆ.

  • Error Detection and Correction (EDAC) ವು ಈಗ Red Hat Enterprise Linux 5.3 ರಲ್ಲಿನ Cell Broadband Engine ಆರ್ಕಿಟೆಕ್ಚರಿನಲ್ಲಿ ನಲ್ಲಿ ಬೆಂಬಲಿತವಾಗಿದೆ. EDACಅ ಅನ್ನು ಶಕ್ತಗೊಳಿಸಲು, ಈ ಆಜ್ಞೆಯನ್ನು ಬಳಸಿ: modprobe cell_edac

    ಚಾಲನೆಯಲ್ಲಿರುವ ನಿಮ್ಮ ಕರ್ನಲ್‌ಗೆ ಈ ಘಟಕವನ್ನು ಸೇರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು, /var/log/dmesg ನಲ್ಲಿ ಈ ಕೆಳಗಿನಂತಿರುವ ಔಟ್‌ಪುಟ್ ಅನ್ನು ನೋಡಿ:

    EDAC MC: Ver: 2.0.1 Oct  4 2008
    EDAC MC0: Giving out device to cell_edac MIC: DEV cbe-mic
    EDAC MC1: Giving out device to cell_edac MIC: DEV cbe-mic

    ಸರಿಪಡಿಸಬಹುದಾದ ಮೆಮೊರಿ ದೋಷಗಳು ಕಂಡುಬಂದಲ್ಲಿ, ನಿಮ್ಮ ಕನ್ಸೋಲಿನಲ್ಲಿ ಈ ಕೆಳಗಿನಂತಹ ಸಂದೇಶವು ಕಾಣಿಸಿಕೊಳ್ಳುತ್ತದೆ:

    EDAC MC0: CE page 0xeff, offset 0x5700, grain 0, syndrome 0x51, row 0, channel
    0, label "":
  • ಅನೇಕ ಎಳೆಗಳ ನಡುವೆ ಹಂಚಲಾಗಿರುವ ಒಂದು ವೇರಿಯೇಬಲ್ ಅನ್ನು ಬಳಸುವ ಯಂತ್ರಾಂಶ ನೋಡುಬಿಂದುಗಳಿಂದಾಗಿ(ವಾಚ್‌ಪಾಯಿಂಟ್ಸ್‍) GNU Debugger (GDB) ವಿಚಿತ್ರ ರೀತಿಯಲ್ಲಿ ಟ್ರಿಗರ್ ಸನ್ನಿವೇಶಗಳು ತಪ್ಪಿ ಹೋಗುತ್ತಿತ್ತು. ನೋಡುಬಿಂದುಗಳ ಟ್ರಿಗರುಗಳನ್ನು ಕ್ರಮವಾಗಿ GDB ಪಡೆದುಕೊಳ್ಳುವುದನ್ನು ಅನುತಿಸುವಂತೆ ಕರ್ನಲ್ ಅನ್ನು ಅಪ್‌ಡೇಟ್ ಮಾಡಲಾಗಿದೆ. ಇದರಿಂದಾಗಿ ದೋಷ ನಿವಾರಣಾ ಅಧಿವೇಶನದ ಮೇಲಿನ ನಂಬಿಕಾರ್ಹತೆಯು ಹೆಚ್ಚುತ್ತದೆ.

4.4. x86_64 ಆರ್ಕಿಟೆಕ್ಚರುಗಳು

  • kprobe-booster ಈಗ ia64 ಹಾಗು x86_64 ಆರ್ಕಿಟೆಕ್ಚರುಗಳ ಮೇಲೆ ಬೆಂಬಲಿತವಾಗಿದ್ದು, ಇದರಿಂದಾಗಿ ಬಳಕೆದಾರರು ಕರ್ನಲ್ ಘಟನೆಗಳನ್ನು ಇನ್ನೂ ವೇಗವಾಗಿ ತನಿಖೆ ಮಾಡಬಹುದಾಗಿದೆ. ಈ ಸೌಲಭ್ಯದಿಂದಾಗಿ, 64-ಬಿಟ್ ಆರ್ಕಿಟೆಕ್ಚರುಗಳ ಮೇಲೆ ತನಿಖಾ ಉಪಕರಣಗಳಿಂದಾಗಿ(ಉದಾ SystemTap and Kprobes) ಉಂಟಾಗುತ್ತಿದ್ದಂತಹ ಹೆಚ್ಚುವರಿ ಹೊರೆಗಳೂ ಸಹ ಕಡಿಮೆಯಾಗುತ್ತದೆ.

  • _PTCಗಾಗಿ (Processor Throttling Control), _TSS (Throttling Supported States) ಹಾಗು _TPC (Throttling Present Capabilities) ವಿಷಯಗಳಿಗೆ ಕರ್ನಲ್‌ನಲ್ಲಿ ಬೆಂಬಲವನ್ನು ಸೇರಿಸಲಾಗಿದೆ. Advance Configuration and Power Interface specification (ACPI) ನ ಒಂದು ಭಾಗವಾದ ಈ ಬೆಂಬಲವು ಸಂಸ್ಕರಣಾ ತ್ರಾಟಲಿಂಗ್‌ನ ಸುಧಾರಿತ ನಿರ್ವಹಣೆಯನ್ನು ಒದಗಿಸುತ್ತದೆ.

4.5. s390x ಆರ್ಕಿಟೆಕ್ಚರುಗಳು

  • zipl.conf ನಲ್ಲಿ, ಒಂದು ಜೋಡಿ ಉದ್ಧರಣ ಚಿಹ್ನೆಗಳ ಒಳಗೆ ಎರಡು ಜೋಡಿ ಉದ್ಧರಣ ಚಿಹ್ನೆಗಳನ್ನು ಹೊಂದಿರುವ ನಿಯತಾಂಕಗಳು (ಅಂದರೆ parameters='vmhalt="LOGOFF"') ತಪ್ಪಾಗಿ ಪಾರ್ಸ್ ಮಾಡಲಾದವುಗಳನ್ನು ಸೂಚಿಸುತ್ತವೆ. ಅದರ ಪರಿಣಾಮವಾಗಿ, ಕರ್ನಲ್-kdump ಪ್ಯಾಕೇಜನ್ನು ಅನುಸ್ಥಾಪಿಸುವಾಗ ವಿಫಲಗೊಂಡಿರಬಹುದು, ಹಾಗು ಈ ದೋಷಕ್ಕೆ ಕಾರಣವಾಗಿರಬಹುದು:

    grubby fatal error: unable to find a suitable template
    ಇದನ್ನು ಪರಿಹರಿಸಲು, ನಿಯತಾಂಕಗಳು ಎರಡು ಜೋಡಿ ಉದ್ಧರಣ ಚಿಹ್ನೆಗಳ ಒಳಗೆ ಒಂದೆ ಜೋಡಿ ಉದ್ಧರಣ ಚಿಹ್ನೆಗಳ ನಡುವೆ ಇರಬೇಕು (ಅಂದರೆ parameters="vmhalt='LOGOFF'")

    ಸೂಚನೆ

    ಎರಡು ಜೋಡಿ ಉದ್ಧರಣ ಚಿಹ್ನೆಗಳ ನಡುವೆ ಒಂದು ಜೋಡಿ ಉದ್ಧರಣ ಚಿಹ್ನೆಗಳಿರುವ ರಚನಾ ವಿನ್ಯಾಸವು Red hat Enterprise Linux 5 ರಲ್ಲಿ ಡೀಫಾಲ್ಟ್‍ ಆಗಿದೆ.

4.6. ia64 ಆರ್ಕಿಟೆಕ್ಚರುಗಳು

  • Dual-Core Intel Itanium 2 ಸಂಸ್ಕಾರಕವು ಈ ಹಿಂದಿನ Intel Itanium ಸಂಸ್ಕಾರಕಗಳಿಗೆ ಹೋಲಿಸಿದಲ್ಲಿ ವಿಭಿನ್ನವಾದ ರೀತಿಯಲ್ಲಿ machine check architecture (MCA) ಅನ್ನು ತುಂಬಿಸಿದೆ. ಕ್ಯಾಶೆ ಪರಿಶೀಲನೆ ಹಾಗು ಬಸ್ ಪರಿಶೀಲನೆ ಗುರಿ ಪತ್ತೆಗಾರಗಳು ಈಗ ಕೆಲವು ಸಂದರ್ಭಗಳಲ್ಲಿ ವಿಭಿನ್ನವಾಗಿರುತ್ತವೆ. ಸಮರ್ಪಕವಾದ ಗುರಿ ಪತ್ತೆಗಾರನನ್ನು ಹುಡುಕುವಂತೆ ಕರ್ನಲ್ ಅನ್ನು ಅಪ್‌ಡೇಟ್ ಮಾಡಲಾಗಿದೆ.

  • kprobe-booster ಈಗ ia64 ಹಾಗು x86_64 ಆರ್ಕಿಟೆಕ್ಚರುಗಳ ಮೇಲೆ ಬೆಂಬಲಿತವಾಗಿದ್ದು, ಇದರಿಂದಾಗಿ ಬಳಕೆದಾರರು ಕರ್ನಲ್ ಘಟನೆಗಳನ್ನು ಇನ್ನೂ ವೇಗವಾಗಿ ತನಿಖೆ ಮಾಡಬಹುದಾಗಿದೆ. ಈ ಸೌಲಭ್ಯದಿಂದಾಗಿ, 64-ಬಿಟ್ ಆರ್ಕಿಟೆಕ್ಚರುಗಳ ಮೇಲೆ ತನಿಖಾ ಉಪಕರಣಗಳಿಂದಾಗಿ(ಉದಾ SystemTap and Kprobes) ಉಂಟಾಗುತ್ತಿದ್ದಂತಹ ಹೆಚ್ಚುವರಿ ಹೊರೆಗಳೂ ಸಹ ಕಡಿಮೆಯಾಗುತ್ತದೆ.

  • ಈ ಅಪ್‌ಡೇಟ್‌ನಲ್ಲಿ, ಕರ್ನಲ್‌ನಲ್ಲಿ pselect() ಹಾಗು ppoll() ಗಣಕಕರೆಗೆ ಬೆಂಬಲವನ್ನು ಸೇರಿಸಲಾಗಿದೆ.

5. ವಾಸ್ತವೀಕರಣ (Virtualization)

ಈ ವಿಭಾಗದಲ್ಲಿ ವಾಸ್ತವೀಕರಣದ ಉಪಕರಣಗಳ Red Hat Enterprise Linux ಸೂಟ್‍ಗೆ ಮಾಡಲಾದ ಅಪ್‍ಡೇಟ್‍ಗಳನ್ನು ಒಳಗೊಂಡಿದೆ.

5.1. ಸವಲತ್ತು ಅಪ್‍ಡೇಟ್‍ಗಳು

  • blktap (blocktap) ಬಳಕೆದಾರಸ್ಥಳ ಉಪಕರಣವನ್ನು ಅಪ್‌ಡೇಟ್ ಮಾಡಲಾಗಿದ್ದು, ಇದು blktap ಇಂದ ಬೆಂಬಲಿತವಾದ ವರ್ಚುವಲೈಸ್ ಆದಂತಹ ಅತಿಥಿಗಳಲ್ಲಿ ವರ್ಗಾವಣಾ ಅಂಕಿಅಂಶಗಳನ್ನು ನೋಡಿಕೊಳ್ಳುವ ಕಾರ್ಯಶೀಲತೆಯನ್ನು ಒದಗಿಸುತ್ತದೆ.

  • Intel Extended Page Table (EPT) ಸವಲತ್ತಿಗೆ ಬೆಂಬಲವನ್ನು ಸೇರಿಸಲಾಗಿದ್ದು, ಇದು EPT ಅನ್ನು ಬೆಂಬಲಿಸುವ ಯಂತ್ರಾಂಶಗಳ ಮೇಲೆ ಸಂಪೂರ್ಣವಾಗಿ ವರ್ಚುವಲೈಸ್ ಆದಂತಹ ಅತಿಥಿಯ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.

  • ಅತಿಥಿಗಳಿಗಾಗಿನ e1000 ಜಾಲಬಂಧ ಸಾಧನ ಎಮ್ಯುಲೇಶನ್ ಅನ್ನು ಈ ಅಪ್‌ಡೇಟ್‌ನಲ್ಲಿ ಸೇರಿಸಲಾಗಿದ್ದು, ಇದು ಕೇವಲ ia64 ಆರ್ಕಿಟಕ್ಚರುಗಳ ಮೇಲೆ Windows 2003 ಅತಿಥಿಗಳನ್ನು ಮಾತ್ರ ಬೆಂಬಲಿಸುತ್ತದೆ. e1000 ಎಮ್ಯುಲೇಶನ್ ಅನ್ನು ಬಳಸಲು, xm ಆಜ್ಞೆಯನ್ನು ಬಳಸಬೇಕು.

  • KVM ನಲ್ಲಿನ I/O ವರ್ಚುವಲೈಸೇಶನ್‌ಗಾಗಿನ ಪ್ಲಾಟ್‌ಫಾರ್ಮ್ virtio ಗಾಗಿನ ಚಾಲಕಗಳನ್ನು Linux Kernel 2.6.27 ರಿಂದ Red Hat Enterprise Linux 5.3 ಗೆ ಹಿಮ್ಮರಳಿಸಲಾಗಿದೆ. ಈ ಚಾಲಕಗಳು ಅತ್ಯುನ್ನತ ಮಟ್ಟದ I/O ಕಾರ್ಯಕ್ಷಮತೆಯನ್ನು ತೋರಿಸುವಂತೆ KVM ಅತಿಥಿಗಳನ್ನು ಶಕ್ತಗೊಳಿಸುತ್ತವೆ. virtio ಸಾಧನಗಳನ್ನು ಬೆಂಬಲಿಸುವಂತೆ ಹಲವಾರು ಬಳಕೆದಾರಸ್ಥಳ ಘಟಕಗಳಾದಂತಹ: anaconda, kudzu, lvm, selinux ಹಾಗು mkinitrd ಅನ್ನೂ ಸಹ ಅಪ್‌ಡೇಟ್ ಮಾಡಲಾಗಿದೆ.

  • ಸ್ಥಳೀಯ Linux ಕರ್ನಲ್ ತಾನಾಗಿಯೆ vmcoreinfo ಅನ್ನು ಬೆಂಬಲಿಸುತ್ತದೆ, ಆದರೆ, dom0 ಡೊಮೈನುಗಳಲ್ಲಿ kdump ಅನ್ನು ಸಜ್ಜುಗೊಳಿಸಲು, kernel-xen-debuginfo ಪ್ಯಾಕೇಜಿನ ಅಗತ್ಯವಿರುತ್ತದೆ. ಈ ಬಿಡುಗಡೆಯೊಂದಿಗೆ, ಕರ್ನಲ್ ಹಾಗು ಹೈಪರ್ವೈಸರನ್ನು ಬದಲಾಯಿಸಲಾಗಿದ್ದು ಅವು ಈಗ ಸ್ಥಳೀಯವಾಗಿ kdump ಗೆ vmcoreinfo ಓದುವಿಕೆ ಹಾಗು ಬರೆಯುವಿಕೆಯನ್ನು ಬೆಂಬಲಿಸುತ್ತದೆ. kdump ಅನ್ನು ದೋಷ ನಿವಾರಣೆ ಅಥವ ಇತರೆ ತನಿಖೆಗಳಿಗಾಗಿ dom0 ಡೊಮೈನುಗಳ ಮೇಲೆ ಬಳಸಬೇಕೆನ್ನುವ ಬಳಕೆದಾರರು ಈಗ debuginfo ಅಥವ debuginfo-common ಪ್ಯಾಕೇಜುಗಳನ್ನು ಅನುಸ್ಥಾಪಿಸದೆ ಹಾಗೆ ಮಾಡಬಹುದಾಗಿದೆ.

  • ಸಂಪೂರ್ಣ ವರ್ಚುವಲೈಸ್ ಆದಂತಹ Red Hat Enterprise Linux 5 ಅತಿಥಿಗಳಲ್ಲಿ ಅನುಕರಣಾ (ಎಮ್ಯುಲೇಟೆಡ್) ಡಿಸ್ಕ್‍ ಹಾಗು ಜಾಲಬಂಧ ಸಾಧನಗಳನ್ನು ಬಳಸುವಾಗ ಪ್ರಶಸ್ತವಲ್ಲದ ಕಾರ್ಯಕ್ಷಮತೆಯು ಎದುರಾಗಬಹುದು. ಈ ಅಪ್‌ಡೇಟ್‌ನಲ್ಲಿ, ಪ್ಯಾರಾವರ್ಚುವಲೈಸ್ ಆದಂತಹ ಡಿಸ್ಕುಗಳನ್ನು ಹಾಗು ಜಾಲಬಂಧಗಳನ್ನು ಸಂಪೂರ್ಣ ವರ್ಚುವಲೈಸ್ ಆದಂತಹ ಅತಿಥಿಗಳಲ್ಲಿ ಬಳಸುವುದನ್ನು ಸರಳಗೊಳಿಸುವ ಸಲುವಾಗಿ kmod-xenpv ಪ್ಯಾಕೇಜ್ ಅನ್ನು ಸೇರಿಸಲಾಗಿದೆ.

    ಈ ಚಾಲಕಗಳನ್ನು ಸಂಪೂರ್ಣ ವರ್ಚುವಲೈಸ್ ಆದಂತಹ ಅತಿಥಿಗಳಲ್ಲಿ ಬಳಸುವುದರಿಂದ ಇದು ಸಂಪೂರ್ಣ ವರ್ಚುವಲೈಸ್ ಆದಂತಹ ಅತಿಥಿಗಳ ಕಾರ್ಯಕ್ಷಮತೆ ಹಾಗು ಕಾರ್ಯಶೀಲತೆಯನ್ನು ಗಮನಾರ್ಹವಾಗಿ ಹೆಚ್ಚಿಸುವುದು. ನೆಟ್‌ಫ್ರಂಟ್ ಹಾಗು ಬ್ಲಾಕ್‌ಫ್ರಂಟ್‌ ಚಾಲಕಗಳಿಗೆ ಮಾಡಲಾದಂತಹ ದೋಷ ನಿವಾರಣೆಗಳು ತಕ್ಷಣ ಕಾರ್ಯರೂಪಕ್ಕೆ ಬರುತ್ತವೆ ಹಾಗು ಕರ್ನಲ್ ಪ್ಯಾಕೇಜಿನೊಂದಿಗೆ ಹೊಂದಿಕೊಳ್ಳುತ್ತದೆ.

  • ಅತಿಥಿಗಳು ಈಗ 2MB ಬೆಂಬಲವಿರುವ ಪುಟ ಮೆಮೊರಿ ಕೋಷ್ಟಕಗಳನ್ನು ಬಳಸುವ ಸಾಮರ್ಥ್ಯವನ್ನು ಹೊಂದಿದ್ದು, ಇದು ಗಣಕದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

5.2. ಪರಿಹರಿಸಲಾದ ತೊಂದರೆಗಳು

5.2.1. ಎಲ್ಲಾ ಆರ್ಕಿಟೆಕ್ಚರುಗಳು

  • ಪ್ಯಾರಾವರ್ಚುವಲೈಸ್ ಮಾಡಲಾದ ಅತಿಥಿಗಳನ್ನು ಸ್ಥಗಿತಗೊಳಿಸಿದಲ್ಲಿ ಒಂದಿಷ್ಟು ಕಾಲ dom0 ಸ್ಪಂದಿಸುವುದನ್ನು ನಿಲ್ಲಿಸುತ್ತದೆ. ದೊಡ್ಡ ಗಾತ್ರದ ಮೆಮೊರಿಯನ್ನು (ಅಂದರೆ 12GB ಹಾಗು ಹೆಚ್ಚಿನ) ಹೊಂದಿರುವ ಅತಿಥಿಗಳಲ್ಲಿ ಹಲವಾರು ಸೆಕೆಂಡುಗಳಷ್ಟು ವಿಳಂಬವು ಎದುರಾಗಬಹುದು. ಈ ಅಪ್‌ಡೇಟ್‌ನಲ್ಲಿ, ದೊಡ್ಡದಾದ ಪ್ಯಾರಾವರ್ಚುವಲೈಸ್ ಮಾಡಲಾದ ಅತಿಥಿಗಳನ್ನು ಮೊದಲೆ ಆಕ್ರಮಿಸುವಂತೆ ಸ್ಥಗಿತಗೊಳಿಸುವಿಕೆಯನ್ನು ವರ್ಚುವಲೈಸ್ ಮಾಡಲಾದ ಕರ್ನಲ್ ಅನುಮತಿಸುತ್ತದೆ, ಇದು ಈ ಸಮಸ್ಯೆಯನ್ನು ಪರಿಹರಿಸುತ್ತದೆ.

  • ಕುಸಿತವು ಒಂದು vmcore ಕಡತದಿಂದ ಹೈಪರ್ವೈಸರಿನ ಸ್ಥಳಾಂತರ ವಿಳಾಸವನ್ನು ಓದಲು ಸಾಧ್ಯವಾಗಿಲ್ಲ. ಪರಿಣಾಮವಾಗಿ, ವರ್ಚುವಲೈಸ್ ಮಾಡಲಾದ ಕರ್ನಲ್ vmcore ಕಡತವನ್ನು ಕುಸಿತದೊಂದಿಗೆ ತೆಗೆದಾಗ ಈ ಕೆಳಗಿನ ದೋಷದೊಂದಿಗೆ ವಿಫಲಗೊಳ್ಳುತ್ತಿತ್ತು:

    crash: cannot resolve "idle_pg_table_4"
    ಈ ಅಪ್‌ಡೇಟ್‌ನಲ್ಲಿ, ಹೈಪರ್ವೈಸರ್ ಈಗ ವಿಳಾಸವನ್ನು ಸರಿಯಾಗಿ ಉಳಿಸುತ್ತದೆ, ಹಾಗು ಈ ಮೂಲಕ ಸಮಸ್ಯೆಯನ್ನು ಪರಿಹರಿಸುತ್ತದೆ.

  • ಈ ಮೊದಲು, ಪ್ಯಾರಾವರ್ಚುವಲೈಸ್ ಆದಂತಹ ಅತಿಥಿಗಳು ಗರಿಷ್ಟ 16 ಡಿಸ್ಕ್‍ ಸಾಧನಗಳನ್ನು ಮಾತ್ರವೆ ಹೊಂದಬಹುದಾಗಿತ್ತು. ಈ ಅಪ್‌ಡೇಟ್‌ನಲ್ಲಿ,ಈ ಮಿತಿಯನ್ನು 256 ಡಿಸ್ಕ್‍ ಸಾಧನಗಳಿಗೆ ಹೆಚ್ಚಿಸಲಾಗಿದೆ.

  • kdump ಕರ್ನಲ್‌ಗಾಗಿ ಕಾದಿರಿಸಲಾದ ಮೆಮೊರಿಯು ಸರಿಯಾಗಿರಲಿಲ್ಲ, ಇದು ಬಳಸಲಾಗದೆ ಇರುವ ಕುಸಿತ ಡಂಪ್‌ಗಳಿಗೆ ಕಾರಣವಾಗುತ್ತಿತ್ತು. ಈ ಅಪ್‌ಡೇಟ್‌ನಲ್ಲಿ, ಮೆಮೊರಿ ಕಾದಿರಿಸುವಿಕೆಯನ್ನು ಸರಿಪಡಿಸಲಾಗಿದ್ದು, ಇದರಿಂದ ಸರಿಯಾದಂತಹ ಕುಸಿತ ಡಂಪ್ ಉತ್ಪತ್ತಿಯಾಗುತ್ತದೆ.

  • ಪ್ಯಾರಾವರ್ಚುವಲೈಸ್ ಆದಂತಹ ಅತಿಥಿಗೆ ಒಂದು ನಿರ್ದಿಷ್ಟ ಹೆಸರಿನ ಡಿಸ್ಕನ್ನು ಜೋಡಿಸುವುದರಿಂದ (ಅಂದರೆ, /dev/xvdaa, /dev/xvdab, /dev/xvdbc ಇತ್ಯಾದಿ.) ಅತಿಥಿಯಲ್ಲಿ ಒಂದು ಭ್ರಷ್ಟಗೊಂಡಂತಹ /dev ಸಾಧನಕ್ಕೆ ಕಾರಣವಾಗುತ್ತಿತ್ತು. ಈ ಅಪ್‌ಡೇಟ್ ಈ ಸಮಸ್ಯೆಯನ್ನು ಪರಿಹರಿಸುವುದರಿಂದ, ಇನ್ನು ಮುಂದೆ ಈ ಹೆಸರಿನ ಡಿಸ್ಕುಗಳನ್ನು ಒಂದು ಪ್ಯಾರಾವರ್ಚುವಲೈಸ್ ಆದಂತಹ ಅತಿಥಿಗೆ ಜೋಡಿಸಿದಾಗ ಅತಿಥಿಯಲ್ಲಿ ಒಂದು ಸರಿಯಾದ /dev ಸಾಧನವು ನಿರ್ಮಾಣಗೊಳ್ಳುತ್ತದೆ.

  • ಈ ಮೊದಲು, ಲೂಪ್‌ಬ್ಯಾಕ್ ಸಾಧನಗಳ ಸಂಖ್ಯೆಯನ್ನು 4 ಕ್ಕೆ ಮಿತಿಗೊಳಪಡಿಸಲಾಗಿತ್ತು. ಪರಿಣಾಮವಾಗಿ, 4 ಕ್ಕಿಂತಲೂ ಹೆಚ್ಚಿನ ಜಾಲಬಂಧ ಸಂಪರ್ಕಸಾಧನಗಳನ್ನು ಹೊಂದಿರುವ ಗಣಕಗಳ ಮೇಲೆ ಸಂಪರ್ಕವನ್ನು ಜೋಡಿಸುವ ಸಾಮರ್ಥ್ಯವು ಮಿತಿಗೊಳಪಡುತ್ತಿತ್ತು. ಈ ಅಪ್‌ಡೇಟ್‌ನಲ್ಲಿ, netloop ಚಾಲಕವು ಈಗ ಅಗತ್ಯವಿರುವ ಹೆಚ್ಚುವರಿ ಲೂಪ್‌ಬ್ಯಾಕ್ ಸಾಧನವನ್ನು ನಿರ್ಮಿಸುತ್ತದೆ.

  • ವರ್ಚುವಲ್ ಜಾಲಬಂಧ ಸಾಧನಗಳನ್ನು ನಿರ್ಮಿಸಿದಾಗ ಹಾಗು ನಾಶಪಡಿಸಿದಾಗ ಒಂದು ರೇಸ್ ಸ್ಥಿತಿ ಎದುರಾಗುತ್ತಿತ್ತು. ಕೆಲವೊಂದು ಸಂದರ್ಭಗಳಲ್ಲಿ -- ವಿಶೇಷವಾಗಿ, ಹೆಚ್ಚಿನ ಹೊರೆಯ ಸಂದರ್ಭದಲ್ಲಿ -- ಇದು ವರ್ಚುವಲ್ ಸಾಧನವು ಪ್ರತಿಸ್ಪಂದಿಸದೆ ಇರಲು ಕಾರಣವಾಗುತ್ತಿತ್ತು. ಈ ಅಪ್‌ಡೇಟ್‌ನಲ್ಲಿ, ರೇಸ್ ಸ್ಥಿತಿಯು ಎದುರಾಗುವುದನ್ನು ತಪ್ಪಿಸಲು ವರ್ಚುವಲ್ ಸಾಧನದ ಸ್ಥಿತಿಯನ್ನು ಪರೀಕ್ಷಿಸಲಾಗುವುದು.

  • virt-manager ಅನ್ನು ಚಾಲನೆಯಲ್ಲಿಯೆ ಇಟ್ಟಲ್ಲಿ ಅದರಲ್ಲಿ ಒಂದು ಮೆಮೊರಿ ಸೋರಿಕೆ ಎದುರಾಗಬಹುದು. ಪರಿಣಾಮವಾಗಿ, ಅನ್ವಯವು ಬಹಳಷ್ಟು ಸಂಪನ್ಮೂಲವನ್ನು ಸತತವಾಗಿ ಬಳಸುತ್ತಾ ಹೋಗುತ್ತದೆ. ಇದರಿಂದ ಮೆಮೊರಿ ಕೊರತೆಗೆ ಕಾರಣವಾಗಬಹುದು. ಈ ಅಪ್‌ಡೇಟ್‌ನಲ್ಲಿ, ಸೋರಿಕೆಯನ್ನು ಸರಿಪಡಿಸಲಾಗಿದೆ ಹಾಗು ಇದು ಈ ಸಮಸ್ಯೆಯನ್ನು ಪರಿಹರಿಸುತ್ತದೆ.

  • ಕುಸಿತ ಸವಲತ್ತು kernel-xen ಅನ್ನು ಚಲಾಯಿಸುತ್ತಿರುವ ಗಣಕದಿಂದ x86_64 vmcores ಅನ್ನು ವಿಶ್ಲೇಷಿಸಲು ಸಾಧ್ಯವಿರಲಿಲ್ಲ ಏಕೆಂದರೆRed Hat Enterprise Linux ಹೈಪರ್ವೈಸರ್ ಅನ್ನು ಸ್ಥಳಾಂತರಿಸಿಬಹುದಾಗಿತ್ತು ಹಾಗು ಸ್ಥಳಾಂತರಿಸಲಾದ ಭೌತಿಕ ಮೂಲ ವಿಳಾಸವನ್ನು vmcore ಕಡತದ ELF ಹೆಡರಿಗೆ ವರ್ಗಾಯಿಸುವುದು ಸಾಧ್ಯವಿರಲಿಲ್ಲ. ಹೊಸತಾದ --xen_phys_start ಆಜ್ಞಾ ಸಾಲಿನ ಆಯ್ಕೆಯಿಂದಾಗಿ ಕುಸಿತ ಸವಲತ್ತು ಬಳಕೆದಾರರು ಕುಸಿತವನ್ನು ಸ್ಥಳಾಂತರಿಸಲಾದ ಮೂಲ ಭೌತಿಕ ವಿಳಾಸಕ್ಕೆ ವರ್ಗಾಯಿಸಲು ಅನುವು ಮಾಡಿಕೊಡುತ್ತದೆ.

  • Paravirtual Frame Buffer (PVFB) ಇಂದ ಎಲ್ಲಾ ಮೌಸ್ ಸನ್ನಿವೇಶಗಳನ್ನೂ ಸಹ ಸೆರೆಹಿಡಿದು ಸಂಸ್ಕರಿಸಲಾಗುತ್ತಿರಲಿಲ್ಲ. ಪರಿಣಾಮವಾಗಿ, ಪ್ಯಾರಾವರ್ಚುವಲೈಸ್ ಆದಂತಹ ಅತಿಥಿಯು Virtual Machine Console ನೊಂದಿಗೆ ವ್ಯವಹರಿಸುವಾಗ ಚಲನಾ ಚಕ್ರ(ಸ್ಕ್ರಾಲ್ ವೀಲ್) ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಈ ಅಪ್‌ಡೇಟ್‌ನಲ್ಲಿ, ಚಲನ ಚಕ್ರ ಮೌಸ್ ಸನ್ನಿವೇಶಗಳನ್ನು ಸರಿಯಾಗಿ ನಿಭಾಯಿಸಲಾಗುತ್ತದೆ, ಹಾಗು ಇದರಿಂದಾಗಿ ಈ ಸಮಸ್ಯೆಯು ಪರಿಹಾರಗೊಳ್ಳುತ್ತದೆ.

  • ದೊಡ್ಡ ಮೊತ್ತದ ಮೆಮೊರಿಯನ್ನು ಹೊಂದಿರುವ ಗಣಕದಲ್ಲಿ (ಅಂದರೆ 256GB ಅಥವ ಹೆಚ್ಚಿನ), dom0 ಅನ್ನು ಸಜ್ಜುಗೊಳಿಸುವುದರಿಂದ ಹೈಪರ್ವೈಸರ್ ಮೆಮೊರಿ ಶೇಖರಣೆಯು ಖಾಲಿಯಾಗಬಹುದು. ಇದನ್ನು ಪರಿಹರಿಸಲು ಇನ್ನೊಂದು ಉಪಾಯವೆಂದರೆ, xenheap ಹಾಗು dom0_size ಆಜ್ಞಾ ಸಾಲಿನ ಆರ್ಗುಮೆಂಟ್‌ಗಳನ್ನು ಗಣಕದ ಮಾನ್ಯವಾದ ಮೌಲ್ಯಗಳಿಗೆ ಹೊಂದಿಸಬೇಕು. ಈ ಅಪ್‌ಡೇಟ್‌ನಲ್ಲಿ, ಈ ಮೌಲ್ಯಗಳಿಗೆ ತಾನಾಗಿಯೆ ಬದಲಾಯಿಸಿಕೊಳ್ಳುವಂತೆ ಹೈಪರ್ವೈಸರ್ ಅನ್ನು ಅಪ್‌ಡೇಟ್ ಮಾಡಲಾಗಿದೆ, ಹಾಗು ಇದರಿಂದಾಗಿ ಈ ಸಮಸ್ಯೆಯು ಪರಿಹಾರಗೊಳ್ಳುತ್ತದೆ.

  • ದೊಡ್ಡ ಸಂಖ್ಯೆಯ CPU ಗಳನ್ನು ಹೊಂದಿರುವ ಒಂದು ಗಣಕದಲ್ಲಿ ವರ್ಚುವಲೈಸೇಶನ್ ಅನ್ನು ಬಳಸುವುದರಿಂದ ಅತಿಥಿಯ ಅನುಸ್ಥಾಪನೆಯ ಸಮಯದಲ್ಲಿ ಹೈಪರ್ವೈಸರ್ ಕುಸಿತಗೊಳ್ಳಲು ಕಾರಣವಾಗುತ್ತಿತ್ತು. ಈ ಅಪ್‌ಡೇಟ್‌ನಲ್ಲಿ ಈ ಸಮಸ್ಯೆಯನ್ನು ನಿವಾರಿಸಲಾಗಿದೆ.

  • ದೊಡ್ಡ ಗಾತ್ರದ ಮೆಮೊರಿಯನ್ನು ಹೊಂದಿರುವ ಒಂದು ಅತಿಥಿಯನ್ನು ರಚಿಸುವಾಗ ಒಂದು ಸಾಫ್ಟ್‍ಲಾಕ್‌ಅಪ್ ಸಂಭವಿಸಿರಬಹುದು. ಪರಿಣಾಮವಾಗಿ, dom0 ಹಾಗು ಅತಿಥಿಯಲ್ಲಿ ದೋಷದ ಒಂದು ಕಾಲ್‌ ಟ್ರೇಸ್ ಕಾಣಿಸಿಕೊಳ್ಳುತ್ತದೆ. ಈ ಅಪ್‌ಡೇಟ್‌ನಲ್ಲಿ ಇದನ್ನು ಪರಿಹರಿಸಲಾಗಿದೆ.

  • Intel ಸಂಸ್ಕಾರಕಗಳಲ್ಲಿ 6 ರ CPUID ವರ್ಗದ ಮೌಲ್ಯವನ್ನು ಮರಳಿಸುವುದರಲ್ಲಿ ಕೇವಲ ಒಂದು ಕಾರ್ಯಕ್ಷಮತಾ ಕೌಂಟರ್ ರಿಜಿಸ್ಟರ್ ಮಾತ್ರ kernel-xen ನಲ್ಲಿ ಶಕ್ತಗೊಂಡಿರುತ್ತದೆ. ಪರಿಣಾಮವಾಗಿ, ಕೇವಲ ಕೌಂಟರ್ 0 ಮಾತ್ರ ನಮೂನೆಯನ್ನು ಒದಗಿಸುತ್ತಿತ್ತು. ಈ ಅಪ್‌ಡೇಟ್‌ನಲ್ಲಿ, ಈ ಸಮಸ್ಯೆಯನ್ನು ಪರಿಹರಿಸಲಾಗಿದೆ.

5.2.2. x86 ಆರ್ಕಿಟೆಕ್ಚರುಗಳು

  • ಹೊಸತಾದ CPU ಇರುವ ಗಣಕಗಳಲ್ಲಿ, CPU APIC ID ಯು CPU ID ಗಿಂತ ಭಿನ್ನವಾಗಿರುತ್ತದೆ. ಪರಿಣಾಮವಾಗಿ, CPU ಫ್ರೀಕ್ವೆನ್ಸಿ ಸ್ಕೇಲಿಂಗ್ ಅನ್ನು ವರ್ಚುವಲೈಸ್ ಆದಂತಹ ಕರ್ನಲ್‌ನಿಂದ ಆರಂಭಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಅಪ್‌ಡೇಟ್‌ನಲ್ಲಿ, ವರ್ಚುವಲೈಸ್ ಆದಂತಹ ಕರ್ನಲ್ ಹೈಪರ್ವೈಸರಿನಿಂದ CPU APIC ID ಅನ್ನು ಪಡೆದುಕೊಳ್ಳಲಿದ್ದು, ಇದರಿಂದಾಗಿ CPU ಫ್ರೀಕ್ವೆನ್ಸಿ ಸ್ಕೇಲಿಂಗ್ ಸರಿಯಾಗಿ ಆರಂಭಗೊಳ್ಳುತ್ತದೆ.

  • ಒಂದು x86 ಪ್ಯಾರಾವರ್ಚುವಲ್ ಅತಿಥಿಯನ್ನು ಚಲಾಯಿಸುವಾಗ, ಒಂದು ಪ್ರಕ್ರಿಯೆಯು ಒಂದು ಅಮಾನ್ಯವಾದ ಮೆಮೊರಿಯನ್ನು ನಿಲುಕಿಸಿಕೊಳ್ಳಲು ಪ್ರಯತ್ನಿಸಿದಾಗ, ಅದು SEGV ಸೂಚನೆಯನ್ನು ನೀಡುವ ಬದಲು ಒಂದು ಆವರ್ತನದಲ್ಲಿ (ಲೂಪ್) ಚಲಾಯಿತಗೊಳ್ಳುತ್ತಿತ್ತು. ಇದರಿಂದಾಗಿ ಹೈಪರ್ವೈಸರ್ ಅಡಿಯಲ್ಲಿ execshield ಪರೀಶೀಲನೆಯನ್ನು ನಡೆಸುವಾಗ ಒಂದು ನ್ಯೂನತೆ ಕಂಡುಬರುತ್ತಿತ್ತು. ಈ ಅಪ್‌ಡೇಟ್‌ನಲ್ಲಿ ಇದನ್ನು ಸರಿಪಡಿಸಲಾಗಿದೆ.

5.2.3. ia64 ಆರ್ಕಿಟೆಕ್ಚರುಗಳು

  • ಒಂದು ಅನುಸ್ಥಾಪನಾ ವಿಫತೆಗೆ ಕಾರಣವಾಗುತ್ತಿದ್ದಂತಹ xend ದೋಷವನ್ನು ಈಗ ನಿವಾರಿಸಲಾಗಿದೆ.

  • evtchn ಸನ್ನಿವೇಶ ಮಾರ್ಗ ಸಾಧನದಲ್ಲಿ ಲಾಕ್‌ಗಳ ಹಾಗು ಮೆಮೊರಿ ತಡೆಗಳ ಕೊರತೆ ಇತ್ತು. ಇದರಿಂದಾಗಿ xenstore ಪ್ರತಿಸ್ಪಂದಿಸುತ್ತಿರಲಿಲ್ಲ. ಈ ಅಪ್‌ಡೇಟ್‌ನಲ್ಲಿ ಇದನ್ನು ಪರಿಹರಿಸಲಾಗಿದೆ.

  • Non-Uniform Memory Access (NUMA) ಮಾಹಿತಿಯನ್ನು xm info ಆಜ್ಞೆಯಿಂದ ತೋರಿಸಲು ಸಾಧ್ಯವಾಗುತ್ತಿರಲಿಲ್ಲ. ಪರಿಣಾಮವಾಗಿ, ಪ್ರತಿ ನೋಡ್‌ನ node_to_cpu ಮೌಲ್ಯವು ತಪ್ಪಾಗಿ no cpus ಎಂದು ಸಂದೇಶವನ್ನು ಮರಳಿಸುತ್ತಿತ್ತು. ಈ ಅಪ್‌ಡೇಟ್‌ನಲ್ಲಿ ಅದನ್ನು ಪರಿಹರಿಸಲಾಗಿದೆ.

  • ಈ ಮೊದಲು, ಒಂದು Hardware Virtual Machine (HVM) ನ ಮೇಲೆ ಅತಿಥಿಯನ್ನು ನಿರ್ಮಿಸಿದಾಗ ಅವು VT-i2 ತಂತ್ರಜ್ಞಾನವನ್ನು ಒಳಗೊಂಡಿರುವ ಸಂಸ್ಕಾರಕಗಳ ಮೇಲೆ ವಿಫಲಗೊಳ್ಳುತ್ತಿತ್ತು. ಈ ಅಪ್‌ಡೇಟ್‌ನಲ್ಲಿ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ.

5.2.4. x86_64 ಆರ್ಕಿಟೆಕ್ಚರುಗಳು

  • ಅತಿಥಿ ವರ್ಚುವಲ್ ಗಣಕಕ್ಕಾಗಿ ಲಭ್ಯವಿರುವ ಡೈನಮಿಕ್ IRQ ಗಳು ಖಾಲಿಯಾದಾಗ, dom0 ಕರ್ನಲ್ ಕುಸಿತಗೊಳ್ಳುತ್ತದೆ. ಈ ಅಪ್‌ಡೇಟ್‌ನಲ್ಲಿ, ಕುಸಿತದ ಸ್ಥಿತಿಯನ್ನು ಪರಿಹರಿಸಲಾಗಿದೆ, ಹಾಗು ಲಭ್ಯವಿರುವ IRQ ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಇದರಿಂದಾಗಿ ಈ ಸಮಸ್ಯೆಯು ನಿವಾರಣೆಗೊಳ್ಳುತ್ತದೆ.

  • ಹೊಸತಾದ CPU ಇರುವ ಗಣಕಗಳಲ್ಲಿ, CPU APIC ID ಯು CPU ID ಗಿಂತ ಭಿನ್ನವಾಗಿರುತ್ತದೆ. ಪರಿಣಾಮವಾಗಿ, CPU ಫ್ರೀಕ್ವೆನ್ಸಿ ಸ್ಕೇಲಿಂಗ್ ಅನ್ನು ವರ್ಚುವಲೈಸ್ ಆದಂತಹ ಕರ್ನಲ್‌ನಿಂದ ಆರಂಭಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಅಪ್‌ಡೇಟ್‌ನಲ್ಲಿ, ವರ್ಚುವಲೈಸ್ ಆದಂತಹ ಕರ್ನಲ್ ಹೈಪರ್ವೈಸರಿನಿಂದ CPU APIC ID ಅನ್ನು ಪಡೆದುಕೊಳ್ಳಲಿದ್ದು, ಇದರಿಂದಾಗಿ CPU ಫ್ರೀಕ್ವೆನ್ಸಿ ಸ್ಕೇಲಿಂಗ್ ಸರಿಯಾಗಿ ಆರಂಭಗೊಳ್ಳುತ್ತದೆ.

5.3. ಗೊತ್ತಿರುವ ತೊಂದರೆಗಳು

5.3.1. ಎಲ್ಲಾ ಆರ್ಕಿಟೆಕ್ಚರುಗಳು

  • ವರ್ಚುವಲೈಸ್ ಮಾಡಲಾದಂತಹ ಕರ್ನಲ್ ಅನ್ನು ಬಳಸುವಾಗ ಡಿಸ್ಕೆಟ್ ಡ್ರೈವ್ ಮಾಧ್ಯಮವು ನಿಲುಕಿಸಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಪರಿಹರಿಸಲು ಇನ್ನೊಂದು ಉಪಾಯವೆಂದರೆ, ಬದಲಾಗಿ ಒಂದು USB-ಜೋಡಿಸಲಾದ ಡಿಸ್ಕೆಟ್ ಡ್ರೈವ್ ಅನ್ನು ಬಳಸಿ.

    ಡಿಸ್ಕೆಟ್ ಡ್ರೈವ್ ಮಾಧ್ಯಮವು ವರ್ಚುವಲೈಸ್ ಮಾಡಲಾಗಿರದ ಕರ್ನಲ್‌ನೊಂದಿಗೆ ಸರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ನೆನಪಿಡಿ.

  • ಪ್ಯಾರಾವರ್ಚುವಲ್ ಆದಂತಹ ಅತಿಥಿಗಳ ಜೀವಂತ(ಲೈವ್) ವರ್ಗಾವಣೆಯಲ್ಲಿ, ಅದಕ್ಕೆ ಸೂಕ್ತವಾದ ಅತಿಥೇಯಗಳ (dom0) ಸಮಯಗಳನ್ನು ಸರಿಯಾಗಿ ಹೊಂದಿಸದೆ ಹೋದಲ್ಲಿ ಸಮಯ ಆಧರಿತವಾದ ಅತಿಥಿ ಪ್ರಕ್ರಿಯೆಗಳು ಅಸಮರ್ಪಕವಾಗಿ ಕೆಲಸ ಮಾಡಬಹುದು. ಎಲ್ಲಾ ಸಂಬಂಧಿತ ಅತಿಥೇಯವನ್ನು ವರ್ಗಾಯಿಸುವ ಮೊದಲು ವ್ಯವಸ್ಥೆಯ ಸಮಯವನ್ನು ಹೊಂದಿಸಲು NTP ಅನ್ನು ಬಳಸಿ.

  • ಎರಡು ಅತಿಥೇಯಗಳ ನಡುವಿನ ಅತಿಥಿಯ ಪುನರಾವರ್ತಿತ ವಲಸೆಯು ಒಂದು ಅತಿಥೇಯವು ದಿಗಿಲುಗೊಳ್ಳುವ(ಪ್ಯಾನಿಕ್) ಸಾದ್ಕ್ಯತೆ ಇರುತ್ತದೆ. ಒಂದು ಅತಿಥಿಯನ್ನು ವಲಸೆ ಮಾಡಿದ ನಂತರ ಹಾಗು ಮೊದಲು ಅತಿಥೇಯವನ್ನು ಪುನಃ ಬೂಟ್ ಮಾಡಿದಲ್ಲಿ ದಿಗಿಲನ್ನು ತಪ್ಪಿಸಬಹುದಾಗಿದೆ.

  • Windows 2008 ಅಥವ Windows Vista ಅನ್ನು ಒಂದು ಅತಿಥಿಯಾಗಿ ಚಲಾಯಿಸುವ ಸಂದರ್ಭದಲ್ಲಿ, ಒಂದು ಡಿಸ್ಕನ್ನು ಫಾರ್ಮಾಟ್‌ಗೊಳಿಸಿದಾಗ ಅತಿಥಿಯನ್ನು ಅನೇಕ CPU ಗಳೊಂದಿಗೆ ಬೂಟ್ ಮಾಡುವ ಸಂದರ್ಭದಲ್ಲಿ ಅದು ಕುಸಿತಗೊಳ್ಳಬಹುದು. ಇದನ್ನು ಪರಿಹರಿಸುವ ಉಪಾಯವೆಂದರೆ, ಫಾರ್ಮಾಟ್‌ ಮಾಡುವಾಗ ಕೇವಲ ಒಂದು ವರ್ಚುವಲ್ CPU ಯೊಂದಿಗೆ ಬೂಟ್ ಮಾಡಿ.

  • virt-manager ಅನ್ನು ಬಳಸಿಕೊಂಡು ರಚಿಸಲಾದ ಸಂಪೂರ್ಣವಾಗಿ ವರ್ಚುವಲೈಸ್ ಆದಂತಹ ಅತಿಥಿಗಳು ಕೆಲವೊಮ್ಮೆ ತೆರೆಸೂಚಕವನ್ನು ತೆರೆಯ ಮೇಲೆ ಮುಕ್ತವಾಗಿ ಅಡ್ಡಾಡಲು ತಡೆಯೊಡ್ಡಬಹುದು. ಇದನ್ನು ಪರಿಹರಿಸಲು ಒಂದು ಉಪಾಯವೆಂದರೆ, ಅತಿಥಿಗಾಗಿ USB ಟ್ಯಾಬ್ಲೆಟ್ ಸಾಧನವನ್ನು ಸಂರಚಿಸಲುvirt-manager ಅನ್ನು ಬಳಸಿ.

  • ಒಂದು 128 ಅಥವ ಹೆಚ್ಚಿನ CPU ವ್ಯವಸ್ಥೆಯಲ್ಲಿ CPU ಗಳ ಗರಿಷ್ಟ ಸಂಖ್ಯೆಯನ್ನು 128 ಕ್ಕಿಂತ ಕಡಿಮೆಗೆ ಮಿತಿಗೊಳಿಸಬೇಕು. ಪ್ರಸಕ್ತ ಬೆಂಬಲವಿರುವ ಗರಿಷ್ಟವು 126 ಮಾತ್ರ. ಹೈಪರ್ವೈಸರ್ ಅನ್ನು 126 ಕ್ಕೆ ಮಿತಿಗೊಳಿಸಲು maxcpus=126 ಹೈಪರ್ವೈಸರ್ ಆರ್ಗುಮೆಂಟ್ ಅನ್ನು ಬಳಸಿ

  • ಡೊಮೈನ್ ಅನ್ನು ವಿರಮಿಸುವ ಹಾಗು ವಿರಮಿಸದೆ ಇರುವ ನಡುವೆ ಕಳೆದು ಹೋಗುವ ಸಮಯವನ್ನು ಸಂಪೂರ್ಣ ವರ್ಚುವಲೈಸ್ ಮಾಡಲಾದಂತಹ ಅತಿಥಿಗಳು ಸರಿಪಡಿಸಲು ಸಾಧ್ಯವಿರುವುದಿಲ್ಲ. ವಿರಮಿಸುವ ಹಾಗು ವಿರಮಿಸದೆ ಇರುವಿಕೆಗಳ ನಡುವಿನ ಸಮಯದ ಜಾಡನ್ನು ಸರಿಯಾಗಿ ಇರಿಸುವುದು ಪ್ಯಾರಾವರ್ಚುವಲೈಸ್ ಆದಂತಹ ಕರ್ನಲ್‌ಗಳಲ್ಲಿನ ಒಂದು ಸವಲತ್ತಾಗಿದೆ. ಈ ಸಮಸ್ಯೆಯ ಪರಿಹಾರವಾಗಿ ಅಪ್‌ಸ್ಟ್ರೀಮ್‌ನಿಂದ ಬದಲಾಯಿಸಬಹುದಾದಂತಹ ಟೈಮರನ್ನು ಬಳಸಲಾಗುತ್ತಿದೆ, ಆದ್ದರಿಂದ ಸಂಪೂರ್ಣ ವರ್ಚುವಲೈಸ್ ಮಾಡಲಾದಂತಹ ಅತಿಥಿಗಳು ಪ್ಯಾರಾವರ್ಚುವಲೈಸ್ ಮಾಡಲಾದಂತಹ ಟೈಮರುಗಳನ್ನು ಹೊಂದಿರುತ್ತದೆ. ಪ್ರಸಕ್ತ, ಈ ಸಂಜ್ಞೆಯು ವಿಕಸನೆಯಲ್ಲಿದೆ ಹಾಗು ಇದು Red Hat Enterprise Linux ನ ಮುಂದಿನ ಆವೃತ್ತಿಗಳಲ್ಲಿ ಲಭ್ಯವಿರುತ್ತದೆ.

  • ಪ್ಯಾರಾವರ್ಚುವಲ್ ಅತಿಥಿಗಳನ್ನು ಪುನರಾವರ್ತಿತವಾಗಿ ವರ್ಗಾಯಿಸುವುದರಿಂದ dom0 ಕನ್ಸೋಲ್‌ನಲ್ಲಿ bad mpa ಸಂದೇಶಗಳಿಗೆ ಕಾರಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಹೈಪರ್ವೈಸರ್ ಪ್ಯಾನಿಕ್ ಸಹ ಆಗಬಲ್ಲದು.

    ಹೈಪರ್ವೈಸರ್ ಕರ್ನಲ್ ಪ್ಯಾನಿಕ್ ಅನ್ನು ತಪ್ಪಿಸಲು, bad mpa ಸಂದೇಶವು ಕಾಣಿಸಿಕೊಂಡಾಗ ವರ್ಗಾಯಿಸಲಾದ ಅತಿಥಿಗಳನ್ನು ಮರಳಿ ಆರಂಭಿಸಿ.

  • dom0 ಮೇಲೆ ಸಂಪರ್ಕಸಾಧನ ಬಂಧವನ್ನು ಹೊಂದಿಸುವಾಗ, ಡೀಫಾಲ್ಟ್‍ network-bridge ಸ್ಕ್ರಿಪ್ಟಿನ ಕಾರಣದಿಂದಾಗಿ ಜೋಡಿಸಲಾದ ಜಾಲಬಂಧ ಸಂಪರ್ಕಸಾಧನಗಳು ಪರ್ಯಾಯವಾಗಿ unavailable ಹಾಗು available ನಡುವೆ ಬದಲಾಗುತ್ತದೆ. ಹೀಗೆ ಆಗುವುದನ್ನು ಸಾಮಾನ್ಯವಾಗಿ ಫ್ಲಾಪಿಂಗ್ ಎಂದು ಕರೆಯುತ್ತಾರೆ.

    ಇದನ್ನು ತಪ್ಪಿಸಲು, /etc/xen/xend-config.sxp ಯಲ್ಲಿನ ಮಾನ್ಯವಾದಂತಹ network-script ಸಾಲನ್ನು ಈ ಕೆಳಗಿನ ಸಾಲಿನಿಂದ ಬದಲಾಯಿಸಿ:

    (network-script network-bridge-bonding netdev=bond0)

    ಹಾಗೆ ಮಾಡುವುದರಿಂದ netloop ಸಾಧನವನ್ನು ಅಶಕ್ತಗೊಳಿಸಲಿದ್ದು, ಇದು Address Resolution Protocol (ARP) ಮೇಲ್ವಿಚಾರಕವು ವಿಳಾಸ ವರ್ಗಾವಣೆ ಪ್ರಕ್ರಿಯೆಯ ಸಂದರ್ಭದಲ್ಲಿ ವಿಫಲಗೊಳ್ಳದಂತೆ ತಡೆಯುತ್ತದೆ.

  • ಅನೇಕ ಅತಿಥಿ ಡೊಮೈನುಗಳನ್ನು ಚಲಾಯಿಸುವಾಗ, ಅತಿಥಿ ಜಾಲಬಂಧವು ತಾತ್ಕಾಲಿಕವಾಗಿ ಕೆಲಸ ಮಾಡದೆ ಇರಬಹುದು, ಹಾಗು ಅದರಿಂದ dom0 ದಾಖಲೆಯಲ್ಲಿ ಈ ಕೆಳಗಿನ ದೋಷವು ವರದಿಯಾಗಬಹುದು:

    Memory squeeze in netback driver
    ಇದನ್ನು ಪರಿಹರಿಸುವ ಉಪಾಯವೆಂದರೆ, dom0 ಗೆ ಲಭ್ಯವಿರುವ ಮೆಮೊರಿಯನ್ನು dom0_mem ಹೈಪರ್ವೈಸರ್ ಆಜ್ಞಾ ಸಾಲಿನ ಆಯ್ಕೆಯಲ್ಲಿ ಹೆಚ್ಚಿಸಿ.

5.3.2. x86 ಆರ್ಕಿಟೆಕ್ಚರುಗಳು

  • ಪ್ಯಾರಾವಾಸ್ತವೀಕರಣ ಅತಿಥಿಗಳನ್ನು xm migrate [domain] [dom0 IP address] ಮೂಲಕ ವರ್ಗಾಯಿಸುವುದು ಕೆಲಸ ಮಾಡುವುದಿಲ್ಲ.

  • Red Hat Enterprise Linux 5 ಅನ್ನು ಒಂದು ಸಂಪೂರ್ಣ ವಾಸ್ತವೀಕರಣಗೊಂಡ SMP ಅತಿಥಿಯ ಮೇಲೆ ಅನುಸ್ಥಾಪಿಸುವಾಗ, ಅನುಸ್ಥಾಪನೆಯು ನಿಂತು ಬಿಡಬಹುದು. ಅತಿಥೇಯವು (dom0) Red Hat Enterprise Linux5.2 ಅನ್ನು ಚಲಾಯಿಸುತ್ತಿದ್ದಲ್ಲಿ ಇದು ಸಂಭವಿಸುವ ಸಾಧ್ಯತೆ ಇದೆ.

    ಇದನ್ನು ತಡೆಯಲು, ಅನುಸ್ಥಾಪನೆಯನ್ನು ಬಳಸುತ್ತಿರುವ ಒಂದು ಏಕ ಸಂಸ್ಕಾರಕವನ್ನು ಬಳಸುವಂತೆ ಅತಿಥಿಯನ್ನು ಹೊಂದಿಸಿ.ಹೀಗೆ ಮಾಡಲು ನೀವು --vcpus=1 ಆಯ್ಕೆಯನ್ನು virt-install ನಲ್ಲಿ ಬಳಸಬಹುದು. ಒಮ್ಮೆ ಅನುಸ್ಥಾಪನೆಯು ಪೂರ್ಣಗೊಂಡಿತೆಂದರೆ, virt-manager ನಲ್ಲಿ ನಿಯೋಜಿತವಾದ vcpus ಅನ್ನು ಮಾರ್ಪಡಿಸುವ ಮೂಲಕ ನೀವು ಅತಿಥಿಯನ್ನು SMP ಗೆ ಹೊಂದಿಸಬಹುದಾಗಿದೆ.

5.3.3. x86_64 ಆರ್ಕಿಟೆಕ್ಚರುಗಳು

  • ಪ್ಯಾರಾವಾಸ್ತವೀಕರಣ ಅತಿಥಿಗಳನ್ನು xm migrate [domain] [dom0 IP address] ಮೂಲಕ ವರ್ಗಾಯಿಸುವುದು ಕೆಲಸ ಮಾಡುವುದಿಲ್ಲ.

  • ಮಾದರಿ ಸಂಖ್ಯೆ xw9300 ಮತ್ತು xw9400 ಹೊಂದಿದ ಎಚ್ ಪಿ ಗಣಕಗಳಲ್ಲಿ ವಾಸ್ತವೀಕರಣ ಘಟಕವನ್ನು ಅನುಸ್ಥಾಪಿಸುವುದರಿಂದ ಒಂದು time went backwards ಎಚ್ಚರಿಕೆ ನೀಡಿಕೆಗೆ ಕಾರಣವಾಗುತ್ತದೆ.

    ಅxw9400 ಗಣಕಗಳಿಗೆ ಇದರೊಂದಿಗೆ ಕೆಲಸ ಮಾಡಲು, HPET ಟೈಮರಿಗೆ ಶಕ್ತಗೊಳಿಸಲು BIOS ಹೊಂದಾಣಿಕೆಗಳನ್ನು ಸ್ವರೂಪಿಸಿ .ಈ ಆಯ್ಕೆಯು xw9300 ಗಣಕಗಳಲ್ಲಿ ಲಭ್ಯವಿರುವುದಿಲ್ಲ ಎಂಬುದನ್ನು ಗಮನಿಸಿ.

  • Red Hat Enterprise Linux 3.9 ಅನ್ನು ಒಂದು ಸಂಪೂರ್ಣ ವರ್ಚುವಲೈಸ್ ಆದಂತಹ ಅತಿಥಿಯಲ್ಲಿ ಅನುಸ್ಥಾಪಿಸುವ ಪ್ರಕ್ರಿಯೆ ಬಹಳ ನಿಧಾನಗತಿಯದ್ದಾಗಿರಬಹುದು. ಇದರ ಜೊತೆಗೆ, ಅನುಸ್ಥಾಪನೆಯ ನಂತರ ಅತಿಥಿಯನ್ನು ಬೂಟ್ ಮಾಡುವುದು hda: lost interrupt ದೋಷಗಳಿಗೆ ಕಾರಣವಾಗಬಹುದು.

    ಈ ಬೂಟ್ ಅಪ್ ದೋಷವನ್ನು ತಪ್ಪಿಸಲು, SMP ಕರ್ನಲನ್ನು ಬಳಸುವಂತೆ ಅತಿಥಿಯನ್ನು ಸಂರಚಿಸಿ.

  • ಒಂದು ಅತಿಥೇಯ (dom0) ಗಣಕವನ್ನು Red Hat Enterprise Linux 5.2 ಗೆ ನವೀಕರಿಸುವುದರಿಂದ ಪ್ರಸ್ತುತ ಇರುವ Red Hat Enterprise Linux 4.5 SMP ಪ್ಯಾರಾ-ವರ್ಚುವಲೈಸ್ ಆದಂತಹ ಅತಿಥಿಗಳನ್ನು ಬೂಟ್ ಆಗದಂತೆ ಮಾಡುತ್ತದೆ. ಅತಿಥೇಯ ಗಣಕದಲ್ಲಿ 4 GB ಯಷ್ಟು RAM ಗಿಂತ ಹೆಚ್ಚಿದ್ದಾಗ ಇದು ಸಂಭವಿಸುವ ಸಾಧ್ಯತೆಯು ಹೆಚ್ಚಿರುತ್ತದೆ.

    ಇದರೊಂದಿಗೆ ಕೆಲಸ ಮಾಡಲು, ಪ್ರತಿ Red Hat Enterprise Linux 4.5 ಅತಿಥಿಯನ್ನು ಏಕ CPU ಕ್ರಮದಲ್ಲಿ ಹಾಗು ಅದರ ಕರ್ನಲನ್ನು ಇತ್ತೀಚಿನ ಆವೃತ್ತಿಗೆ (Red Hat Enterprise Linux 4.5.z) ಅಪ್‍ಡೇಟ್‍ ಮಾಡಿ.

5.3.4. ia64 ಆರ್ಕಿಟೆಕ್ಚರುಗಳು

  • ಪ್ಯಾರಾವಾಸ್ತವೀಕರಣ ಅತಿಥಿಗಳನ್ನು xm migrate [domain] [dom0 IP address] ಮೂಲಕ ವರ್ಗಾಯಿಸುವುದು ಕೆಲಸ ಮಾಡುವುದಿಲ್ಲ.

  • ಕನ್ಸೋಲ್ ಆದಾನವನ್ನು VGA ಗಾಗಿ ಸಂರಚಿತವಾದ ಕೆಲವೊಂದು Itanium ಗಣಕಗಳಲ್ಲಿ,dom0 ವಾಸ್ತವೀಕೃತಗೊಂಡ ಕರ್ನಲ್ಲುಗಳು ಬೂಟ್ ಆಗುವಲ್ಲಿ ವಿಫಲಗೊಳ್ಳಬಹುದು.ಇದು ಏಕೆಂದರೆ, ವಾಸ್ತವೀಕೃತಗೊಂಡ ಕರ್ನಲ್ಲುಗಳು Extensible Firmware Interface (EFI) ಸಂಯೋಜನೆಗಳಿಂದ ಪೂರ್ವನಿಯೋಜಿತ ಕನ್ಸೋಲ್ ಸಾಧನವನ್ನು ಸರಿಯಾಗಿ ಪತ್ತೆಹಚ್ಚುವಲ್ಲಿ ವಿಫಲವಾಗುತ್ತವೆ.

    ಇದು ಸಂಭವಿಸಿದಾಗ, ಬೂಟ್ ನಿಯತಾಂಕ console=tty ಅನ್ನು ಕರ್ನಲ್ ಬೂಟ್ ಆಯ್ಕೆಯಲ್ಲಿನ /boot/efi/elilo.conf ಗೆ ಸೇರಿಸಿ.

  • ಕೆಲವು Itanium ಗಣಕಗಳಲ್ಲಿ (Hitachi Cold Fusion 3e ನಂತವುಗಳು),EFI ನಿರ್ವಹಣಾ ವ್ಯವಸ್ಥಾಪಕದಿಂದ VGA ಯು ಶಕ್ತಗೊಂಡಿದ್ದಾಗ ಅನುಕ್ರಮಿತ ಸಂಪರ್ಕಸ್ಥಾನಗಳುdom0 ನಲ್ಲಿ ಪತ್ತೆ ಮಾಡಲಾಗುವುದಿಲ್ಲ. ಇದಲ್ಲದೆ, ನೀವು ಈಕೆಳಗಿನ ಅನುಕ್ರಮ ಸಂಪರ್ಕಸಾಧನ ಮಾಹಿತಿಯನ್ನು dom0 ಕರ್ನಲ್‍ಗೆ ಒದಗಿಸಬೇಕು:

    • ವೇಗ ಬಿಟ್ಸ್‍/ಸೆಕೆಂಡ್‍ನಲ್ಲಿ

    • ದತ್ತಾಂಶ ಬಿಟ್‍ಗಳ ಸಂಖ್ಯೆ

    • ಪ್ಯಾರಿಟಿ

    • io_base ವಿಳಾಸ

    ಈ ವಿವರಗಳನ್ನು /boot/efi/elilo.conf ನಲ್ಲಿನ dom0 ಕರ್ನಲ್‍ನ append= ಸಾಲಿನಲ್ಲಿ ಸೂಚಿಸಬೇಕು. ಉದಾಹರಣೆಗಾಗಿ:

    append="com1=19200,8n1,0x3f8 -- quiet rhgb console=tty0 console=ttyS0,19200n8"

    ಈ ಉದಾಹರಣೆಯಲ್ಲಿ, com1 ಯು ಅನುಕ್ರಮಿತ ಸಂಪರ್ಕಸ್ಥಾನವಾಗಿದೆ, 19200 ಯು ವೇಗವಾಗಿದೆ (ಬಿಟ್‍ಸ್/ಸೆಕೆಂಡ್), 8n1 ದತ್ತಾಂಶ ಬಿಟ್ಸ್/ಪ್ಯಾರಿಟಿ ಸಂಯೋಜನೆಗಳ ಸಂಖ್ಯೆಯನ್ನು, ಸೂಚಿಸುತ್ತದೆ, ಹಾಗು 0x3f8 ಯು io_base ವಿಳಾಸವಾಗಿರುತ್ತದೆ.

  • (NUMA) ಅನ್ನು ಬಳಸುವ ಅರ್ಕಿಟೆಕ್ಚರುಗಳಲ್ಲಿ ವಾಸ್ತವೀಕರಣವು ಕೆಲಸ ಮಾಡುವುದಿಲ್ಲ. ಅಷ್ಟೆ ಅಲ್ಲದೆ, NUMA ಬಳಸುವ ಗಣಕದಲ್ಲಿ ವಾಸ್ತವೀಕರಣಗೊಂಡ ಕರ್ನಲ್‍ಗಳನ್ನು ಅನುಸ್ಥಾಪಿಸಿದಲ್ಲಿ ಬೂಟ್ ವಿಫಲತೆಗೆ ಕಾರಣವಾಗುತ್ತದೆ.

    ಕೆಲವೊಂದು ಅನುಸ್ಥಾಪನಾ ಸಂಖ್ಯೆಗಳು ಡೀಫಾಲ್ಟ್‍ ಆಗಿ ವಾಸ್ತವೀಕರಣಗೊಂಡ ಕರ್ನಲ್‍ ಅನ್ನು ಅನುಸ್ಥಾಪಿಸುತ್ತವೆ. ನಿಮ್ಮಲ್ಲಿ ಅಂತಹ ಅನುಸ್ಥಾಪನಾ ಸಂಖ್ಯೆ ಇದ್ದು ಹಾಗು ನಿಮ್ಮ ಗಣಕವು NUMA ಅನ್ನು ಬಳಸುತ್ತಿದ್ದಲ್ಲಿ ಮತ್ತು kernel-xen ನೊಂದಿಗೆ ಸರಿಯಾಗಿ ಕೆಲಸ ಮಾಡದೆ ಇದ್ದ ಪಕ್ಷದಲ್ಲಿ, ಅನುಸ್ಥಾಪನೆಯ ಸಮಯದಲ್ಲಿ ವಾಸ್ತವೀಕರಣ ಆಯ್ಕೆಯನ್ನು ಆರಿಸಬೇಡಿ.

  • ಪ್ರಸ್ತುತ, ಸಂಪೂರ್ಣ ವಾಸ್ತವೀಕರಣಗೊಂಡ ಅತಿಥಿಗಳ ಲೈವ್ ವರ್ಗಾವಣೆಯನ್ನು ಈ ಆರ್ಕಿಟೆಕ್ಚರಿನಲ್ಲಿ ಬೆಂಬಲಿಸುವುದಿಲ್ಲ. ಇದರ ಜೊತೆಗೆ, kexec ಹಾಗು kdump ವನ್ನೂ ಸಹ ಈ ಅರ್ಕಿಟೆಕ್ಚರಿನಲ್ಲಿ ವಾಸ್ತವೀಕರಣವನ್ನು ಬೆಂಬಲಿಸುವುದಿಲ್ಲ.

6. ತಾಂತ್ರಿಕ ಮುನ್ನೋಟಗಳು

ಪ್ರಸ್ತುತ Red Hat Enterprise Linux ಚಂದಾ ಸೇವೆಗಳಲ್ಲಿ ತಂತ್ರಜ್ಞಾನದ ಪೂರ್ವಾವಲೋಕನ ಸ್ವರೂಪಕ್ಕೆ ಬೆಂಬಲ ಇಲ್ಲ, ಸಂಪೂರ್ಣವಾಗಿ ಕಾರ್ಯತತ್ಪರವಾಗಿಲ್ಲದಿರಬಹುದು, ಮತ್ತು ಸಾಮಾನ್ಯವಾಗಿ ಉತ್ಪಾದನೆಯಲ್ಲಿ ಉಪಯೋಗಿಸಲು ತಕ್ಕದಾದುದಲ್ಲ. ಆದರೆ, ಈ ಸ್ವರೂಪಗಳನ್ನು ಗ್ರಾಹಕರ ಅನುಕೂಲಕ್ಕನುಗುಣವಾಗಿ ಮತ್ತು ಸ್ವರೂಪವನ್ನು ಹೆಚ್ಚಿನ ಬೆಳಕಿಗೆ ತರಲು ಸೇರಿಸಿಕೊಳ್ಳಬಹುದು.

ಗ್ರಾಹಕರಿಗೆ ಈ ಸ್ವರೂಪವನ್ನು ಉತ್ಪಾದನೆಯಲ್ಲದೆ ವಾತಾವರಣದಲ್ಲಿ ಬಳಸಲು ಯೋಗ್ಯವೆನಿಸಬಹುದು. ತಂತ್ರಜ್ಞಾನ ಪೂರ್ವಾವಲೋಕನ ಸವಲತ್ತು ಸಂಪೂರ್ಣವಾಗಿ ಬೆಂಬಲಿತವಾಗುವು ಮೊದಲು ಗ್ರಾಹಕರು ಅದರ ಬಗೆಗಿನ ತಮ್ಮ ಪ್ರತ್ಯಾದಾನ(feedback) ಮತ್ತು ಕಾರ್ಯಮುಖಗೊಳಿಸುವೆಡೆಗಿನ ಸಲಹೆಗಳನ್ನು ನೀಡಬಹುದು. ಮುದ್ರಣ ದೋಷ ಪಟ್ಟಿಗಳನ್ನು ಅತ್ಯಧಿಕ ತೀವ್ರಮಟ್ಟದ ಭದ್ರತಾ ವಿಷಯಗಳಿಗೆ ನೀಡಲಾಗುತ್ತದೆ.

ತಂತ್ರಜ್ಞಾನ ಪೂರ್ವಾವಲೋಕನವನ್ನು ಅಭಿವೃದ್ಧಿಪಡಿಸುವಾಗ, ಹೆಚ್ಚುವರಿ ಘಟಕಗಳು ಸಾರ್ವಜನಿಕರಿಗೆ ಪರೀಕ್ಷಿಸಲು ಲಭ್ಯವಾಗಬಹುದು. ಮುಂದಿನ ಬಿಡುಗಡೆಯಲ್ಲಿ ತಂತ್ರಜ್ಞಾನ ಪೂರ್ವಾವಲೋಕನ ಸ್ವರೂಪಗಳಿಗೆ ಸಂಪೂರ್ಣವಾಗಿ ಬೆಂಬಲ ನೀಡುವುದು Red Hat ನ ಉದ್ದೇಶ.

EMC Clariion ನಲ್ಲಿನ ALUA ಕ್ರಮ

dm-multipath ಅನ್ನು ಬಳಸಿಕೊಳ್ಳುವ ನಿಸ್ಸಂದೇಹ ಸಕ್ರಿಯ-ಸಕ್ರಿಯ ವಿಫಲಹೋಗುವಿಕೆಯು (ALUA) EMC Clariion ಶೇಖರಣೆಯಲ್ಲಿ ಬೆಂಬಲಿತವಾಗಿದೆ. ಈ ಕ್ರಮವು ಈಗ T10 ವಿಶಿಷ್ಟ ವಿವರಣೆಗಳ ಆಧಾರದಲ್ಲಿ ಒದಗಿಸಲಾಗಿದೆ, ಅದರೆ ಈ ಬಿಡುಗಡಯೆಲ್ಲಿ ಇದು ಒಂದು ತಂತ್ರಜ್ಞಾನ ಮುನ್ನೋಟವಾಗಿ ಸೇರ್ಪಡಿಸಲಾಗಿದೆ.

T10 ಬಗೆಗಿನ ಹೆಚ್ಚಿನ ಮಾಹಿತಿಗಾಗಿ http://www.t10.org ಅನ್ನು ನೋಡಿ.

ext4

ext ಕಡತವ್ಯವಸ್ಥೆಯ ಇತ್ತೀಚಿನ ಪೀಳಿಗೆಯಾದಂತಹ ext4 ಯನ್ನು ಈ ಬಿಡುಗಡೆಯಲ್ಲಿ ಒಂದು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದೆ. Ext4 ಯು ext3 ಕಡತ ವ್ಯವಸ್ಥೆಯಲ್ಲಿನ ಒಂದು ಹಂತ ಮುಂದಿನ ಬೆಳವಣಿಗೆಯಾಗಿದ್ದು, Red Hat ಹಾಗು Linux ಸಮುದಾಯದಿಂದ ವಿಕಸಿಸಲ್ಪಟ್ಟಿದೆ. ತಂತ್ರಜ್ಞಾನ ಮುನ್ನೋಟವಾದಂತಹ ಈ ಕಡತ ವ್ಯವಸ್ಥೆಯ ಬಿಡುಗಡೆಯ ಹೆಸರು ext4dev ಎಂದಾಗಿರುತ್ತದೆ.

ext4dev.ko ಕರ್ನಲ್ ಘಟಕದಿಂದ ಹಾಗು ಒಂದು ಹೊಸತಾದ e4fsprogs ಪ್ಯಾಕೇಜಿನಿಂದ ಒದಗಿಸಲಾದಂತಹ ಕಡತ ವ್ಯವಸ್ಥೆಯು ext4 ಯೊಂದಿಗೆ ಬಳಸಲು ಪ್ರಚಲಿತ e2fsprogs ನಿರ್ವಹಣಾ ಉಪಕರಣಗಳ ಅಪ್‌ಡೇಟ್ ಆದಂತಹ ಆವೃತ್ತಿಗಳನ್ನು ಹೊಂದಿದೆ. ಬಳಸಲು, e4fsprogs ಅನ್ನು ಅನುಸ್ಥಾಪಿಸಿ ನಂತರ ಒಂದು ext4-ಬೇಸ್ ಕಡತ ವ್ಯವಸ್ಥೆಯನ್ನು ರಚಿಸಲು e4fsprogs ಪ್ರೊಗ್ರಾಂನಿಂದ mkfs.ext4dev ನಂತಹ ಆಜ್ಞೆಗಳನ್ನು ಬಳಸಿ. ಆರೋಹಣಾ ಆಜ್ಞಾಸಾಲಿನಲ್ಲಿ ಅಥವ fstab ಕಡತಕ್ಕೆ ಕಡತವ್ಯವಸ್ಥೆಯನ್ನು ಉಲ್ಲೇಖಿಸುವಾಗ, ಕಡತವ್ಯವಸ್ಥೆಯ ಹೆಸರಾದಂತಹ ext4dev ಅನ್ನು ಬಳಸಿ.

FreeIPMI

FreeIPMI ಅನ್ನು ಈ ಬಿಡುಗಡೆಯಲ್ಲಿ ಒಂದು ತಂತ್ರಾಜ್ಞಾನ ಮುನ್ನೋಟವಾಗಿ ಸೇರ್ಪಡಿಸಲಾಗಿದೆ. FreeIPMI ಯು ಒಂದು ಇಂಟೆಲಿಜೆಂಟ್ ಪ್ಲಾಟ್‍ಫಾರ್ಮ್ ಮ್ಯಾನೇಜ್‍ಮೆಂಟ್ IPMI ವ್ಯವಸ್ಥಾ ತಂತ್ರಾಂಶಗಳ ಸಂಗ್ರಹವಾಗಿದೆ. ಇದು ಇಂಟೆಲಿಜೆಂಟ್ ಮ್ಯಾನೇಜ್‍ಮೆಂಟ್ ಇಂಟರ್ಫೇಸ್(IPMI v1.5 and v2.0) ಸ್ಟಾಂಡರ್ಡ್ಸಿಗೆ ಅನುರೂಪವಾಗಿರುವ ಒಂದು ವಿಕಸನಾ ಲೈಬ್ರರಿಯೊಂದಿಗೆ ಇನ್-ಬ್ಯಾಂಡ್ ಹಾಗು ಔಟ್-ಆಫ್-ಬ್ಯಾಂಡ್ ತಂತ್ರಾಂಶಗಳನ್ನು ಒದಗಿಸುತ್ತದೆ.

FreeIPMI ನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, http://www.gnu.org/software/freeipmi/ ಅನ್ನು ಸಂಪರ್ಕಿಸಿ

TrouSerS ಹಾಗೂ tpm-tools

TrouSerS ಹಾಗು tpm-tools ಅನ್ನು Trusted Platform Module (TPM) ತಂತ್ರಾಂಶದ ಬಳಕೆಯನ್ನು ಶಕ್ತಗೊಳಿಸಲು ಈ ಬಿಡುಗಡೆಯಲ್ಲಿ ಒಳಗೊಳ್ಳಿಸಲಾಗಿದೆ. TPM ಯಂತ್ರಾಂಶ ಸವಲತ್ತುಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ (ಇತರೆಗಳ ಜೊತೆಯಲ್ಲಿ):

  • ಸುರಕ್ಷಿತವಾಗಿ RSA ಕೀಲಿಗಳನ್ನು ನಿರ್ಮಿಸುವುದು, ಶೇಖರಿಸುವುದು, ಹಾಗು ಬಳಸುವುದು (ಮೆಮೊರಿಯಲ್ಲಿ ತೋರಿಸಲ್ಪಡದೆ)

  • ಒಂದು ಪ್ಲಾಟ್‌ಫಾರ್ಮಿನ ತಂತ್ರಾಂಶ ಸ್ಥಿತಿಯನ್ನು ಕ್ರಿಪ್ಟೋಗ್ರಾಫಿಕ್ ಹ್ಯಾಶ್‍ಗಳನ್ನು ಬಳಿಸಿಕೊಂಡು ಪರಿಶೀಲನೆ

TrouSerS ಯು ಒಂದು Trusted Computing Group's Software Stack (TSS) ನ ವಿಶಿಷ್ಟ ವಿವರಣೆಯ ಅನ್ವಯಿಸುವಿಕೆ ಆಗಿದೆ. TPM ಯಂತ್ರಾಂಶವನ್ನು ಬಳಸುವ ಅನ್ವಯಗಳನ್ನು ಬರೆಯಲು ನೀವು ನೀವು TrouSerS ಅನ್ನು ಬಳಸಬಹುದಾಗಿದೆ. tpm-tools , ಇದು TPM ಯಂತ್ರಾಂಶವನ್ನು ನಿರ್ವಹಿಸಲು ಹಾಗು ಬಳಸಲು ಉಪಯೋಗಿಸಬಹುದಾದ ಉಪಕರಣಗಳ ಸೂಟ್ ಒಂದು ಆಗಿದೆ.

TrouSerS ನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ http://trousers.sourceforge.net/ ಅನ್ನು ಸಂಪರ್ಕಿಸಿ.

eCryptfs

eCryptfs ವು ಒಂದು ಸ್ಟಾಕ್ ಮಾಡಲಾದ ಕ್ರಿಪ್ಟೋಗ್ರಾಫಿಕ್ ಕಡತ ವ್ಯವಸ್ಥೆಯಾಗಿದೆ. ಇದು EXT3 ಯಂತಹ ಕೆಳಮಟ್ಟದ ಕಡತ ವ್ಯವಸ್ಥೆಯಲ್ಲಿ ಆರೋಹಿತಗೊಂಡಂತಹ ಪ್ರತ್ಯೇಕ ಕಡತಕೋಶಗಳಲ್ಲಿ ಆರೋಹಿಸುತ್ತದೆ; eCryptfs ನ ಬಳಕೆಯನ್ನು ಆರಂಭಿಸಲು ಈಗಿರುವ ವಿಭಜನೆಯನ್ನು ಅಥವ ಕಡತ ವ್ಯವಸ್ಥೆಯನ್ನು ಬದಲಾಯಿಸುವ ಅಗತ್ಯವಿರುವುದಿಲ್ಲ.

ಈ ಬಿಡುಗಡೆಯೊಂದಿಗೆ, eCryptfs ಅನ್ನು ಆವೃತ್ತಿ 56 ಕ್ಕೆ ಮರು ಬೇಸ್ ಮಾಡಲಾಗಿದ್ದು, ಇದುಹಲವಾರು ದೋಷ ಪರಿಹಾರಗಳನ್ನು ಹಾಗು ವರ್ಧನೆಗಳನ್ನು ಒದಗಿಸುತ್ತದೆ. ಇದರ ಜೊತೆಗೆ, ಈ ಅಪ್‌ಡೇಟ್ eCryptfs ಅನ್ನು ಸಂರಚಿಸಲು ನೆರವಾಗುವಂತೆ ಒಂದು ಚಿತ್ರಾತ್ಮಕ ಪ್ರೊಗ್ರಾಂ ಅನ್ನೂ ಸಹ ಒದಗಿಸುತ್ತದೆ(ecryptfs-mount-helper-gui).

ಈ ಅಪ್‌ಡೇಟ್ ಕೆಲವು ನಿಗದಿತ eCryptfs ಆರೋಹಣಾ ಆಯ್ಕೆಗಳ ಸೀಟಾಕ್ಸುಗಳನ್ನೂ ಸಹ ಬದಲಾಯಿಸುತ್ತದೆ. ನೀವು eCryptfs ನ ಈ ಆವೃತ್ತಿಯನ್ನು ಅಪ್‌ಡೇಟ್ ಮಾಡಲು ಆಯ್ಕೆ ಮಾಡಿದಲ್ಲಿ, ಅದರಿಂದ ಬದಲಾವಣೆಗೊಂಡ ಯಾವುದೆ ಆರೋಹಣಾ ಸ್ಕ್ರಿಪ್ಟುಗಳನ್ನು ಹಾಗು /etc/fstab ನಮೂದುಗಳನ್ನು ಅಪ್‌ಡೇಟ್ ಮಾಡಬೇಕಾಗುತ್ತದೆ. ಈ ಬದಲಾವಣೆಗಳ ಬಗೆಗಿನ ಮಾಹಿತಿಗಾಗಿ,man ecryptfs ಅನ್ನು ನೋಡಿ.

eCryptfs ನ ಈ ಬಿಡುಗಡೆಗೆ ಈ ಕೆಳಗಿನ ಎಚ್ಚರಿಕಾ ಪತ್ರಗಳು ಅನ್ವಯಿಸುತ್ತವೆ:

  • ಗೂಢಲಿಪೀಕರಣಗೊಂಡ ಕಡತ ವ್ಯವಸ್ಥೆಯು ಅದೆ ಹೆಸರಿನ ಕೆಳಗಿರುವ ಕಡತ ಕೋಶದ ಮೇಲೆ ಒಮ್ಮೆ ಆರೋಹಿತಗೊಂಡಿದ್ದರೆ eCryptfs ಕಡತ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುವುದಿಲ್ಲ. ಉದಾಹರಣೆಗೆ:

    mount -t ecryptfs /mnt/secret /mnt/secret

    ಕಡತ ವ್ಯವಸ್ಥೆಯ ಸುರಕ್ಷಿತ ಭಾಗವನ್ನು ತೋರಿಸುವಂತಿಲ್ಲ, ಅಂದರೆ ಅದನ್ನು ಬೇರೆ ಆರೋಹಣಾ ತಾಣಗಳು, ಬೈಂಡ್ ತಾಣಗಳು ಮುಂತಾದುವುಗಳ ಮೇಲೆ ಆರೋಹಿಸುವಂತಿಲ್ಲ.

  • ಜಾಲಬಂಧ ಕಡತ ವ್ಯವಸ್ಥೆಯ ಮೇಲಿನ (ಉದಾ. NFS, Samba) eCryptfs ಆರೋಹಣಗಳು ಸರಿಯಾಗಿ ಕೆಲಸಮಾಡುವುದಿಲ್ಲ

  • eCryptfs ಕರ್ನಲ್ ಚಾಲಕದ ಈ ಆವೃತ್ತಿಗೆ ecryptfs-utils-56-4.el5 ಅಥವ ಮುಂಚಿನದು ಒದಗಿಸುವ ಅಪ್‌ಡೇಟ್ ಆದಂತಹ ಬಳಕೆದಾರಸ್ಥಳದ ಅಗತ್ಯವಿರುತ್ತದೆ.

eCryptfs ನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, http://ecryptfs.sf.net ಅನ್ನು ಸಂಪರ್ಕಿಸಿ. ಮೂಲಭೂತ ಸಿದ್ಧತಾ ಮಾಹಿತಿಗಾಗಿ http://ecryptfs.sourceforge.net/README ಹಾಗು http://ecryptfs.sourceforge.net/ecryptfs-faq.html ಅನ್ನೂ ಸಹ ನೋಡಬಹುದು.

ಸ್ಥಿತಿ ಇಲ್ಲದ ಲಿನಕ್ಸ್ (Stateless Linux)

ಗಣಕವನ್ನು ಹೇಗೆ ಚಲಾಯಿಸುವುದು ಮತ್ತು ನಿಭಾಯಿಸುವುದು, ಸುಲಭವಾಗಿ ಬದಲಾಯಿಸುವ ಮೂಲಕ ಅಧಿಕ ಸಂಖ್ಯೆಯ ಗಣಕಗಳ ಸರಬರಾಜು ಹಾಗು ನಿರ್ವಹಣೆಯನ್ನು ಸರಳೀಕೃತವಾಗುವಂತೆ ರಚಿಸುವಲ್ಲಿನ ದಿಶೆಯಲ್ಲಿ Stateless Linux ಒಂದು ಹೊಸ ರೀತಿಯ ಆಲೋಚನೆ. ತಯಾರಾದ ಗಣಕ ಚಿತ್ರಿಕೆಗಳನ್ನು ಸ್ಥಾಪಿಸುವ ಮೂಲಕ ಇದನ್ನು ಪ್ರಾಥಮಿಕವಾಗಿ ಸಾಧಿತವಾಗಿಸಬಹುದು, ಇದು ಅಧಿಕ ಸಂಖ್ಯೆಯ ಸ್ಥಿತಿಯಿಲ್ಲದ ಗಣಕಗಳಲ್ಲಿ ಪ್ರತಿರೂಪಗೊಂಡು ಹಾಗೂ ನಿರ್ವಹಿತವಾಗಿರುತ್ತದೆ, ಕಾರ್ಯವ್ಯವಸ್ಥೆಯನ್ನು 'ಓದಲು ಮಾತ್ರ' ವಿಧಾನದಲ್ಲಿ ಚಲಾಯಿಸುತ್ತದೆ(ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು /etc/sysconfig/readonly-root ಅನ್ನು ಸಂಪರ್ಕಿಸಿ).

ಪ್ರಸ್ತುತ ವಿಕಸನದ ಸ್ಥಿತಿಯಲ್ಲಿ, Stateless ಸ್ವರೂಪಗಳು ಉದ್ದೇಶಿತ ಗುರಿಗಳ ಅಡಿಯಲ್ಲಿದೆ. ಹಾಗಾಗಿ ಈ ಸಾಮರ್ಥ್ಯವು ತಂತ್ರಜ್ಞಾನ ಪೂರ್ವಾವಲೋಕನ ಎಂದು ಉಳಿಸಿಕೊಳ್ಳಲಾಗಿದೆ.

Stateless ಕೋಡ್ ಗಳನ್ನು ಪರೀಕ್ಷಿಸಲು ಆಸಕ್ತಿ ಇರುವವರು http://fedoraproject.org/wiki/StatelessLinuxHOWTOನಲ್ಲಿನ HOWTO ಅನ್ನು ಓದುವಂತೆ ಹಾಗು stateless-list@redhat.comನಲ್ಲಿ ಸೇರ್ಪಡೆಯಾಗುವಂತೆ Red Hat ಸೂಚಿಸುತ್ತದೆ .

Stateless Linux ನ ಶಕ್ತಗೊಳಿಸುವ ಸವಲತ್ತಿನ ತುಣುಕುಗಳನ್ನು ಈ ಮೊದಲು Red Hat Enterprise Linux 5 ನಲ್ಲಿ ಪರಿಚಯಿಸಲಾಗಿತ್ತು.

AIGLX

AIGLX, ಸಂಪೂರ್ಣವಾಗಿ ಬೆಂಬಲಿತವಾದ X ಪರಿಚಾರಕದ ಒಂದು ತಂತ್ರಜ್ಞಾನ ಪೂರ್ವಾವಲೋಕನ ಘಟಕ. ಇದು ಸಾಮಾನ್ಯ ಗಣಕ-ತೆರೆ ಮೇಲೆ GL-ವೇಗವರ್ಧಿತ ಪರಿಣಾಮಗಳನ್ನು ಶಕ್ತಗೊಳಿಸುವ ಗುರಿಯನ್ನು ಹೊಂದಿದೆ. ಈ ಪರಿಯೋಜನೆಯು ಈ ಕೆಳಗಿನ ವಿಷಯಗಳನ್ನು ಒಳಗೊಂಡಿದೆ:

  • ಲಘುವಾಗಿ ಮಾರ್ಪಡಿಸಿದ ಒಂದು X ಪರಿಚಾರಕ.

  • ಹೊಸ ಪ್ರೋಟೋಕಾಲ್ ಬೆಂಬಲವನ್ನು ಸೇರಿಸ ಬಲ್ಲ ಒಂದು ಅಪ್ಡೇಟೇಡ್ ಮೇಸಾ ಪ್ಯಾಕೇಜ್.

ಈ ಘಟಕಗಳನ್ನು ಅನುಸ್ಥಾಪಿಸುವುದರಿಂದ, ಕೆಲವೇ ಬದಲಾವಣೆಗಳೊಂದಿಗೆ ನಿಮ್ಮ ಡೆಸ್ಕ್ ಟಾಪ್ ನಲ್ಲಿ GL-ವೇಗವರ್ಧಿತ ಪರಿಣಾಮಗಳನ್ನು, ಹಾಗೆಯೇ X ಪರಿಚಾರಕವನ್ನು ಬದಲಾಯಿಸದೆ ಅವುಗಳನ್ನು ಅಶಕ್ತ ಮತ್ತು ಶಕ್ತಗೊಳಿಸಬಲ್ಲ ಸಾಮರ್ಥ್ಯವನ್ನು ನೀವು ಹೊಂದಬಹುದು. AIGLX ಯಂತ್ರಾಂಶದ GLX ವೇಗವರ್ಧಕದ ಲಾಭ ಪಡೆಯಲು ದೂರದ GLX ಅನ್ವಯಗಳನ್ನು ಸಹ ಶಕ್ತಗೊಳಿಸುತ್ತದೆ.

ಉದ್ದೇಶಿತ iSCSI

Linux target (tgt) ವಿನ್ಯಾಸವು ಒಂದು ಗಣಕದ ಬ್ಲಾಕ್-ಮಟ್ಟದ SCSI ಶೇಖರಣೆಯನ್ನು SCSI ಆರಂಭಕವನ್ನು ಹೊಂದಿದ ಇತರೆ ಗಣಕಗಳಿಗೆ ಸೇವೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಈ ಸಾಮರ್ಥ್ಯವು ಆರಂಭದಲ್ಲಿ ಒಂದು ಉದ್ದೇಶಿತ Linux iSCSI ಆಗಿ ಜಾಲಬಂಧದ ಮೂಲಕ ಯಾವುದೇ iSCSI ಆರಂಭಕಕ್ಕೆ ಶೇಖರಣಾ ಸೇವೆ ಸಲ್ಲಿಸುವಂತೆ ನಿಯೋಜಿಸಲಾಗಿತ್ತು.

ಉದ್ದೇಶಿತ iSCSI ಸಂಯೋಜಿಸಲು, scsi-target-utils RPM ಅನ್ನು ಅನುಸ್ಥಾಪಿಸಿ ಹಾಗು ಈ ಸ್ಥಳದಲ್ಲಿರುವ ಸೂಚನೆಗಳನ್ನು ನೋಡಿ:

  • /usr/share/doc/scsi-target-utils-[version]/README

  • /usr/share/doc/scsi-target-utils-[version]/README.iscsi

[version] ಯನ್ನು ಅನುಸ್ಥಾಪಿಸಲ್ಪಟ್ಟಿರುವ ಪ್ಯಾಕೇಜಿಗೆ ಸರಿಹೊಂದುವ ಆವೃತ್ತಿಯೊಂದಿಗೆ ಬದಲಾಯಿಸಿ.

ಹೆಚ್ಚಿನ ಮಾಹಿತಿಗಾಗಿ, man tgtadm ಅನ್ನು ಸಂಪರ್ಕಿಸಿ.

FireWire

firewire-sbp2 ಘಟಕಗಳನ್ನು ಈ ಅಪ್‍ಡೇಟ್‍ನಲ್ಲಿ ಇನ್ನೂ ಸಹ ಒಂದು ತಂತ್ರಜ್ಞಾನ ಪೂರ್ವಾವಲೋಕನವಾಗಿ ಒಳಗೊಳ್ಳಿಸಲಾಗಿದೆ. ಈ ಘಟಕವು FireWire ಶೇಖರಣಾ ಸಾಧನಗಳು ಹಾಗು ಶೋಧಕಗಳೊಂದಿಗಿನ ಸಂಪರ್ಕವನ್ನು ಶಕ್ತಗೊಳಿಸುತ್ತದೆ.

ಸದ್ಯದಲ್ಲಿ, FireWire ಈ ಕೆಳಗಿನವುಗಳನ್ನು ಬೆಂಬಲಿಸುವುದಿಲ್ಲ:

  • IPv4

  • pcilynx ಅತಿಥಿ ನಿಯಂತ್ರಕಗಳು

  • ಬಹು-LUN ಶೇಖರಣಾ ಸಾಧನಗಳು

  • ಶೇಖರಣಾ ಸಾಧನಗಳಿಗೆ ಪ್ರತ್ಯೇಕವಲ್ಲದ ಅನುಮತಿ

ಇದಕ್ಕೆ ಹೆಚ್ಚುವರಿಯಾಗಿ, ಈ ಕೆಳಗಿನ ತೊಂದರೆಗಳು FireWire ನಲ್ಲಿ ಇನ್ನೂ ಉಳಿದಿವೆ:

  • SBP2 ಚಾಲಕದಲ್ಲಿ ಒಂದು ಮೆಮೊರಿ ಸೋರಿಕೆಯಾದಲ್ಲಿ ಗಣಕವು ಪ್ರತಿಕ್ರಿಯೆ ನೀಡದಾಗುತ್ತದೆ.

  • ಈ ಆವೃತ್ತಿಯಲ್ಲಿನ ಒಂದು ಕೋಡ್ ದೊಡ್ಡ-endian ಗಣಕಗಳಲ್ಲಿ ಕೆಲಸ ಮಾಡುವುದಿಲ್ಲ. ಇದು PowerPC ಯ ಅನಿರೀಕ್ಷಿತ ವರ್ತನೆಗೆ ಕಾರಣವಾಗಬಹುದು.

ktune

ಈ ಬಿಡುಗಡೆಯು ktune (ktune ಪ್ಯಾಕೇಜಿನಿಂದ) ಅನ್ನು ಒಳಗೊಂಡಿದ್ದು, ಇದು ಒಂದು ನಿಗದಿತ ಗಣಕ ಪ್ರೊಫೈಲುಗಳಿಗೆ ಹೊಂದಿಕೊಳ್ಳುವಂತೆ ಹಲವಾರು ಕರ್ನಲ್ ಹೊಂದಿಸುವ ನಿಯತಾಂಕವನ್ನು ಸೂಕ್ತ ಮೌಲ್ಯಗಳಿಗೆ ಹೊಂದಿಸುತ್ತದೆ. ಪ್ರಸಕ್ತ, ktune ಕೇವಲ ಡಿಸ್ಕ್‍-ತೀಕ್ಷ್ಣವಾದ ಹಾಗು ಜಾಲಬಂಧ-ತೀಕ್ಷ್ಣವಾದಂತಹ ಅನ್ವಯಗಳನ್ನು ಚಲಾಯಿಸುವ ದೊಡ್ಡ ಮೊತ್ತದ ಮೆಮೊರಿಯನ್ನು ಹೊಂದಿರುವ ಗಣಕಗಳಿಗೆ ಮಾತ್ರ ಪ್ರೊಫೈಲುಗಳನ್ನು ಒದಗಿಸುತ್ತದೆ.

ktune ನಿಂದ ಒದಗಿಸಲಾದ ಸಂಯೋಜನೆಗಳು /etc/sysctl.conf ನಲ್ಲಿ ಅಥವ ಕರ್ನಲ್ ಆಜ್ಞಾ ಸಾಲಿನಲ್ಲಿ ನೀಡಲಾದ ಸಂಯೋಜನೆಗಳನ್ನು ಅತಿಕ್ರಮಿಸುವುದಿಲ್ಲ. ktune ಕೆಲವೊಂದು ಗಣಕಗಳಿಗೆ ಹಾಗು ಕಾರ್ಯಹೊರೆಗಳಿಗೆ ಸೂಕ್ತವಾಗಿರದೆ ಇರಬಹುದು; ಅಂತೆಯೆ, ಉತ್ಪಾದನೆಯಲ್ಲಿ ಅದನ್ನು ಬಳಸುವ ಮೊದಲು ನೀವು ಅದನ್ನು ವಿಸ್ತೃತವಾಗಿ ಪರೀಕ್ಷಿಸುವುದು ಒಳಿತು.

service ktune stop (ನಿರ್ವಾಹಕನಾಗಿ) ಅನ್ನು ಬಳಸಿಕೊಂಡು ktune ಸೇವೆಯನ್ನು ನಿಲ್ಲಿಸುವ ಮೂಲಕ ktune ನಿಂದ ಹೊಂದಿಸಲಾದ ಯಾವುದೆ ಸಂರಚನೆಯನ್ನು ಅಶಕ್ತಗೊಳಿಸಬಹುದು ಹಾಗು ನಿಮ್ಮ ಸಾಮಾನ್ಯ ಸಂರಚನಾ ಸಂಯೋಜನೆಗೆ ಮರಳಬಹುದಾಗಿದೆ.

dmraid ಗಾಗಿ SGPIO ಬೆಂಬಲ

Serial General Purpose Input Output (SGPIO) ಯು ಮುಖ್ಯ ಬೋರ್ಡ್ ಹಾಗು ವಿವಿಧ ಆಂತರಿಕ ಹಾಗು ಬಾಹ್ಯ ಹಾರ್ಡ್ ಡಿಸ್ಕ್‍ ಡ್ರೈವ್ ಬೇ ಅಡಕಗಳ ನಡುವೆ ಬಳಸಲಾಗುವ ಒಂದು ಕೈಗಾರಿಕ ಮಾನ್ಯವಾದಂತಹ ವಿಧಾನವಾಗಿದೆ. ಈ ವಿಧಾನವನ್ನು AHCI ಚಾಲಕ ಸಂಪರ್ಕಸಾಧನದ ಮೂಲಕ ಒಂದು ಅಡಕದಲ್ಲಿನ LED ದೀಪಗಳನ್ನು ನಿಯಂತ್ರಿಸಲು ಬಳಸಬಹುದಾಗಿದೆ.

ಈ ಬಿಡುಗಡೆಯಲ್ಲಿ, dmraid ಯಲ್ಲಿನ SGPIO ಬೆಂಬಲವನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ಒಳಗೊಳ್ಳಿಸಲಾಗಿದೆ. ಇದರಿಂದಾಗಿ dmraid ಯು ಡಿಸ್ಕ್‍ ಅಡಕಗಳೊಂದಿಗೆ ಸರಿಯಾಗಿ ಕೆಲಸ ಮಾಡುತ್ತದೆ.

GCC 4.3

Gnu Compiler Collection version 4.3 (GCC4.3) ಯನ್ನು ಈಗ ಈ ಬಿಡುಗಡೆಯಲ್ಲಿ ಒಂದು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದೆ. ಕಂಪೈಲರುಗಳ ಈ ಸಂಗ್ರಹವು C, C++, ಹಾಗು Fortran 95 ಕಂಪೈಲರುಗಳನ್ನು ಹಾಗು ಲೈಬ್ರರಿಗಳಿಗಾಗಿನ ಬೆಂಬಲವನ್ನು ಒಳಗೊಂಡಿದೆ.

gcc43 ಪ್ಯಾಕೇಜುಗಳಲ್ಲಿ, gnu89-inline ಆಯ್ಕೆಯ ಡೀಫಾಲ್ಟ್‍ ಅನ್ನು -fgnu89-inline ಗೆ ಬದಲಾಯಿಸಲಾಗಿದೆ, ಆದರೆ Red Hat Enterprise Linux 5 ರಲ್ಲಿನ ಅಪ್‌ಸ್ಟ್ರೀಮ್ ಹಾಗು ಭವಿಷ್ಯದ ಅಪ್‌ಡೇಟ್‌ಗಳು -fno-gnu89-inline ಗೆ ಡೀಫಾಲ್ಟ್‍ ಆಗಿರುತ್ತದೆ. Red Hat Enterprise Linux 5 ರ ಜೊತೆಗೆ ಕಳುಹಿಸಲಾಗುವ ಹಲವಾರು ಹೆಡರುಗಳು ISO C99 ಸೆಮೆಂಟಿಕ್‌ಗಳ ಬದಲಿಗೆ GNU ಇನ್-ಲೈನ್ ಸೆಮೆಂಟಿಕ್‌ಗಳನ್ನು ನಿರೀಕ್ಷಿಸುವುದರಿಂದ ಇದು ಅನಿವಾರ್ಯವಾಗುತ್ತದೆ. ಈ ಹೆಡರುಗಳು ವೈಶಿಷ್ಟ್ಯಗಳ ಮೂಲಕ ಇನ್-ಲೈನ್ ಸೆಮೆಂಟಿಕ್‌ಗಳಿಗಾಗಿ ಮನವಿ ಸಲ್ಲಿಸಲು ಹೊಂದಿಸಲಾಗಿಲ್ಲ.

ಕರ್ನಲ್ ಟ್ರೇಸ್‌ಪಾಯಿಂಟ್ ಸೌಕರ್ಯ

ಈ ಅಪ್‌ಡೇಟ್‌ನಲ್ಲಿ, ಒಂದು ಹೊಸ ಕರ್ನಲ್ ಮಾರ್ಕರ್/ಟ್ರೇಸ್‌ಪಾಯಿಂಟ್ ಸವಲತ್ತನ್ನು ತಂತ್ರಜ್ಞಾನ ಮುನ್ನೋಟವಾಗಿ ಒದಗಿಸಲಾಗಿದೆ. ಈ ಸಂಪರ್ಕಸಾಧನವು SystemTapನಂತಹ ಉಪಕರಣದೊಂದಿಗೆ ಬಳಸುವ ಸಲುವಾಗಿ ಕರ್ನಲ್‌ಗೆ ಸ್ಥಾಯಿ ತನಿಖಾ ಬಿಂದುಗಳನ್ನು ಒದಗಿಸುತ್ತದೆ.

ಫೈಬರ್ ಚಾನಲ್ ಓವರ್ ಎತರ್ನೆಟ್ (FCoE)

ಫೈಬರ್ ಚಾನಲ್ ಓವರ್ ಎತರ್ನೆಟ್ (FCoE) ಚಾಲಕವು libfc ಯ ಜೊತೆಗೆ FCoE ಒಂದು ಮಾನ್ಯ ಎತರ್ನೆಟ್ ಕಾರ್ಡಿನಲ್ಲಿ ಚಲಾಯಿಸಲು ಸಾಮರ್ಥ್ಯವನ್ನೂ ಸಹ ನೀಡುತ್ತದೆ. ಈ ಸಾಮರ್ಥ್ಯವನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ Red Hat Enterprise Linux 5.3 ರಲ್ಲಿ ನೀಡಲಾಗಿತ್ತು.

FCoE ಗೆ Red Hat Enterprise Linux 5.3 ಯು ಮೂರು ವಿಶಿಷ್ಟವಾದ ಯಂತ್ರಾಂಶದ ಮೇಲೆ FCoE ಗೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ಅವುಗಳೆಂದರೆ: Cisco fnic ಚಾಲಕ, Emulex lpfc ಚಾಲಕ, ಹಾಗು Qlogic qla2xx ಚಾಲಕ.

RAID ಸೆಟ್‌ಗಳ ಸಾಧನ ವಿಫಲತೆ ಮೇಲ್ವಿಚಾರಣೆ

dmraid ಹಾಗು dmvent_tool ಅನ್ನು ಬಳಸಿಕೊಳ್ಳುವ RAID ಸೆಟ್‌ಗಳ ಸಾಧನ ವಿಫಲತೆ ಮೇಲ್ವಿಚಾರಣೆಯನ್ನು Red Hat Enterprise Linux 5.3 ರಲ್ಲಿ ತಂತ್ರಜ್ಞಾನ ಮುನ್ನೋಟವಾಗಿ ಸೇರ್ಪಡಿಸಲಾಗಿದೆ. ಇದು RAID ಸೆಟ್‌ಗಳಲ್ಲಿನ ಘಟಕ ಸಾಧನಗಳಲ್ಲಿ ವಿಫಲತೆಯನ್ನು ನೋಡುವ ಹಾಗು ವರದಿ ಮಾಡುವ ಸಾಮರ್ಥ್ಯವನ್ನು ಒದಗಿಸುತ್ತದೆ.

7. ಪರಿಹರಿಸಲಾದ ತೊಂದರೆಗಳು

7.1. ಎಲ್ಲಾ ಆರ್ಕಿಟೆಕ್ಚರುಗಳು

  • TTY ಸಾಧನದ ಕಾರ್ಯದ ವರದಿಗಾಗಿನ ದತ್ತಾಂಶವು ಸಮರ್ಪಕವಾಗಿ ಉತ್ಪತ್ತಿಯಾಗುತ್ತಿರಲಿಲ್ಲ. ಪರಿಣಾಮವಾಗಿ, sar -y ವು ಈ ಕೆಳಗಿನ ಸಂದೇಶದೊಂದಿಗೆ ವಿಫಲಗೊಳ್ಳುತ್ತಿತ್ತು:

    Requested activities not available in file

    ಈ ಪ್ಯಾಕೇಜಿನ ಅಪ್‌ಡೇಟ್‌ನಲ್ಲಿ, -y ಆಯ್ಕೆಯು TTY ಸಾಧನದ ಕಾರ್ಯವನ್ನು ಸರಿಯಾಗಿ ವರದಿ ಮಾಡುವಂತೆ sar ಅನ್ನು ಸರಿಪಡಿಸಲಾಗಿದೆ.

  • ಈ ಮೊದಲು, /etc/multipath.conf ನಲ್ಲಿ max_fds ಅನ್ನು unlimited ಗೆ ಹೊಂದಿಸುವುದರಿಂದ multipathd ಡೀಮನ್ ಆರಂಭಗೊಳ್ಳದಂತೆ ತಡೆಯಲ್ಪಡುತ್ತಿತ್ತು. ತೆರೆದ ಕಡತ ವಿವರಕ(ಡಿಸ್ಕ್ರಿಪ್ಟರ್) ಅನ್ನು ಗಣಕದ ಗರಿಷ್ಟಕ್ಕೆ ಹೊಂದಿಸಬೇಕಾದ ಅಗತ್ಯವಿದ್ದಾಗ, max_fds ಅನ್ನು max ಗೆ ಹೊಂದಿಸಬೇಕು.

  • mod_perl ಅನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಬಿಡುಗಡೆಯಾದಂತಹ ಆವೃತ್ತಿ 2.0.4 ಗೆ ಮರು-ಬೇಸ್ ಮಾಡಲಾಗಿದೆ. ಈ ಅಪ್‌ಡೇಟ್, Bugzilla 3.0 ರೊಂದಿಗೆ mod_perl ಸರಿಯಾಗಿ ಕೆಲಸ ಮಾಡುವುದನ್ನು ಅನುಮತಿಸುವ ಒಂದು ದೋಷದ ಪರಿಹಾರವೂ ಸೇರಿದಂತೆ ಹಲವಾರು ಅಪ್‌ಡೇಟ್‌ಗಳನ್ನು ಅನ್ವಯಿಸುತ್ತದೆ.

  • cups ಅನ್ನು ಆವೃತ್ತಿ 1.3.7 ಗೆ ಮರು-ಬೇಸ್ ಮಾಡಲಾಗಿದೆ. ಈ ಅಪ್‍ಡೇಟ್ ಈ ಕೆಳಗಿನ ಹಲವಾರು ದೋಷ ಪರಿಹಾರಗಳನ್ನು ಹಾಗು ಸೌಕರ್ಯಗಳನ್ನು ಒದಗಿಸುತ್ತದೆ:

    • ಕರ್ಬರೋಸ್ ದೃಢೀಕರಣವು ಈಗ ಬೆಂಬಲಿತವಾಗಿದೆ.

    • ಬಳಕೆದಾರ-ಸೂಚಿತ ಮುದ್ರಣ ಹಾಗು ಕಾರ್ಯ ಪಾಲಿಸಿಗಳು ಈಗ ಸರಿಯಾಗಿ ಲೋಡ್ ಆಗುತ್ತವೆ.

    • ಇನ್ನು ಮುಂದೆ ವೀಕ್ಷಣೆಯನ್ನು ಅಶಕ್ತಗೊಳಿಸದ ನಂತರ ದೂರಸ್ಥ ಸರತಿ ಕ್ಯಾಶೆಗಳು ಲೋಡ್ ಆಗುವುದಿಲ್ಲ.

    • classes.conf ಸಂರಚನಾ ಕಡತವು ಈಗ ಸರಿಯಾದ ಕಡತ ಅನುಮತಿಗಳನ್ನು ಹೊಂದಿದೆ.

  • lm_sensors ಅನ್ನು ಆವೃತ್ತಿ 2.10.7 ಗೆ ಮರು-ಬೇಸ್ ಮಾಡಲಾಗಿದೆ. ಇದು ಹಲವಾರು ಅಪ್‌ಸ್ಟ್ರೀಮ್ ಸುಧಾರಣೆಗಳನ್ನು ಹಾಗು ದೋಷ ಪರಿಹಾರಗಳನ್ನು ಅನ್ವಯಿಸುತ್ತದೆ, k8temp ಅನ್ನು ಲೋಡ್ ಮಾಡಿದಾಗ General parse error ಸಂದೇಶದೊಂದಿಗೆ libsensors ಕುಸಿತಗೊಳ್ಳುವುದನ್ನು ತಡೆಯಲು ಒಂದು ದೋಷವನ್ನು ಪರಿಹರಿಸಲಾಗಿದೆ.

  • ಈ ಕೆಳಗಿನ ದೋಷಗಳಿಗೆ ಪರಿಹಾರಗಳನ್ನು ಒಳಗೊಂಡಿರುವಂತೆ elfutils ಅನ್ನು ಅಪ್‌ಡೇಟ್ ಮಾಡಲಾಗಿದೆ:

    • ಕೆಲವೊಂದು ಆದಾನ(ಇನ್‌ಪುಟ್) ಕಡತಗಳನ್ನು ಓದುವಾಗ eu-readelf ಸವಲತ್ತು ಕುಸಿತಗೊಳ್ಳಬಹುದು.

    • eu-strip ಸವಲತ್ತನ್ನು ಹೊಸ ಬೈನರಿ ಪ್ಯಾಕೇಜುಗಳನ್ನು ನಿರ್ಮಿಸುವಂತಹ rpmbuild ವಿಧಾನಗಳಲ್ಲಿ ಬಳಸಲಾಗುತ್ತದೆ. ಇದು, -debuginfo ಪ್ಯಾಕೇಜುಗಳನ್ನು ರಚಿಸಲು ದೋಷ ನಿವಾರಣಾ ಮಾಹಿತಿಯನ್ನು ಕಾರ್ಯಗತಗೊಳಿಸುವ ಕ್ರಮದಿಂದ ಪ್ರತ್ಯೇಕಿಸುತ್ತದೆ. ಈ ಸವಲತ್ತಿನಲ್ಲಿನ ಒಂದು ದೋಷದ ಕಾರಣದಿಂದಾಗಿ s390 ಪ್ಲಾಟ್‌ಫಾರ್ಮಿನಲ್ಲಿ ET_REL ಕಡತಗಳಿಂದ ಬಳಸಲಾಗದೆ ಇರುವಂತಹ ದೋಷ ನಿವಾರಣ ಮಾಹಿತಿಗೆ ಕಾರಣವಾಗುತ್ತದೆ; ಇದು Linux ಕರ್ನಲ್ ಘಟಕ ಕಡತಗಳ (.ko.debug) ಮೇಲೆ ಪರಿಣಾಮ ಬೀರುತ್ತದೆ, ಹಾಗು ಇದು ನಿರ್ಮಿಸಲಾದಂತಹ kernel-debuginfo ಪ್ಯಾಕೇಜುಗಳು s390 ನ ಮೇಲೆ Systemtap ನಲ್ಲಿ ಸರಿಯಾಗಿ ಕೆಲಸ ಮಾಡದಿರಲು ಕಾರಣವಾಗುತ್ತದೆ.

  • vnc-server ಅನ್ನು ಆವೃತ್ತಿ 4.1.2-14.el5 ಗೆ ಮರು-ಬೇಸ್ ಮಾಡಲಾಗಿದೆ. ಈ ಅಪ್‍ಡೇಟ್ ಈ ಕೆಳಗಿನ ಪರಿಹಾರಗಳನ್ನು ಒದಗಿಸುತ್ತದೆ:

    • Xvnc ಯು ಆರಂಭಗೊಳ್ಳುವಲ್ಲಿ ವಿಫಲಗೊಂಡಾಗ ದೋಷ ಸಂದೇಶಗಳನ್ನು vncserver ಮುದ್ರಿಸುವುದನ್ನು ತಡೆಯುತ್ತಿದ್ದ ಒಂದು ದೋಷವನ್ನು ಈಗ ಪರಿಹರಿಸಲಾಗಿದೆ.

    • Xvnc ಇನ್ನು ಮುಂದೆ ಸರಿಯಲ್ಲದ ಮೂಲ ವಿಂಡೋ ಆಳವನ್ನು ಬಳಸುವುದಿಲ್ಲ; ಅದು ಈಗ -depth ಆಯ್ಕೆಯಿಂದ ಸೂಚಿಸಲಾಗಿರುವಂತಹ ಸರಿಯಾದ ಆಳವನ್ನು ಬಳಸುತ್ತದೆ.

    • libvnc.so ಘಟಕದಿಂದಾಗಿ X ಪರಿಚಾರಕವು ಕುಸಿತಗೊಳ್ಳಲು ಕಾರಣವಾಗಿದ್ದ ಒಂದು ದೋಷವನ್ನು ಈಗ ಪರಿಹರಿಸಲಾಗಿದೆ.

    • Xvnc ಈಗ ಎಲ್ಲಾ ಆರ್ಕಿಟೆಕ್ಚರುಗಳ ಮೇಲೆ GLX ಹಾಗು RENDER ವಿಸ್ತರಣೆಗಳನ್ನು ಬೆಂಬಲಿಸುತ್ತದೆ.

  • smartmontools ಅನ್ನು ಆವೃತ್ತಿ 5.38 ಕ್ಕೆ ಮರು-ಬೇಸ್ ಮಾಡಲಾಗಿದೆ. ಈ ಆಯ್ಕೆಯು ಯಂತ್ರಾಂಶ ಸಾಧನಗಳ ಸ್ವಯಂ ಪತ್ತೆ ಮಾಡುವಿಕೆಯನ್ನು ಸುಧಾರಿಸುತ್ತದೆ, CCISS RAID ಅರೆಗಳಿಗಾಗಿನ (arrays) ಬೆಂಬಲಗಳನ್ನು ಸುಧಾರಿಸುತ್ತದೆ, ಹಾಗು ಬೆಂಬಲಿತ ಸಾಧನಗಳ ಒಂದು ದೊಡ್ಡ ದತ್ತಸಂಚಯವನ್ನು ಹೊಂದಿರುತ್ತದೆ.

    ಈ ಅಪ್‌ಡೇಟ್ 3ware RAID ಸಾಧನಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳದಂತೆ smartmontools ಅನ್ನು SELinux ತಡೆಯುತ್ತಿದ್ದಂತಹ ಒಂದು ದೋಷವನ್ನು ಪರಿಹರಿಸಲಾಗಿದೆ. smartmontools ಈಗ ಅಂತಹ ಸಾಧನಗಳ ಮೇಲ್ವಿಚಾರಣೆಯನ್ನು ಸರಿಯಾಗಿ ನೋಡಿಕೊಳ್ಲಬಲ್ಲದು.

  • python-urlgrabber ಅನ್ನು ಆವೃತ್ತಿ 3.1.0-5 ಗೆ ಮರು-ಬೇಸ್ ಮಾಡಲಾಗಿದೆ. ಈ ಅಪ್‍ಡೇಟ್ ಅಪ್‌ಸ್ಟ್ರೀಮ್‌ನ ಈ ಕೆಳಗೆ ಸೂಚಿಸಲಾಗಿರುವ ಹಲವಾರು ದೋಷ ಪರಿಹಾರಗಳನ್ನು ಒದಗಿಸುತ್ತದೆ::

    • yum ಈಗ ಆಂಶಿಕ ಡೌನ್‌ಲೋಡ್‌ಗಳನ್ನು ಬೆಂಬಲಿಸದ ಒಂದು yum ರೆಪೊಸಿಟರಿ ಇಂದ ಸರಿಯಾಗಿ ಮರು-ಡೌನ್‌ಲೋಡ್ ಮಾಡಿಕೊಳ್ಳಬಲ್ಲದು.

    • ಈಗ yum ರೆಪೊಸಿಟರಿಯು ಒಂದು ನಿಗದಿತ ಪೋರ್ಟಿನೊಂದಿಗೆ FTP-ಆಧರಿತವಾಗಿದ್ದರೂ ಸಹ ನಿಲ್ಲಿಸಲಾದ ಡೌನ್‌ಲೋಡ್ ಅನ್ನು yum ಮರಳಿ ಆರಂಭಿಸಬಲ್ಲದು.

    • ಪ್ರಗತಿ ಪಟ್ಟಿಯ ಗಾತ್ರವು ಈಗ ಟರ್ಮಿನಲ್ ಗಾತ್ರಕ್ಕೆ ಅನುಗುಣವಾಗಿ ಬದಲಾಗುತ್ತದೆ. ಅಷ್ಟೆ ಅಲ್ಲದೆ, ಪ್ರಗತಿಪಟ್ಟಿಗಳು ಈಗ ಉತ್ತಮವಾಗಿ ಕಾಣಿಸುತ್ತವೆ ಹಾಗು ಶೇಕಡಾವಾರು ಕ್ರಮದಲ್ಲಿ ಒಟ್ಟು ಡೌನ್‌ಲೋಡ್‌ ಅನ್ನು ತೋರಿಸುತ್ತದೆ.

    • python-urlgrabberkeepalive ಸಂಜ್ಞೆಯನ್ನು ಈಗ ಸರಿಪಡಿಸಲಾಗಿದೆ. ಈ ಮೊದಲು, ಈ ಸಂಜ್ಞೆಯಲ್ಲಿದ್ದಂತಹ ಒಂದು ದೋಷದ ಕಾರಣದಿಂದಾಗಿ ಡೌನ್‌ಲೋಡ್ ಸಮಯದಲ್ಲಿ ಸರಿಯಲ್ಲದ ರೀತಿಯಲ್ಲಿ ಮೆಮೊರಿ ಬಳಕೆಯನ್ನು ಹೆಚ್ಚಿಸಲ್ಪಡುತ್ತಿತ್ತು; ಅಷ್ಟೆ ಅಲ್ಲದೆ, ಈ ದೋಷದ ಕಾರಣದಿಂದಾಗಿ ಬೃಹತ್ ಸಂಖ್ಯೆಯ ಪ್ಯಾಕೇಜುಗಳನ್ನು ಡೌನ್‌ಲೋಡ್‌ ಮಾಡುವಾಗ reposync ಹಾಗು yumdownloader ಸರಿಯಾಗಿ ಕಾರ್ಯ ನಿರ್ವಹಿಸದಂತೆ ತಡೆಯುಂಟಾಗುತ್ತಿತ್ತು.

  • yum-utils ಅನ್ನು ಅಪ್‌ಸ್ಟ್ರೀಮ್ ಆವೃತ್ತಿ 1.1.16 ಗೆ ಮರು-ಬೇಸ್ ಮಾಡಲಾಗಿದೆ. ಈ ಅಪ್‍ಡೇಟ್ ಈ ಕೆಳಗಿನ ಹಲವಾರು ದೋಷ ಪರಿಹಾರಗಳನ್ನು ಒದಗಿಸುತ್ತದೆ:

    • yum update --security ಯು ಸೂಕ್ತವಾದ ಹಳೆಯ ಸುರಕ್ಷತಾ ಅಪ್‌ಡೇಟ್‌ಗಳನ್ನು ಪತ್ತೆಹಚ್ಚಬಲ್ಲದು.

    • yum-versionlock ಈಗ ಬಳಕೆಯಲ್ಲಿ ಇರದೆ ಇರುವ ಪ್ಯಾಕೇಜುಗಳ ವಿರುದ್ಧ ಸರಿಯಾಗಿ ಕೆಲಸ ನಿರ್ವಹಿಸುತ್ತದೆ.

    ಈ ಅಪ್‌ಡೇಟ್ yum-fastestmirror ಪ್ಲಗ್ಇನ್ ಅನ್ನೂ ಸಹ ಒಳಗೊಂಡಿದ್ದು, ಇದರಿಂದಾಗಿ ಒಂದು ಮಿರರ್ ಪಟ್ಟಿಯಲ್ಲಿರುವ ಅತ್ಯಂತ ವೇಗವಾದ ರೆಪೊಸಿಟರಿಯನ್ನು yum ಆಯ್ಕೆ ಮಾಡಿಕೊಳ್ಳುವುದನ್ನು ಶಕ್ತಗೊಳಿಸುತ್ತದೆ.

  • Samba ಅನ್ನು ಈಗ ಅಪ್‌ಸ್ಟ್ರೀಮ್ ಆವೃತ್ತಿ 3.2.0 ಗೆ ಮರು ಬೇಸ್ ಮಾಡಲಾಗಿದೆ. ಇದು ಹಲವಾರು ದೋಷಗಳನ್ನು ನಿವಾರಿಸುತ್ತದೆ, ಅವುಗಳಲ್ಲಿ Windows 2003 ಅನ್ನು ತಮ್ಮ ನಾಮ ಪರಿಚಾರಕ(ನೇಮ್ ಸರ್ವರ್) ಆಗಿ ಬಳಸಿಕೊಂಡಂತಹ ಡೊಮೈನುಗಳಿಗೆ ಬಳಕೆದಾರರು ಸೇರದಂತೆ ತಡೆಯುತ್ತಿದ್ದಂತಹ ಒಂದು ದೋಷವೂ ಸಹ ಒಂದಾಗಿತ್ತು. ಈ ಅಪ್‌ಡೇಟ್‌ನಲ್ಲಿ net rpc changetrustpw ಅನ್ನು ಬಳಸಿಕೊಂಡು ಗಣಕದ ಗುಪ್ತಪದವನ್ನು ಬದಲಾಯಿಸಿದಾಗ that caused samba ಡೊಮೈನ್ ಸದಸ್ಯತ್ವವನ್ನು ನಿರ್ಬಂಧಿಸುತ್ತಿದ್ದಂತಹ ಒಂದು ದೋಷವನ್ನೂ ಸಹ ನಿವಾರಿಸಲಾಗಿದೆ.

    ಈ ಬಿಡುಗಡೆಯಲ್ಲಿ ಸೇರ್ಪಡಿಸಲಾದಂತಹ samba ದ ಅಪ್‌ಸ್ಟ್ರೀಮ್‌ನ ಅಪ್‌ಡೇಟ್‌ನ ಒಂದು ವಿವರವಾದ ಪಟ್ಟಿಗಾಗಿ, http://www.samba.org/samba/history/samba-3.0.32.html ಅನ್ನು ನೋಡಿ

  • OpenLDAP ಅನ್ನು ಅಪ್‌ಸ್ಟ್ರೀಮ್ ಆವೃತ್ತಿ 2.3.43 ಗೆ ಮರು-ಬೇಸ್ ಮಾಡಲಾಗಿದೆ. ಈ ಅಪ್‍ಡೇಟ್ ಈ ಕೆಳಗೆ ಸೂಚಿಸಲಾಗಿರುವ ಹಲವಾರು ಅಪ್‌ಸ್ಟ್ರೀಮ್ ದೋಷ ಪರಿಹಾರಗಳನ್ನು ಒದಗಿಸುತ್ತದೆ:

    • slapd ಡೀಮನ್ ಎಲ್ಲಿಯಾದರೂ TLS ಪ್ರಮಾಣ ಪತ್ರವನ್ನು ಓದಲು ಸಾಧ್ಯವಾಗದೆ ಇದ್ದ ಪಕ್ಷದಲ್ಲಿ init ಸ್ಕ್ರಿಪ್ಟ್‍ ಈಗ ಎಚ್ಚರಿಕೆಯನ್ನು ನೀಡುತ್ತದೆ.

    • openldap-debuginfo ಪ್ಯಾಕೇಜಿನಲ್ಲಿನ ಎಲ್ಲಾ ಲೈಬ್ರರಿಗಳು ಹೊರತೆಗೆಯದೆ ಹಾಗೆ ಇರಿಸಲಾಗುತ್ತದೆ.

    • ಅನುಸ್ಥಾಪಿತವಾಗಿರುವ openldap-devel ಪ್ಯಾಕೇಜನ್ನು ತೆಗೆದು ಹಾಕುವುದರಿಂದ ಇನ್ನು ಮುಂದೆ OpenLDAP ಲೈಬ್ರರಿಗಳು ಹಾಳಾಗಲು ಕಾರಣವಾಗುವುದಿಲ್ಲ.

    Red Hat ಈಗ OpenLDAP ಪರಿಚಾರಕಕ್ಕಾಗಿ ಹೆಚ್ಚುವರಿ ಓವರ್ಲೇಗಳನ್ನು ಒದಗಿಸುತ್ತದೆ. syncprov ಅನ್ನು ಹೊರತುಪಡಿಸಿ, ಎಲ್ಲಾ ಓವರ್ಲೇಗಳು ಪ್ರತ್ಯೇಕopenldap-servers-overlays ಪ್ಯಾಕೇಜುಗಳಲ್ಲಿ ಕಂಡು ಬರುತ್ತವೆ, ಹಾಗು ಕ್ರಿಯಾಶೀಲವಾಗಿ ಲೋಡ್ ಆಗುವಂತೆ ಮಾರ್ಪಡಿಸಲಾಗುರುತ್ತದೆ. syncprov ಓವರ್ಲೇ ಅನ್ನು ಹಳೆಯ OpenLDAP ಬಿಡುಗಡೆಗಳೊಂದಿಗೆ ಸರಿಯಾಗಿ ವರ್ತಿಸುವಂತೆ ಸ್ಥಾಯಿಯಾಗಿ OpenLDAP ಪರಿಚಾರಕದೊಂದಿಗೆ ಸಂಪರ್ಕ ಜೋಡಿಸಲಾಗಿರುತ್ತದೆ.

  • xterm ಬೈನರಿಯನ್ನುಸಮೂಹ ID (setgid) ಬಿಟ್ ಅನ್ನು ಸಂರಚಿಸಿರುವುದರಿಂದ, ಕೆಲವೊಂದು ಪರಿಸರ ವೇರಿಯೇಬ್‌ಗಳನ್ನು (LD_LIBRARY_PATH ಹಾಗು TMPDIR ನಂತಹ) ಅನ್‌ಸೆಟ್ ಆಗಿರುತ್ತವೆ. ಈ ಬಿಡುಗಡೆಯಲ್ಲಿ, xterm ಬೈನರಿಯಲ್ಲಿ ಈಗ 0755 ಅನುಮತಿಗಳನ್ನು ಸಂರಚಿಸಲಾಗಿದ್ದು, ಇದು ಈ ಸಮಸ್ಯೆಯನ್ನು ಪರಿಹರಿಸುತ್ತದೆ.

  • ypbind ನ ಮೂಲಕ ಅನೇಕ ಗಣಕಗಳು ಸಂಪರ್ಕಿತಗೊಂಡಿದ್ದಾಗ NIS ಪರಿಚಾರಕಗಳ ಮೇಲೆ ಹೊರೆಯನ್ನು ನಿಭಾಯಿಸಲು ಸಲಹೆ ಮಾಡಲಾಗುವ ವಿಧಾನವನ್ನು ಈ ಬಿಡುಗಡೆಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಲಾಗುವುದು. ypbind ಡೀಮನ್‌ನ ವರ್ತನೆಯಲ್ಲಿ ಬದಲಾವಣೆಯನ್ನು ಮಾಡಲಾಗಿಲ್ಲ: ಅದು ಈಗಲೂ ಸಹ /etc/ypbind ಸಂರಚನಾ ಕಡತದಲ್ಲಿ ಪಟ್ಟಿ ಮಾಡಲಾದ ಎಲ್ಲಾ NIS ಪರಿಚಾರಕಗಳನ್ನು ಪಿಂಗ್ ಮಾಡುತ್ತದೆ ಹಾಗು ವೇಗವಾಗಿ ಪ್ರತಿಸ್ಪಂದಿಸುವ ಒಂದು ಪರಿಚಾರಕಕ್ಕೆ ಬೈಂಡ್ ಮಾಡುತ್ತದೆ. ಅದಕ್ಕೂ ಮುಂಚೆ, Before,ಪ್ರತಿಯೊಂದು ಗಣಕದಲ್ಲಿ ಲಭ್ಯವಿರುವ ಎಲ್ಲಾ NIS ಪರಿಚಾರಕಗಳನ್ನು /etc/ypbind.conf ಸಂರಚನಾ ಕಡತದಲ್ಲಿ ಪಟ್ಟಿ ಮಾಡಲು ಸೂಚಿಸಲಾಗುತ್ತಿತ್ತು, ಏಕೆಂದರೆ ಅಧಿಕ ಹೊರೆಯಲ್ಲಿರುವ ಪರಿಚಾರಕಗಳೂ ಸಹ ಈ ಪಿಂಗ್‌ಗೆ ಪ್ರತಿಸ್ಪಂದಿಸಬಹುದಾಗಿತ್ತು, ಆಮೂಲಕ ಅವುಗಳ ವಿನಾಕಾರಣ ತಮ್ಮ ಮೇಲೆಯೆ ತಾವು ಹೊರೆಯನ್ನು ಹೆಚ್ಚಿಸಿಕೊಂಡ ಹಾಗಾಗುತ್ತಿತ್ತು. ಈಗ ವ್ಯವಸ್ಥಾಪಕರಿಗೆ ಪ್ರತಿ ಗಣಕದಲ್ಲಿನ ypbind.conf ನಲ್ಲಿ ಲಭ್ಯವಿರುವ NIS ಪರಿಚಾರಕಗಳಲ್ಲಿ ಕಡಿಮೆ ಸಂಖ್ಯೆಯವುಗಳನ್ನು ಪಟ್ಟಿ ಮಾಡಲು ಸೂಚಿಸಲಾಗುತ್ತದೆ, ಹಾಗು ಪ್ರತಿ ಗಣಕಕ್ಕೂ ಈ ಪಟ್ಟಿಯನ್ನು ಬದಲಾಯಿಸುವಂತೆ ಸೂಚಿಸಲಾಗುತ್ತದೆ. ಈ ಮೂಲಕ , NIS ಪರಿಚಾರಕಗಳು ಎಲ್ಲಾ ಗಣಕಗಳಿಗೂ ದೊರೆಯುವಂತೆ ಎಲ್ಲಾ NIS ಪರಿಚಾರಕಗಳನ್ನು ಪಟ್ಟಿ ಮಾಡದ ಕಾರಣ ತಾವಾಗಿಯೆ ತಮ್ಮ ಹೊರೆಯನ್ನು ಕಡಿಮೆ ಮಾಡಿಕೊಂಡಂತಾಗುತ್ತದೆ.

  • OpenMotif ಅನ್ನು ಅಪ್‌ಸ್ಟ್ರೀಮ್ ಆವೃತ್ತಿ 2.3.1 ಗೆ ಮರು-ಬೇಸ್ ಮಾಡಲಾಗಿದೆ. ಈ ಅಪ್‍ಡೇಟ್ ಈ ಕೆಳಗಿನ ಹಲವಾರು ದೋಷ ಪರಿಹಾರಗಳನ್ನು ಒದಗಿಸುತ್ತದೆ:

    • Grab ಹಾಗು Ungrab ಸನ್ನಿವೇಶಗಳನ್ನು OpenMotif ನಿಭಾಯಿಸುವಾಗ ಎದುರಾಗುತ್ತಿದ್ದ ಒಂದು ದೋಷವನ್ನು ಈಗ ಸರಿಪಡಿಸಲಾಗಿದೆ. ಈ ಹಿಂದಿನ ಬಿಡುಗಡೆಗಳಲ್ಲಿ, ಈ ದೋಷದಿಂದಾಗಿ ಪ್ರದರ್ಶಕವು ಲಾಕ್ ಆಗುತ್ತಿತ್ತು.

    • nedit ನಲ್ಲಿನ ಒಂದು ದೋಷದ ಕಾರಣದಿಂದಾಗಿ, nedit ಚಿತ್ರಾತ್ಮಕ ಬಳಕೆದಾರ ಸಂಪರ್ಕಸಾಧನವನ್ನು(gui) ಬಳಸುವಾಗ ಅದು ಕುಸಿತಗೊಳ್ಳುತ್ತಿತ್ತು. ಇದಕ್ಕೆ ಕಾರಣ, ಕೆಲವೊಮ್ಮೆ ಅಂಶಗಳನ್ನು ಆಯ್ಕೆ ಮಾಡುವಾಗ ಒಂದು ಸೆಂಗ್‌ಮೆಂಟೇಶನ್ ವಿಫಲತೆಗೆ ಕಾರಣವಾಗುತ್ತಿದ್ದಂತಹ ಸಂಜ್ಞೆಯಲ್ಲಿನ ಒಂದು ಕ್ರಿಯೆಯಿಂದಾಗಿ ಹೀಗೆ ಆಗುತ್ತಿತ್ತು, ಹಾಗು ಅದನ್ನು ಈಗ ಸರಿಪಡಿಸಲಾಗಿದೆ.

  • dbus ಅನ್ನು ಈಗ ಆವೃತ್ತಿ 1.1.2 ಗೆ ಮರು-ಬೇಸ್ ಮಾಡಲಾಗಿದೆ. ಬಹು-ಎಳೆಗಳ(ಮಲ್ಟಿ-ತ್ರೆಡೆಡ್) ಪ್ರೊಗ್ರಾಮ್‌ಗಳು dbus ನಲ್ಲಿ ಒಂದು ಬಿಕ್ಕಟ್ಟಿಗೆ ಕಾರಣವಾಗುತ್ತಿದಂತಹ ಒಂದು ದೋಷವನ್ನು ಈ ಅಪ್‌ಡೇಟ್‌ನಲ್ಲಿ ಪರಿಹರಿಸಲಾಗಿದೆ. ಈ ಮೊದಲಿನ ಬಿಡುಗಡೆಗಳಲ್ಲಿ, ಒಂದು ಎಳೆಯು dbus ಅನ್ನು ಆಲಿಸಿ ನಂತರ ಸಂದೇಶಗಳನ್ನು ಸಂಸ್ಕರಿಸುವಷ್ಟರಲ್ಲಿಯೆ, ಎರಡನೆ ಎಳೆಯು dbus ಗೆ ಸಂದೇಶವನ್ನು ಕಳುಹಿಸುತ್ತಿತ್ತು.

  • strace ಅನ್ನು ಆವೃತ್ತಿ 4.5.18 ಗೆ ಮರು-ಬೇಸ್ ಮಾಡಲಾಗಿದೆ. ಇದು ಈ ಕೆಳಗಿನ ಹಲವಾರು ದೋಷಗಳನ್ನು ಪರಿಹರಿಸುತ್ತದೆ:

    • ಕೆಲವೊಂದು ಬಹು-ಎಳೆಗಳ(ಮಲ್ಟಿ-ತ್ರೆಡೆಡ್) ಪ್ರೊಗ್ರಾಂಗಳಲ್ಲಿ (ವಿಶೇಷವಾಗಿ 64-ಬಿಟ್ ಗಣಕಗಳಲ್ಲಿ) -f ಆಯ್ಕೆಯನ್ನು ಬಳಸಿದಾಗ strace ನ ಕುಸಿತಕ್ಕೆ ಕಾರಣವಾದಂತಹ ಒಂದು ದೋಷವನ್ನು ಈಗ ಪರಿಹರಿಸಲಾಗಿದೆ.

    • strace ನ 64-ಬಿಟ್ ಆವೃತ್ತಿಯನ್ನು, ಒಂದು vfork() ಕ್ರಿಯೆಯ ಮನವಿಯನ್ನು 32-ಬಿಟ್ ಪ್ರಕ್ರಿಯೆಯಲ್ಲಿ ಕಾರ್ಯಗತಗೊಳಿಸದಂತೆ ತಡೆಯುತ್ತಿದ್ದಂತಹ ಒಂದು ದೋಷವನ್ನು ಈ ಸರಿಪಡಿಸಲಾಗಿದೆ.

  • cpuspeed ಅನ್ನು ಆವೃತ್ತಿ 1.2.1-5 ಗೆ ಅಪ್‌ಡೇಟ್ ಮಾಡಲಾಗಿದೆ. ಈ ಅಪ್‌ಡೇಟ್‌ನೊಂದಿಗೆ, ಬೇರೆಲ್ಲಾ ಘಟಕಗಳು ವಿಫಲಗೊಂಡಾಗ cpuspeed init ಸ್ಕ್ರಿಪ್ಟ್‍ ಈಗ speedstep-centrino ಘಟಕವನ್ನು ಲೋಡ್ ಮಾಡುತ್ತದೆ. ಇದರ ಜೊತೆಯಲ್ಲಿಯೆ, Powernow-k8 ಘಟಕವನ್ನು ಲೋಡ್ ಆಗದಂತೆ ತಡೆಯುತ್ತಿದ್ದಂತಹ ಒಂದು ಬಳಕೆದಾರ-ಸ್ಥಳ ದೋಷವನ್ನು ಪರಿಹರಿಸಲಾಗಿದೆ.

  • ಉಪಕರಣಗಳ ಸೂಟ್ ಆದಂತಹ frysk ಅನ್ನು ಈ ವಿತರಣೆಯಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. frysk ಅನ್ನು Red Hat Enterprise Linux 5.0 ಯಲ್ಲಿ ಒಂದು ತಂತ್ರಜ್ಞಾನ ಮುನ್ನೋಟವಾಗಿ ಪರಿಚಯಿಸಲಾಗಿತ್ತು.

  • ಈ ಮೊದಲು, iostat -x ಆಜ್ಞೆಯಿಂದ ಒದಗಿಸಲಾಗುತ್ತಿದ್ದ ವಿಭಜನಾ I/O ಅಂಕಿಅಂಶಗಳು ಅಪೂರ್ಣವಾಗಿರುತ್ತಿತ್ತು. ಈ ಅಪ್‌ಡೇಟ್‌ನಲ್ಲಿ, ವಿಭಜನಾ ಅಂಕಿ ಅಂಶಗಳನ್ನು ಡಿಸ್ಕಿನ ಅಂಕಿಅಂಶಗಳಂತೆ ಲೆಕ್ಕ ಹಾಕಲಾಗಲಿದ್ದು, ಇದು ವಿಭಜನಾ ಮಟ್ಟದಲ್ಲಿ ಸಮಂಜಸವಾದ ಹಾಗು ವಿಸ್ತಾರವಾದ I/O ಅಂಕಿಅಂಶಗಳನ್ನು ಒದಗಿಸುತ್ತದೆ.

  • ಒಂದು ಗುಪ್ತಪದವನ್ನು ಬಹಿರಂಗಪಡಿಸುವ ಲೋಪವು Dovecot ಅಂಚೆ ಪರಿಚಾರಕಕ್ಕಾಗಿನ ಸಂರಚನಾ ಕಡತದಲ್ಲಿ ಕಂಡುಬಂದಿದೆ. ಎಲ್ಲಿಯಾದರೂ ಒಂದು ಗಣಕದಲ್ಲಿ ssl_key_password ಆಯ್ಕೆಯನ್ನು ಸೂಚಿಸಲಾಗಿದ್ದಲ್ಲಿ, ಯಾವುದೆ ಸ್ಥಳೀಯ ಬಳಕೆದಾರನು SSL ಕೀಲಿ ಗುಪ್ತಪದವನ್ನು ನೋಡಬಹುದು. (CVE-2008-4870)

    ಸೂಚನೆ

    ಈ ನ್ಯೂನತೆಯು ಧಾಳಿಕೋರರು SSL ಕೀಲಿಯಲ್ಲಿರುವುದನ್ನು ಪಡೆದುಕೊಳ್ಳಲು ಸಾಧ್ಯವಿರಲಿಲ್ಲ. ಕೀಲಿ ಕಡತಕ್ಕೆ ನಿಲುಕಣೆಯನ್ನು ಹೊಂದಿರದ ಯಾರೋ ಒಬ್ಬ ಬಳಕೆದಾರನಿಗೆ ಕೇವಲ ಗುಪ್ತಪದದಿಂದ ಯಾವುದೆ ಉಪಯೋಗವಾಗುತ್ತಿರಲಿಲ್ಲ.

    ಆದರೆ ಇದನ್ನೂ ಸಹ ಉತ್ತಮವಾಗಿ ಸಂರಕ್ಷಿಸಲು, ಈಗ dovecot.conf ಕಡತವು "!include_try" ನಿರ್ದೇಶಕವನ್ನು ಬೆಂಬಲಿಸುತ್ತದೆ. ssl_key_password ಆಯ್ಕೆಯನ್ನು dovecot.conf ಇಂದ ತೆಗೆದು ಕೇವಲ ನಿರ್ವಾಹಕನಿಂದ ಮಾತ್ರವೆ ಮಾಲಿಕತ್ವವನ್ನು ಹೊಂದಿರುವ, ಓದಬಹುದಾದಂತಹ ಹಾಗು ಬರೆಯಬಹುದಾದಂತಹ (ಅಂದರೆ 0600) ಒಂದು ಹೊಸ ಕಡತದಲ್ಲಿ ಇರಿಸಲಾಗಿದೆ. ಈ ಕಡತವನ್ನು dovecot.conf ನಲ್ಲಿ !include_try /path/to/password/file ಆಯ್ಕೆಯನ್ನು ಹೊಂದಿಸುವ ಉಲ್ಲೇಖಿಸಬೇಕು.

7.2. x86_64 ಆರ್ಕಿಟೆಕ್ಚರುಗಳು

  • ksh ಅನ್ನು ಆವೃತ್ತಿ 2008-02-02 ಗೆ ಮರು-ಬೇಸ್ ಮಾಡಲಾಗಿದೆ. ಈ ಅಪ್‌ಡೇಟ್, ಮಲ್ಟಿ-ಬೈಟ್‌ ಕ್ಯಾರೆಕ್ಟರ್ ನಿಭಾವಣೆ, ಹಲವಾರು ಕಾರ್ಯ ನಿಯಂತ್ರಣ ತೊಂದರೆಗಳು ಹಾಗು ಅಪ್‌ಸ್ಟ್ರೀಮ್‌ನ ಹಲವಾರು ದೋಷ ಪರಿಹಾರಗಳನ್ನು ಒದಗಿಸುತ್ತದೆ. ksh ಗಾಗಿನ ಈ ಅಪ್‌ಡೇಟ್ ಈಗಿರುವ ಸ್ಕ್ರಿಪ್ಟುಗಳೊಂದಿಗಿನ ಹೊಂದಾಣಿಕೆಯನ್ನು ಉಳಿಸಿಕೊಂಡಿದ ಎಂಬುದನ್ನು ನೆನಪಿಡಿ.

7.3. s390x ಆರ್ಕಿಟೆಕ್ಚರುಗಳು

  • vmconvert ಅನ್ನು vmur ಸಾಧನ ನೋಡ್ (/dev/0.0.000c) ಮೇಲೆ ಸರಿಯಾಗಿ ಕೆಲಸ ಮಾಡದಂತೆ ಒಂದು ದೋಷವು ತಡೆಯುತ್ತಿತ್ತು. ಇದರಿಂದಾಗಿ vmur ಸಾಧನದ ಮೇಲೆ ಡಂಪ್‌ಗಳನ್ನು ನಿಲುಕಿಸಿಕೊಳ್ಳಲು vmconvert ಪ್ರಯತ್ನಿಸಿದಾಗ, ಈ ದೋಷದೊಂದಿಗೆ ವಿಫಲಗೊಳ್ಳುತ್ತಿತ್ತು,vmconvert: Open dump file failed! (Permission denied). ಈ ಬಿಡುಗಡೆಯಲ್ಲಿ ಮಾಡಲಾದ s390utils ನ ಒಂದು ಅಪ್‌ಡೇಟ್ ಈ ತೊಂದರೆಯನ್ನು ಪರಿಹರಿಸುತ್ತದೆ.

  • mon_procd ಡೀಮನ್ ಹಾಗು mon_fsstatd ಡೀಮನ್‌ಗಾಗಿನ init ಸ್ಕ್ರಿಪ್ಟ್‍ ಹಾಗು config ಕಡತವು s390utils ಪ್ಯಾಕೇಜಿನಲ್ಲಿ ಇರಲಿಲ್ಲ. ಅದರ ಪರಿಣಾಮವಾಗಿ ಈ ಡೀಮನ್‌ಗಳನ್ನು ನಿರ್ಮಿಸಿ ಬಳಸಲಾಗುತ್ತಿರಲಿಲ್ಲ. ಈ ಅಪ್‌ಡೇಟ್‌ನಲ್ಲಿ ಬಿಟ್ಟು ಹೋಗಿದ್ದ ಈ ಕಡತಗಳನ್ನು ಸೇರಿಸಲಾಗಿದ್ದು, ಇದು ಈ ದೋಷವನ್ನು ಪರಿಹರಿಸುತ್ತದೆ.

7.4. PowerPC ಆರ್ಕಿಟೆಕ್ಚರುಗಳು

  • ಈ ಆರ್ಕಿಟೆಕ್ಚರಿನಲ್ಲಿ ehci_hcd ಘಟಕವು ಮರು-ಲೋಡ್‌ ಆಗದಂತೆ ತಡೆಯುತ್ತಿದ್ದಂತಹ ಒಂದು ದೋಷವನ್ನು ಈಗ ಪರಿಹರಿಸಲಾಗಿದೆ. ಇದು Belkin 4-port PCI-Express USB Lily ಅಡಾಪ್ಟರ್ (ಅದೆ ಬಗೆಯ ಇನ್ನಿತರೆ ಸಾಧನಗಳು) ಈಗ Red Hat Enterprise Linux 5 ನಲ್ಲಿ ehci_hcd ಘಟಕವನ್ನು ಬಳಸಿದಾಗ ಸರಿಯಾಗಿ ಕೆಲಸ ಮಾಡುತ್ತವೆ ಎಂದು ಖಚಿತಪಡಿಸುತ್ತದೆ.

  • libhugetlbfs ಲೈಬ್ರರಿಯನ್ನು ಈಗ ಆವೃತ್ತಿ 1.3 ಕ್ಕೆ ಮರು-ಬೇಸ್ ಮಾಡಲಾಗಿದೆ. ಈ ಅಪ್‌ಡೇಟ್ ಲೈಬ್ರರಿಗೆ ಹಲವಾರು ಅಪ್‌ಸ್ಟ್ರೀಮ್ ಸುಧಾರಣೆಗಳನ್ನು ಅನ್ವಯಿಸಲಿದ್ದು, ಆ ಮೂಲಕ ಬೃಹತ್(Huge) ಪುಟಗಳನ್ನು ಬಳಸುವ ಅನ್ವಯಗಳ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.

    libhugetlbfs ಗಾಗಿನ ಅಪ್‌ಡೇಟ್‌ಗಳ ಒಂದು ಸಂಪೂರ್ಣಪಟ್ಟಿಗಾಗಿ, ಈ ಕೆಳಗಿನ ಕೊಂಡಿಯನ್ನು ನೋಡಿ:

    http://sourceforge.net/mailarchive/message.php?msg_name=20080515170754.GA1830%40us.ibm.com

  • Red Hat Enterprise Linux 5.2 ರಲ್ಲಿ, ಈಗಿರುವ 32-ಬಿಟ್ httpd ಯ ಜೊತೆಗೆ httpd ಯ ಒಂದು 64-ಬಿಟ್ ಆವೃತ್ತಿಯನ್ನೂ ಸಹ ಸೇರಿಸಲಾಗಿತ್ತು. ಒಬ್ಬ ಬಳಕೆದಾರನು ಎರಡೂ ಆವೃತ್ತಿಯನ್ನು ಅನುಸ್ಥಾಪಿಸಿದ್ದಲ್ಲಿ, ಒಂದು httpd ಅಸಮಂಜಸತೆ ತಲೆದೋರಿ, ಅದರಿಂದ httpd ಯು ಸರಿಯಾಗಿ ಕೆಲಸ ಮಾಡದಂತೆ ತಡೆಯುಂಟಾಗುತ್ತಿತ್ತು.

    ಈ ಸಮಸ್ಯೆಯನ್ನು ಪರಿಹರಿಸಲು, httpd ಯ 64-ಬಿಟ್ ಆವೃತ್ತಿಯನ್ನು ಈ ಬಿಡುಗಡೆಯಿಂದ ತೆಗೆದು ಹಾಕಲಾಗಿದೆ. ಈ ಬಿಡುಗಡೆಗಾಗಿ httpd ಅನ್ನು ನವೀಕರಿಸಿದಾಗ httpd ಯ 64-ಬಿಟ್ ಆವೃತ್ತಿಯು ತಾನಾಗಿಯೆ ತೆಗೆದು ಹಾಕಲ್ಪಡುತ್ತದೆ.

8. ಗೊತ್ತಿರುವ ತೊಂದರೆಗಳು

8.1. ಎಲ್ಲಾ ಆರ್ಕಿಟೆಕ್ಚರುಗಳು

  • ನಿರ್ವಹಣಾ ಕಡತವ್ಯವಸ್ಥೆಯನ್ನು ಗೂಢಲಿಪೀಕರಿಸಲು ಹೊಸ ಡಿಸ್ಕ್‍ ಗೂಢಲಿಪೀಕರಣ ಸವಲತ್ತನ್ನು ಬಳಸಿದರೆ, ಗಣಕವನ್ನು ಸ್ಥಗಿತಗೊಳಿಸುವಾಗ ಕನ್ಸೋಲಿನಲ್ಲಿ ಈ ಕೆಳಗಿನ ದೋಷ ಸಂದೇಶವು ಕಾಣಿಸಿಕೊಳ್ಳುತ್ತದೆ:

    Stopping disk encryption [FAILED]

    ಈ ಸಂದೇಶವನ್ನು ಆಲಕ್ಷಿಸುವುದರಿಂದ ಯಾವುದೆ ತೊಂದರೆ ಉಂಟಾಗುವುದಿಲ್ಲ, ಹಾಗು ಸ್ಥಗಿತ ಕಾರ್ಯವು ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.

  • ಗೂಢಲಿಪೀಕರಣಗೊಂಡ ಸಾಧನವನ್ನು ಬಳಸುವಾಗ, ಬೂಟ್‌ ಆಗುವ ಸಮಯದಲ್ಲಿ ಈ ಕೆಳಗಿನ ದೋಷ ಸಂದೇಶವು ಕಾಣಿಸಿಕೊಳ್ಳಬಹುದು:

    insmod: error inserting '/lib/aes_generic.ko': -1 File exists
    ಇದರಿಂದ ಯಾವುದೆ ಅಪಾಯವಿರುವುದಿಲ್ಲ ಹಾಗು ಇದನ್ನು ನಿರ್ಲಕ್ಷಿಸಬಹುದಾಗಿದೆ.

  • multipath ನ ಮೇಲೆ ಬಹು ಸಾಧನ (MD) RAID ಅನ್ನು ಬಳಸಿಕೊಂಡು ಅನುಸ್ಥಾಪಿಸುವುದರಿಂದ ಬೂಟ್‌ ಆಗದೆ ಇರುವಂತಹ ಒಂದು ಗಣಕಕ್ಕೆ ಕಾರಣವಾಗುತ್ತದೆ. RAID ಅನ್ನು ಆಂತರಿಕವಾಗಿ ಒದಗಿಸುವ Storage Area Network (SAN) ಸಾಧನಗಳಿಗಾಗಿನ multipath ಮೇಲೆ ಯಾವುದೆ ಪರಿಣಾಮವಾಗುವುದಿಲ್ಲ.

  • ಅನೇಕ ಸಂಖ್ಯೆಯ LUN ಗಳನ್ನು ಒಂದು ನೋಡ್‌ಗೆ ಸೇರಿಸಿದಾಗ, ಅದಕ್ಕಾಗಿ multipath ಸಾಧನ ನೋಡ್‌ಗಳನ್ನು ನಿರ್ಮಿಸಲು udev ಗಾಗಿ ತೆಗೆದುಕೊಳ್ಳುವ ಸಮಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ನಿಮಗೆ ಈ ತೊಂದರೆಯು ಎದುರಾದಲ್ಲಿ, /etc/udev/rules.d/40-multipath.rules ಕಡತದಲ್ಲಿನ ಈ ಕೆಳಗಿನ ಸಾಲನ್ನು ಅಳಿಸುವುದರಿಂದ ಅದನ್ನು ಸರಿಪಡಿಸಬಹುದು:

    KERNEL!="dm-[0-9]*", ACTION=="add", PROGRAM=="/bin/bash -c '/sbin/lsmod | /bin/grep ^dm_multipath'", RUN+="/sbin/multipath -v0 %M:%m"
    ಈ ಸಾಲು, ಪ್ರತಿಬಾರಿಯೂ ನೋಡ್‌ಗೆ ಒಂದು ಖಂಡ ಸಾಧನವನ್ನು ಸೇರಿಸಿದಾಗ multipath ಅನ್ನು ಚಲಾಯಿಸಲು udev ಕಾರಣವಾಗುತ್ತದೆ. ಈ ಸಾಲನ್ನು ತೆಗೆದು ಹಾಕಿದ ಮೇಲೆಯೂ ಸಹ, ಸ್ವಯಂಚಾಲಿತವಾಗಿ multipath ಸಾಧನಗಳನ್ನು ನಿರ್ಮಿಸಲು multipathd ಕಾರಣವಾಗುತ್ತದೆ, ಹಾಗು multipathed ನಿರ್ವಹಣಾ ಕಡತವ್ಯವಸ್ಥೆಯನ್ನು ಹೊಂದಿರುವ ನೋಡ್‌ಗಳಿಗಾಗಿ multipath ಅನ್ನು ಇನ್ನೂ ಸಹ ಬೂಟ್‌ ಸಮಯದಲ್ಲಿ ಆರಂಭಿಸಲಾಗುವುದು.ಒಂದೇ ಒಂದು ಬದಲಾವಣೆ ಎಂದರೆ multipathd ಯು ಚಾಲನೆಯಲ್ಲಿದ್ದಾಗ multipath ಸಾಧನಗಳು ತಾವಾಗಿಯೆ ನಿರ್ಮಿತಗೊಳ್ಳುವುದಿಲ್ಲ ಹಾಗು ಇದು ದೊಡ್ಡ ಸಂಖ್ಯೆಯ multipath ಬಳಕೆದಾರರಿಗೆ ಒಂದು ತೊಂದರೆ ಎನಿಸುವುದಿಲ್ಲ.

  • Red Hat Enterprise Linux 5.3 ಕ್ಕೂ ಮುಂಚಿನ ಆವೃತ್ತಿಯಿಂದ ನವೀಕರಿಸುವಾಗ ಈ ಕೆಳಗಿನ ದೋಷವು ಎದುರಾಗಬಹುದು:

    Updating  : mypackage                 ################### [ 472/1655]
    rpmdb: unable to lock mutex: Invalid argument

    ಲಾಕಿಂಗ್ ತೊಂದರೆಯ ಕಾರಣವಾಗಿದ್ದಂತಹ glibc ಯಲ್ಲಿ futex ಲಾಕಿಂಗ್ ಅನ್ನು ಹಂಚಿಕೊಳ್ಳುವ 5.2 ಹಾಗು 5.3 ರ ನಡುವೆ ಪ್ರತಿ-ಪ್ರಕ್ರಿಯೆಗೆ ಅನುಗುಣವಾಗಿ ಸುಧಾರಿಸಲಾಗಿದೆ. ಪರಿಣಾಮವಾಗಿ, 5.2 glibc ಯನ್ನು ಬಳಸಿಕೊಂಡು ಚಲಾಯಿತಗೊಳ್ಳುವ ಪ್ರೊಗ್ರಾಂಗಳು 5.3 glibc ಬಳಸಿಕೊಂಡು ಚಲಾಯಿತಗೊಳ್ಳುವ ಪ್ರೊಗ್ರಾಂಗಳೊಂದಿಗೆ ಸರಿಯಾಗಿ futex ಲಾಕಿಂಗ್ ಹಂಚಿಕೊಳ್ಳುವುದಿಲ್ಲ.

    ಒಂದು ಪ್ಯಾಕೇಜಿನ ಅನುಸ್ಥಾಪಿತ ಸ್ಕ್ರಿಪ್ಟುಗಳು rpm ಅನ್ನು ಬಯಸಿದಾಗ ಎದುರಾಗುವ ಒಂದು ತೊಂದರೆಯ ಕಾರಣದಿಂದಾಗಿ ಈ ದೋಷ ಸಂದೇಶವು ಕಂಡುಬರುತ್ತದೆ. ನವೀಕರಣವನ್ನು ನಡೆಸುವ rpm ಸನ್ನಿವೇಶವು ನವೀಕರಣದಾದ್ಯಂತ ಮುಂಚಿನ glibc ಯನ್ನು ಬಳಸುತ್ತದೆ, ಆದರೆ ಸ್ಕ್ರಿಪ್ಟಿನಲ್ಲಿಯೆ ಆರಂಭಿಸಲಾದ rpm ಸನ್ನಿವೇಶವು ಹೊಸ glibc ಯನ್ನು ಬಳಸುತ್ತದೆ.

    ಈ ದೋಷವನ್ನು ತಪ್ಪಿಸಲು, ಮೊದಲು glibc ಅನ್ನು ಪ್ರತ್ಯೇಕವಾಗಿ ನವೀಕರಿಸಿ:

    # yum update glibc
    # yum update
    ನೀವು 5.3 ಅನ್ನು ಅನುಸ್ಥಾಪಿಸಲಾದ ಒಂದು ಗಣಕದಲ್ಲಿ glibc ಯನ್ನು ಮರಳಿ ಹಿಂದಿನ ಆವೃತ್ತಿಗೆ ಬದಲಾಯಿಸಿದಾಗಲೂ ಸಹ ಈ ದೋಷವು ಕಾಣಿಸಕೊಳ್ಳುತ್ತದೆ.

  • Red Hat Enterprise Linux 5 ರಲ್ಲಿನ mvapich ಹಾಗು mvapich2 ಅನ್ನು ಕೇವಲ InfiniBand/iWARP ಒಳ ಸಂಪರ್ಕಗಳನ್ನು ಮಾತ್ರ ಬೆಂಬಲಿಸುವಂತೆ ಕಂಪೈಲ್ ಮಾಡಲಾಗಿದೆ. ಪರಿಣಾಮವಾಗಿ, ಅವು ಎತರ್ನೆಟ್ ಅಥವ ಇನ್ನಿತರೆ ಜಾಲಬಂಧ ಒಳಸಂಪರ್ಕಗಳ ಮೇಲೆ ಚಲಾಯಿತಗೊಳ್ಳುವುದಿಲ್ಲ.

  • ಎರಡಕ್ಕಿಂತ ಹೆಚ್ಚಿನ ಗೂಢಲಿಪೀಕರಣಗೊಂಡ ಸಾಧನಗಳನ್ನು ಒಳಗೊಂಡ ಗಣಕಗಳಲ್ಲಿ, ಅನಕೊಂಡಾವು ಒಂದು ಜಾಗತಿಕ ಗುಪ್ತಪದವನ್ನು ಒದಗಿಸುವ ಆಯ್ಕೆಯನ್ನು ನೀಡುತ್ತದೆ. ಆದರೆ, init ಸ್ಕ್ರಿಪ್ಟುಗಳು ಈ ಸವಲತ್ತನ್ನು ಬೆಂಬಲಿಸುವುದಿಲ್ಲ. ಗಣಕವನ್ನು ಬೂಟ್ ಮಾಡುವಾಗ, ಗೂಢಲಿಪಿಕರಿಸಿದ ಪ್ರತಿಯೊಂದು ಸಾಧನಕ್ಕೂ ಪ್ರತ್ಯೇಕವಾಗಿ ಗುಪ್ತಪದವನ್ನು ನಮೂದಿಸಬೇಕಾಗುತ್ತದೆ.

  • yum ಬಳಸಿಕೊಂಡು openmpi ಅನ್ನು ನವೀಕರಿಸುವಾಗ, ಈ ಕೆಳಗಿನ ಎಚ್ಚರಿಕೆಯು ಕಾಣಿಸಿಕೊಳ್ಳುತ್ತದೆ:

    cannot open `/tmp/openmpi-upgrade-version.*' for reading: No such file or directory
    ಈ ಸಂದೇಶದಿಂದ ಯಾವುದೆ ತೊಂದರೆ ಇರುವುದಿಲ್ಲವಾದ್ದರಿಂದ ಇದನ್ನು ನಿರ್ಲಕ್ಷಿಸಬಹುದು.

  • IRQ SMP ಒಲವು MSI per-vector masking ಸಾಮರ್ಥ್ಯವಿರದೆ message signalled interrupts (MSI) ಅನ್ನು ಬಳಸುವ ಕೆಲವೊಂದು ಸಾಧನಗಳ ಮೇಲೆ ಯಾವುದೆ ಪರಿಣಾಮವನ್ನು ಬೀರುವುದಿಲ್ಲ. ಅಂತಹ ಸಾಧನಗಳ ಉದಾಹರಣೆಗಳೆಂದರೆ, bnx2 ಚಾಲಕವನ್ನು ಬಳಸುವ Broadcom NetXtreme ಎತರ್ನೆಟ್ ಸಾಧನಗಳು.

    ನೀವು ಅಂತಹ ಸಾಧನಗಳಿಗೆ IRQ ಒಲವನ್ನು ಸಂರಚಿಸಬೇಕಿದ್ದರೆ, /etc/modprobe.d/ ನಲ್ಲಿ ಈ ಕೆಳಗಿನ ಸಾಲನ್ನು ಹೊಂದಿರುವ ಒಂದು ಕಡತವನ್ನು ರಚಿಸುವ ಮೂಲಕ MSI ಅನ್ನು ಅಶಕ್ತಗೊಳಿಸಿ:

    options bnx2 disable_msi=1

    ಪರ್ಯಾಯವಾಗಿ ನೀವು ಕರ್ನಲ್ ಘಟಕ ನಿಯತಾಂಕ pci=nomsi ವನ್ನು ಬಳಸಿ MSI ಅನ್ನು ಸಂಪೂರ್ಣವಾಗಿ ಅಶಕ್ತಗೊಳಿಸಬಹುದು.

  • Red Hat Enterprise Linux 5 ನೊಂದಿಗೆ Dell PowerEdge R905 ಪರಿಚಾರಕದಲ್ಲಿನ CD-ROM/DVD-ROM ಸರಿಯಾಗಿ ಕೆಲಸ ಮಾಡುವುದಿಲ್ಲ. ದಯವಿಟ್ಟು ಹೆಚ್ಚಿನ ಮಾಹಿತಿಗಾಗಿ Knowledgebase #13121 ಅನ್ನು ನೋಡಿ: http://kbase.redhat.com/faq/FAQ_103_13121.

    ಮಹತ್ವ

    ಮೇಲೆ ಹೇಳಲಾದ Knowledgebase ಲೇಖನದಲ್ಲಿ ಸೂಚಿಸಲಾದ ವಿಧಾನವನ್ನು ಅನುಸರಿಸಿದಲ್ಲಿ ಉಂಟಾಬಹುದಾದ ತೊಂದರೆಗಳಿಗೆ GSS ನಿಂದ ಯಾವುದೆ ಬೆಂಬಲವು ದೊರೆಯುವುದಿಲ್ಲ.

  • ಅಪ್‍ಡೇಟ್ ಆದಂತಹ /etc/udev/rules.d/50-udev.rules ಕಡತದಲ್ಲಿನ ಒಂದು ದೋಷವು ಟೇಪ್ ಸಾಧನದಲ್ಲಿ 9 ಕ್ಕಿಂತ ಹೆಚ್ಚಿನ ಸಂಖ್ಯೆಯೊಂದಿಗೆ ಅವುಗಳ ಹೆಸರುಗಳನ್ನು ನಿರಂತರವಾಗಿ ರಚಿಸುವುದನ್ನು ತಡೆಯುತ್ತದೆ. ಉದಾಹರಣೆಗೆ, ಒಂದು ಟೇಪ್ ಸಾಧನಕ್ಕೆ nst12 ಎಂಬ ಒಂದು ಹೆಸರಿನೊಂದಿಗೆ ಒಂದು ನಿರಂತರ ಹೆಸರನ್ನು ರಚಿಸುವಂತಿಲ್ಲ.

    ಇದಕ್ಕಾಗಿನ ಬೇರೊಂದು ಪರಿಹಾರವೆಂದರೆ, /etc/udev/rules.d/50-udev.rules ನಲ್ಲಿ ಇರುವ ಪ್ರತಿ nst[0-9] ಸಾಲಿನಲ್ಲಿ ಒಂದು ನಕ್ಷತ್ರಚಿಹ್ನೆ(*)ಯನ್ನು ಸೇರಿಸಿ.

  • smartctl ಉಪಕರಣವು SATA ಸಾಧನಗಳಿಂದ SMART ನಿಯತಾಂಕಗಳನ್ನು ಸರಿಯಾಗಿ ಓದುವುದಿಲ್ಲ.

  • openmpi ಹಾಗು lam ನ ಹಿಂದಿನ ಆವೃತ್ತಿಯಲ್ಲಿನ ಒಂದು ತೊಂದರೆಯು ಈ ಪ್ಯಾಕೇಜ್‍ಗಳನ್ನು ನವೀಕರಿಸದಂತೆ ತಡೆಯಬಹುದು. ಈ ತೊಂದರೆಯುಈ ಕೆಳಗಿನ ದೋಷದಲ್ಲಿ ವ್ಯಕ್ತಗೊಳ್ಳುತ್ತದೆ (openmpi ಅಥವ lam ಅನ್ನು ನವೀಕರಿಸಲು ಪ್ರಯತ್ನಿಸುವಾಗ):

    error: %preun(openmpi-[version]) scriptlet failed, exit status 2

    ಇದಲ್ಲದೆ, openmpi ಹಾಗು lam ಗಳ ಇತ್ತೀಚಿನ ಆವೃತ್ತಿಗಳನ್ನು ಅನುಸ್ಥಾಪಿಸಲು ಅವುಗಳ ಹಳೆಯ ಆವೃತ್ತಿಯನ್ನು ಕೈಯಾರೆ ತೆಗೆದು ಹಾಕಬೇಕಾಗುತ್ತದೆ. ಹಾಗೆ ಮಾಡಲು,ಈ ಕೆಳಗಿನ rpm ಆಜ್ಞೆಯನ್ನು ಬಳಸಿ:

    rpm -qa | grep '^openmpi-\|^lam-' | xargs rpm -e --noscripts --allmatches

  • dm-multipath ಅನ್ನು ಬಳಸುವಾಗ, /etc/multipath.conf ನಲ್ಲಿ features "1 queue_if_no_path" ಅನ್ನು ಸೂಚಿಸಲ್ಪಟ್ಟಲ್ಲಿ ಒಂದು ಅಥವ ಹೆಚ್ಚಿನ ಪಥಗಳು ಮರುಸ್ಥಾಪಿತಗೊಳ್ಳುವವರೆಗೂ I/O ಅನ್ನು ಸೂಚಿಸುವ ಯಾವುದೆ ಪ್ರಕ್ರಿಯೆ ಸ್ಥಬ್ಧಗೊಂಡಿರುತ್ತದೆ.

    ಇದನ್ನು ತಪ್ಪಿಸಲು, /etc/multipath.conf ನಲ್ಲಿ no_path_retry [N] ಅನ್ನು ಹೊಂದಿಸು (ಇಲ್ಲಿ [N] ಎನ್ನುವುದು ಗಣಕವು ಒಂದು ಪಥದಲ್ಲಿ ಮರುಪ್ರಯತ್ನಿಸುವ ಸಂಖ್ಯೆಯಾಗಿರುತ್ತದೆ). ಹೀಗೆ ಮಾಡುವಾಗ, /etc/multipath.conf ನಿಂದ features "1 queue_if_no_path" ಆಯ್ಕೆಯನ್ನೂ ಸಹ ತೆಗೆದು ಹಾಕಿ.

    "1 queue_if_no_path" ಅನ್ನು ಬಳಸಿಕೊಂಡು ಇಲ್ಲಿ ನೀಡಲಾದ ತೊಂದರೆಯನ್ನು ನೋಡಬೇಕೆಂದರೆ, ಒಂದು ನಿರ್ದಿಷ್ಟ LUN ನಲ್ಲಿ (ಅಂದರೆ ಯಾವುದಕ್ಕೆ ಎಲ್ಲಾ ಮಾರ್ಗಗಳು ಲಭ್ಯವಿಲ್ಲವೋ ಅದಕ್ಕೆ) ಪಾಲಿಸಿಯನ್ನು ಸಂಪಾದಿಸಲು dmsetup ಅನ್ನು ಬಳಸಿ.

    ಇದನ್ನು ತೋರಿಸಲು: dmsetup message [device] 0 "fail_if_no_path" ಅನ್ನು ಚಲಾಯಿಸಿ, ಇಲ್ಲಿ [device] ಯು ಯಾವುದಕ್ಕೆ ನೀವು ಪಾಲಿಸಿಯನ್ನು "queue_if_no_path" ಇಂದ "fail_if_no_path"ಗೆ ಬದಲಾಯಿಸಬೇಕೆಂದಿರುವಿರೊ ಆ ಬಹುಮಾರ್ಗ(ಮಲ್ಟಿಪಾತ್) ಸಾಧನದ ಹೆಸರಾಗಿದೆ (ಉದಾ. mpath2; ಮಾರ್ಗವನ್ನು ಒದಗಿಸಬೇಡಿ).

  • ಅನುಸ್ಥಾಪಿತಗೊಂಡಿರುವ ಒಂದು ಕರ್ನಲ್‍ನ ಅನೇಕ ಆವೃತ್ತಿಗಳನ್ನು ಶಕ್ತಗೊಳಿಸುವುದನ್ನು ಬೆಂಬಲಿಸುವುದಿಲ್ಲ. ಇದಲ್ಲದೆ, ಒಂದು ಕರ್ನಲ್ ಘಟಕದಲ್ಲಿ ಒಂದು ದೋಷ ಕಂಡುಬಂದರೆ ಕೆಲವು ಸಂದರ್ಭದಲ್ಲಿ ಅದೆ ಕರ್ನಲ್‍ ಘಟಕದ ಹಳೆಯ ಆವೃತ್ತಿಯು ಶಕ್ತಗೊಳಿಸಲ್ಪಡುತ್ತದೆ.

    ನೀವು ಅನುಸ್ಥಾಪಿತಗೊಂಡಿರುವ ಕರ್ನಲ್‍ನ ಒಂದು ಹೊಸ ಆವೃತ್ತಿಯನ್ನು ಅನುಸ್ಥಾಪಿಸುವಾಗ, ಹಳೆಯ ಆವೃತ್ತಿಯನ್ನು ಅಳಿಸಿ ಹಾಕುವಂತೆ Red Hat ಸಲಹೆ ಮಾಡುತ್ತದೆ.

  • NFS ಮೂಲದಿಂದ ಸಂರಚಿತಗೊಂಡ IBM Bladecenter QS21 ಅಥವ QS22 ನಲ್ಲಿ kdump ಅನ್ನು ಚಲಾಯಿಸುವುದು ವಿಫಲಗೊಳ್ಳುತ್ತದೆ.ಇದನ್ನು ತಪ್ಪಿಸಲು, ಒಂದು NFS dump ಟಾರ್ಗೆಟ್ ಅನ್ನು /etc/kdump.conf ನಲ್ಲಿ ಸೂಚಿಸಿ.

  • IBM T60 ಲ್ಯಾಪ್‍ಟಾಪ್‍ಗಳನ್ನು ಸ್ಥಗಿತಗೊಳಿಸಿ ಒಂದು ಡಾಕಿಂಗ್ ಸ್ಟೇಶನ್‍ಗೆ ಜೋಡಿಸಿದಾಗ, ಅವು ಆಫ್ ಆಗುತ್ತವೆ. ಇದನ್ನು ತಪ್ಪಿಸಲು ಗಣಕವನ್ನು acpi_sleep=s3_bios ಆರ್ಗ್ಯುಮೆಂಟ್‍ನೊಂದಿಗೆ ಆರಂಭಿಸಿ.

  • IBM ಬ್ಲೇಡ್ ಸೆಂಟರ್ ಗಾಗಿನ QLogic iSCSI ವಿಸ್ತರಣಾ ಕಾರ್ಡ್ ಎತರ್ನೆಟ್ ಹಾಗು iSCSI ಕಾರ್ಯ ಎರಡನ್ನೂ ಒದಗಿಸುತ್ತದೆ. ಕಾರ್ಡಿನಲ್ಲಿನ ಕೆಲವೊಂದು ಭಾಗವನ್ನು ಎರಡೂ ಹಂಚಿಕೆಗೊಂಡಿವೆ. ಆದರೆ ಈಗಿನ qla3xxx ಹಾಗು qla4xxx ಚಾಲಕಗಳುಎತರ್ನೆಟ್ ಹಾಗು iSCSI ಕಾರ್ಯಗಳನ್ನು ಪ್ರತ್ಯೇಕವಾಗಿ ಬೆಂಬಲಿಸುತ್ತದೆ. ಎರಡೂ ಚಾಲಕಗಳು ಎತರ್ನೆಟ್ ಹಾಗು iSCSI ಕಾರ್ಯಗಳನ್ನು ಒಂದೇ ಸಮಯದಲ್ಲಿ ಬಳಸುವುದನ್ನು ಬೆಂಬಲಿಸುವುದಿಲ್ಲ.

    ಈ ಮಿತಿಯ ಕಾರಣ, ಅನುಕ್ರಮವಾದ ಮರುಸಿದ್ಧಗೊಳಿಸಲ್ಪಟ್ಟಾಗ (ಅನುಕ್ರಮವಾದ ifdown/ifup ಆಜ್ಞೆಗಳು) ಸಾಧನವು ಸ್ಥಬ್ಧಗೊಳ್ಳಬಹುದು. ಇದನ್ನು ತಪ್ಪಿಸಲು, ifup ನಂತರ ifdown ಅನ್ನು ನೀಡುವ ಮೊದಲು ಒಂದು 10-ಸೆಕೆಂಡುಗಳ ಕಾಲಾವಧಿಯನ್ನು ನೀಡಿ. ಇದರ ಜೊತೆಗೆ, ifdown ನ ನಂತರ ifup ಅನ್ನು ಒದಗಿಸುವ ಮೊದಲು ಅದೆ 10-ಸೆಕೆಂಡುಗಳ ಕಾಲಾವಧಿಯನ್ನು ನೀಡಿ. ifup ಯನ್ನು ಒದಗಿಸಿದ ನಂತರ ಎಲ್ಲಾ ಕ್ರಿಯೆಗಳನ್ನು ಸ್ಥಿರೀಕರಿಸಲು ಹಾಗು ಮರು ಆರಂಭಿಸಲು ಈ ಕಾಲವಧಿಯು ಸಾಕಾಗುತ್ತದೆ.

  • Cisco Aironet MPI-350 ವೈರ್-ಲೆಸ್ ಕಾರ್ಡುನ್ನು ಹೊಂದಿದ ಲ್ಯಾಪ್-ಟಾಪ್ ಗಳಿಗೆ ತಂತಿಯುಕ್ತ ಎತರ್ನೆಟ್ ಪೋರ್ಟನ್ನು ಉಪಯೋಗಿಸಿ ಜಾಲಬಂಧ ಆಧರಿತ ಅನುಸ್ಥಾಪನೆಯನ್ನು ಮಾಡುವಾಗ DHCP ವಿಳಾಸವನ್ನು ಪಡೆಯುವ ಯತ್ನದಲ್ಲಿ ಗಣಕ ಸ್ಥಗಿತಗೊಳ್ಳಬಹುದು.

    ಇದರೊಂದಿಗೆ ಕೆಲಸ ಮಾಡಲು, ನಿಮ್ಮ ಅನುಸ್ಥಾಪನೆಗೆ ಸ್ಥಳೀಯ ಮಾಧ್ಯಮವನ್ನು ಉಪಯೋಗಿಸಿ. ಬದಲಾಗಿ, ಅನುಸ್ಥಾಪನೆಗೂ ಮೊದಲು ನೀವು ಲ್ಯಾಪ್ಟಾಪಿನ BIOS ನ ವೈರ್ಲೆಸ್ ಕಾರ್ಡನ್ನು ಅಶಕ್ತಗೊಳಿಸಬಹುದು (ಅನುಸ್ಥಾಪನೆ ಮುಗಿದ ನಂತರ ನೀವು ವೈರ್ಲೆಸ್ ಕಾರ್ಡನ್ನು ಪುನಃ ಶಕ್ತಗೊಳಿಸಬಹುದು).

  • Red Hat Enterprise Linux 5.3 ರಲ್ಲಿ /var/log/boot.logಗೆ ಬೂಟ್-ಸಮಯದ ದಾಖಲೆಯು ಲಭ್ಯವಿರುವುದಿಲ್ಲ.

  • ಎಲ್ಲಿಯಾದರೂ X ಚಲಾಯಿತವಾಗುತ್ತಿದ್ದು ಮತ್ತು vesa ವಲ್ಲದೆ ಬೇರೆ ಒಂದು ಚಾಲಕವನ್ನು ಬಳಸುತ್ತಿದ್ದರೆ, ಗಣಕವು ಒಂದು kexec/kdump ಕರ್ನಲ್ಲಿಗೆ ಯಶಸ್ವಿಯಾಗಿ ಬೂಟ್ ಆಗದೇ ಇರಬಹುದು. ATI Rage XL ಚಿತ್ರಾತ್ಮಕ ಚಿಪ್ ಸೆಟ್ಟುಗಳಲ್ಲಿ ಮಾತ್ರ ಈ ತೊಂದರೆಯು ಕಾಣಿಸಿಕೊಳ್ಳುತ್ತದೆ.

    ATI Rage XL ನಿಂದ ಅಣಿಗೊಂಡ ಗಣಕದಲ್ಲಿ X ಚಾಲನೆಯಾಗುತ್ತಿದ್ದರೆ, ಒಂದು kexec/kdump ಕರ್ನಲ್ಲಿಗೆ ಯಶಸ್ವಿಯಾಗಿ ಬೂಟ್ ಮಾಡಲು ಅನುವಾಗುವಂತೆ vesa ಚಾಲಕವನ್ನು ಬಳಸಲು ಮರೆಯದಿರಿ.

  • Red Hat Enterprise Linux 5.2 ಅನ್ನು nVidia CK804 ಚಿಪ್ ಸೆಟ್ ಅನುಸ್ಥಾಪಿತವಾಗಿರುವ ಗಣಕದಲ್ಲಿ ಉಪಯೋಗಿಸುವಾಗ, ನಿಮಗೆ ಈ ರೀತಿಯ ಕರ್ನಲ್ ಸಂದೇಶಗಳು ದೊರೆಯಬಹುದು:

    kernel: assign_interrupt_mode Found MSI capability
    kernel: pcie_portdrv_probe->Dev[005d:10de] has invalid IRQ. Check vendor BIOS

    ಈ ಸಂದೇಶಗಳು ಕೆಲವೊಂದು PCI-ಪೋರ್ಟುಗಳು IRQಗಳಿಗಾಗಿ ಕೋರುತ್ತಿಲ್ಲ ಎಂದು ಸೂಚಿಸುತ್ತದೆ, ಹಾಗೆಯೇ, ಈ ಸಂದೇಶಗಳು ಯಾವುದೇ ಕಾರಣಕ್ಕೂ ಗಣಕದ ಕಾರ್ಯ ನಿರ್ವಹಣೆಯ ಮೇಲೆ ಪ್ರಭಾವ ಬೀರುವುದಿಲ್ಲ.

  • ನೀವು ಮೂಲವಾಗಿ ಪ್ರವೇಶಿಸಿದಾಗ ತೆಗೆದು ಹಾಕಬಹುದಾದ ಶೇಖರಣಾ ಸಾಧನಗಳು (CDಗಳು ಹಾಗು DVDಗಳು) ಸ್ವಯಂಚಾಲಿತವಾಗಿ ಆರೋಹಿಸಲ್ಪಡುವುದಿಲ್ಲ. ಹಾಗಾಗಿ, ನೀವು ಚಿತ್ರಾತ್ಮಕ ಕಡತ ವ್ಯವಸ್ಥಾಪಕವನ್ನು ಬಳಸಿಕೊಂಡು ಕೈಯಾರೆ ಸಾಧನವನ್ನು ಆರೋಹಿಸಬೇಕಾಗುತ್ತದೆ.

    ಪರ್ಯಾಯವಾಗಿ, ನೀವು ಈ ಕೆಳಗಿನ ಆಜ್ಞೆಯನ್ನು ಬಳಸಿಕೊಂಡು ಒಂದು ಸಾಧನವನ್ನು /media ಕ್ಕೆ ಆರೋಹಿಸಬಹುದಾಗಿದೆ:

    mount /dev/[device name] /media
  • ಒಂದು LUN ಅನ್ನು ಸಂರಚನಾ ಫೈಲರಿನಿಂದ ಅಳಿಸಿಹಾಕಿದಾಗ, ಪರಿವರ್ತನೆಯು ಅತಿಥೇಯದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅಂತಹ ಸಂದರ್ಭದಲ್ಲಿ, dm-multipath ಅನ್ನು ಬಳಸಿದಾಗ lvm ಆಜ್ಞೆಗಳು ಅನಿರ್ದಿಷ್ಟವಾಗಿ ಜಡಗೊಳ್ಳುತ್ತವೆ, ಏಕೆಂದರೆ LUN ಈಗ ಸ್ಥಬ್ದ ಗೊಂಡಿರುತ್ತದೆ.

    ಇದರೊಂದಿಗೆ ಕೆಲಸ ಮಾಡಲು, ಎಲ್ಲಾ ಸಾಧನಗಳನ್ನು ಹಾಗು /etc/lvm/.cacheದಲ್ಲಿರುವ ಸ್ಥಬ್ದ LUN ಗೆ ನಿಶ್ಚಿತವಾದ ಎಲ್ಲಾ mpath ಲಿಂಕ್ ನಮೂದುಗಳನ್ನು ಅಳಿಸಿ ಹಾಕಿ.

    ಈ ನಮೂದುಗಳು ಏನೆಂದು ತಿಳಿಯಲು, ಈ ಕೆಳಗಿನ ಆಜ್ಞೆಯನ್ನು ಚಲಾಯಿಸಿ:

    ls -l /dev/mpath | grep [stale LUN]

    ಉದಾಹರಣೆಗೆ, [stale LUN] ವು 3600d0230003414f30000203a7bc41a00 ಆಗಿದ್ದರೆ, ಈ ಕೆಳಗಿನ ಫಲಿತಾಂಶವು ಕಾಣಿಸಬಹುದು:

    lrwxrwxrwx 1 root root 7 Aug  2 10:33 /3600d0230003414f30000203a7bc41a00 -> ../dm-4
    lrwxrwxrwx 1 root root 7 Aug  2 10:33 /3600d0230003414f30000203a7bc41a00p1 -> ../dm-5

    ಇದರರ್ಥ 3600d0230003414f30000203a7bc41a00 ಯು ಈ ಎರಡು mpath ಲಿಂಕುಗಳಿಗೆ ಮ್ಯಾಪ್ ಮಾಡಲಾಗಿದೆ: dm-4 ಹಾಗು dm-5.

    ಈ ಕೆಳಗಿನ ಸಾಲನ್ನು /etc/lvm/.cache ದಿಂದ ಅಳಿಸಿ ಹಾಕಬೇಕು:

    /dev/dm-4 
    /dev/dm-5 
    /dev/mapper/3600d0230003414f30000203a7bc41a00
    /dev/mapper/3600d0230003414f30000203a7bc41a00p1
    /dev/mpath/3600d0230003414f30000203a7bc41a00
    /dev/mpath/3600d0230003414f30000203a7bc41a00p1
  • -ll ಆಯ್ಕೆಯೊಂದಿಗೆ multipath ಆಜ್ಞೆಯನ್ನು ಚಲಾಯಿಸಿದಾಗ ಎಲ್ಲಿಯಾದರೂಮಾರ್ಗಗಳಲ್ಲಿ ಒಂದು ಮಾರ್ಗವು ನಿರ್ಬಂಧಿಸುವ ಸಾಧನದಲ್ಲಿದ್ದರೆ ಅದು ಸ್ಥಬ್ಧಗೊಳ್ಳಬಹುದು. ಸಾಧನವು ಪ್ರತಿಸ್ಪಂದಿಸದೆ ಇದ್ದಲ್ಲಿ ಚಾಲಕವು ಒಂದಿಷ್ಟು ಸಮಯದ ನಂತರ ಮನವಿಯು ವಿಫಲಗೊಳ್ಳುವುದಿಲ್ಲ ಎನ್ನುವುದನ್ನು ನೆನಪಿಡಿ.

    ಇದು ಸ್ವಚ್ಚಗೊಳಿಕಾ(ಕ್ಲೀನ್ಅಪ್) ಕ್ರಮದಿಂದಾಗಿ ಆಗಿದ್ದು, ಇದು ಮಾರ್ಗ ಪತ್ತೆಗಾರನು ಪೂರ್ಣಗೊಳ್ಳುವವರೆಗೆ ಅಥವ ವಿಫಲಗೊಳ್ಳುವವರೆಗೆ ಕಾಯುತ್ತದೆ. ಬದಲಿಗೆ ಆಜ್ಞೆಯನ್ನು ಸ್ಥಗಿತಗೊಳಿಸದೆ ಈಗಿರುವ multipath ಸ್ಥಿತಿಯನ್ನು ತೋರಿಸಲು, multipath -l ಬಳಸಿ.

  • pm-utils ಅನ್ನು Red Hat Enterprise Linux 5.2 ರ pm-utils ಬೀಟಾ ಆವೃತ್ತಿಗೆ ನವೀಕರಿಸುವುದು ವಿಫಲಗೊಂಡು, ಈ ಕೆಳಗಿನ ದೋಷ ಸಂದೇಶವನ್ನು ತೋರಿಸುತ್ತದೆ:

    error: unpacking of archive failed on file /etc/pm/sleep.d: cpio: rename

    ಇದು ಸಂಭವಿಸದಂತೆ ತಡೆಯಲು, ನವೀಕರಿಸುವ ಮೊದಲು /etc/pm/sleep.d/ ಕಡತಕೋಶವನ್ನು ತೆಗೆದು ಹಾಕಿ. ಎಲ್ಲಿಯಾದರೂ /etc/pm/sleep.d ಯು ಯಾವುದೆ ಕಡತಗಳನ್ನು ಹೊಂದಿದ್ದಲ್ಲಿ, ನೀವು ಅವನ್ನು /etc/pm/hooks/ ಗೆ ವರ್ಗಾಯಿಸಬಹುದಾಗಿದೆ.

  • Mellanox MT25204 ಗಾಗಿನ ಯಂತ್ರಾಂಶ ಪರೀಕ್ಷೆಯಿಂದ ಅತಿಯಾದ ಲೋಡ್‍ನ ಸಂದರ್ಭಗಳಲ್ಲಿ ಒಂದು ಆಂತರಿಕ ದೋಷವು ಕಂಡುಬರುತ್ತದೆ ಎಂಬುದು ತಿಳಿದುಬಂದಿದೆ. ಈ ಯಂತ್ರಾಂಶದಲ್ಲಿನ ib_mthca ಚಾಲಕವು ಒಂದು ಅನಾಹುತಕಾರಿಯಾದ ದೋಷವನ್ನು ವರದಿ ಮಾಡಿದೆ ಎಂದಾದಲ್ಲಿ, ಅದು ಸಾಮಾನ್ಯವಾಗಿ ಬಳಕೆದಾರ ಅನ್ವಯದಿಂದ ಬಾಕಿ ಉಳಿದಿರುವ ಕಾರ್ಯ ಮನವಿಗಳ ಸಂಖ್ಯೆಗೆ ಸಂಬಂಧಿತವಾದ ಸಾಕಷ್ಟಿಲ್ಲದ ಕಂಪ್ಲೀಶನ್ ಕ್ಯೂ ಡೆಪ್ತ್‍ಗೆ ಸಂಬಂಧಿಸಿರುತ್ತದೆ.

    ಯಂತ್ರಾಂಶವು ಅಂತಹ ಒಂದು ಸನ್ನಿವೇಶದಿಂದ ಚೇತರಿಸಿಕೊಂಡರೂ ಸಹ, ಆ ದೋಷದ ಸಂದರ್ಭದಲ್ಲಿ ಎಲ್ಲಾ ಸಂಪರ್ಕಗಳು ಕಡಿದು ಹೋಗುತ್ತವೆ. ಇದು ಬಳಕೆದಾರ ಅನ್ವಯದಲ್ಲಿ ಸಾಮಾನ್ಯವಾಗಿ ಒಂದು ಸೆಗ್ಮೆಂಟೇಶನ್ ದೋಷಕ್ಕೆ ಕಾರಣವಾಗುತ್ತದೆ. ಅಲ್ಲದೆ, ದೋಷದ ಸಂಭವಿಸಿದ ಸಂದರ್ಭದಲ್ಲಿ opensm ಚಾಲನೆಯಲ್ಲಿದ್ದಲ್ಲಿ, ಅದು ಪುನಃ ಕಾರ್ಯನಿರ್ವಹಿಸಲು ಅದನ್ನು ನೀವು ಸ್ವತಃ ಮರು ಆರಂಭಿಸಬೇಕಾಗುತ್ತದೆ.

  • Red Hat Enterprise Linux 5 ಅನ್ನು ಒಂದು ಅತಿಥಿಯ ಮೇಲೆ ಅನುಸ್ಥಾಪಿಸುವಾಗ, ಅತಿಥಿಯನ್ನು dom0 ಇಂದ ಒದಗಿಸಲಾದ ಒಂದು ತಾತ್ಕಾಲಿಕ ಕರ್ನಲ್ ಅನ್ನು ಬಳಸಲು ಬಳಸುವಂತೆ ಸ್ಪಷ್ಟವಾಗಿ ಸಂರಚಿಸಲಾಗಿರುತ್ತದೆ. ಅನುಸ್ಥಾಪನೆಯು ಪೂರ್ಣಗೊಂಡ ನಂತರ, ಅದು ತನ್ನದೆ ಆದಂತಹ ಬೂಟ್ ಲೋಡರ್ ಅನ್ನು ಬಳಸಬಹುದಾಗಿದೆ. ಆದರೆ, ಹೀಗೆ ಮಾಡಲು ಅತಿಥಿಯ ಪ್ರಥಮ ಮರುಬೂಟ್ ಒಂದು ಸ್ಥಗಿತವಾಗಿರುವಂತೆ(ಶಟ್‌ಡೌನ್) ಒತ್ತಾಯಪಡಿಸುವ ಅಗತ್ಯವಿರುತ್ತದೆ.

    ಅಂದರೆ, ಅತಿಥಿ ಅನುಸ್ಥಾಪನೆಯ ಕೊನೆಯಲ್ಲಿ ಕಾಣಿಸಿಕೊಳ್ಳುವ ಮರುಬೂಟ್ ಗುಂಡಿಯ ಮೇಲೆ ಕ್ಲಿಕ್ಕಿಸಿದಾಗ, ಅದು ಗಣಕವನ್ನು ಮರು ಬೂಟ್‌ ಮಾಡದೆ ಸ್ಥಗಿತಗೊಳಿಸುತ್ತದೆ. ಇದು ಒಂದು ನಿರೀಕ್ಷಿತವಾದ ವರ್ತನೆಯಾಗಿರುತ್ತದೆ.

    ನೀವು ಇದರ ನಂತರ ಅತಿಥಿಯನ್ನು ಬೂಟ್ ಮಾಡಿದಾಗ ಅದು ತನ್ನದೆ ಆದಂತಹ ಬೂಟ್‌ಲೋಡರನ್ನು ಬಳಸುತ್ತದೆ.

  • compiz ಮೇಲೆ rpmbuild ಅನ್ನು ಚಲಾಯಿಸುವುದರಿಂದ ಆಕರ(ಸೋರ್ಸ್) RPM ಅನುಸ್ಥಾಪಿತಗೊಂಡಿರುವ ಯಾವುದೆ KDE ಅಥವ qt ವಿಕಸನಾ ಪ್ಯಾಕೇಜುಗಳನ್ನು ವಿಫಲಗೊಳಿಸುತ್ತದೆ (ಉದಾಹರಣೆಗೆ, qt-devel). ಇದಕ್ಕೆ ಕಾರಣ compiz ನ ಸಂರಚನಾ ಸ್ಕ್ರಿಪ್ಟನಲ್ಲಿನ ಒಂದು ದೋಷವಾಗಿರುತ್ತದೆ.

    ಇದಕ್ಕೆ ಇನ್ನೊಂದು ಉಪಾಯವೆಂದರೆ, ಆಕರ (ಸೋರ್ಸ್) RPM ನಿಂದ compiz ಪ್ಯಾಕೇಜನ್ನು ನಿರ್ಮಿಸುವ ಮೊದಲು ನಿಮ್ಮಲ್ಲಿರುವ ಯಾವುದೆ KDE ಅಥವ qt ವಿಕಸನಾ ಪ್ಯಾಕೇಜುಗಳನ್ನು ತೆಗೆದು ಹಾಕಿ.

  • ಎಲ್ಲಿಯಾದರೂ ನಿಮ್ಮ ಗಣಕದಲ್ಲಿ ATI Radeon R500 ಅಥವ R600 ಗ್ರಾಫಿಕ್‌ ಕಾರ್ಡುಗಳು ಇದ್ದಲ್ಲಿ, ಅನುಸ್ಥಾಪನೆಯ ನಂತರ firstboot ಚಲಾಯಿತಗೊಳ್ಳುವುದಿಲ್ಲ. ಗಣಕವು ನೇರವಾಗಿ ಚಿತ್ರಾತ್ಮಕ ಪ್ರವೇಶ ತೆರೆಗೆ ಹೋಗುತ್ತದೆ ಹಾಗು firstboot ಅನ್ನು ಸಂಪೂರ್ಣವಾಗಿ ಉಪೇಕ್ಷಿಸುತ್ತದೆ. ಎಲ್ಲಿಯಾದರೂ ನೀವು ಸ್ವತಃ firstbootಅನ್ನು ಚಲಾಯಿಸಲು ಪ್ರಯತ್ನಿಸಿದಲ್ಲಿ (ಅಂದರೆ ವಿಫಲಸುರಕ್ಷತೆ (ಫೇಲ್‌ಸೇಫ್)ಟರ್ಮಿನಲ್), X ಅಧಿವೇಶನವು ಕುಸಿತಗೊಳ್ಳುತ್ತದೆ.

    ಈ ತೊಂದರೆ ಕಾರಣ ATI Radeon R500/R600 ಯಂತ್ರಾಂಶದಿಂದ ಬಳಸಲಾದ ಚಾಲಕವಾಗಿರುತ್ತದೆ. ಈ ಗ್ರಾಫಿಕ್ಸ್‍ ಕಾರ್ಡುಗಳಿಂದ ಬಳಸಲಾಗುವ ಡೀಫಾಲ್ಟ್‍ ಚಾಲಕವು ಇನ್ನೂ ಸಹ ತಂತ್ರಜ್ಞಾನ ಮುನ್ನೋಟದಲ್ಲಿದೆ. ಇದಕ್ಕೆ ಇನ್ನೊಂದು ಉಪಾಯವೆಂದರೆ, /etc/X11/xorg.conf ಕಡತವನ್ನು ಬ್ಯಾಕ್ಅಪ್‌ ತೆಗೆದುಕೊಳ್ಳಿ; ನಂತರ, X ಬೆಂಬಲವಿರುವ vesa ಚಾಲಕವನ್ನು ಬಳಸಲು ಈ ಕೆಳಗಿನ ಆಜ್ಞೆಯನ್ನು ಬಳಸಿಕೊಂಡು X ಅನ್ನು ಸಂರಚಿಸಿ:

    system-config-display --reconfig --set-driver=vesa

    ಈಗ ನೀವು firstboot ಅನ್ನು ಚಲಾಯಿಸಬಹುದು. ನಿಮ್ಮ ಹಿಂದಿನ ಸಂಯೋಜನೆಗಳಿಗೆ ಮರಳಲು, ಮೊದಲಿದ್ದ ನಿಮ್ಮ /etc/X11/xorg.conf ಅನ್ನು ಮರು ಸ್ಥಾಪಿಸಿ.

  • ಎಲ್ಲಿಯಾದರೂ ನಿಮ್ಮ ಗಣಕವು TSC ಟೈಮರ್ ಅನ್ನು ಬಳಸುತ್ತಿದ್ದಲ್ಲಿ, gettimeofday ಗಣಕ ಕರೆಯು ಹಿಂದಕ್ಕೆ ಚಲಿಸಬಹುದು. ಇದಕ್ಕೆ ಕಾರಣ, ಕೆಲವೊಂದು ಸಂದರ್ಭದಲ್ಲಿ ಒಂದು ಮಿತಿಮೀರಿದ ತೊಂದರೆಯಿಂದಾಗಿ TSC ಟೈಮರ್ ಗಮನಾರ್ಹವಾಗಿ ಮುಂದಕ್ಕೆ ನೆಗೆಯುತ್ತದೆ; ಹೀಗೆ ಆದಲ್ಲಿ, TSC ಟೈಮರ್ ತಾನಾಗಿಯೆ ಸರಿಪಡಿಸಿಕೊಳ್ಳುತ್ತದೆ, ಆದರೆ ಅಂತಿಮವಾಗಿ ಸಮಯದ ಅಳತೆಯಲ್ಲಿ ಒಂದಿಷ್ಟು ಹಿಂದಕ್ಕೆ ಸರಿಯುತ್ತದೆ.

    ಈ ತೊಂದರೆಯು ವ್ಯವಹಾರ ವ್ಯವಸ್ಥೆಯಲ್ಲಿ ಹಾಗು ದತ್ತಸಂಚಯಗಳಲ್ಲಿ ಬಳಸಲಾಗುವಂತಹ ಸಮಯ-ಸಂವೇದಿ ಗಣಕಗಳಲ್ಲಿ ಗಂಭೀರವಾಗಿರುತ್ತದೆ. ಅಂತೆಯೆ, ನಿಮ್ಮ ಗಣಕಕ್ಕೆ ನಿಖರವಾದ ಸಮಯದ ಅಗತ್ಯವಿದ್ದಲ್ಲಿ, ನೀವು ಬೇರೊಂದು ಟೈಮರಿಗೆ ನಿಮ್ಮ ಕರ್ನಲ್ ಅನ್ನು ಹೊಂದಿಸಿಕೊಳ್ಳಿ ಎಂದು Red Hat ಬಲವಾಗಿ ಸಲಹೆ ಮಾಡುತ್ತದೆ (ಉದಾಹರಣೆಗೆ, HPET).

  • sniff ಅನ್ನು ಚಲಾಯಿಸಲು ಪ್ರಯತ್ನಿಸಿದಾಗ ಒಂದು ದೋಷಕ್ಕೆ ಕಾರಣವಾಗಬಹುದು. ಏಕೆಂದರೆ ಕೆಲವೊಂದು ಪ್ಯಾಕೇಜ್‍ಗಳು dogtail ನೊಂದಿಗೆ ಅನುಸ್ಥಾಪಿತಗೊಂಡಿರುವುದಿಲ್ಲ.

    ಈ ರೀತಿ ಆಗುವುದನ್ನು ತಡೆಗಟ್ಟಲು, ಈ ಕೆಳಗಿನ ಪ್ಯಾಕೇಜ್‍ಗಳನ್ನು ಅನುಸ್ಥಾಪಿಸಿ:

    • librsvg2

    • ghostscript-fonts

    • pygtk2-libglade

  • ಥಿನ್ ಪ್ರಾವಿಶನಿಂಗ್ ("ವರ್ಚುವಲ್ ಪ್ರಾವಿಶನಿಂಗ್" ಎಂದೂ ಸಹ ಕರೆಯಲಾಗುವ) ಅನ್ನು EMC Symmetrix DMX3 ಹಾಗು DMX4 ಯೊಂದಿಗೆ ಮೊದಲು ಬಿಡುಗಡೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು EMC Support Matrix ಹಾಗು Symmetrix Enginuity ಕೋಡ್ ಬಿಡುಗಡೆ ಟಿಪ್ಪಣಿಗಳನ್ನು ನೋಡಿ.

  • /etc/multipath.conf ನಲ್ಲಿ, max_fds ಅನ್ನು unlimited ಗೆ ಸಜ್ಜುಗೊಳಿಸುವುದರಿಂದ multipathd ಡೀಮನ್ ಸರಿಯಾಗಿ ಆರಂಭಗೊಳ್ಳುವುದನ್ನು ತಡೆಯುತ್ತದೆ. ಅಷ್ಟೆ ಅಲ್ಲದೆ, ಇದರ ಬದಲಿಗೆ ನೀವು ಸಾಕಷ್ಟು ದೊಡ್ಡ ಮೌಲ್ಯವನ್ನು ಬಳಸಬೇಕಾಗುತ್ತದೆ.

  • SystemTap ಬಳಕೆದಾರ-ಸ್ಥಳ ಸನ್ನಿವೇಶಗಳನ್ನು ತನಿಖೆ ಮಾಡಲು ಪ್ರಸಕ್ತ GCC ಅನ್ನು ಬಳಸುತ್ತದೆ. ಆದರೆ, GCC ಇಂದ ನಿಯತಾಂಕಗಳಿಗಾಗಿ ಯಾವುದೆ ಬಗೆಯ ನಿಖರವಾದಂತಹ ಸ್ಥಳದ ಪಟ್ಟಿಯ ಮಾಹಿತಿಯೊಂದಿಗೆ ದೋಷನಿವಾರಕವನ್ನು ಒದಗಿಸಲು ಸಾಧ್ಯವಿಲ್ಲ. ಕೆಲವೊಂದು ಸಂದರ್ಭಗಳಲ್ಲಿ, GCC ಯು ಕೆಲವು ನಿಯತಾಂಕಗಳಿಗಾಗಿನ ಗೋಚರತೆಯನ್ನು ಒದಗಿಸಲು ಸಹ ಅಸಮರ್ಥವಾಗಿರುತ್ತವೆ. ಅದರ ಪರಿಣಾಮವಾಗಿ, ಬಳಕೆದಾರ ಸ್ಥಿತಿಯನ್ನು ತನಿಖೆ ಮಾಡುವ SystemTap ಸ್ಕ್ರಿಪ್ಟುಗಳು ನಿಖರವಲ್ಲದ ಫಲಿತಾಂಶವನ್ನು ನೀಡುತ್ತವೆ.

  • IBM T41 ಲ್ಯಾಪ್‌ಟಾಪ್ ಸರಿಯಾದ ರೀತಿಯಲ್ಲಿSuspend Mode ಗೆ ದಾಖಲಾಗುವುದಿಲ್ಲ; ಅಷ್ಟೆ ಅಲ್ಲದೆ, Suspend Mode ಯು ಇನ್ನೂ ಸಹ ಬ್ಯಾಟರಿಯನ್ನು ಬಳಸುತ್ತದೆ. ಏಕೆಂದರೆ Red Hat Enterprise Linux 5 ಯು ಇನ್ನೂ ಸಹ radeonfb ಘಟಕವನ್ನು ಹೊಂದಿಲ್ಲ.

    ಇದಕ್ಕಿರುವ ಇನ್ನೊಂದು ಪರಿಹಾರವೆಂದರೆ, ಈ ಕೆಳಗಿನ ಸಾಲುಗಳನ್ನು ಇರುವ /usr/share/hal/scripts/ ಕಡತಕೋಶಕ್ಕೆ hal-system-power-suspend ಎನ್ನುವ ಸ್ಕ್ರಿಪ್ಟನ್ನು ಸೇರಿಸಿ:

    chvt 1
    radeontool light off
    radeontool dac off

    ಈ ಸ್ಕ್ರಿಪ್ಟ್‍ IBM T41 ಲ್ಯಾಪ್‌ಟಾಪ್‌ ಸರಿಯಾದ ರೀತಿಯಲ್ಲಿ Suspend Mode ಗೆ ದಾಖಲಾಗುತ್ತದೆ ಎಂದು ಖಚಿತಪಡಿಸುತ್ತದೆ. ಗಣಕವು ಸಾಮಾನ್ಯ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ಈ ಕೆಳಗಿನ ಸಾಲುಗಳನ್ನು ಹೊಂದಿರುವ ಕಡತಕೋಶದಲ್ಲಿಯೆ restore-after-standby ಸ್ಕ್ರಿಪ್ಟನ್ನು ಇರಿಸಿ:

    radeontool dac on
    radeontool light on
    chvt 7
  • edac ಘಟಕವನ್ನು ಲೋಡ್ ಮಾಡಲಾಗಿದ್ದರೆ, BIOS ಮೆಮೊರಿ ವರದಿಯು ಕೆಲಸ ಮಾಡುವುದಿಲ್ಲ. ಇದಕ್ಕೆ ಕಾರಣ ಮೆಮೊರಿ ದೋಷಗಳನ್ನು ವರದಿ ಮಾಡಲು BIOS ಬಳಸುವ ರಿಜಿಸ್ಟರನ್ನು edac ಘಟಕವು ಅಳಿಸಿ ಹಾಕುತ್ತದೆ.

    ಈಗಿನ Red Hat Enterprise Linux ಚಾಲಕ ಅಪ್‌ಡೇಟ್ ಮಾದರಿಯು ಲಭ್ಯವಿರುವ ಎಲ್ಲಾ ಚಾಲಕಗಳನ್ನು ಲೋಡ್ ಮಾಡುವಂತೆ ಕರ್ನಲ್‌ಗೆ ಸೂಚಿಸುತ್ತದೆ (edac ಘಟಕವನ್ನೂ ಸೇರಿಸಿ). ನಿಮ್ಮ ಗಣಕದಲ್ಲಿ BIOS ಮೆಮೊರಿ ವರದಿ ಮಾಡುವಿಕೆಯನ್ನು ಖಚಿತ ಪಡಿಸಿಕೊಳ್ಳಲು, edac ಘಟಕವನ್ನು ಸೇರಿಸದೆ ಇರಲು ಕೈಯಾರೆ ಗುರುತು ಹಾಕಬೇಕು. ಹಾಗೆ ಮಾಡಲು, /etc/modprobe.conf ಗೆ ಈ ಕೆಳಗಿನ ಸಾಲನ್ನು ಸೇರಿಸಿ:

    blacklist edac_mc
    blacklist i5000_edac
    blacklist i3000_edac
    blacklist e752x_edac
  • Red Hat Enterprise Linux 5.3 ಈಗ ಅಡಿಯಲ್ಲಿರುವ ಖಂಡ ಸಾಧನವು ಅನ್‌ಲೈನ್‌ನಲ್ಲಿ ಹಿಗ್ಗುವುದನ್ನು ಹಾಗು ಕುಗ್ಗುವುದನ್ನು ಪತ್ತೆ ಮಾಡಬಲ್ಲದು. ಆದರೆ, ಒಂದು ಸಾಧನವು ತನ್ನ ಗಾತ್ರವನ್ನು ಬದಲಾಯಿಸಿದೆ ಎಂದು ಪತ್ತೆ ಮಾಡಲು ಯಾವುದೆ ಸ್ವಯಂಚಾಲಿತ ಸಾಧನಗಳಿಲ್ಲ, ಆದ್ದರಿಂದ ಇದನ್ನು ಪತ್ತೆ ಹಚ್ಚಲು ಹಾಗು ಈ ಸಾಧನದಲ್ಲಿನ(ಗಳಲ್ಲಿನ) ಯಾವುದೆ ಕಡತವ್ಯವಸ್ಥೆಯ ಗಾತ್ರವನ್ನು ಬದಲಾಯಿಸಲು ಕೆಲವು ಹಂತಗಳನ್ನು ಕೈಯಾರೆ ನಿರ್ವಹಿಸಬೇಕಾಗುತ್ತದೆ. ಗಾತ್ರ ಬದಲಾಯಿಸಲಾದ ಒಂದು ಖಂಡ ಸಾಧನವು ಕಂಡುಬಂದಾಗ, ಗಣಕದ ದಾಖಲೆಯಲ್ಲಿ ಈ ಕೆಳಗಿನಂತಿರುವ ಒಂದು ಸಂದೇಶವು ಕಾಣಿಸಿಕೊಳ್ಳುತ್ತದೆ:

    VFS: busy inodes on changed media or resized disk sdi

    ಖಂಡ ಸಾಧನದ ಗಾತ್ರವನ್ನು ಹೆಚ್ಚಿಸಲಾಗಿದ್ದಲ್ಲಿ, ಈ ಸಂದೇಶವನ್ನು ಆಲಕ್ಷಿಸುವುದರಿಂದ ಯಾವುದೆ ತೊಂದರೆ ಉಂಟಾಗುವುದಿಲ್ಲ. ಆದರೆ, ಮೊದಲು ಖಂಡ ಸಾಧನದಲ್ಲಿನ ದತ್ತಾಂಶವನ್ನು ಕುಗ್ಗಿಸದೆ ಕೇವಲ ಅದರ ಗಾತ್ರವನ್ನು ಮಾತ್ರ ಕುಗ್ಗಿಸಿದಲ್ಲಿ, ಅದರಲ್ಲಿನ ದತ್ತಾಂಶವು ಭ್ರಷ್ಟಗೊಳ್ಳುವ ಸಾಧ್ಯತೆ ಇದೆ

    ಸಂಪೂರ್ಣ LUN (ಅಥವ ಖಂಡ ಸಾಧನ) ಅನ್ನು ಬಳಸಿಕೊಂಡು ಕಡತವ್ಯವಸ್ಥೆಯನ್ನು ನಿರ್ಮಿಸಲಾಗಿದ್ದಲ್ಲಿ ಮಾತ್ರ ಆನ್‌ಲೈನ್ ಗಾತ್ರ ಬದಲಾವಣೆ ಸಾಧ್ಯವಿರುತ್ತದೆ. ಎಲ್ಲಿಯಾದರೂ ಖಂಡ ಸಾಧನದಲ್ಲಿ ವಿಭಜನಾ ಕೋಷ್ಟಕವು ಇದ್ದಲ್ಲಿ, ಕಡತ ವ್ಯವಸ್ಥೆಯನ್ನು ಅವರೋಹಿಸಿ ನಂತರ ವಿಭಜನಾ ಕೋಷ್ಟಕವನ್ನು ಬದಲಾಯಿಸಬೇಕು.

  • ನಿಮ್ಮ ಗಣಕದಲ್ಲಿ GFS2 ಕಡತ ವ್ಯವಸ್ಥೆಯನ್ನು ಆರೋಹಿಸಲಾಗಿದ್ದರೆ, ಕ್ಯಾಚ್ ಮಾಡಲಾದ ಒಂದು ಐನೋಡ್ ಅನ್ನು ಒಂದು ನೋಡ್‌ನಲ್ಲಿ ನಿಲುಕಿಸಿಕೊಂಡು ನಂತರ ಇನ್ನೊಂದು ನೋಡ್‌ನಿಂದ ಸಂಪರ್ಕ ಕಡಿದು ಹಾಕಿದಲ್ಲಿ ಆ ನೋಡ್ ಸ್ಥಗಿತಗೊಳ್ಳಬಹುದು. ಇದು ಸಂಭವಿಸಿದಾಗ, ನೀವು ಸ್ಥಗಿತಗೊಂಡ ನೋಡ್ ಅನ್ನು ಆವರಿಸಿ ನಂತರ ಅದನ್ನು ಸಾಮನ್ಯವಾದ ಕ್ಲಸ್ಟರ್ ಮರುಗಳಿಕೆಯ ವಿಧಾನದ ಮೂಲಕ ಮರಳಿ ಪಡೆಯುವವರೆಗೂ ಅದು ಲಭ್ಯವಿರುವುದಿಲ್ಲ. ಕಾರ್ಯವು ಬಯಸುವ gfs2_dinode_dealloc ಹಾಗು shrink_dcache_memory ಜಡಗೊಂಡ ನೋಡ್‌ನಲ್ಲಿ ಸಿಕ್ಕಿ ಹಾಕಿಕೊಂಡ ಯಾವುದಾದರೂ ಸ್ಟಾಕ್‌ ಟ್ರೇಸ್‌ಗಳಲ್ಲಿಯೂ ಸಹ ಕಾಣಿಸಿಕೊಳ್ಳುತ್ತವೆ

    ಈ ತೊಂದರೆಯು ಒಂದೇ-ನೋಡ್ ಇರುವ GFS2 ಕಡತ ವ್ಯವಸ್ಥೆಗಳಿಗೆ ಅನ್ವಯಿಸುವುದಿಲ್ಲ.

  • ಗಣಕವು ಬೂಟ್ ಆಗುವ ಸಮಯದಲ್ಲಿ ಈ ಕೆಳಗಿನ ಸಂದೇಶವು ಕಾಣಿಸಿಕೊಳ್ಳಬಹುದು:

    Could not detect stabilization, waiting 10 seconds.
    Reading all physical volumes.  This may take a while...
    ಈ ವಿಳಂಬವು (ಯಂತ್ರಾಂಶದ ಸಂರಚನೆಗೆ ಅನುಗುಣವಾಗಿ ಸುಮಾರು 10 ಸೆಕೆಂಡುಗಳಷ್ಟು ಆಗಿರುತ್ತದೆ), ಕರ್ನಲ್ ಡಿಸ್ಕುಗಳನ್ನು ಶೋಧಿಸುವುದನ್ನು ಪೂರ್ಣಗೊಳಿಸಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುತ್ತದೆ.

  • ipmitool ನಲ್ಲಿನ ಈಗಿನ User Payload Access ಇಂದಾಗಿ ನೀವು ಸಾಧನಗಳನ್ನು ಸಂರಚಿಸಬಹುದಾಗಿದೆ, ಆದರೆ ಇದರಿಂದಾಗಿ ಆ ಸಾಧನಗಳ ಪ್ರಸಕ್ತ ಸಂಯೋಜನೆಗಳನ್ನು ಮರಳಿಪಡೆಯಲು ಸಾಧ್ಯವಿರುವುದಿಲ್ಲ.

  • ಒಂದು ಕಿಕ್‌ಸ್ಟಾರ್ಟ್ ಕಡತದಲ್ಲಿ --maxsize ನಿಯತಾಂಕವನ್ನು ಹೊಂದಿಸದೆ swap --grow ನಿಯತಾಂಕವನ್ನು ಬಳಸಿದಲ್ಲಿ ಅನಕೊಂಡವು ಸ್ವಾಪ್‌ ವಿಭಾಗದ ಗಾತ್ರದ ಮೇಲೆ ಒಂದು ಪ್ರತಿಂಧವನ್ನು ಹೇರುತ್ತದೆ. ಅದು ಸಾಧನವನ್ನು ಸಂಪೂರ್ಣವಾಗಿ ತುಂಬು ಬಿಡುವುದಿಲ್ಲ.

    2GBಯಷ್ಟು ಭೌತಿಕ ಮೆಮೊರಿಯನ್ನು ಹೊಂದಿರುವ ಗಣಕಗಳಲ್ಲಿ, ಹೇರಲಾಗುವ ಮಿತಿಯು ಭೌತಿಕ ಮೆಮೊರಿಯ ಎರಡಷ್ಟು ಇರುತ್ತದೆ. 2GB ಗಿಂತ ಹೆಚ್ಚಿನ ಗಣಕಗಳಲ್ಲಿ, ಹೇರಲಾಗುವ ಮಿತಿಯು ಭೌತಿಕ ಮೆಮೊರಿಯ ಜೊತೆಗೆ 2GB ಯಷ್ಟು ಆಗಿರುತ್ತದೆ.

  • gfs2_convert ಪ್ರೊಗ್ರಾಂ, GFS2 ನಿಂದ ಬಳಸಲಾಗದೆ ಇರುವಂತಹ ಎಲ್ಲಾ ಖಂಡಗಳನ್ನು ಇನ್ನು ಮುಂದೆ GFS ಮೆಟಾಡಾಟದಿಂದ ಮುಕ್ತಗೊಳಿಸದೆ ಇರಬಹುದು. ಬಳಸಲಾಗಿರದೆ ಇರುವಂತಹ ಈ ಮೆಟಾಡಾಟ ಖಂಡಗಳನ್ನು ಕಂಡು ಹಿಡಿದು ಮುಂದಿನ ಬಾರಿ ಗಣಕದಲ್ಲಿ gfs2_fsck ಅನ್ನು ಚಲಾಯಿಸಿದಾಗ ಮುಕ್ತಗೊಳಿಸಲಾಗುವುದು. ಕಡತವ್ಯವಸ್ಥೆಯನ್ನು ಬಳಸದೆ ಇರುವ ಮುಕ್ತ ಖಂಡಗಳನ್ನಾಗಿ ಮಾರ್ಪಡಿಸಿದ ನಂತರವೆ gfs2_fsck ಅನ್ನು ಚಲಾಯಿಸಬೇಕೆಂದು ನಾವು ಸಲಹೆ ಮಾಡುತ್ತೇವೆ. ಬಳಸದೆ ಇರುವ ಈ ಖಂಡಗಳನ್ನು gfs2_fsck ಇಂದ ಈ ಕೆಳಗಿನಂತಹ ಸಂದೇಶದೊಂದಿಗೆ ಗುರುತು ಹಾಕಲ್ಪಡುತ್ತದೆ:

    Ondisk and fsck bitmaps differ at block 137 (0x89) 
    Ondisk status is 1 (Data) but FSCK thinks it should be 0 (Free)
    Metadata type is 0 (free)
    ಈ ಸಂದೇಶಗಳು GFS2 ಕಡತ ವ್ಯವಸ್ಥೆಯಲ್ಲಿ ಯಾವುದೆ ರೀತಿಯ ಭ್ರಷ್ಟತೆ ಉಂಟಾಗಿದೆ ಎಂದಾಗಿ ಸೂಚಿಸುವುದಿಲ್ಲ, ಬದಲಾಗಿ ಮುಕ್ತಗೊಳಿಸಬಹುದಾಗಿದ್ದ ಆದರೆ ಮುಕ್ತಗೊಳಿಸದೆ ಇರುವ ಖಂಡಗಳನ್ನು ಸೂಚಿಸುತ್ತದೆ. ಮುಕ್ತಗೊಳಿಸಬೇಕಿರುವ ಖಂಡಗಳ ಸಂಖ್ಯೆಯು ಕಡತವ್ಯವಸ್ಥೆಯ ಗಾತ್ರ ಹಾಗು ಖಂಡದ ಗಾತ್ರದ ಮೇಲೆ ಅವಲಂಬಿತವಾಗಿ ಬದಲಾಗುತ್ತದೆ. ಬಹಳಷ್ಟು ಕಡತವ್ಯವಸ್ಥೆಗಳಲ್ಲಿ ಈ ಸಮಸ್ಯೆ ಎದುರಾಗುವುದೆ ಇಲ್ಲ. ದೊಡ್ಡದಾದ ಕಡತವ್ಯವಸ್ಥೆಗಳು ಕಡಿಮೆ ಸಂಖ್ಯೆಯ ಖಂಡಗಳನ್ನು ಹೊಂದಿರುತ್ತವೆ (ಸಾಮಾನ್ಯವಾಗಿ 100 ಕ್ಕಿಂತಲೂ ಕಡಿಮೆಯ).

8.2. x86 ಆರ್ಕಿಟೆಕ್ಚರುಗಳು

  • ಬೇರ್-ಮೆಟಲ್ (ವಾಸ್ತವೀಕೃತವಲ್ಲದ) ಕರ್ನಲನ್ನು ಚಲಾಯಿಸುವಾಗ, X ಪರಿಚಾರಕವುತೆರೆಯಿಂದ EDID ಮಾಹಿತಿಯನ್ನು ಹಿಂಪಡೆಯಲು ಸಾಧ್ಯವಾಗದೆ ಇರಬಹುದು. ಇದು ಸಂಭವಿಸಿದಾಗ, ಚಿತ್ರಾತ್ಮಕ (graphics) ಚಾಲಕವು ೮೦೦x೬೦೦ ಕ್ಕಿಂತ ಹೆಚ್ಚಿನ ರೆಸಲ್ಯೂಶನನ್ನು ತೋರಿಸಲು ಸಾಧ್ಯವಾಗುವುದಿಲ್ಲ.

    ಇದರೊಂದಿಗೆ ಕೆಲಸ ಮಾಡಲು, /etc/X11/xorg.conf ನಲ್ಲಿನ ServerLayout ವಿಭಾಗದಲ್ಲಿ ಈ ಕೆಳಗಿನ ಆಜ್ಞೆಯನ್ನು ಸೇರಿಸಿ:

    "Int10Backend" "x86emu" ಆಯ್ಕೆ
  • Dell M4300 ಹಾಗು M6300 ನಲ್ಲಿ ರೆಕಾರ್ಡಿಂಗ್ ಅನ್ನು ಕೈಯಾರೆ ಶಕ್ತಗೊಳಿಸಬೇಕಾಗುತ್ತದೆ. ಹೀಗೆ ಮಾಡಲು, ಈ ಕೆಳಗಿನ ಹಂತಗಳನ್ನು ಅನುಸರಿಸಿ:

    1. alsamixer ಅನ್ನು ತೆರೆಯಿರಿ.

    2. ನೋಟ ಕ್ಷೇತ್ರದಲ್ಲಿ (ಮೆನುವಿನ ಮೇಲುಗಡೆಯಲ್ಲಿ ಎಡಭಾಗದಲ್ಲಿರುವ) [ಸೆರೆಹಿಡಿ] ಅನ್ನು ಟಾಗಲ್ ಮಾಡಲು Tab ಅನ್ನು ಬಳಸಿ.

    3. Space ಗುಂಡಿಯನ್ನು ಒತ್ತಿ.

    4. ರೆಕಾರ್ಡಿಂಗ್ ಶಕ್ತಗೊಂಡಿದೆಯೆ ಎಂದು ಖಚಿತಪಡಿಸಿಕೊಳ್ಳಲು, ADCMux ಕ್ಷೇತ್ರದ ಮೇಲ್ಭಾಗದ ಪಠ್ಯವು L R CAPTUR ಅನ್ನು ಹೊಂದಿರಬೇಕು.

  • ಗಣಕದ ಅನುಸ್ಥಾಪನೆಯ ಸಮಯದಲ್ಲಿ ಬೂಟ್‌ ಸಾಧನದ ಮೇಲೆ ಗೂಢಲಿಪೀಕರಣವನ್ನು ಶಕ್ತಗೊಳಿಸಿದಲ್ಲಿ, ಬೂಟ್‌ ಸಮಯದಲ್ಲಿ ಈ ಕೆಳಗಿನ ಸಂದೇಶವು ಕಾಣಿಸಿಕೊಳ್ಳುತ್ತದೆ:

    padlock: VIA PadLock not detected.
    ಇದನ್ನು ಉಪೇಕ್ಷಿಸಿದರೆ ಯಾವ ತೊಂದರೆಯೂ ಆಗುವುದಿಲ್ಲ.

8.3. x86_64 ಆರ್ಕಿಟೆಕ್ಚರುಗಳು

  • NVIDIA ಗ್ರಾಫಿಕ್ ಕಾರ್ಡುಗಳನ್ನು ಉಪಯೋಗಿಸುವ ಕೆಲವೊಂದು ಗಣಕಗಳು ಚಿತ್ರಾತ್ಮಕ ಅನುಸ್ಥಾಪನೆ ಮಾಡುವಾಗ ಅಥವ ಒಂದು ಚಿತ್ರಾತ್ಮಕ ಲಾಗಿನ್ ಆಗುವಾಗ ತಪ್ಪಾದ ಗ್ರಾಫಿಕ್ ಅಥವ ಅಕ್ಷರ ಶೈಲಿಗಳನ್ನು ತೋರಿಸುತ್ತದೆ. ಇದರ ಮೇಲೆ ಕೆಲಸ ಮಾಡಲು, ಒಂದು ವಾಸ್ತವ ಕನ್ಸೋಲ್ ಹಾಗು ತಿರುಗಿ ಮೊದಲಿನ X ಸಂಕುಲಕ್ಕೆ ಬದಲಾಯಿಸಿ.

  • ನೀವು IBM T61 ಲ್ಯಾಪ್‌ಟಾಪ್‌ ಅನ್ನು ಬಳಸುತ್ತಿದ್ದರೆ, glxgears ವಿಂಡೋ ಮೇಲೆ ಕ್ಲಿಕ್ಕಿಸದಂತೆ (glxgears ಅನ್ನು ಚಲಾಯಿಸಿದಾಗ) Red Hat ಸಲಹೆ ಮಾಡುತ್ತದೆ. ಹಾಗೆ ಮಾಡುವುದರಿಂದ ಗಣಕವು ಲಾಕ್‌ ಆಗಬಹುದು.

    ಹೀಗೆ ಆಗುವುದನ್ನು ತಡೆಯಲು, ಟೈಲಿಂಗ ಸವಲತ್ತನ್ನು ಅಶಕ್ತಗೊಳಿಸಿ. ಹಾಗೆ ಮಾಡಲು, /etc/X11/xorg.conf ನಲ್ಲಿನ Device ವಿಭಾಗದಲ್ಲಿ ಈ ಕೆಳಗಿನ ಸಾಲನ್ನು ಸೇರಿಸಿ:

    "ಟೈಲಿಂಗ್" "0" ಆಯ್ಕೆ
  • Dell M4300 ಹಾಗು M6300 ನಲ್ಲಿ ರೆಕಾರ್ಡಿಂಗ್ ಅನ್ನು ಕೈಯಾರೆ ಶಕ್ತಗೊಳಿಸಬೇಕಾಗುತ್ತದೆ. ಹೀಗೆ ಮಾಡಲು, ಈ ಕೆಳಗಿನ ಹಂತಗಳನ್ನು ಅನುಸರಿಸಿ:

    1. alsamixer ಅನ್ನು ತೆರೆಯಿರಿ.

    2. ನೋಟ ಕ್ಷೇತ್ರದಲ್ಲಿ (ಮೆನುವಿನ ಮೇಲುಗಡೆಯಲ್ಲಿ ಎಡಭಾಗದಲ್ಲಿರುವ) [ಸೆರೆಹಿಡಿ] ಅನ್ನು ಟಾಗಲ್ ಮಾಡಲು Tab ಅನ್ನು ಬಳಸಿ.

    3. Space ಗುಂಡಿಯನ್ನು ಒತ್ತಿ.

    4. ರೆಕಾರ್ಡಿಂಗ್ ಶಕ್ತಗೊಂಡಿದೆಯೆ ಎಂದು ಖಚಿತಪಡಿಸಿಕೊಳ್ಳಲು, ADCMux ಕ್ಷೇತ್ರದ ಮೇಲ್ಭಾಗದ ಪಠ್ಯವು L R CAPTUR ಅನ್ನು ಹೊಂದಿರಬೇಕು.

  • ನಿಮ್ಮ ಗಣಕವು Intel 945GM ಗ್ರಾಫಿಕ್ಸ್‍ ಕಾರ್ಡನ್ನು ಬಳಸುತ್ತಿದಲ್ಲಿ, i810 ಚಾಲಕವನ್ನು ಬಳಸಬೇಡಿ. ಬದಲಿಗೆ ನೀವು ಕೇವಲ ಡೀಫಾಲ್ಟ್‍intel ಚಾಲಕವನ್ನು ಮಾತ್ರ ಬಳಸಬೇಕು.

  • ಡುವಲ್-GPU ಲ್ಯಾಪ್‌ಟಾಪ್‌ಗಳಲ್ಲಿ, ಎಲ್ಲಿಯಾದರೂ ಗ್ರಾಫಿಕ್ಸ್‍ ಚಿಪ್‌ಗಳಲ್ಲಿ ಒಂದು Intel ಆಧರಿತವಾದುದ್ದಾಗಿದ್ದರೆ, Intel ಗ್ರಾಫಿಕ್ಸ್‍ ಕ್ರಮವು ಯಾವುದೆ ಹೊರಗಿನ ಡಿಜಿಟಲ್ ಸಂಪರ್ಕಗಳಿಗೆ (HDMI, DVI, ಹಾಗು DisplayPort ಅನ್ನೂ ಸಹ ಒಳಗೊಂಡು) ಅನುವು ಮಾಡಿಕೊಡುವುದಿಲ್ಲ. ಇದು Intel GPU ಯಂತ್ರಾಂಶದ ಒಂದು ಮಿತಿಯಾಗಿದೆ. ನಿಮಗೆ ಹೊರಗಿನ ಡಿಜಿಟಲ್ ಸಂಪರ್ಕಗಳು ಬೇಕಿದ್ದಲ್ಲಿ, ಪ್ರತ್ಯೇಕ ಚಿಪ್ ಅನ್ನು ಬಳಸುವಂತೆ ಗಣಕವನ್ನು ಸಂರಚಿಸಿ (BIOS ನಲ್ಲಿ).

8.4. PowerPC ಆರ್ಕಿಟೆಕ್ಚರುಗಳು

  • Alt-SysRq-W ಅನ್ನು ದೋಷ ನಿವಾರಣೆಗೆ ಉಪಯೋಗಿಸಿದಾಗ, ಈ ಕೆಳಗಿನ ಎಚ್ಚರಿಕಾ ಸಂದೇಶ ಕಾಣಿಸುತ್ತದೆ:

    Badness in smp_call_function at arch/powerpc/kernel/smp.c:223

    ನಂತರದಲ್ಲಿ, ಗಣಕವೂ ಸಹ ಸ್ಥಗಿತಗೊಳ್ಳುವುದಾಗಿ ಎಚ್ಚರಿಸುತ್ತದೆ. ಇದು ಯಾವುದೇ ರೀತಿಯ ಸ್ಥಗಿತಕ್ಕೂ ಕಾರಣವಾಗದ್ದರಿಂದ ಈ ಸಂದೇಶವನ್ನು ನಿರ್ಲಕ್ಷಿಸಬೇಕು.

  • Dell M4300 ಹಾಗು M6300 ನಲ್ಲಿ ರೆಕಾರ್ಡಿಂಗ್ ಅನ್ನು ಕೈಯಾರೆ ಶಕ್ತಗೊಳಿಸಬೇಕಾಗುತ್ತದೆ. ಹೀಗೆ ಮಾಡಲು, ಈ ಕೆಳಗಿನ ಹಂತಗಳನ್ನು ಅನುಸರಿಸಿ:

    1. alsamixer ಅನ್ನು ತೆರೆಯಿರಿ.

    2. ನೋಟ ಕ್ಷೇತ್ರದಲ್ಲಿ (ಮೆನುವಿನ ಮೇಲುಗಡೆಯಲ್ಲಿ ಎಡಭಾಗದಲ್ಲಿರುವ) [ಸೆರೆಹಿಡಿ] ಅನ್ನು ಟಾಗಲ್ ಮಾಡಲು Tab ಅನ್ನು ಬಳಸಿ.

    3. Space ಗುಂಡಿಯನ್ನು ಒತ್ತಿ.

    4. ರೆಕಾರ್ಡಿಂಗ್ ಶಕ್ತಗೊಂಡಿದೆಯೆ ಎಂದು ಖಚಿತಪಡಿಸಿಕೊಳ್ಳಲು, ADCMux ಕ್ಷೇತ್ರದ ಮೇಲ್ಭಾಗದ ಪಠ್ಯವು L R CAPTUR ಅನ್ನು ಹೊಂದಿರಬೇಕು.

  • OpenFirmware ಯು ಬೆಂಬಲಿಸಲು PPC ಕರ್ನಲ್ ಚಿತ್ರಿಕೆಯ ಗಾತ್ರ ಬಹಳ ದೊಡ್ಡದಾಗಿರುತ್ತದೆ. ಆದ್ದರಿಂದ, ಜಾಲಬಂಧ ಬೂಟಿಂಗ್ ಈ ಕೆಳಗಿನ ದೋಷ ಸಂದೇಶದೊಂದಿಗೆ ವಿಫಲಗೊಳ್ಳುತ್ತದೆ:

    Please wait, loading kernel...
    /pci@8000000f8000000/ide@4,1/disk@0:2,vmlinux-anaconda: No such file or directory
    boot: 
    ಇದಕ್ಕಿರುವ ಇನ್ನೊಂದು ಪರಿಹಾರವೆಂದರೆ:
    1. IBM ಸ್ಪ್ಲಾಶ್ ಚಿತ್ರವು ಕಾಣಿಸಿಕೊಂಡಾಗ '8' ಕೀಲಿಯನ್ನು ಒತ್ತುವ ಮೂಲಕ OpenFirmware ಪ್ರಾಂಪ್ಟಿಗೆ ಬೂಟ್ ಮಾಡಿ.

    2. ಈ ಕೆಳಗಿನ ಆಜ್ಞೆಯನ್ನು ಚಲಾಯಿಸಿ:

      setenv real-base 2000000

    3. ಈ ಕೆಳಗಿನ ಆಜ್ಞೆಯೊಂದಿಗೆ System Managment Services (SMS) ಗೆ ಬೂಟ್ ಮಾಡಿ:

      0
      > dev /packages/gui obe

8.5. s390x ಆರ್ಕಿಟೆಕ್ಚರುಗಳು

  • 2GB ಗಿಂತ ಹೆಚ್ಚಿನ ಅತಿಥಿ ಶೇಖರಣೆಯನ್ನು ಸೂಚಿಸಲಾದ ಒಂದು z/VM ನಲ್ಲಿ Red Hat Enterprise Linux 5.2 ಅನ್ನು ಚಲಾಯಿಸುವಾಗ, Queued-I/O assist (QIOASSIST) ಆಯ್ಕೆಯು ಶಕ್ತಗೊಂಡಿರುವ QDIO ವಿಧಾನವನ್ನು ಲಗತ್ತಿಸಲಾದ ಯಾವುದೆ FCP ಹಾಗು OSA ಸಾಧನದಿಂದ ಅಮಾನ್ಯ ದತ್ತಾಂಶವನ್ನು ಓದಬಹುದಾಗಿದೆ ಅಥವ ಸಾಧನಕ್ಕೆ ಬರೆಯಬಹುದಾಗಿದೆ.ಎಲ್ಲಿಯಾದರೂ ನಿಮ್ಮ ಗಣಕಕ್ಕೆ ಅಂತಹ ಸಾಧನವು ಜೋಡಿಸಲ್ಪಟ್ಟಿದ್ದರೆ, ಈ ಕೆಳಗಿನ ಕೊಂಡಿಯಿಂದ ಅದಕ್ಕೆ ಸಂಬಂಧಪಟ್ಟ z/VM Program Temporary Fix (PTF) ಅನ್ನು ಡೌನ್‍ಲೋಡ್ ಮಾಡಿ ಅನುಸ್ಥಾಪನೆ ಮಾಡಿಕೊಳ್ಳುವಂತೆ Red Hat ನಿಮಗೆ ಸಲಹೆ ಮಾಡುತ್ತದೆ:

    http://www-1.ibm.com/support/docview.wss?uid=isg1VM64306

  • z/VM ಬಿಸುಡನ್ನು ಒಂದು ಕಡತಕ್ಕೆ ನೇರವಾಗಿ ಓದಲು ಹಾಗು ಮಾರ್ಪಡಿಸಲು ಸಾಧ್ಯವಿಲ್ಲ. ಬದಲಿಗೆ, ನೀವು ಮೊದಲು z/VM ಓದುಗನಿಂದ ಒಂದು Linux ಕಡತ ವ್ಯವಸ್ಥೆಗೆ vmur ಅನ್ನು ಬಳಸಿಕೊಂಡು ಮೊದಲು ನಕಲು ಮಾಡಿ ನಂತರ ಬಿಸುಡನ್ನು vmconvert ಅನ್ನು ಬಳಸಿಕೊಂಡು ಒಂದು Linux-ಓದಬಲ್ಲ ಕಡತಕ್ಕೆ ಮಾರ್ಪಡಿಸಿ.

  • ಐಬಿಎಂ ಸಿಸ್ಟಂ z ಸಾಂಪ್ರದಾಯಿಕ ಯುನಿಕ್ಸ್ ರೀತಿಯ ಕನ್ಸೋಲನ್ನು ಒದಗಿಸುವುದಿಲ್ಲ. ಹಾಗೆಯೇ ಐಬಿಎಂ ಸಿಸ್ಟಂ z ಗಾಗಿ Red Hat Enterprise Linux 5.2 ಪ್ರಾರಂಭಿಕ ಲೋಡ್ ಆಗುವಾಗ ಪ್ರಥಮ ಬೂಟ್ ಕಾರ್ಯಾತ್ಮಕತೆಯನ್ನು ಬೆಂಬಲಿಸುವುದಿಲ್ಲ.

    ಐಬಿಎಂ ಸಿಸ್ಟಂ zನ ಮೇಲೆ Red Hat Enterprise Linux 5.2 ಗಾಗಿ ಸೆಟ್ ಅಪ್ ಅನ್ನು ಸರಿಯಾದ ಕ್ರಮದಲ್ಲಿ ಪ್ರಾರಂಭಿಸಲು, ಅನುಸ್ಥಾಪನೆಯ ನಂತರ ಈ ಕೆಳಗಿನ ಆಜ್ಞೆಯನ್ನು ಚಲಾಯಿಸಿ:

    • /usr/bin/setup -- setuptool ಪ್ಯಾಕೇಜಿನಿಂದ ಒದಗಿಸಲಾದ.

    • /usr/bin/rhn_register -- rhn-setup ಪ್ಯಾಕೇಜಿನಿಂದ ಒದಗಿಸಲಾದ.

8.6. ia64 ಆರ್ಕಿಟೆಕ್ಚರುಗಳು

  • ಕೆಲವು Itanium ಗಣಕಗಳು ಕನ್ಸೋಲ್ ಔಟ್‍ಪುಟ್ ಅನ್ನು kexec purgatory ಕೋಡ್‍ನಿಂದ ಸಮರ್ಪಕವಾಗಿ ಉತ್ಪಾದಿಸುವುದಿಲ್ಲ. ಈ ಕೋಡ್ ಒಂದು ಕುಸಿತದ ನಂತರದ ಮೊದಲಿನ 640k ಮೆಮೊರಿಯನ್ನು ಬ್ಯಾಕ್ಅಪ್ ಮಾಡಲು ಸೂಚನೆಯನ್ನು ಹೊಂದಿರುತ್ತದೆ.

    purgatory ಕನ್ಸೋಲ್ ಔಟ್‍ಪುಟ್ ತೊಂದರೆಗಳನ್ನು ಪತ್ತೆ ಮಾಡಲು ಬಳಸಲ್ಪಡುತ್ತಾದರೂ, kdump ಸರಿಯಾಗಿ ಕೆಲಸ ಮಾಡಲು ಇದರ ಅಗತ್ಯವಿರುವುದಿಲ್ಲ. ಎಲ್ಲಿಯಾದರೂ ಒಂದು kdump ಕಾರ್ಯಾಚರಣೆಯ ಸಂದರ್ಭದಲ್ಲಿ ನಿಮ್ಮ Itanium ಗಣಕವು ಮರು ಆರಂಭಗೊಂಡಲ್ಲಿ, /etc/sysconfig/kdump ಯಲ್ಲಿನ KEXEC_ARGS ಚರಮೌಲ್ಯಕ್ಕೆ --noio ಅನ್ನು ಸೇರಿಸುವ ಮೂಲಕ purgatory ಕನ್ಸೋಲ್ ಔಟ್‍ಪುಟ್ ಅನ್ನು ಅಶಕ್ತಗೊಳಿಸಿ.

  • ವಿಭಿನ್ನ CPU ವೇಗಗಳು ಕಂಡುಬಂದಲ್ಲಿ perftest ಯು ವಿಫಲಗೊಳ್ಳುತ್ತದೆ. ಅಂತೆಯೆ, perftest ಅನ್ನು ಚಲಾಯಿಸುವ ಮೊದಲು CPU ವೇಗದ ಬದಲಾವಣೆ ಮಾಡುವುದನ್ನು ತಡೆಯಬೇಕು.

  • kdump ಕರ್ನಲ್ ಅನ್ನು ಬೂಟ್‌ ಮಾಡಿದಾಗ, ಬೂಟ್ ದಾಖಲೆಯಲ್ಲಿ ಈ ಕೆಳಗಿನ ದೋಷವು ಕಂಡುಬರುತ್ತದೆ:

    mknod: /tmp/initrd.[numbers]/dev/efirtc: No such file or directory

    ಒಂದು ಸರಿಯಲ್ಲದ ಮಾರ್ಗದಲ್ಲಿ efirtc ಅನ್ನು ರಚಿಸಲು ಸಲ್ಲಿಸಲಾದ ತಪ್ಪು ಮನವಿಯ ಕಾರಣದಿಂದಾಗಿ ಈ ದೋಷವು ಸಂಭವಿಸುತ್ತದೆ. ಆದರೆ, ಮನವಿಯಲ್ಲಿನ ಸಾಧನದ ಮಾರ್ಗವನ್ನು kdump ಸೇವೆಯು ಆರಂಭಗೊಂಡಾಗ ಕೈಯಾರೆ initramfs ನಲ್ಲಿ ಸೂಚಿಸಲಾಗಿದೆ. ಅಂತೆಯೆ, ಚಾಲನಾ ಸಮಯದಲ್ಲಿ ಸಾಧನದ ನೋಡ್ ಅನ್ನು ರಚಿಸುವುದು ಒಂದು ಸರ್ವೆ ಸಾಧಾರಣವಾದ, ತೊಂದರೆ ಇಲ್ಲದ, ಹಾಗು kdump ಯ ಮೇಲೆ ಯಾವುದೆ ಪರಿಣಾಮ ಬೀರದಿರುವಂತಹುದ್ದಾಗಿದೆ.

  • ಕೆಲವೊಂದು ಗಣಕಗಳಲ್ಲಿ kdump ಕರ್ನಲ್ ಅನ್ನು ಸರಿಯಾಗಿ ಬೂಟ್ ಮಾಡಲು ಸಾಧ್ಯವಿಲ್ಲದೆ ಇರಬಹುದು. ಅಂತಹ ಸಂದರ್ಭಗಳಲ್ಲಿ, machvec=dig ಕರ್ನಲ್ ನಿಯತಾಂಕವನ್ನು ಬಳಸಿ.

  • Dell M4300 ಹಾಗು M6300 ನಲ್ಲಿ ರೆಕಾರ್ಡಿಂಗ್ ಅನ್ನು ಕೈಯಾರೆ ಶಕ್ತಗೊಳಿಸಬೇಕಾಗುತ್ತದೆ. ಹೀಗೆ ಮಾಡಲು, ಈ ಕೆಳಗಿನ ಹಂತಗಳನ್ನು ಅನುಸರಿಸಿ:

    1. alsamixer ಅನ್ನು ತೆರೆಯಿರಿ.

    2. ನೋಟ ಕ್ಷೇತ್ರದಲ್ಲಿ (ಮೆನುವಿನ ಮೇಲುಗಡೆಯಲ್ಲಿ ಎಡಭಾಗದಲ್ಲಿರುವ) [ಸೆರೆಹಿಡಿ] ಅನ್ನು ಟಾಗಲ್ ಮಾಡಲು Tab ಅನ್ನು ಬಳಸಿ.

    3. Space ಗುಂಡಿಯನ್ನು ಒತ್ತಿ.

    4. ರೆಕಾರ್ಡಿಂಗ್ ಶಕ್ತಗೊಂಡಿದೆಯೆ ಎಂದು ಖಚಿತಪಡಿಸಿಕೊಳ್ಳಲು, ADCMux ಕ್ಷೇತ್ರದ ಮೇಲ್ಭಾಗದ ಪಠ್ಯವು L R CAPTUR ಅನ್ನು ಹೊಂದಿರಬೇಕು.

  • Intel Itanium ಆಧರಿತವಾದ ಗಣಕಗಳಲ್ಲಿ SELinux ಅನ್ನು ಒತ್ತಾಯಪೂರ್ವಕವಾದ ಕ್ರಮದಲ್ಲಿ ಚಲಾಯಿಸುವಾಗ, IA-32 Execution Layer (ia32el ಸೇವೆ) ಸರಿಯಾಗಿ ಕೆಲಸ ಮಾಡುವಂತೆ ಅನುಮತಿಸಲು ಒಂದೋ allow_unconfined_execmem_dyntrans ಅಥವ allow_execmem ಬೂಲಿಯನ್ ಅನ್ನು ಆನ್‌ ಮಾಡಬೇಕಾಗುತ್ತದೆ. ಎಲ್ಲಿಯಾದರೂ Red Hat Enterprise Linux 5 ರಲ್ಲಿ ಡೀಫಾಲ್ಟ್‍ ಆಗಿರುವಂತೆ allow_unconfined_execmem_dyntrans ಬೂಲಿಯನ್ ಆಫ್‌ ಆಗಿದ್ದು, ಆದರೆ allow_execmem ಬೂಲಿಯನ್ ಆನ್‌ ಆಗಿದ್ದಲ್ಲಿ, ia32el ಸೇವೆಯು 32-ಬಿಟ್ ಎಮ್ಯುಲೇಶನ್ ಅನ್ನು ಬೆಂಬಲಿಸುತ್ತದೆ; ಆದರೆ, ಎಲ್ಲಿಯಾದರೂ ಎರಡೂ ಬೂಲಿಯನ್ ಆಫ್ ಆಗಿದ್ದಲ್ಲಿ, ಎಮ್ಯುಲೇಶನ್ ವಿಫಲಗೊಳ್ಳುತ್ತದೆ.

A. ಪುನರಾವರ್ತನೆಯ ಇತಿಹಾಸ

ಪುರಾವೃತ್ತ ಪರಿಷ್ಕರಣೆ
ಪರಿಷ್ಕರಣೆ 1.016th October 2008Ryan Lerch